Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮದುವೆಯಾಗುತ್ತೀಯಾ ಎಂದು ಕೇಳಿದ್ರಂತೆ ಸಲ್ಮಾನ್..! ಈಗ ಕೋಟಿ ಒಡೆಯನ ಮದುವೆಯಾದ ನಟಿ..!
ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ನೀವೆಲ್ಲಾ ನೋಡಿರುತ್ತೀರಿ. ಆದ್ರೆ ಬಾಲಿವುಡ್ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಅಂತಲೇ ಫೇಮಸ್ ಆಗಿದ್ದಾರೆ. ಸಲ್ಲು ಹೋದಲ್ಲಿ ಬಂದಲ್ಲಿ ಅವರ ಮದುವೆಯ ವಿಚಾರವೇ ಚರ್ಚೆಯಾಗುತ್ತೆ. ಅವರು ಯಾವಾಗ ಮದುವೆಯಾಗುತ್ತಾರೆ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಆದ್ರೆ ಅವರ ಪ್ರೇಯಸಿಯರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.
ಆದ್ರೆ ಆಗಾಗ ಅವರ ಹಳೆಯ ಪ್ರಿಯತಮೆ ಕುರಿತ ಸುದ್ದಿಗಳು ಹರಿದಾಡುತ್ತವೆ. ಹಳೆಯ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದ್ರೆ ಈಗೊಬ್ಬ ನಟಿ ಸಲ್ಮಾನ್ ಮದುವೆಯಾಗಲು ಪ್ರಸ್ತಾಪಿಸಿದ್ದರು ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಬಾಲಿವುಡ್ ನಟಿ ಶರ್ಮಿನ್ ಸೆಗಲ್ ಅವರ ಹೀರಾಮಂಡಿ ವೆಬ್‌ಸೀರಿಸ್ ಬಿಡುಗಡೆಯಾಗಿದೆ. ಈ ವೆಬ್ ಸೀರಿಸ್‌ನ ಪ್ರಮುಖ ನಟಿ ಶರ್ಮಿನ್ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ಸಲ್ಮಾನ್ ತನ್ನನ್ನು ಮದುವೆಯಾಗುವಂತೆ ಕೇಳಿದ್ದರು ಎಂಬ ಅಂಶ ಬಾಯ್ಬಿಟ್ಟಿದ್ದಾರೆ. ಆದರೆ ಅವರು ತಮಾಷೆಯಾಗಿ ಈ ಮಾತು ಹೇಳಿದ್ದರು. . ಅಚ್ಚರಿ ಅಂದರೆ ಈ ವೇಳೆ ಆಕೆಗೆ ಇನ್ನೂ 2 ವರ್ಷ ವಯಸ್ಸಾಗಿತ್ತಂತೆ. ಹೌದು ನಟ ಸಲ್ಮಾನ್ ಹಮ್ ದಿಲ್ ದೇ ಚುಕೆ ಸನಮ್ ಚಿತ್ರೀಕರಣದ ವೇಳೆ ಮಾತನಾಡಿಸಿದ್ದರಂತೆ. ಆಗ ಶರ್ಮಿನ್‌ಗೆ ಕೇವಲ 2 ವರ್ಷವಂತೆ.
"ಹಮ್ ದಿಲ್ ದೇ ಚುಕೆ ಸನಮ್ (ಸಂಜಯ್ ಲೀಲಾ ಬನ್ಸಾಲಿಯವರ 1999 ರ ಚಲನಚಿತ್ರ) ಚಿತ್ರೀಕರಣದ ಸಮಯದಲ್ಲಿ, ನಾನು ಮೊದಲ ಬಾರಿಗೆ ಒಬ್ಬ ಸೆಲೆಬ್ರಿಟಿಯನ್ನು (ಸಲ್ಮಾನ್ ಖಾನ್) ಭೇಟಿಯಾಗಲು ಹೋಗಿದ್ದೆ. ನಾನು ಎರಡು ಅಥವಾ ಮೂರು ವರ್ಷದ ಪುಟ್ಟ ಹುಡುಗಿ. ಈ ವೇಳೆ ಸಲ್ಮಾನ್ ಖಾನ್ ತಮಾಷೆಯಾಗಿ ಮಾತನಾಡುತ್ತಾ ನನ್ನ ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ನಾನು ಇಲ್ಲ ಎಂಬುದಾಗಿ ಉತ್ತರ ನೀಡಿದ್ದೆ ಎಂದು ದಶಕಗಳ ಹಿಂದಿನ ವಿಚಾರ ಹಂಚಿಕೊಂಡಿದ್ದಾರೆ.
ಯಾರು ಈ ಶರ್ಮಿನ್ ಗೊತ್ತಾ?
ಸಂಜಯ್ ಲೀಲಾ ಬನ್ಸಾಲಿ ಅವರ ಇತ್ತೀಚಿನ 'ಹೀರಾಮಂಡಿ, ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಿರುವ ಈಕೆ ಈಗ ಎಲ್ಲೆಡೆ ಸುದ್ದಿಯಲ್ಲಿದ್ದಾರೆ.
1995 ರಲ್ಲಿ ಜನಿಸಿದ ಶರ್ಮಿನ್ ಸೆಗಲ್, ಚಿತ್ರರಂಗದಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು. ಆಕೆಯ ತಂದೆ, ದೀಪಕ್ ಸೆಗಲ್, ಅಪ್ಲಾಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಶೇರುದಾರರು. ಆಕೆಯ ತಾಯಿ ಬೇಲಾ ಸೆಗಲ್ ಪ್ರತಿಭಾವಂತ ಚಲನಚಿತ್ರ ಸಂಪಾದಕರಾಗಿದ್ದಾರೆ. ಬೇಲಾ ಅವರು 'ಖಾಮೋಶಿ', 'ದೇವದಾಸ್' ಮತ್ತು 'ಬ್ಲ್ಯಾಕ್' ಸೇರಿದಂತೆ ವಿವಿಧ ಸಂಜಯ್ ಲೀಲಾ ಬನ್ಸಾಲಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.
ಶ್ರೀಮಂತನ ಮದುವೆಯಾದ ಶರ್ಮಿನ್..!
ನವೆಂಬರ್ 2023 ರಲ್ಲಿ, ಶರ್ಮಿನ್ ಸೆಗಲ್ ಅವರು ಉದ್ಯಮಿ ಅಮನ್ ಮೆಹ್ತಾ ಅವರೊಂದಿಗೆ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಅಮನ್ ಪ್ರತಿಷ್ಠಿತ ವಂಶದಿಂದ ಬಂದವರು. ಅವರ ತಂದೆ ಸಮೀರ್ ಮೆಹ್ತಾ, ಬಿಲಿಯನೇರ್ ಉದ್ಯಮಿ. ಸಮೀರ್, ಅವರ ಸಹೋದರ ಸುಧೀರ್ ಮೆಹ್ತಾ ಅವರೊಂದಿಗೆ ಟೊರೆಂಟ್ ಗ್ರೂಪ್ ಅನ್ನು ಮೇಲ್ವಿಚಾರಣೆ ಮಾಡುತ್ತಾರೆ, ಇದು ಔಷಧೀಯ, ವಿದ್ಯುತ್, ಅನಿಲ ಮತ್ತು ರೋಗನಿರ್ಣಯ ಕ್ಷೇತ್ರಗಳನ್ನು ವ್ಯಾಪಿಸಿರುವ ಬೃಹತ್ ವ್ಯಾಪಾರ ಸಾಮ್ರಾಜ್ಯವಾಗಿದೆ.
2024 ರ ಹೊತ್ತಿಗೆ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಸಮೀರ್ ಮೆಹ್ತಾ ಅವರ ಸಂಪತ್ತು $ 6.44 ಬಿಲಿಯನ್ (Rs 53,800 ಕೋಟಿ) ತಲುಪಿದೆ. ಮೆಹ್ತಾ ಸಹೋದರರ ಪ್ರಮುಖ ಕಂಪನಿ, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್, $4 ಬಿಲಿಯನ್ ಆದಾಯ ಹೊಂದಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 35,000 ಕೋಟಿ ರೂಪಾಯಿ.



Click it and Unblock the Notifications

