Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಪತ್ನಿಯ ನಡವಳಿಕೆ ಈ ರೀತಿ ಇದ್ದರೆ ಆಕೆ ಖಂಡಿತ ನಿಮ್ಮನ್ನು ಬಿಟ್ಟು ಹೋಗುತ್ತಾಳೆ!
ಮದುವೆಯು ಮೂರು ಗಂಟಿನ ನಂಟಿನಲ್ಲಿ ಗಟ್ಟಿಯಾಗಬೇಕು ಅಂತಾರೆ ಆದರೆ ದಾಂಪತ್ಯದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಇಷ್ಟವಿಲ್ಲದಿದ್ದರೂ ಕೂಡ ಆ ಸಂಬಂಧ ಕಡೆವರೆಗೂ ಉಳಿಯೋದಿಲ್ಲ. ಕೆಲವೊಂದು ಸಲ ಪತ್ನಿಗೆ ಸಂಬಂಧದಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಜೀವನದಲ್ಲಿ ಏನೂ ಬೇಡ ಎನ್ನುವ ಮಟ್ಟಕ್ಕೆ ತಲುಪಿ ಬಿಡುತ್ತಾಳೆ. ಒಂದು ವೇಳೆ ನಿಮ್ಮ ಪತ್ನಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ಆಕೆಗೆ ಖಂಡಿತ ಈ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದರ್ಥ. ಹಾಗಾದ್ರೆ ಆ ಲಕ್ಷಣಗಳು ಯಾವುದು ಅನ್ನೋದನ್ನು ತಿಳಿಯೋಣ.
1. ನಿಮ್ಮ ಬಗ್ಗೆ ದೂರುಗಳನ್ನು ನೀಡೋದಿಲ್ಲ
ಇಷ್ಟು ದಿನ ಪತ್ನಿ ನೀವು ತಪ್ಪು ಮಾಡಿದಾಗಲೆಲ್ಲ ಬೆರೆಳು ತೋರಿಸಿ ಏನನ್ನಾದರೂ ಹೇಳುತ್ತಿದ್ದರು. ನಿಮ್ಮ ನಡವಳಿಕೆ ಅವರಿಗೆ ಇಷ್ಟವಾಗದೇ ಇದ್ದಾಗ ನಿಮ್ಮಲ್ಲಿ ಅದನ್ನು ಹೇಳಿ ಜಗಳ ಮಾಡಿದ್ದು ಇರಬಹುದು. ಆದರೆ ಇತ್ತೀಚಿಗೆ ಅವರು ಏನನ್ನೂ ಮಾತನಾಡದೇ ಸುಮ್ಮನಾಗಿದ್ದಾರಾ? ನೀವು ಏನೇ ಮಾಡಿದರೂ ಅವರು ಎದುರು ಮಾತನಾಡುತ್ತಿಲ್ಲ ಎಂದಾದರೆ ನಿಮ್ಮ ಸಂಬಂಧದಲ್ಲಿ ಏನು ಸರಿಯಿಲ್ಲ ಎಂದರ್ಥ.

2. ನೀವು ಹತ್ತಿರವಿದ್ದಾಗ ಆಕೆ ಸುಮ್ಮನಿರುತ್ತಾಳೆ
ಇಷ್ಟು ದಿನ ನೀವು ಹತ್ತಿರವಿದ್ದಾಗ ನಗುತ್ತಾ, ಜೋಕ್ ಮಾಡುತ್ತಾ ಮಾತನಾಡುತ್ತಿದ್ದ ನಿಮ್ಮ ಹೆಂಡತಿ ಈಗ ಮಂಕಾಗಿದ್ದಾರಾ? ಆಕೆಗೆ ಏನನ್ನೂ ಮಾತನಾಡದೇ ಸುಮ್ಮನೇ ಕೂತಿರೋದನ್ನು ನೀವು ಗಮನಿಸಿದ್ದೀರಾ? ನೀವು ಹಾಸ್ಯ ಚಟಾಕಿ ಹಾರಿಸಿದ್ರೂ ಕೂಡ ಅದಕ್ಕೆ ಆಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ವಾ? ಖಂಡಿತ ಆಕೆಗೆ ಸಂಬಂಧ ಸಾಕೆನಿಸಿರಬಹುದು. ನಿಮ್ಮನ್ನು ಬಿಟ್ಟು ಹೋಗೋದಕ್ಕೆ ಆಕೆ ಯೋಚಿಸಿರಬಹುದು.
3. ನೀವು ಏನೇ ಮಾಡಿದರೂ ಆಕೆ ತಲೆ ಕೆಡಿಸಿಕೊಳ್ಳೋದಿಲ್ಲ
ನಮ್ಮನ್ನು ಅತಿಯಾಗಿ ಪ್ರೀತಿಸುವ ಪತ್ನಿಯರು ಹೇಗಿರುತ್ತಾರೆ ಎಂದು ನಮಗೆ ಖಂಡಿತ ಗೊತ್ತಿರುತ್ತದೆ. ಅವರು ನಮ್ಮನ್ನು ಎಷ್ಟು ಪ್ರೀತಿ ಮಾಡುತ್ತಾರೋ, ಅಷ್ಟೇ ಜಗಳ ಕೂಡ ಆಡುತ್ತಾರೆ. ನಮ್ಮಿಂದ ಒಂಚೂರು ತಪ್ಪಾದರೂ ಅವರು ಸಹಿಸಿಕೊಳ್ಳೋದಿಲ್ಲ. ಮನೆಗೆ ತಡವಾಗಿ ಬಂದರೆ, ಹೆಂಡತಿಯ ಕಾಳಜಿ ಮಾಡದೇ ಇದ್ದರೆ ಹೀಗೆ ಹೆಜ್ಜೆ ಹೆಜ್ಜೆಗೂ ಕೋಪಿಸಿಕೊಳ್ಳೂತ್ತಾರೆ. ಆದರೆ ಇತ್ತೀಚಿಗೆ ನೀವು ಏನೇ ಮಾಡಿದರೂ ಆಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನನಗೂ ಈ ವಿಚಾರಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಇದ್ದಾರಾ? ಹಾಗಾದ್ರೆ ಸಂಬಂಧ ಸರಿಯಿಲ್ಲ ಎಂದರ್ಥ.
4. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ
ಗಂಡ- ಹೆಂಡತಿಯ ಮಧ್ಯೆ ಮಾನಸಿಕ ಸಂಬಂಧ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ದೈಹಿಕ ಸಂಬಂಧ ಕೂಡ. ಗಂಡ- ಹೆಂಡತಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ಸಮಾನ ಆಸಕ್ತಿಯನ್ನು ತೋರಿದಾಗ ಬದುಕು ಸುಂದರವಾಗಿರುತ್ತದೆ. ಆದರೆ ಇತ್ತೀಚಿಗೆ ನಿಮ್ಮ ಹೆಂಡತಿ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚಾಗಿ ಆಸಕ್ತಿ ತೋರುತ್ತಿಲ್ವಾ? ನೀವಾಗೆ ಮೇಲೆ ಬಿದ್ದು ಹೋದರೂ ಕೂಡ ಅವರು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರಾ? ಹಾಗಾದ್ರೆ ಖಂಡಿತ ಸಂಬಂಧ ಹಾಳಾಗಿದೆ ಎಂದರ್ಥ.
5. ನಿಮ್ಮ ಬಗ್ಗೆ ಕಾಳಜಿ ಮಾಡುತ್ತಿಲ್ಲ
ಸಾಮಾನ್ಯವಾಗಿ ಹೆಂಡತಿಯಾದವಳು ಪತಿಯ ಬಗ್ಗೆ ಎಷ್ಟು ಕಾಳಜಿ ಮಾಡುತ್ತಾಳೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆಕೆ ತನ್ನ ಬಗ್ಗೆ ಕಾಳಜಿ ಮಾಡದಿದ್ದರೂ ಪರವಾಗಿಲ್ಲ. ಆದರೆ ಗಂಡ- ಮಕ್ಕಳ ಮೇಲೆ ಜೀವಾನೆ ಇಟ್ಟುಕೊಂಡಿರುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯ ನಡವಳಿಕೆ ಬದಲಾಗಿರಬಹುದು. ನಿಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಆಕೆ ವರ್ತಿಸುತ್ತಾ ಇರಬಹುದು. ಖಂಡಿತ ಅವರು ನಿಮ್ಮ ಮೇಲೆ ಅಸಮಾಧಾನಗೊಂಡು ನಿಮ್ಮನ್ನು ಬಿಟ್ಟು ಹೋಗೋದಕ್ಕೆ ಯೋಚಿಸಿರಬಹುದು.
6. ಸಂಬಂಧ ಸರಿಪಡಿಸಿಕೊಳ್ಳೋದಕ್ಕೆ ಆಕೆಗೆ ಇಷ್ಟವಿಲ್ಲ
ದಾಂಪತ್ಯದಲ್ಲಿ ಜಗಳ ಮನಸ್ಥಾಪಗಳು ಕಾಮನ್. ಹಾಗಂತ ಅದನ್ನೇ ಮುಂದುವರಿಸೋದಕ್ಕೆ ಯಾರಿಗೂ ಇಷ್ಟವಿರೋದಿಲ್ಲ. ಕೆಲವೊಂದು ಸಲ ಇಬ್ಬರಲ್ಲಿ ಒಬ್ಬರೂ ಕಾಂಪ್ರಮೈಸ್ ಆಗಲೇಬೇಕು. ಆದರೆ ನೀವು ಎಷ್ಟು ಕಾಂಪ್ರಮೈಸ್ ಮಾಡೋದಕ್ಕೆ ಪ್ರಯತ್ನಿಸಿದರೂ ಕೂಡ ನಿಮ್ಮ ಪತ್ನಿಗೆ ಸಂಬಂಧ ಸರಿಪಡಿಸಿಕೊಳ್ಳೋದಕ್ಕೆ ಇಷ್ಟವಿಲ್ಲ. ಅವರು ಜಗಳ ಹೆಚ್ಚಾಗಲೆಂದು ಮತ್ತೆ ಮಾತಿಗೆ ಮಾತು ಬೆಳೆಸಬಹುದು. ಸಂಬಂಧ ಹೀಗಿದ್ದರೆ ಪತ್ನಿ ಸಂಬಂಧದಿಂದ ಹೊರ ನಡೆಯಲು ಇಚ್ಛಿಸಿದ್ದಾರೆ ಎಂದರ್ಥ.
ಹೆಂಡತಿ ಈ ರೀತಿ ನಡೆದುಕೊಳ್ಳುತ್ತಿದ್ದರೆ ಅವರು ದಾಂಪತ್ಯ ಬಂಧನದಿಂದ ಬಿಡಿಸಿಕೊಳ್ಳೋದಕ್ಕೆ ಯತ್ನಿಸುತ್ತಿದ್ದಾರೆ ಎಂದರ್ಥ. ಸಂಬಂಧಗಳು ಚಿಕ್ಕ ಪುಟ್ಟ ಕಾರಣಗಳಿಗಾಗಿ ಮುರಿಯಬಾರದು. ಹೀಗಾಗಿ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಂಬಧವನ್ನು ಜೋಡಿಸಲು ಪ್ರಯತ್ನಿಸಿ.



Click it and Unblock the Notifications
