Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಮ್ಮ ಪತಿಯ ನಡವಳಿಕೆ ಹೀಗಿದ್ದರೆ ಆತ ಪರ ಸ್ತ್ರೀ ಬಲೆಯಲ್ಲಿ ಬಿದ್ದಿದ್ದಾನೆ ಎಂದರ್ಥ
ಮದುವೆಯಾಗಿ ಸುಂದರ ದಾಂಪತ್ಯ ನಡೆಸುತ್ತಿರುತ್ತಾರೆ. ಮಡದಿ, ಮಕ್ಕಳು ಸುಂದರ ಸಂಸಾರ. ಮನೆಯಲ್ಲಿ ಯಾವುದಕ್ಕೂ ರೀತಿ ಕೊರತೆ ಇರೋದಿಲ್ಲ. ಆದರೆ ಮನೆಯ ಯಜಮಾನ ಪರ ಸ್ತ್ರೀ ಮೇಲೆ ಕಣ್ಣು ಹಾಕಿರುತ್ತಾನೆ. ಆಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ. ಈ ಬಗ್ಗೆ ಅವರು ಮುಕ್ತವಾಗಿ ಮಾತನಾಡದೇ ಹೋದರೂ ಕೂಡ ಪತಿಯ ಕೆಲವೊಂದು ನಡವಳಿಕೆಗಳಿಂದ ಅನೈತಿಕ ಸಂಬಂಧವಿರೋ ವಿಚಾರ ಗೊತ್ತಾಗುತ್ತದೆ. ಅಷ್ಟಕ್ಕು ನಿಮ್ಮ ಪತಿಯ ನಡವಳಿಕೆ ಹೀಗಿದ್ದರೆ ಖಂಡಿತ ಅವರು ಪರ ಸ್ತ್ರೀ ಜೊತೆಗೆ ಅನೈತಿಕ ಸಂಬಂಧದಲ್ಲಿ ಬಿದ್ದಿದ್ದಾರೆ ಎಂದರ್ಥ.

1. ಮಹಿಳೆಯರು ಪಕ್ಕದಲ್ಲಿದ್ದಾಗ ಆತನ ಉತ್ಸಾಹ ಹೆಚ್ಚಾಗುತ್ತದೆ
ನಿಮ್ಮ ಪತಿಯ ನಡವಳಿಕೆ ಯಾವ ರೀತಿ ಇರುತ್ತೆ ಅನ್ನೋದು ನಿಮಗೆ ಖಂಡಿತ ಗೊತ್ತಿರುತ್ತದೆ. ಮನೆಯಲ್ಲಿ ಅಷ್ಟೊಂದು ಆಕ್ಟೀವ್ ಆಗಿರದ ನಿಮ್ಮ ಪತಿ ಮಹಿಳೆಯರು ಪಕ್ಕ ಇದ್ದಾಗ ಆತನ ಉತ್ಸಾಹ ಹೆಚ್ಚಿರುತ್ತದೆ. ಅದರಲ್ಲೂ ಮದುವೆಯಾಗದ ತರುಣಿಯರ ಜೊತೆಗೆ ಮಾತನಾಡಲು ಆತ ಹೆಚ್ಚು ಉತ್ಸುಕನಾಗಿರುತ್ತಾನೆ. ಅವರಿಗೆ ಅಂಟಿಕೊಂಡು ಇರುತ್ತಾನೆ. ಜೋಕ್ಸ್ ಮಾಡೋದು, ಅವರನ್ನು ನಗಿಸುತ್ತಿರುತ್ತಾನೆ. ಈ ಎಲ್ಲಾ ಗುಣಗಳು ಆತನು ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತನಾಗಿದ್ದಾನೆ ಎಂದು ತಿಳಿಸುತ್ತದೆ.
2. ಮಹಿಳೆಯರನ್ನು ಹೆಚ್ಚಾಗಿ ಹೊಗಳುತ್ತಾನೆ
ಮನೆಯಲ್ಲಿ ಸುಂದರಿಯಂತಹ ಪತ್ನಿ ಇದ್ದರೂ ಕೂಡ ಇತರ ಮಹಿಳೆಯರನ್ನು ಹೆಚ್ಚಾಗಿ ಹೊಗಳತ್ತಾನೆ. ಆಫಿಸ್ ಅಥವಾ ಫ್ಯಾಮಿಲಿಯಲ್ಲಿ ಕಾರ್ಯಕ್ರಮಗಳಾದಾಗ ಅಲ್ಲಿ ಸುಂದರವಾದ ಮಹಿಳೆಯರಿದ್ದರೆ ಅವರನ್ನು ಹೊಗಳುತ್ತಾನೆ. ಅವರಿಗೆ ಖುಷಿ ಆಗುವ ರೀತಿ ಕಾಂಪ್ಲಿಮೆಂಟ್ ನೀಡುತ್ತಾನೆ. ಇದರ ಹೊರತಾಗಿ ಕೆಲವೊಂದು ಸಲ ನಿಮ್ಮ ಪತಿಯ ದೃಷ್ಟಿಯಿಂದಲೇ ಆತನ ಗುಣ ಹೇಗೆಂದು ನೀವು ಗುರುತಿಸಬಹುದು. ಮಹಿಳೆಯರನ್ನು ನೋಡುವ ಆತನ ದೃಷ್ಟಿಯೇ ಸರಿ ಇರೋದಿಲ್ಲ.
3. ಬೇರೆ ಮಹಿಳೆಯರಿಗಾಗಿ ಸಮಯ ಮೀಸಲಿಡುತ್ತಾನೆ
ನಿಮ್ಮ ಪತಿಯನ್ನು ನೀವು ಎಲ್ಲಿಗೇ ಕರೆದುಕೊಂಡು ಹೋಗಲು ಹೇಳಿದರೂ ಕೂಡ ಆತ ಬ್ಯುಸಿಯಾರುತ್ತಾನೆ. ಆದರೆ ಅದೇ ಸಮಯದಲ್ಲಿ ಬೇರೆ ಹುಡುಗಿ ಕರೆದರೆ ಆತ ಲಭ್ಯವಿರುತ್ತಾನೆ. ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಾನೆ. ಜೊತೆಗೆ ಆಕೆಗಾಗಿ ದುಡ್ಡು ಖರ್ಚು ಮಾಡೋದಕ್ಕೂ ನಿಮ್ಮ ಪತಿ ಹಿಂದೆ-ಮುಂದೆ ನೋಡೋದಿಲ್ಲ. ಇಂತಹ ಲಕ್ಷಗಳನ್ನು ನಿಮ್ಮ ಪತಿಯನ್ನು ಗಮನಿಸಿದ್ದೀರಾ?
4. ನವ ಯುವಕನಂತೆ ರೆಡಿಯಾಗುತ್ತಾನೆ
ಸಾಮಾನ್ಯವಾಗಿ ನಿಮ್ಮ ಪತಿ ಆಫಿಸ್ ಅಥವಾ ಹೊರಗಡೆ ಹೋಗುವಾಗ ಯಾವ ರೀತಿ ರೆಡಿಯಾಗುತ್ತಾನೆ ಅನ್ನೋದು ನಿಮಗೆ ಗೊತ್ತಿರುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಆಫಿಸ್‌ಗೂ ಟಿಪ್ ಟಾಪ್ ಆಗಿ ಹೋಗುತ್ತಿರಬಹುದು. ಗಂಟೆ ಗಟ್ಟಲೇ ಕನ್ನಡಿಯ ಮುಂದೆ ನಿಂತಿರೋದನ್ನು ನೀವು ಗಮನಿಸಿರುತ್ತೀರಿ. ಹಾಗಾದ್ರೆ ಖಂಡಿತ ಆಫಿಸ್‌ನಲ್ಲಿ ಯಾರನ್ನಾದರೂ ಆತನತ್ತ ಆಕರ್ಷಿಸಲು ಪ್ರಯತ್ನಿಸುತ್ತಿರುತ್ತಾನೆ.
5. ಎಲ್ಲಾ ವಿಚಾರಗಳನ್ನು ಗುಪ್ತವಾಗಿಡುತ್ತಾನೆ
ಗಂಡ-ಹೆಂಡತಿ ಇಬ್ಬರ ಮಧ್ಯೆ ಸಾಮಾನ್ಯವಾಗಿ ಯಾವುದೇ ರಹಸ್ಯಗಳು ಇರೋದಿಲ್ಲ. ಯಾವುದೇ ವಿಚಾರಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಸೋಶಿಯಲ್ ಮಿಡಿಯಾ ಪಾಸ್‌ವರ್ಡ್ ಎಲ್ಲವೂ ಗೊತ್ತಿರುತ್ತದೆ. ಆದರೆ ಇತ್ತೀಚಿಗೆ ನಿಮ್ಮ ಪತಿ ಪಾಸ್‌ವರ್ಡ್ ಬದಲಿಸಿರಬಹುದು. ಹಾಗೂ ಫೋನ್ ಕಾಲ್ ಲಿಸ್ಟ್ ಹಾಗೂ ಮೆಸೆಜ್ ಡಿಲಿಟ್ ಮಾಡಿರೋದನ್ನು ನೀವು ಗಮನಿಸಿರಬಹುದು. ಹೀಗಿದ್ದಾಗ ಅವರು ರಹಸ್ಯವಾಗಿ ಅನ್ಯ ಮಹಿಳೆಯ ಜೊತೆಗೆ ಸಂಬಂಧದಲ್ಲಿರಬಹುದು.
6. ಹೆಂಡತಿ, ಮಕ್ಕಳು ಇರೋ ವಿಚಾರವನ್ನು ಮುಚ್ಚಿಟಿರಬಹುದು
ಪುರುಷರು ಮದುವೆಯಾಗದ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಂಡಿರುವಾಗ ತಮಗೆ ಮದುವೆಯಾಗಿ ಮಕ್ಕಳಿರೋ ವಿಚಾರವನ್ನು ಮುಚ್ಚಿಡುತ್ತಾರೆ. ಯಾವುದೇ ಕಾರಣಕ್ಕೂ ಸಂಸಾರದ ವಿಚಾರ ಹೇಳೋದೇ ಇಲ್ಲ. ಆಕೆಯಿಂದ ಫೋನ್ ಬಂದಾಗ ಮನೆಯಿಂದ ದೂರ ಹೋಗಿ ಮಾತನಾಡುತ್ತಾರೆ. ಕದ್ದು ಮುಚ್ಚಿ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ.
7. ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆ ಆಗಿರಬಹುದು
ನಿಮ್ಮ ಪತಿಗೆ ಇತ್ತೀಚಿನ ದಿನಗಳಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಇಲ್ಲದೇ ಇರಬಹುದು. ನೀವಾಗೇ ಆಸಕ್ತಿ ತೋರಿದರೂ ಅವರು ನಿರಾಸಕ್ತಿ ತೋರುತ್ತಾರೆ. ನಿಮ್ಮಿಂದ ದೂರ ಹೋಗುತ್ತಾರೆ. ಮಕ್ಕಳ ಕಡೆಗೂ ಅವರ ಗಮನ ಇರೋದಿಲ್ಲ. ಜೊತೆಗೆ ದುಡ್ಡು ಕೊಡೋದಕ್ಕೂ ಜಿಪುಣತನ ಮಾಡುತ್ತಾರೆ. ಈ ಎಲ್ಲಾ ಅಂಶಗಳು ಅವರಿಗೆ ಅನ್ಯ ಸಂಬಂಧ ಇದೆ ಅನ್ನೋದನ್ನು ತೋರಿಸುತ್ತದೆ.
ನಿಮ್ಮ ಪತಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ಖಂಡಿತ ನಿರ್ಲಕ್ಷ್ಯ ಮಾಡಲೇಬೇಡಿ. ನಿಮ್ಮ ಒಂದು ನಿರ್ಲಕ್ಷ್ಯ ನಿಮ್ಮ ಸಂಸಾರವನ್ನೇ ಹಾಳು ಮಾಡಿ ಬಿಡಬಹುದು.



Click it and Unblock the Notifications













