Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪತ್ನಿಯ ನಡವಳಿಕೆ ಹೀಗಿದ್ದರೆ ಹುಷಾರಾಗಿರಿ ! ಪರ ಪುರುಷನ ಬಲೆಯಲ್ಲಿ ಬಿದ್ದಿರಬಹುದು!
ಪ್ರತಿಯೊಬ್ಬರ ದಾಂಪತ್ಯ ಜೀವನ ಸುಖವಾಗಿರಬೇಕು ಎಂದಿಲ್ಲ. ಸರಸ-ವಿರಸ ದಾಂಪತ್ಯದಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಕೆಲವೊಂದು ಸಂಸಾರದಲ್ಲಿ ಹೆಸರಿಗಷ್ಟೇ ಅವರು ಗಂಡ-ಹೆಂಡತಿಯಾಗಿರುತ್ತಾರೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಅದ್ರಲ್ಲೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಗಂಡನಿಗೆ ತಿಳಿಯದ ಹಾಗೇ ಪರ ಪುರುಷನ ಜೊತೆಗೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಅಷ್ಟಕ್ಕು ಪತ್ನಿಗೆ ಅನ್ಯ ಪುರುಷನ ಜೊತೆಗೆ ಸಂಬಂಧ ಇದೆ ಎಂದು ಗೊತ್ತಾಗೋದು ಹೇಗೆ? ನಿಮ್ಮ ಪತ್ನಿಯ ನಡವಳಿಕೆ ಹೀಗಿದ್ದರೆ ಖಂಡಿತ ಅವರು ಪರ ಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದರ್ಥ.

1. ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ
ನಿಮ್ಮ ಪತ್ನಿ ಪರ ಪುರುಷನ ಪ್ರೀತಿಯಲ್ಲಿ ಬಿದ್ದ ತಕ್ಷಣ ಅವರು ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳಲು ಇಚ್ಛಿಸುತ್ತಾರೆ. ನಿಮಗಾಗಿ ಅವರು ಸಮಯ ಕೊಡೋದಿಲ್ಲ. ನಿಮ್ಮ ಭಾವನೆಗಳಿಗೆ ಅವರು ಬೆಲೆ ಕೊಡೋದಿಲ್ಲ. ಯಾವುದೇ ವಿಚಾರಗಳನ್ನು ಅವರು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ. ಅವರ ಲೋಕದಲ್ಲೇ ಅವರು ತೇಲಾಡುತ್ತಿರುತ್ತಾರೆ. ಈ ಎಲ್ಲಾ ಗುಣಗಳು ಅವರು ನಿಮ್ಮಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಅನ್ನೋದನ್ನ ತೋರಿಸುತ್ತದೆ.
2. ಪತ್ನಿಗೆ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುತ್ತದೆ
ಯಾವತ್ತೂ ಹೆಚ್ಚಾಗಿ ಸೌಂದರ್ಯದ ಬಗ್ಗೆ ಗಮನ ಕೊಡದಿರೋ ನಿಮ್ಮ ಪತ್ನಿ ಏಕಾ ಏಕಿ ಸೌಂದರ್ಯದ ಬಗ್ಗೆ ಗಮನಕೊಡುತ್ತಿದ್ದಾರೆ ಎಂದರೆ ನೀವು ಕೊಂಚ ಹುಷಾರಾಗಲೇಬೇಕು. ಹೊರಗಡೆ ಹೋಗಬೇಕಾದರೆ ಅವರು ಚೆನ್ನಾಗಿ ರೆಡಿ ಆಗಿ ಹೋದರೆ ಅಥವಾ ಪದೇ ಪದೇ ಹೊರಗಡೆ ಹೋಗುತ್ತಿದ್ದರೆ ಅವರ ಮೇಲೆ ಒಂದು ಕಣ್ಣಿಡಿ. ಪರ ಪುರುಷನ ಜೊತೆಗೆ ಡೇಟಿಂಗ್ ಶುರು ಮಾಡಿರುವ ಮುನ್ಸುಚನೆ ಇರಬಹುದಲ್ಲವೇ? ಈ ಬಗ್ಗೆ ನೀವು ಯೋಚಿಸಲೇಬೇಕು.
3. ಪ್ರಿಯಕರನ ಬಗ್ಗೆ ಕೇಳಿದಾಗ ಕೋಪಗೊಳ್ಳುತ್ತಾಳೆ
ಒಂದು ವೇಳೆ ನಿಮಗೆ ನಿಮ್ಮ ಪತ್ನಿ ಯಾರ ಜೊತೆಗೆ ಡೇಟಿಂಗ್ ಮಾಡುತ್ತಿರಬಹುದು ಎಂಬ ಅನುಮಾನ ಮೂಡಿದರೆ ಖಂಡಿತ ನೀವು ಆತನ ಬಗ್ಗೆ ನಿಮ್ಮ ಪತ್ನಿಯ ಬಳಿ ಕೇಳುತ್ತೀರಿ. ಆಗ ನಿಮ್ಮ ಪತ್ನಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಿ. ಖಂಡಿತ ಆಕೆ ಕೋಪಿಸಿಕೊಳ್ಳುತ್ತಾಳೆ. ನೀವು ಪದೇ ಪದೇ ಆತನ ವಿಚಾರವೇ ಕೇಳುತ್ತಿದ್ದರೆ ಆಕೆಯ ಪ್ರತಿಕ್ರಿಯೆ ಬೇರೆಯದ್ದೇ ರೀತಿ ಇರುತ್ತದೆ. ನಿಮ್ಮ ಜೊತೆಗೆ ಆಕೆ ಜಗಳಕ್ಕೆ ನಿಂತು ಬಿಡುತ್ತಾಳೆ.
4. ನಿಮ್ಮ ಪತ್ನಿಗೆ ಆಸಕ್ತಿ ಕಡಿಮೆಯಾಗಿರಬಹುದು
ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೇ ದಾಂಪತ್ಯ. ಕೆಲವೊಂದು ಸಲ ಪತ್ನಿ ಪರ ಪುರುಷನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಕಾರಣ ನೀವು ಆಕೆಯ ಮೇಲೆ ಪ್ರೀತಿ ತೋರದೇ ಇರಬಹುದು, ಆಕೆಗೆ ನಿಮ್ಮಿಂದ ಲೈಂಗಿಕ ಸಂತೃಪ್ತಿ ಸಿಗದೇ ಇರಬಾರದು. ಇಂತಹ ಸಂದರ್ಭದಲ್ಲಿ ಆಕೆ ಪರ ಪುರುಷನತ್ತ ಆಕರ್ಷಿತಳಾಗುತ್ತಾಳೆ. ಹೀಗಾಗಿ ಈ ವಿಚಾರಗಳ ಬಗ್ಗೆ ನೀವು ಎಚ್ಚರವಹಿಸಬೇಕು.
5. ಆಕೆಯ ಗಮನ ನಿಮ್ಮ ಕಡೆ ಇಲ್ಲದಿರೋದನ್ನು ಗಮನಿಸಿ
ಪತ್ನಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಂಡಿದ್ದಾಳೆ ಎಂಬುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹೇಗೆಂದರೆ ಆಕೆಯ ಗಮನ ನಿಮ್ಮ ಮೇಲೆ ಇರೋದೇ ಇಲ್ಲ. ನೀವು ಯಾವ ರೀತಿ ಬಟ್ಟೆ ತೊಟ್ಟರು ಆಕೆ ಅದನ್ನು ಗಮನಿಸೋದಿಲ್ಲ. ಆದರೆ ಆಕೆ ಪ್ರೀತಿಯಲ್ಲಿ ಬಿದ್ದಿರುವ ಪುರುಷ ನಿಮ್ಮ ಮನೆಗೆ ಬಂದಾಗ ಅಥವಾ ಬೇರೆ ಕಡೆ ಆಕೆ ಅವನನ್ನು ಭೇಟಿಯಾದಾಗ ಗಮನಿಸಿ. ಆಕೆಯ ಗಮನ ಪೂರ್ತಿ ಆತನ ಕಡೆಗೆ ಇರುತ್ತದೆ. ಆತನ ಜೊತೆಗೆ ಸಿಕ್ಕಾಪಟ್ಟೆ ಮಾತನಾಡುತ್ತಾಳೆ ಹಾಗೂ ಅವನ ಜೊತೆಗೆ ಇರೋದಕ್ಕೆ ಇಷ್ಟ ಪಡುತ್ತಾಳೆ.
6. ಲೈಂಗಿಕ ತೃಪ್ತಿ ಸಿಗದಿದ್ದಾಗ
ಕೆಲವೊಂದು ಸಲ ಪುರುಷರು ಲೈಂಗಿಕ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಥವಾ ಲೈಂಗಿಕ ಕ್ರಿಯೆಯನ್ನು ಹೆಚ್ಚು ಹೊತ್ತು ನಡೆಸಲು ಶಕ್ತರಾಗಿರೋದಿಲ್ಲ. ಆದರೆ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಮನೆಯಲ್ಲಿ ಲೈಂಗಿಕ ಬಯಕೆ ಪೂರ್ತಿಯಾಗದೇ ಇದ್ದಾಗ ಆಕೆ ಪರ ಪುರುಷನಿಂದ ಅದನ್ನು ಬಯಸುತ್ತಾಳೆ. ಆಕೆಗೆ ಹೊರಗಡೆ ಎಲ್ಲವೂ ಸಿಕ್ಕಾಗ ಆಕೆ ಪತಿಯೊಂದಿಗೆ ಲೈಂಗಿಕ ಆಸಕ್ತಿ ಕಳೆದುಕೊಳ್ಳುತ್ತಾಳೆ.
7. ಇಡೀ ದಿನ ಫೋನ್‌ನಲ್ಲಿ ಮುಳುಗಿರುತ್ತಾಳೆ
ಪತ್ನಿ ಪರ ಪುರುಷನೊಂದಿಗೆ ಸಂಬಂಧದಲ್ಲಿದ್ದಾಗ ಇಡೀ ದಿನ ಆತನನೊಂದಿಗೆ ಮಾತನಾಡೋದಕ್ಕೆ ಇಷ್ಟ ಪಡುತ್ತಾಳೆ. ಅದೂ ಕೂಡ ನೀವು ಮನೆಯಲ್ಲಿ ಇರದೇ ಇರುವ ಸಂದರ್ಭದಲ್ಲಿ ಆತನೊಂದಿಗೆ ಮಾತನಾಡುತ್ತಾಳೆ. ಇನ್ನೂ ನೀವು ಮನೆಗೆ ಬಂದ ಮೇಲೆ ಫೋನ್‌ನಲ್ಲಿ ಮಾತಾಡದಿದ್ದರೂ ಆತನೊಂದಿಗೆ ಚಾಟಿಂಗ್‌ನಲ್ಲಿ ತೊಡಗಿಕೊಳ್ಳುತ್ತಾಳೆ. ನಿಮ್ಮ ಬಗ್ಗೆ ಗಮನ ಹರಿಸುವುದಿಲ್ಲ. ನಿಮಗೆ ಅನುಮಾನವಿದ್ದಾಗ ಆಕೆಯ ಫೋನ್‌ನಲ್ಲಿ ಕಾಲ್ ಲಿಸ್ಟ್ ಚೆಕ್ ಮಾಡಿ ನೋಡಿ.
8. ಪಾಸ್‌ವರ್ಡ್ ಬದಲಾವಣೆ ಮಾಡಿರುತ್ತಾಳೆ
ಪತಿ-ಪತ್ನಿಯ ಮಧ್ಯೆ ಯಾವುದೇ ವಿಚಾರದಲ್ಲಾದರೂ ಮುಚ್ಚು ಮರೆ ಇರೋದಿಲ್ಲ. ಮೊಬೈಲ್, ಸೋಶಿಯಲ್ ಮಿಡಿಯಾ, ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಎಲ್ಲವೂ ಇಬ್ಬರಿಗೂ ಗೊತ್ತಿರುತ್ತದೆ. ಆದರೆ ಪರ ಪುರುಷನೊಂದಿಗೆ ಸಂಬಂಧದಲ್ಲಿ ಬಿದ್ದ ನಂತರ ಪತ್ನಿಯು ಪಾಸ್‌ವರ್ಡ್ ಬದಲಿಸಿರುತ್ತಾಳೆ. ಆಕೆಯ ಸಂಬಂಧದ ಬಗ್ಗೆ ನಿಮಗೆ ಗೊತ್ತಾಗ ಬಾರದೆಂದು ನಿಮ್ಮ ಕಣ್ಣಿಗೆ ಮಣ್ಣೆರೆಚುತ್ತಾಳೆ. ಹೀಗಾಗಿ ನೀವು ಹುಷಾರಾಗಿರಬೇಕು.
ಪತ್ನಿಯು ಅನೈತಿಕ ಸಂಬಂಧವಿರುವ ಬಗ್ಗೆ ಎಷ್ಟೇ ಮುಚ್ಚು-ಮರೆ ಮಾಡಿದರೂ ಕೂಡ ಒಂದಲ್ಲ ಒಂದು ದಿನ ನಿಮಗೆ ಈ ವಿಚಾರ ತಿಳಿಯಲೇಬೇಕು. ಒಂದು ವೇಳೆ ಅನೈತಿಕ ಸಂಬಂಧವಿರುವುದು ಖಂಡಿತ ಎಂದಾದರೆ ಪತ್ನಿಯನ್ನು ಅದರಿಂದ ಹೊರತರಲು ಪ್ರಯತ್ನಿಸಿ. ಆದರೂ ಅವರು ಸರಿ ದಾರಿಗೆ ಬಾರದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳುವುದು ಉತ್ತಮ.



Click it and Unblock the Notifications


