Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ನಿಮ್ಮ ಗಂಡನಿಗೆ ನಿಮ್ಮ ಮೇಲೆ ಕಾಳಜಿ ಇದೆ ಅನ್ನೋದು ಗೊತ್ತಾಗೋದು ಹೇಗೆ?
ಮದುವೆಯಾದ ಮೇಲೆ ಪ್ರತಿಯೊಬ್ಬರಿಗೂ ಹೊಸತೊಂದು ಪ್ರಪಂಚ ಸೃಷ್ಟಿಯಾಗುತ್ತೆ. ಅಪ್ಪ- ಅಮ್ಮನಿಗಿಂತಲೂ ನಮಗೆ ನಮ್ಮ ಸಂಗಾತಿಯೇ ಮುಖ್ಯವಾಗುತ್ತಾರೆ. ನಮ್ಮೆಲ್ಲಾ ಪ್ರೀತಿ, ಕಾಳಜಿಯನ್ನು ನಾವು ಅವರ ಮೇಲೆ ಧಾರೆ ಎರೆಯುತ್ತೇವೆ. ಆದರೆ ಕೆಲವೊಂದು ಸಂಬಂಧಗಳಲ್ಲಿ ಸಮಾಜದ ದೃಷ್ಟಿಯಲ್ಲಷ್ಟೇ ಅವರು ಗಂಡ-ಹೆಂಡತಿಯಾಗಿರುತ್ತಾರೆ.
ನಿಜವಾಗಿಯೂ ಗಂಡ-ಹೆಂಡತಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಕಾಳಜಿ ಇರೋದಿಲ್ಲ. ಹೆಂಡತಿಯ ಮೇಲೆ ಕಾಳಜಿ ತೋರುವ ಗಂಡನಲ್ಲಿ ಈ ಎಲ್ಲಾ ಲಕ್ಷಣಗಳು ಇರುತ್ತದೆ. ಅಷ್ಟಕ್ಕು ನಿಮ್ಮ ಗಂಡ ನಿಮ್ಮನ್ನು ನಿಜವಾಗಿಯೂ ಕಾಳಜಿ ಮಾಡುತ್ತಿದ್ದಾರೆಂದು ಗೊತ್ತಾಗೋದು ಹೇಗೆ ಅಂತ ತಿಳಿಯೋಣ.

1. ಪತ್ನಿಯ ಸಹಾಯಕ್ಕೆ ಯಾವಾಗಲೂ ಇರುತ್ತಾನೆ
ಗಂಡಂದಿರಿಗೆ ಹೋಲಿಕೆ ಮಾಡಿದ್ರೆ ಹೆಚ್ಚಿನ ಮನೆಗಳಲ್ಲಿ ಹೆಂಡತಿಯೇ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾಳೆ. ಒಂದು ವೇಳೆ ಆಕೆ ಮನೆ ಹೊರಗಡೆ ಹೋಗಿ ಕೆಲಸ ಮಾಡುವವಳಾದರೆ, ಮನೆಯ ಕೆಲಸವನ್ನೆಲ್ಲಾ ಮುಗಿಸಿ ಆ ನಂತರ ಆಫಿಸ್ ಗೆ ತೆರಳುತ್ತಾಳೆ. ಕೆಲವೊಂದು ಮನೆಗಳಲ್ಲಿ ಗಂಡಂದಿರು ಫ್ರಿಯಾಗಿ ಇದ್ದರೂ ಕೂಡ ಹೆಂಡತಿಯ ಸಹಾಯಕ್ಕೆ ಮುಂದಾಗೋದಿಲ್ಲ.
ನೀವು ಮನೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಸಹಾಯಕ್ಕೆ ಬಂದರೆ ಖಂಡಿತ ಆತನಿಗೆ ನಿಮ್ಮ ಮೇಲೆ ಕಾಳಜಿಯಿದೆ ಎಂದರ್ಥ. ಆತನಿಗೆ ಆ ಕೆಲಸ ಗೊತ್ತಿಲ್ಲದಿದ್ದರೂ ಕೂಡ ನಿಮಗೆ ಒಂಚೂರು ಸಹಾಯವಾಗಲೆಂದು ನಿಮ್ಮ ಜೊತೆಗೆ ಕೆಲಸದಲ್ಲಿ ಕೈ ಜೋಡಿಸುತ್ತಾನೆ.
2. ಹುಷಾರಿಲ್ಲದಾಗ ನಿಮ್ಮ ಕಾಳಜಿ ಮಾಡುತ್ತಾನೆ
ನಮ್ಮ ಸಂಗಾತಿಯ ಮೇಲೆ ನಮಗೆ ಕಾಳಜಿ ಇದ್ದೇ ಇರುತ್ತದೆ. ಆದರೆ ಕೆಲವು ಗಂಡಂದಿರೂ ಬರೀ ಬಾಯಿ ಮಾತಿನಲ್ಲಿ ಹೇಳುತ್ತಾರೆ ವಿನಹ ಒಂದು ದಿನವೂ ಕಾಳಜಿ ಮಾಡೋದಿಲ್ಲ. ನಿಮ್ಮ ಗಂಡನಿಗೆ ನಿಮ್ಮ ಮೇಲೆ ಕಾಳಜಿ ಇರೋದು ನಿಜವೇ ಆಗಿದ್ದರೆ ನಿಮಗೆ ಹುಷಾರಿಲ್ಲದಾಗ ಆತ ಆಫಿಸ್ ಗೆ ಹೋಗದೇ ಮನೆಯಲ್ಲೇ ಉಳಿಯುತ್ತಾನೆ.
ನಿಮ್ಮನ್ನು ಆತನೇ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾನೆ. ಮನೆಯ ಎಲ್ಲಾ ಕೆಲಸವನ್ನು ಅವನೇ ಮಾಡುತ್ತಾನೆ. ಜೊತೆಗೆ ನಿಮಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಮಾತ್ರೆಯನ್ನು ತಪ್ಪದೇ ನೀಡುತ್ತಾನೆ. ಕಾಳಜಿ ಮಾಡೋ ಗಂಡ ನಿಮ್ಮನ್ನು ಈ ರೀತಿ ನೋಡಿಕೊಳ್ಳುತ್ತಾನೆ.
3. ನಿಮ್ಮನ್ನು ಖುಷಿಯಾಗಿಡುತ್ತಾನೆ
ನಮ್ಮಲ್ಲಿ ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೆ ನಾವು ಖುಷಿಯಾಗಿರೋದಕ್ಕೆ ಸಾಧ್ಯವಿಲ್ಲ. ಯಾವಾಗ ಗಂಡ-ಹೆಂಡತಿಯ ಮಧ್ಯೆ ಪ್ರೀತಿ ಹೆಚ್ಚಾಗಿರುತ್ತದೆಯೋ ಆಗ ಮಾತ್ರ ನಾವು ಖುಷಿಯಾಗಿ ಇರಬಹುದು. ನಿಮ್ಮನ್ನು ಕಾಳಜಿ ಮಾಡೋ ಗಂಡ ಯಾವಾಗಲೂ ನಿಮ್ಮನ್ನು ಖುಷಿಯಾಗಿ ಇಡೋದಕ್ಕೆ ಬಯಸುತ್ತಾನೆ. ನಿಮ್ಮ ಮುಖದಲ್ಲಿ ನಗು ತರೋದಕ್ಕೆ ಆತ ಏನು ಮಾಡೋದಕ್ಕೂ ಸಿದ್ಧವಿರುತ್ತಾನೆ.
ನಿಮಗೆ ಯಾವುದೇ ರೀತಿ ನೋವಾಗದಂತೆ ನಿಮ್ಮನ್ನು ಜೋಪಾನ ಮಾಡುತ್ತಾನೆ. ನಿಮ್ಮ ಕಷ್ಟವನ್ನು ಆತನ ಕಷ್ಟವೆಂದು ಭಾವಿಸಿ ಅದನ್ನು ಬಗೆ ಹರಿಸೋದಕ್ಕೆ ಪ್ರಯತ್ನಿಸುತ್ತಾನೆ. ಒಟ್ಟಿನಲ್ಲಿ ನಿಮ್ಮ ಬಳಿ ಯಾವುದೇ ಕಷ್ಟ ಬಾರದಂತೆ ಜೋಪಾನ ಮಾಡುತ್ತಾನೆ.
4. ನಿಮಗಾಗಿ ಯಾವಾಗಲೂ ಲಭ್ಯವಿರುತ್ತಾರೆ
ಈ ಬ್ಯೂಸಿ ಜಗತ್ತಿನಲ್ಲಿ ನಾವು ಕೂಡ ಜಗತ್ತಿನ ಜೊತೆಗೆ ಓಡಬೇಕಾಗುತ್ತದೆ. ಹೀಗಾಗಿ ಯಾರಿಗೂ ಸಮಯ ಅನ್ನೋದೇ ಇರೋದಿಲ್ಲ. ಕೆಲಸಕ್ಕೆ ಹೋಗೋದ್ರಿಂದ ಮತ್ತು ಮನೆ ನಿಭಾಯಿಸಬೇಕಾಗಿರೋದ್ರಿಂದ ನಿಮ್ಮ ಗಂಡ ಕೂಡ ಖಂಡಿತ ಬ್ಯೂಸಿಯಾಗಿ ಇರ್ತಾರೆ. ಕೆಲವೊಂದು ಸಲ ಹೆಂಡತಿ, ಮಕ್ಕಳ ಜೊತೆಗೆ ಮಾತನಾಡೋದಕ್ಕೂ ಸಮಯ ಇರೋದಿಲ್ಲ.
ನಿಜವಾಗಿಯೂ ನಿಮ್ಮನ್ನು ಕಾಳಜಿ ಮಾಡುವ ಗಂಡ ಇದೆಲ್ಲದರ ಮಧ್ಯೆಯೂ ನಿಮಗಾಗಿ ಸಮಯ ಕೊಡೋದನ್ನು ಮರೆಯೋದಿಲ್ಲ. ದಿನ ಪೂರ್ತಿ ಬ್ಯೂಸಿಯಾಗಿ ಇದ್ರೂ ಕೂಡ ರಾತ್ರಿಯಾದರೂ ನಿಮಗೆ ಸಮಯ ಕೊಡುತ್ತಾನೆ. ಹಾಗೂ ನಿಮ್ಮ ಜೊತೆಗೆ ಕಾಲ ಕಳೆಯುತ್ತಾನೆ. ಇನ್ನೂ ನೀವು ಹೊರಗಡೆ ಹೋಗಬೇಕು ಅಂದಾಗ ನಿಮಗಾಗಿ ಆತ ಸಮಯ ಕೊಡುತ್ತಾನೆ. ಎಷ್ಟೇ ಬ್ಯೂಸಿ ಇದ್ದರೂ ನಿಮಗೆ ಇಲ್ಲ ಅನ್ನೋದಿಲ್ಲ.
5. ನಿಮ್ಮ ಭವಿಷ್ಯದ ಬಗ್ಗೆ ಆಸಕ್ತಿ ತೋರುತ್ತಾನೆ
ಮದುವೆಯಾದ ಮೇಲೆ ಹೆಚ್ಚಿನ ಹೆಣ್ಣು ಮಕ್ಕಳು ಎಲ್ಲಾ ಮುಗಿಯಿತು ಅಂದುಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಜನ ಗಂಡಸರು ಮದುವೆಯ ನಂತರವು ತನ್ನ ಹೆಂಡತಿಗೆ ಪ್ರೋತ್ಸಾಹ ನೀಡುತ್ತಾರೆ. ಅವರ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ.
ನೀವು ಸಾಧನೆ ಮಾಡೋದಕ್ಕೆ ಅವರು ನಿಮ್ಮ ಜೊತೆಗೆ ನಿಲ್ಲುತ್ತಾರೆ. ಯಾವುದೇ ಕೆಲಸವನ್ನಾದರೂ ನಿನ್ನಿಂದ ಇದು ಆಗುತ್ತೆ, ನೀನು ಈ ಕೆಲಸವನ್ನು ಖಂಡಿತ ಮಾಡುತ್ತೀಯಾ ಎಂದು ಹುರಿದುಂಬಿಸುತ್ತಾರೆ. ಯಾವ ಗಂಡ ನಿಮ್ಮ ಕನಸನ್ನು ಆತನ ಕನಸು ಎಂದು ಭಾವಿಸುತ್ತಾನೆಯೇ ಆತ ಖಂಡಿತ ನಿಮ್ಮ ಕಾಳಜಿ ಮಾಡುತ್ತಾನೆ ಎಂದರ್ಥ.
6. ನಿಮ್ಮನ್ನು ಬದಲಾಯಿಸೋದಕ್ಕೆ ಪ್ರಯತ್ನಿಸೋದಿಲ್ಲ
ಮದುವೆಯಾದ ಮೇಲೆ ಕೆಲ ಗಂಡಂದಿರು ನಿಮ್ಮ ಕೆಲ ಗುಣ-ನಡತೆಗಳನ್ನು ಬದಲಾಯಿಸುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತಾರೆ. ನಿಮ್ಮ ಮೇಲೆ ನಿಜವಾಗಿಯೂ ಕಾಳಜಿ ಇರುವ ಗಂಡ ನೀವು ಹೇಗಿದ್ದರೋ ಅದೇ ರೀತಿ ಇಷ್ಟ ಪಡುತ್ತಾನೆ. ತನಗಾಗಿ ನೀನು ಬದಲಾಗಬೇಕು ಎಂದು ಖಂಡಿತ ಹೇಳೋದಿಲ್ಲ. ಒತ್ತಡವೂ ಹೇರೋದಿಲ್ಲ.
ಗಂಡ ನಮ್ಮನ್ನು ಕಾಳಜಿ ಮಾಡುತ್ತಿರೋದು ಅವರ ನಡವಳಿಕೆಯಿಂದಲೇ ನಮಗೆ ಗೊತ್ತಾಗಿ ಬಿಡುತ್ತೆ. ಈ ಮೇಲಿನ ಗುಣಗಳು ನಿಮ್ಮ ಗಂಡನಲ್ಲಿದ್ದರೆ ಆತನಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ.



Click it and Unblock the Notifications


