Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
3 ಅಡಿ ಕುಳ್ಳನಿಗೆ 7 ಅಡಿಯ ಹುಡುಗಿ ಜೋಡಿ: ಶಾರ್ಟ್ ನ ಕಿಂಗ್ ಟಾಲ್ ಕ್ವೀನ್ ರೊಮ್ಯಾಂಟಿಕ್ ರೀಲ್ಸ್ ವೈರಲ್
ಜೋಡಿಯೆಂದರೆ ಎತ್ತರ, ದಪ್ಪ, ಬಣ್ಣ ಮ್ಯಾಚ್ ಆಗುವಂತೆ ಇರಬೇಕು ಎಂದು ಹೇಳುವವರ ಮಧ್ಯ ಪ್ರೀತಿಗೆ ಇದ್ಯಾವುದು ಮ್ಯಾಟರ್ ಅಲ್ಲ, ಪ್ರೀತಿಯಿದ್ದರೆ ಅವರಿಬ್ಬರ ನಡುವೆ ರೂಪ ಒಂದು ವಿಷಯವೇ ಆಗುವುದಿಲ್ಲ ಎಂಬುವುದನ್ನು ಹಲವಾರು ಜೋಡಿಗಳು ತೋರಿಸಿಕೊಟ್ಟಿದ್ದಾರೆ, ಅಂಥದ್ದೇ ಜೋಡಿಯ ವೀಡಿಯೊಂದು ಇದೀಗ ಗಮನ ಸೆಳೆದಿದೆ, ಆತ ಮೂರು ಅಡಿ, ಆಕೆ ಏಳು, ಆದರೂ ಇವರಿಬ್ಬರು ಒಳ್ಳೆಯ ಜೋಡಿ.

ಆತ ಮೂರಡಿಯ ವ್ಯಕ್ತಿ, ಅವನಿಗೆ 7 ಅಡಿಯ ಹುಡುಗಿ ಜೊತೆ ಪ್ರೇಮಾಂಕುರವಾಗಿದೆ, ಸಾಮಾನ್ಯವಾಗಿ ಹುಡುಗಿಯರಿ 6 ಅಡಿಗಿಂತ ಕಡಿಮೆ ಇರುತ್ತಾರೆ, 6. 2 ಈ ರೀತಿಯ ಎತ್ತರದ ಹುಡುಗಿಯರು ಬಲು ಅಪರೂಪ, ಆದರೆ ಆಕೆಯದ್ದು 7 ಅಡಿ ಎತ್ತರ, ಈ ಕಾರಣಕ್ಕೆ ಆಕೆಯೂ ಬೇರೆ ಹುಡುಗಿಯರಿಗಿಂತ ತನ್ನ ಎತ್ತರದಲ್ಲಿ ಗಮನ ಸೆಳೆಯುತ್ತಾಳೆ. ಸಾಮಾನ್ಯವಾಗಿ ಹುಡುಗಿಯರು ನನಗಿಂತ ಎತ್ತರ ಹುಡುಗ ಸಂಗಾತಿಯಾಗಿ ಬರಬೇಕೆಂದು ಬಯಸುತ್ತಾರೆ, ಆದರೆ ಈಕೆ ತನಗಿಂತ 4 ಅಡ ಕಡಿಮೆ ಎತ್ತರದ ಹುಡುಗನನ್ನು ಇಷ್ಟ ಪಟ್ಟಿದ್ದಳೆ. ಇವರಿಬ್ಬರ ರೊಮ್ಯಾಂಟಿಕ್ ಡ್ಯಾನ್ಸ್‌ಗೆ ಭಾರೀ ಮೆಚ್ಚುಗೆ ಬಂದಿದೆ.
ಇನ್‌ಫ್ಲ್ಯೂನ್ಸರ್ ಆಗಿ ಗುರುತಿಸಿಕೊಂಡಿರುವ ಜೋಡಿ
ಇಬ್ಬರಿಗೂ ಸಾಮಾಜಿಕ ತಾಣದಲ್ಲಿ ಒಳ್ಳೆಯ ಫಾಲೋವರ್ಸ್ ಇದ್ದಾರೆ, ಆತನ ಹೆಸರು ಗೇಬ್ರಿಯಲ್ ಪಿಮೆಂಟಲ್, 23,000 ಫಾಲೋವರ್ಸ್ ಇದ್ದರೆ, ಮರಿಯಾ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಅವಳಿಗೆ 2 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.
ಕರ್ನಾಟಕದಲ್ಲಿಯೂ ಇಂಥ ಸೆಲೆಬ್ರಿಟಿ ಜೋಡಿ ಇದ್ದಾರೆ
ಕಾಮಿಡಿ ಸ್ಟಾರ್ ಸಂಜು ಬಸಯ್ಯಗಿಂತ ಅವರ ಪತ್ನಿ ಎತ್ತರವಾಗಿದ್ದಾರೆ, ಅದರೆ ಪತ್ನಿಯೇನೂ ಏಳು ಅಡಿ ಎತ್ತರ ಹೊಂದಿಲ್ಲ, ಆದರೆ ಈ ಗೇಬ್ರಿಯಲ್ ಜೊಡಿ ಮಾತ್ರ ಇಬ್ಬರೂ ತಮ್ಮ ಎತ್ತರದಲ್ಲಿ ಅಸಾಮಾನ್ಯರು, ಆಕೆಯನ್ನು ಸಾಮಾನ್ಯ ವ್ಯಕ್ತಿಗಳೇ ತಲೆಯೆತ್ತಿ ನೀಡಬೇಕು, ಅಷ್ಟು ಎತ್ತರದ ಹುಡುಗಿ. ಈತನ ಎತ್ತರ ಆಕೆಯ ಮಂಡಿಗಿಂತ ಸ್ವಲ್ಪ ಎತ್ತರವಷ್ಟೇ, ಆದರೂ ಇಬ್ಬರು ಖುಷಿ ಖುಷಿಯಾಗಿದ್ದಾರೆ. ಕೆಲವರು ಈ ಜೋಡಿ ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ, ಇಬ್ಬರು ಸದಾ ಹೀಗೆ ನಗುನಗುತಾ ಇರಲಿ ಎಂದು ಹಾರೈಸುತ್ತಿದ್ದಾರೆ, ಆದರೆ ಇನ್ನು ಕೆಲವರು ಕೊಂಕು ನುಡಿಯುತ್ತಿದ್ದಾರೆ. ಕೊಂಕು ನುಡಿಯುವವರು ಎಲ್ಲದಕ್ಕೂ ಕೊಂಕು ನುಡಿಯುತ್ತಾರೆ, ಇಲ್ಲಿ ಗಮನಿಸಬೇಕಾಗಿರುವುದು ಇಬ್ಬರ ನಡುವವಿನ ಪ್ರೀತಿಯಷ್ಟೇ...
Short King Tall Queen. Doing our own thing ಎಂದು ಕ್ಯಾಪ್ಷನ್ ನೀಡಿ ವೀಡಿಯೋ ಅಪ್‌ಲೋಡ್ ಮಾಡಿದ್ದು ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಆತನ ಆತ್ಮವಿಶ್ವಾಸ ಮೆಚ್ಚಬೇಕು
ಆತನ ಸೋಷಿಯಲ್ ಮೀಡಿಯಾ ಕಾತೆ ಗಮನಿಸಿದರೆ ಅವನು ಮೂರ್ತಿಯಲ್ಲಿ ಮಾತ್ರ ಚಿಕ್ಕವ, ಆದರೆ ಆತನಲ್ಲಿ ಆತ್ಮವಿಶ್ವಾಸವಿದೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತ ತನ್ನ ಪೋಟೋಗಳನ್ನು ಬೇರೆಯವರಿಗೆ ನಗು ತರಿಸುವ ರೀತಿ ಕ್ಲಿಕ್ಕಿಸಿ ಅಪ್‌ಲೋಡ್ ಮಾಡುತ್ತಿರುತ್ತಾರೆ, ಪ್ರಿಯತಮೆ ತನ್ನನ್ನು ಅವಳ ಸೊಂಟದಲ್ಲಿ ಕೂರಿಸಿರುವಂತೆ, ಮಕ್ಕಳ ಬೈಕ್ ರೈಡ್ ಮಾಡುವುದು ಹೀಗೆ ತನ್ನ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡಿದ್ದಾನೆ. ಎಲ್ಲಾ ಇದ್ದು ಕೊರಗುವವವರ ಮಧ್ಯ ಇಂಥವರು ನಿಜವಾಗಲೂ ಸ್ಪೂರ್ತಿದಾಯಕ ವ್ಯಕ್ತಿಗಳು, ಜೀವನದಲ್ಲಿ ಎಂಥದ್ದೇ ಬರಲಿ ಇವರನ್ನು ನೋಡಿ ಕಲಿಯಬೇಕು ನೋಡಿ.



Click it and Unblock the Notifications