Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Love Is Blind: ಪ್ರೀತಿ ಕುರುಡು ಅಂತಾರಲ್ಲ ಅದು ಸತ್ಯ ಕೂಡ, ಅದಕ್ಕೆ ಕಾರಣ ಇದೇ ನೋಡಿ
ಲವ್ ಈಸ್ ಬ್ಲೈಂಡ್ ಎಂದು ಹೇಳುತ್ತಾರೆ, ಪ್ರೀತಿಯಲ್ಲಿ ಬಿದ್ದರೆ ಒಳ್ಳೆಯದು, ಕೆಟ್ಟದ್ದು ಏನೂ ಕಾಣಲ್ಲ ಎಂದು ಹೇಳುತ್ತಾರೆ, ಅದು ನಿಜವೂ ಕೂಡ, ಆದರೆ ಏಕೆ ಹೀಗಾಗುತ್ತದೆ ಎಂಬುವುದಕ್ಕೆ ವಿಜ್ಞಾನಿಗಳು ಕಾರಣ ಕಂಡು ಹಿಡಿದಿದ್ದಾರೆ.
ಪ್ರೀತಿಯಲ್ಲಿ ಬಿದ್ದರೆ ಆ ಅನುಭವವೇ ಇತರ ಎಲ್ಲಾ ಅನುಭವಕ್ಕಿಂತ ಭಿನ್ನ ಹಾಗೂ ಹಿತವಾಗಿರುತ್ತದೆ, ನಮಗೆ ರೊಮ್ಯಾಂಟಿಕ್ ಫೀಲ್ ಆದಾಗ ನಮ್ಮ ಮೆದುಳಿನಲ್ಲಿ ಕೆಲ ಬದಲಾವಣೆಗಳಾಗುತ್ತದೆ, ಇದರಿಂದ ಲವ್ ಹಾರ್ಮೋನ್ ಆಕ್ಸಿಟೋಸಿನ್ ಉತ್ಪತ್ತಿಯಾಗುತ್ತೆ.

The Journal Behaviour Sciencesನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಅಂಶ ಹೇಳಿದೆ, ಸುಮಾರು 1,556 ಯುವ ಪ್ರೇಮಿಗಳನ್ನು ಈ ಅಧ್ಯಯನದಲ್ಲಿ ಒಳಪಡಿಸಲಾಗಿತ್ತು. ಆವಾಗ ಪ್ರೀತಿಯಲ್ಲಿ ಇದ್ದಾಗ ಹಾರ್ಮೋನ್‌ಗಳ ಬದಲಾವಣೆ ಬಗ್ಗೆ ತಿಳಿದು ಬಂದಿದೆ.
ರೊಮ್ಯಾಂಟಿಕ್ ಲವ್ ಹುಟ್ಟಿಕೊಂಡಿದ್ದು ಹೇಗೆ?
ಮಂಗಗಳಿಂದ ಮಾನವ ಎಂದು ಹೇಳಲಾಗುವುದು, ಹೀಗೆ ಮಾನವರಾಗಿ ಉಗಮವಾದಗಲೇ ರೊಮ್ಯಾಂಟಿಕ್ ಅನುಭವ ಉಂಟಾಯಿತು ಎಂದು ಹೇಳಲಾಗುವುದು. ರೊಮ್ಯಾಂಟಿಕ್ ನಮ್ಮ ಭಾವನೆ ಹಾಗೂ ವರ್ತನೆಯಲ್ಲಿ ಬದಲಾವಣೆ ತರುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಪ್ರೀತಿಸಿದವರಿಗೆ ವಿಶೇಷ ಸ್ಥಾನಮಾನ ಕೊಡುತ್ತೇವೆ, ಅದು ನರಗಳಲ್ಲಿ ಹರಿಯುತ್ತದೆ, ಇದರಿಂದ ಆ ವ್ಯಕ್ತಿಯ ಮೇಲೆ ವಿಶೇಷ ಭಾವನೆ ಮೂಡುತ್ತದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಭಾವನೆ ಉಂಟು ಮಾಡುತ್ತದೆ.
ಬ್ಲೈಂಡ್ ಲವ್‌ನಲ್ಲಿ ಅವರ ಪ್ರೀತಿ ಮುಂದೆ ಏನೂ ಕಾಣುವುದಿಲ್ಲ, ಆದ್ದರಿಂದಲೇ ಪ್ರೀತಿಯಲ್ಲಿ ಬಿದ್ದಾಗ ಇಷ್ಟು ವರ್ಷ ಸಾಕಿ ಬೆಳೆಸಿದ ಇಡೀ ಕುಟುಂಬವನ್ನು ಬಿಟ್ಟು ಪ್ರೀತಿಸಿದ ವ್ಯಕ್ತಿ ಜೊತೆ ಬಾಳ್ವೆ ಮಾಡಲು ಓಡಿ ಹೋಗುತ್ತಾರೆ. ಕೆಲವೊಂದು ಲವ್‌ಸ್ಟೋರಿ ನೋಡುವಾಗ ಆ ವ್ಯಕ್ತಿಯನ್ನು ಮದುವೆಯಾದರೆ ಅವರು ಖಂಡಿತ ಸಂತೋಷವಾಗಿ ಬಾಳಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಪ್ರೀತಿಯಲ್ಲಿ ಏನೂ ಕಾಣಲ್ಲ ನಂತರ ಮದುವೆಯಾಗಿ ಅಯ್ಯೋ ನಾನು ತಪ್ಪು ಮಾಡಿ ಬಿಟ್ಟೆ ಎಂದು ಕೊರಗುವವರಿಗೇನೂ ಕಡಿಮೆಯಿಲ್ಲ.
ಪ್ರೀತಿಯಲ್ಲಿ ಈ ಲಕ್ಷಣಗಳಿದ್ದರೆ ಬ್ಲೈಂಡ್ ಲವ್ ಎಂದು ಹೇಳಬಹುದು
* ಮೊದಲೇ ನಿರ್ಧಾರ ತೆಗೆದುಕೊಂಡು ಬಿಡುವುದು
ಪ್ರೀತಿಯಲ್ಲಿ ಬಿದ್ದು ಸ್ವಲ್ಪ ಸಮಯವಾಗುವಾಗಲೇ ಮುಂದಿನ ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವುದು. ಇಬ್ಬರ ಬ್ಯಾಂಕ್ ಅಕೌಂಟ್ ಜಾಯಿಂಟ್ ಅಕೌಂಡ್ ಮಾಡುವುದು, ಕಮಿಟ್‌ಮೆಂಟ್ ಎಲ್ಲಾತೆಗೆದುಕೊಳ್ಳುವುದು
* ಅವರ ತಪ್ಪು ವರ್ತನೆಗಳನ್ನು ಆಗಾಗ ಕ್ಷಮಿಸುವುದು
ಅವರ ಕೆಟ್ಟ ವರ್ತನೆಯನ್ನು ಕ್ಷಮಿಸುವುದು, ಅವರು ಮಾಡಿದ್ದ ತಪ್ಪನ್ನೇ ಪದೇ ಪದೇ ಮಾಡಿದಾಗ ಏನೂ ಹೇಳದೆ ಇರುವುದು ಇವೆಲ್ಲಾ ಬ್ಲೈಂಡ್ ಲವ್‌ನ ಲಕ್ಷಣಗಳಿವೆ.
ಅವರ ಖುಷಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು
ಅವರ ಖುಷಿಗೆ ತುಂಬಾನೇ ಪ್ರಾಮುಖ್ಯತೆ ನೀಡುವುದು, ನಿಮ್ಮ ಭಾವನೆಗಳಿಗೆ ಗೌರವ, ಬೆಲೆ ನೀಡದೇ ಇರುವುದು ಇವೆಲ್ಲಾ ನೀವು ಕುರುಡು ಪ್ರೀತಿಯಲ್ಲಿದ್ದೀರಿ ಎಂಬುವುದನ್ನು ಸೂಚಿಸುತ್ತದೆ.
ಯಾವತ್ತೂ ನೀವೇ ಕಾಂಪ್ರಮೈಸ್ ಆಗಬೇಕು
ನಿಮ್ಮ ಪ್ರೇಮಿ ಜೊತೆ ಏನೇ ವಾದಗಳು ಉಂಟಾದರೂ ಅವರ ತಪ್ಪೇ ಇದ್ದರೂ ನೀವೇ ಕಾಂಪ್ರಮೈಸ್ ಮಾಡಬೇಕು.
ರೆಡ್‌ಫ್ಲ್ಯಾಗ್ ಕಂಡರೂ ಸರಿಹೋಗುತ್ತೆ ಎಂಬ ಭಾವನೆ
ರೆಡ್‌ಫ್ಲ್ಯಾಗ್ ಕಂಡರೂ ಇಲ್ಲಾ ಮುಂದೆ ಆ ರೀತಿ ಆಗಲ್ಲ ಎಂದು ಭಾವಿಸಿ ಆ ಸಂಬಂಧದಲ್ಲಿ ಮುಂದುವರೆಯುವುದು ಇವೆಲ್ಲಾ ಬ್ಲೈಂಡ್ ಲವ್‌ನ ಲಕ್ಷಣವಾಗಿದೆ.



Click it and Unblock the Notifications