Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಂಧವ್ಯಕ್ಕೆ ವ್ಯಾಖ್ಯಾನವೇ ಇಲ್ಲದ 'ಸಿಟುವೇಷನ್ ಶಿಪ್' (ಅರ್ಥವಿಲ್ಲದ ಬಂಧ) ಲಕ್ಷಣಗಳಿವು!
ಸ್ನೇಹ ಎನ್ನುವುದು ತುಂಬಾ ಪವಿತ್ರ ಸಂಬಂಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆಪ್ತ ಸ್ನೇಹಿತರು ಯಾವಾಗಲೂ ಪ್ರಾಣ ಕೊಡಲು ಸಿದ್ಧವಾಗಿರುವರು. ಹುಡುಗ ಹಾಗೂ ಹುಡುಗಿ ಕೂಡ ಸ್ನೇಹಿತರಾಗಿಯೇ ಇರಬಹುದು. ಆದರೆ ಸಮಾಜದ ಕಣ್ಣಿಗೆ ಮಾತ್ರ ಅದು ತುಂಬಾ ಭಿನ್ನವಾಗಿ ಕಾಣಿಸುವುದು. ಕೆಲವೊಂದು ಸಲ ಸ್ನೇಹವು ಪ್ರೀತಿಯಾಗಿ ಮಾರ್ಪಾಡಾಗುವುದು ಇದೆ. ಸ್ನೇಹಿತರ ಮಧ್ಯೆ ಪ್ರೀತಿ ಮೊಳಕೆಯೊಡೆದರೆ ಆಗ ಅದು ಹೆಚ್ಚು ಬಲವಾದ ಸಂಬಂಧವಾಗಿ ಬೆಳೆಯಬಹುದು. ಯಾಕೆಂದರೆ ಸ್ನೇಹಿತರಾಗಿ ಇದ್ದುಕೊಂಡು ಪರಸ್ಪರರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುತ್ತಾರೆ. ಹೀಗಾಗಿ ಪ್ರೀತಿಯಲ್ಲಿ ಮುಂದುವರಿಯಲು ಅವರಿಗೆ ಕಷ್ಟವಾಗದು. ಸ್ನೇಹಿತನ ಬಗ್ಗೆ ಅಥವಾ ಸ್ನೇಹಿತೆಯ ಬಗ್ಗೆ ನಿಮಗೆ ಯಾವುದೇ ಭಾವನೆ ಉಂಟಾಗುತ್ತಿದೆಯಾ? ನಿಮಗಿಬ್ಬರಿಗೂ ಇದು ತಿಳಿಯದೆ ಸಂಬಂಧದಲ್ಲಿ ಪರಿವರ್ತನೆಗೊಳ್ಳುವಂತಹ ಸಾಧ್ಯತೆಗಳು ಇದೆಯಾ? ಹಾಗಾದರೆ ಇದು ಸಿಟುವೇಷನ್ ಶಿಪ್' (ಅರ್ಥವಿಲ್ಲದ ಬಂಧ) ಎಂದು ಕರೆಯಲಾಗುತ್ತದೆ.

ಸಿಟುವೇಷನ್ ಶಿಪ್ ಎಂದರೆ ಇಬ್ಬರು ವ್ಯಕ್ತಿಗಳು ಸ್ನೇಹಕ್ಕಿಂತಲೂ ಹೆಚ್ಚಿನ ಭಾಂದವ್ಯ ಹೊಂದಿರುವುದು, ಆದರೆ ಇವರು ಸಂಗಾತಿಗಳಲ್ಲ. ಪರಸ್ಪರ ಇವರ ಬಗ್ಗೆ ಭಾವನೆಗಳು ಇರುವುದು ಮತ್ತು ಅನ್ಯೋನ್ಯತೆಯು ಇರಬಹುದು. ಆದರೆ ಇದು ಒಂದು ಸಂಬಂಧವೆಂದು ಅವರಿಗೆ ಅನಿಸುವುದಿಲ್ಲ. ಈ ಆಧುನಿಕ ಯುಗದಲ್ಲಿ ಕ್ಯಾಸ್ಪರಿಂಗ್, ಘೋಸ್ಟಿಂಗ್, ಝೊಂಬಿಂಗ್ ಇರುವಾಗ ಸಿಟುವೇಷನ್ ಶಿಪ್ ಎನ್ನುವುದು ತುಂಬಾ ಕಠಿಣವಾಗಿರುವುದು.
ಕೆಲವೊಂದು ಸಂದರ್ಭದಲ್ಲಿ ಜನರಿಗೆ ತಾವು ಸಿಟುವೇಷನ್ ಶಿಪ್ ನಲ್ಲಿ ಇದ್ದೇವೆ ಎನ್ನುವುದು ತಿಳೀಯುವುದೇ ಇಲ್ಲ ಮತ್ತು ತಮ್ಮ ಸಂಬಂಧದ ಸ್ಥಿತಿ ಬಗ್ಗೆ ತುಂಬಾ ಆತಂಕದಿಂದ ಇರುವರು. ಈ ಪರಿಸ್ಥಿತಿ ನಿಭಾಯಿಸಲು ನಾವು ನಿಮಗೆ ಹತ್ತು ಲಕ್ಷಣಗಳನ್ನು ಹೇಳಲಿದ್ದೇವೆ. ಇದರ ಮೂಲಕವಾಗಿ ನೀವು ಸಿಟುವೇಷನ್ ಶಿಪ್ ನಲ್ಲಿ ಇದ್ದೀರಾ ಎಂದು ತಿಳಿದುಕೊಳ್ಳಬಹುದು.

1. ನಿಮ್ಮಿಬ್ಬರ ಬಾಂಧವ್ಯಕ್ಕೆ ಯಾವುದೇ ವ್ಯಾಖ್ಯಾನವಿಲ್ಲ
ನೀವು ಮತ್ತು ನಿಮ್ಮ ಸಂಗಾತಿಯು ಪರಸ್ಪರ ಜತೆಯಾಗಿ ಇರಬಹುದು. ಆದರೆ ಜತೆಯಾಗಿಯೇ ನೀವು ಸಾಮಾಜಿಕ ಹಾಗೂ ಮಾನಸಿಕ ಒತ್ತಡವನ್ನು ವಹಿಸಿಕೊಳ್ಳಲು ಮಾತ್ರ ತಯಾರಾಗಿಲ್ಲ. ನೀವು ಪರಸ್ಪರ ಜತೆಗಿರುತ್ತೀರಿ, ರಾತ್ರಿ ಜತೆಯಾಗಿಯೇ ಕಳೆಯುತ್ತೀರಿ, ಜತೆಗೆ ನಡೆದುಕೊಂಡು ಹೋಗುವಾಗ ಕೈಕೈ ಹಿಡಿಯುತ್ತೀರಿ ಮತ್ತು ಅನ್ಯೋನ್ಯತೆಯಿಂದಲೂ ಇರುತ್ತೀರಿ. ಆದರೆ ನೀವು ಸಂಬಂಧಿಕರು ಅಥವಾ ಸ್ನೇಹಿತರಿಗೆ ಜತಗಾರ/ಗಾರ್ತಿಯನ್ನು ಪರಿಚಯಿಸುವ ವೇಳೆ ಮಾತ್ರ ನೀವು ಸ್ನೇಹಿತರೆಂದೇ ಹೇಳುತ್ತೀರಿ. ದೈಹಿಕವಾಗಿಯೂ ನೀವಿಬ್ಬರು ಸಂಪರ್ಕ ಹೊಂದಿರುತ್ತೀರಿ.

2. ಬೇರೆಯವರ ಸಂಪರ್ಕ ಕಡಿಮೆ ಮಾಡುತ್ತೀರಿ
ನೀವು ಮತ್ತು ನಿಮ್ಮ ಗೆಳೆಯ ಅಥವಾ ಗೆಳತಿ ಜತೆಯಾಗಿ ಇರಲು ಆರಂಭವಾದ ಬಳಿಕ ನೀವು ಮೊದಲಿನಂತೆ ಸ್ನೇಹಿತರ ಬಳಗದೊಂದಿಗೆ ಬೆರೆಯುವುದಿಲ್ಲ. ಈಗ ಡೇಟಿಂಗ್ ಆಪ್ ಗಳನ್ನು ನೋಡುವುದನ್ನು ನೀವು ಬಿಟ್ಟುಬಿಡುತ್ತೀರಿ ಮತ್ತು ಬೇರೆಯವರೊಂದಿಗೆ ಡೇಟಿಂಗ್ ಗೆ ಹೋಗಲು ನಿಮಗೆ ಇಷ್ಟವೂ ಇರುವುದಿಲ್ಲ. ಸ್ನೇಹಿತರೊಂದಿಗೆ ಲಾಭಕ್ಕಾಗಿ ಸಂಬಂಧ ಬೆಳೆಸಿಕೊಂಡಿರುವ ವ್ಯಕ್ತಿಗಳು ಮಾತ್ರ ಯಾವಾಗಲೂ ಬೇರೆಯವರೊಂದಿಗೆ ಡೇಟಿಂಗ್ ಗೆ ಹೋಗುವರು. ಆದರೆ ನೀವು ಸಿಟುವೇಷನ್ ಶಿಪ್ ನಲ್ಲಿ ಇದ್ದರೆ ಇದು ಆಗಲ್ಲ. ಇಬ್ಬರು ಕೂಡ ಸಂಬಂಧದಲ್ಲಿ ಇದ್ದೇವೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ತುಂಬಾ ಗೊಂದಲದಲ್ಲಿ ಇರುವರು.

3. ಲೈಂಗಿಕ ಕೆಮಿಸ್ಟ್ರಿ ಅದ್ಭುತವಾಗಿರುವುದು
ನಿಮ್ಮಿಬ್ಬರ ಲೈಂಗಿಕ ಕೆಮಿಸ್ಟ್ರಿಯು ಅದ್ಭುತವಾಗಿ ಇರುವುದು ಮತ್ತು ಇದರಿಂದಾಗಿ ನೀವು ಯಾವುದೇ ಮಾತನಾಡದೆ ಪ್ರೀತಿಯಲ್ಲಿ ಅಥವಾ ಲೈಂಗಿಕವಾಗಿ ತೊಡಗಿಕೊಳ್ಳುವಿರಿ. ಈ ಲೈಂಗಿಕ ಅನ್ಯೋನ್ಯತೆಯಿಂದಾಗಿ ನಿಮಗೆ ಈ ಸಂಬಂಧದಿಂದ ಹೊರಗೆ ಬರಲು ಸಾಧ್ಯವಾಗದೆ ಇರುವುದು. ನೀವು ದಿನವಿಡಿ ಪರಸ್ಪರರನ್ನು ನೋಡಿಕೊಂಡು ದಿನ ಕಳೆಯದೆ ಇರಬಹುದು. ಆದರೆ ನೀವು ರಾತ್ರಿ ವೇಳೆ ಸೆಕ್ಸ್ ನ್ನು ಆನಂದಿಸಲು ಬಯಸುತ್ತೀರಿ. ಇಲ್ಲಿ ಲೈಂಗಿಕ ಕ್ರಿಯೆ ಎನ್ನುವುದು ಪ್ರೀತಿಯಿಂದ ಬರುವುದಲ್ಲ, ಬದಲಿಗೆ ಏಕಾಂಗಿತನ ನಿವಾರಣೆ ಮಾಡಿಕೊಳ್ಳಲು. ಇದರಿಂದಾಗಿ ಹೆಚ್ಚಿನ ಸಮಯದಲ್ಲಿ ನೀವು ಮತ್ತು ನಿಮ್ಮ ಸಂಗಾತಿಗೆ ಪರಸ್ಪರ ಲೈಂಗಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತುಂಬಾ ಕಷ್ಟವಾಗುವುದು.

4. ನೀವು ಜತೆಯಾಗಿ ಕಾಲ ಕಳೆಯುವುದಿಲ್ಲ
ಜತೆಯಾಗಿ ಸಮಯ ಕಳೆಯಬೇಕು ಎಂದು ಯಾವುದೇ ಮಾತು ಕೊಡುವುದಿಲ್ಲ ಅಥವಾ ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲ. ದಿನನಿತ್ಯವೂ ಯಾವುದೇ ಕರೆ ಅಥವಾ ಮೆಸೇಜ್ ಸ್ವೀಕರಿಸಬೇಕು ಎನ್ನುವ ಅಗತ್ಯವೂ ಇರಲ್ಲ. ನೀವು ಸಾರ್ವಜನಿಕವಾಗಿ ಕೈಗಳನ್ನು ಹಿಡಿಯದೆ ಇರಬಹುದು. `ಭೇಟಿಯಾಗಲು ಸಾಧ್ಯವಿಲ್ಲ, ಜಿಮ್ ಗೆ ಹೋಗುತ್ತಲಿದ್ದೇನೆ' ಎಂದು ಸ್ವಲ್ಪ ಒರಟಾಗಿ ಉತ್ತರಿಸಬಹುದು. ಆದರೂ ನೀವು ಪರಸ್ಪರರು ಎಲ್ಲಿದ್ದೀರಿ ಎನ್ನುವುದನ್ನು ಹೇಳುವುದು ಒಂದು ಅಗತ್ಯವೆಂದು ಭಾವಿಸುವಿರಿ.

5. ಭಾವನೆಗಳಿದ್ದರೂ ಅದು ಪ್ರೀತಿಯಲ್ಲ!
ಪರಸ್ಪರರ ಬಗ್ಗೆ ನಿಮಗಿಬ್ಬರಿಗೆ ಭಾವನೆಗಳು ಇದೆ. ಪರಸ್ಪರರನ್ನು ಆರಾಧಿಸುತ್ತೀರಿ, ಕಾಳಜಿ ವಹಿಸುತ್ತೀರಿ, ಐಸ್ ಕ್ರೀಮ್ ಜತೆಯಾಗಿ ತಿನ್ನುತ್ತೀರಿ, ಕಚೇರಿಗೆ ಡ್ರಾಪ್ ನೀಡುತ್ತೀರಿ. ಆದರೆ ನೀವಿಬ್ಬರು ಪ್ರೀತಿಯಲ್ಲಿದ್ದೀರಿ ಎನ್ನುವ ಬಗ್ಗೆ ಸ್ಪಷ್ಟತೆ ಮಾತ್ರ ಇಲ್ಲ. ರಾತ್ರಿ ಜತೆಯಾಗಿ ಕಳೆಯುವುದು ಅಥವಾ ಮಧ್ಯಾಹ್ನ ಊಟ ಜತೆಯಾಗಿ ಮಾಡುವಿರಿ. ಆದರೆ ಸಂಗಾತಿಯನ್ನು ನೀವು ಪ್ರೀತಿಸುವುದಿಲ್ಲ. ಅವರು ಕೂಡ ಹಾಗೆ...

6. ಮೆಸೇಜ್ ಮೂಲಕವೇ ಸಂವಹನ ನಡೆಸುತ್ತೀರಿ
ನೀವಿಬ್ಬರು ಕರೆ ಮಾಡಿ ಮಾತನಾಡುವುದನ್ನು ಕಡೆಗಣಿಸುತ್ತೀರಿ ಮತ್ತು ಮೆಸೇಜ್ ಮಾಡಿ ಸಂಪರ್ಕದಲ್ಲಿ ಇರುತ್ತೀರಿ. ನಿಮ್ಮ ಹೆಚ್ಚಿನ ಮೆಸೇಜ್ ಗಳು ಸೆಕ್ಸ್ ಮತ್ತು ದೈಹಿಕ ಅನ್ಯೋನ್ಯತೆಗೆ ಸಂಬಂಧಿಸಿದ್ದು ಆಗಿರುತ್ತದೆ.

7. ನೀವು ಒಂಟಿಯೆಂದು ಭಾವಿಸುತ್ತೀರಿ
ನೀವು ಸಂಬಂಧದಲ್ಲಿ ಇದ್ದೀರಿ ಎನ್ನುವುದನ್ನು ನಿಮ್ಮ ಮನಸ್ಸು ಹೇಳುವುದಿಲ್ಲ. ನಿಮ್ಮ ಸಂಬಂಧದ ಬಗ್ಗೆ ಯಾರಾದರೂ ಕೇಳಿದರೆ ಆಗ ನೀವು ಯಾವುದೇ ಹಿಂಜರಿಕೆ ಇಲ್ಲದೆ, ನಾನು ಒಂಟಿಯಾಗಿದ್ದೇನೆ ಎಂದು ಹೇಳುತ್ತೀರಿ. ಪರಸ್ಪರದ ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದರೂ ಆಗ ನೀವು ಭಾಗಿಯಾಗುವಿರಿ.

8. ನಿಮ್ಮ ಸಂಗಾತಿ ಬಗ್ಗೆ ಸ್ನೇಹಿತರಿಗೂ ಹೇಳಲ್ಲ
ನಿಮ್ಮಿಬ್ಬರ ಸಂಬಂಧದ ಬಗ್ಗೆ ಸ್ನೇಹಿತರಿಗೂ ಹೇಳುವುದಿಲ್ಲ. ಸ್ನೇಹಿತರಿಗೆ ಆತ/ಆಕೆಯ ಬಗ್ಗೆ ತಿಳಿದರೆ ಆಗ ನೀವಿಬ್ಬರು ತುಂಬಾ ಗಂಭೀರವಾಗಿ ಸಂಬಂಧದಲ್ಲಿ ತೊಡಗಿಕೊಳ್ಳಬಹುದು ಎನ್ನುವ ಭಾವನೆಯು ನಿಮ್ಮಲ್ಲಿ ಮೂಡುವುದು. ಸಂಬಂಧದಲ್ಲಿ ಭಾಗಿಯಾಗಬೇಕೇ ಅಥವಾ ಪರಸ್ಪರ ನೀವು ಹೊಂದಿಕೊಳ್ಳುತ್ತೀರಾ ಎನ್ನುವ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಇದರಿಂದ ಅವರನ್ನು ಸ್ನೇಹಿತರಿಗೆ ನೀವು ಪರಿಚಯ ಮಾಡಿಕೊಡುವುದಿಲ್ಲ.

9. ನಿಮ್ಮ ಭವಿಷ್ಯದ ಯೋಜನೆಯಲ್ಲಿ ಅವರಿಗೆ ಜಾಗವಿರಲ್ಲ
ರಜೆಯಲ್ಲಿ ಎಲ್ಲಿಗಾದರೂ ದೂರ ಪ್ರವಾಸ ಹೋಗುವುದು ಅಥವಾ ಮನೆ ಖರೀದಿಸುವುದು ಹೀಗೆ ನೀವು ಕೆಲವೊಂದು ಭವಿಷ್ಯಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಬಹುದು. ಆದರೆ ನಿಮ್ಮ ಸಂಗಾತಿಯನ್ನು ಅದಕ್ಕೆ ಸೇರಿಸಿಕೊಳ್ಳಲ್ಲ. ನೀವಿಬ್ಬರು ಜತೆಯಾಗಿ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವುದು ಇಷ್ಟವಿರಲ್ಲ. ಯಾವುದೇ ಮಹತ್ವದ ಕಾರ್ಯಕ್ರಮ ಅಥವಾ ಪರಸ್ಪರರ ಭವಿಷ್ಯದ ಯೋಜನೆಗಳ ಬಗ್ಗೆ ನೀವು ಜತೆಯಾಗಿ ಮಾತನಾಡುವುದಿಲ್ಲ.

10. ಸಮಯ ಸಾಗಿದಂತೆ ಹೇಗೆ ಸಾಗುತ್ತದೆ ಎನ್ನುವ ಬಗ್ಗೆ ಗೊಂದಲವಿದೆ
ನಿಮಗೆ ತುಂಬಾ ಆತಂಕ ಮತ್ತು ಗೊಂದಲವು ಉಂಟಾಗಿರಬಹುದು. ಯಾಕೆಂದರೆ ನಿಮ್ಮ ಸಂಬಂಧದ ಭವಿಷ್ಯದ ಬಗ್ಗೆ ನಿಮಗೆ ತಿಳಿದಿಲ್ಲ. ಆತ/ಆಕೆಯ ಜೀವನದಲ್ಲಿ ನಿಮ್ಮ ಮೌಲ್ಯದ ಬಗ್ಗೆ ತಿಳಿಯದೆ ಇರುವ ಕಾರಣದಿಂದಾಗಿ ತುಂಬಾ ಒತ್ತಡ ಹಾಗೂ ಗೊಂದಲಕ್ಕೆ ಸಿಲುಕುವಿರಿ. ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ನಿಮಗೆ ತಿಳಿದಿರುವುದಿಲ್ಲ.
ಈ ಎಲ್ಲಾ ಅಂಶಗಳು ನೀವು ಸಿಟುವೇಷನ್ ಶಿಪ್ ನಲ್ಲಿ ಇದ್ದೀರಾ ಎನ್ನುವುದನ್ನು ಹೇಳಲಿದೆ. ಸಿಟುವೇಷನ್ ಶಿಪ್ ಬಗ್ಗೆ ನಿಮಗೆ ತಿಳಿದ ಬಳಿಕ ನಿಮಗೆ ಇದು ಬೇಕಾ ಅಥವಾ ಬೇಡವಾ ಎನ್ನುವುದನ್ನು ಸರಿಯಾಗಿ ತಿಳಿಯಿರಿ.



Click it and Unblock the Notifications











