Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೀತಿಯೇನೋ ಸರಿ, ಆದರೆ ಈ ರೀತಿಯೆಲ್ಲಾ ಇದ್ದರೆ ಅವರದ್ದು ನಿಜ ಪ್ರೀತಿಯಲ್ಲ ತಿಳಿಯಿರಿ
ವ್ಯಾಲೆಂಟೈನ್ಸ್ ವೀಕ್, ಪ್ರೇಮಿಗಳ ಸಂಭ್ರಮದ ವಾರ... ಈ ಸಮಯದಲ್ಲಿ ತಾವು ಪ್ರೀತಿಯಲ್ಲಿ ಇರುವುದೇ ಗ್ರೇಟ್ ಎಂದು ಭಾವಿಸಿ ಖುಷಿಯಲ್ಲಿ ಇರುತ್ತಾರೆ, ಆದರೆ ನಿಜವಾದ ಪ್ರೀತಿಯೇ ಅಲ್ಲವೇ ಎಂದು ಎಚ್ಚೆತ್ತುಕೊಳ್ಳುವ ಸಮಯವೂ ಹೌದು..
ಕೆಲವೊಂದು ಪ್ರೀತಿ ಅದು ಪ್ರೀತಿಯೇ ಆಗಿರುವುದಿಲ್ಲ, ಅಂಥ ಪ್ರೀತಿಯಲ್ಲಿ ಇದ್ದರೆ ನೋವು ಬಿಟ್ಟರೆ ಬೇರೇನೂ ಸಿಗಲು ಸಾಧ್ಯವಿಲ್ಲ, ಆದ್ದರಿಂದ ಅಂಥ ಪ್ರೀತಿ ಯಾವುದು ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಈ ಲಕ್ಷಣಗಳಿದ್ದರೆ ಆ ಪ್ರೀತಿ ನಿಜವಾದ ಪ್ರೀತಿಯಾಗಲು ಸಾಧ್ಯವೇ ಅಲ್ಲ:

ನಿಮ್ಮ ಲುಕ್‌ಗೆ ತುಂಬಾನೇ ಮಹತ್ವ ನೀಡುವುದು
ನಿಮ್ಮ ಅಂದ ನೋಡಿ ಮೆಚ್ಚಿಕೊಂಡಿರಬಹುದು, ಆದರೆ ಅವರಿಗೆ ನಿಮ್ಮ ಅಂದವೇ ಮುಖ್ಯ ಎಂಬಂತೆ ಇದ್ದರೆ ಮಾತ್ರ ಸ್ವಲ್ಪ ಎಚ್ಚೆತ್ತುಕೊಳ್ಳುವುದು ಒಳ್ಳೆಯದು, ಏಕೆಂದರೆ ನಿಮ್ಮ ಅಂದ ಕಡಿಮೆಯಾದರೆ ಅಥವಾ ನಿಮಗಿಂತ ಅಂದವರು ಸಿಕ್ಕಾಗ ಅವರು ನಿಮಗೆ ಮೋಸ ಮಾಡುವವರು.
ಅವರಿಗೆ ಅವಶ್ಯಕತೆಯಿದ್ದಾಗ ಮಾತ್ರ ರೊಮ್ಯಾಂಟಿಕ್ ಆಗಿರುತ್ತಾರೆ
ಅವರಿಗೆ ಅವಶ್ಯಕತೆ ಇದ್ದಾಗ ಮಾತ್ರ ಅವರು ನಿಮಗೆ ಸಿಗುತ್ತಾರೆ, ಉಳಿದಂತೆ ನೀವು ಕಾಲ್ ಮಾಡಿದಾಗ ಅಥವಾ ಭೇಟಿಯಾಗಬೇಕು ಎಂದಾಗ ಬ್ಯುಸಿ ಅಥವಾ ಮತ್ತಿತರ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ, ಅವರ ವರ್ತನೆ ನೋಡಿ ನಿಮಗೆ ಈ ವ್ಯಕ್ತಿಗೆ ನಿಜವಾಗಲೂ ನನ್ನ ಮೇಲೆ ಪ್ರೀತಿ ಇದೆಯೇ ಎಂದು ಅನಿಸಿದ್ದರೆ ನಿಮ್ಮ ಅನಿಸಿಕೆ ನಿಜ, ಅವರಿಗೆ ನಿಮ್ಮ ಮೇಲೆ ನಿಜವಾದ ಪ್ರೀತಿ ಇರಲ್ಲ.
ಬೇರೆಯವರ ಮುಂದೆ ಒಳ್ಳೆಯವರಂತೆ ಕಾಣಿಸಿಕೊಳ್ಳುವುದು
ಅವರು ಬೇರೆಯವರ ಮುಂದೆ ನಿಮ್ಮನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುವಂತೆ, ನಿಮ್ಮನ್ನು ತುಂಬಾನೇ ಪ್ರೀತಿಸುವಂತೆ ನಾಟಕ ಆಡುತ್ತಾರೆ, ಆದರೆ ಅವರದ್ದು ಯಾವುದೋ ಕಾರಣಕ್ಕೆ ತೋರ್ಪಡಿಕೆ ಪ್ರೀತಿ ಆಗಿರುತ್ತದೆ, ಈ ಪ್ರೀತಿ ಬಗ್ಗೆ ಜಾಗ್ರತೆ. ಅವರು ಬೇರೆಯವರ ಮುಂದೆ ಒಳ್ಳೆಯವರಂತೆ ಕಾಣಿಸಿಕೊಂಡು ನಿಮಗೆ ಮಾತ್ರ ತುಂಬಾನೇ ಹಿಂಸೆ ನೀಡುತ್ತಾರೆ, ಅವರದ್ದು ಕಪಟ ಪ್ರೀತಿ ಎಂದು ಹೇಳಲು ಸಾಧ್ಯವಾಗಲ್ಲ, ಇಂಥ ಪ್ರೀತಿ ಬಗ್ಗೆ ಜಾಗ್ರತೆ.
ಲೈಂಗಿಕಕ್ರಿಯೆ ಬಳಿಕ ಯಾವುದೇ ಪ್ರೀತಿ ವ್ಯಕ್ತಪಡಿಸುವುದಿಲ್ಲ
ಅವರು ಲೈಂಗಿಕಕ್ರಿಯೆ ಮುಗಿದ ಮೇಲೆ ನಿಮ್ಮ ಜೊತೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ, ಅವರಿಗೆ ನಿಮ್ಮ ಭಾವನೆಗಳ ಬಗ್ಗೆ ಗೌರವ ಇರಲ್ಲ, ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಯಾವ ಆಸಕ್ತಿಯೂ ಇರಲ್ಲ.
ಸಮಸ್ಯೆಗಳು ಬಗೆಹರಿಯುವುದೇ ಇಲ್ಲ
ಸಮಸ್ಯೆಗಳಿಲ್ಲದ ಸಂಬಂಧವಿರಲ್ಲ, ಆದರೆ ನಿಮ್ಮಲ್ಲಿ ಯಾವುದೋ ಒಂದು ಕಾರಣಕ್ಕೆ ಸಮಸ್ಯೆಯಾಗುತ್ತಿರುತ್ತದೆ, ಆದರೆ ಅದನ್ನು ಬಗೆಹರಿಸಲು ಪ್ರಯತ್ನಿಸುವುದೇ ಉದಾಹರಣೆ ಅವರಿಗೆ ಬೇರೆ ಕಡೆ ಇರುವ ಆಕರ್ಷಣೆ ಅಥವಾ ನಿಮ್ಮನ್ನು ನಡೆಸಿಕೊಳ್ಳುವ ರೀತಿ.
ನಿಮ್ಮ ಬಗ್ಗೆ ತುಂಬಾ ಗಮನ ನೀಡದಿರುವುದು
ನಿಮ್ಮ ಬದುಕಿನ ಬಗ್ಗೆ, ನಿಮ್ಮ ಆಸೆ ಬಗ್ಗೆ ಗಮನ ನೀಡದಿರುವುದು, ಅವರು ಅವರ ಬಗ್ಗೆ ಮಾತ್ರ ತುಂಬಾ ಪ್ರಾಮುಖ್ಯತೆ ನೀಡುವುದು, ನಿಮ್ಮ ಬಗ್ಗೆ ಗಮನವೇ ಹರಿಸದಿರುವುದು ಮಾಡುತ್ತಿದ್ದರೆ ಆ ಸಂಬಂಧದಿಂದ ದೂರ ಇರುವುದೇ ಒಳ್ಳೆಯದು.
ಅವನ/ಅವಳ ಮಾತಿಗೂ ವರ್ತನೆಗೂ ಸಂಬಂಧವೇ ಇರದಿರುವುದು
ಅವನು/ಅವಳ ಬಾಯಿ ಮಾತಿನಲ್ಲಿ ನಿಮ್ಮನ್ನು ಇಷ್ಟ ಎಂದು ಹೇಳುವುದು ಆದರೆ ಅವರ ವರ್ತನೆಯಲ್ಲಿ ಆ ರೀತಿ ಕಾಣದೇ ಇದ್ದರೆ ನೀವು ಈ ಬಗ್ಗೆ ಆಲೋಚಿಸುವುದು ಒಳ್ಳೆಯದು, ಅವರು ಸಂಬಂಧ ಉಳಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಅವರು ನಿಮ್ಮ ಸಂಬಂಧದಲ್ಲಿ ಸೀರಿಯಸ್ ಆಗಿ ಇಲ್ಲ ಎಂದಾದರೆ ನೀವು ದೂರ ಸರಿದರೆ ತುಂಬಾ ನೋವಾಗುವುದನ್ನು ತಡೆಗಟ್ಟಬಹುದು.



Click it and Unblock the Notifications











