ನೀನು ದಪ್ಪಗಿರುವುದಕ್ಕೆ ಮೂಡ್‌ ಬರ್ತಾ ಇಲ್ಲ ಎನ್ನುವ ಪುರುಷ ಮಹಾ ವಂಚಕ ಮಹಿಳೆಯರೇ!

ನೀನು ಬರ್ತಾ ಬರ್ತಾ ತುಂಬಾ ದಪ್ಪಗಾಗುತ್ತಿದ್ದೀಯ, ನನ್ನ ಬಾಡಿ ಶೇಪ್‌ ನೋಡು ಕುಂಬಳಕಾಯಿಯಂತೆ, ನಿನ್ನ ನೋಡುವಾಗ ನನಗೀಗ ಮೂಡ್‌ ಬರ್ತಾ ಇಲ್ಲ ಎಂದು ಯಾವುದಾದರೂ ಪುರುಷ ತನ್ನ ಹೆಂಡತಿಗೆ ಹೇಳುತ್ತಿದ್ದಾನೆ ಎಂದರೆ ಅವನೊಬ್ಬ ಮಹಾ ಸುಳ್ಳುಗಾರ ಈ ಬಗ್ಗೆ ಎಲ್ಲಾ ಹುಡುಗಿಯರಿಗೆ ಗೊತ್ತಿರಬೇಕು ಅಂತಾರೆ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್.

Rujuta Diwekar relationship tips

ಇವರು ಡಯಟ್‌ ಬಗ್ಗೆ ಮಾತ್ರವಲ್ಲ ಆಗಾಗ ರಿಲೇಷನ್‌ ಶಿಪ್‌ ಟಿಪ್ಸ್ ಕೂಡ ಕೊಡುತ್ತಾರೆ, ಅದರಲ್ಲಿ ಅವರು ಹೇಳಿರುವ ಈ ಮಾತನ್ನು ಸ್ನೇಹಿತರೇ ಯೋಚಿಸಬೇಕಾಗಿರುವುದೇ.... ಸೌಂದರ್ಯ ಎಂಬುವುದು ಹೆಣ್ಣಿಗೆ ಮಾತ್ರ ಮಾನದಂಡವಾಗುತ್ತಿರುವುದೇ ವಿಪರ್ಯಾಸ. ಮದುವೆಯಾಗುವಾಗ ಬಳಕುವ ಬಳ್ಳಿಯಂತೆ ಇರ್ತಾರೆ ನಂತರ ದಪ್ಪಗಾಗುತ್ತಾರೆ ಎಂದೆಲ್ಕಾ ಜೋಕ್‌ಗಳು ಹರಿದಾಡುತ್ತದೆ.

ಇನ್ನು ಕೆಲವರು ಸೆಲೆಬ್ರಿಟಿಗಳನ್ನು ತೋರಿಸಿ ಅವರು ನೋಡು ಹೇಗಿದ್ದಾರೆ ನೀನು ಮಾತ್ರ ಹೀಗಿದ್ದೀಯ ಎಂದು ತಮಾಷೆ ಮಾಡುತ್ತಾರೆ. ತೆಳ್ಳಗೆ ಬಳಕುವ ಬಳ್ಳಿಯಂತಾಗುವುದು ಹೆಣ್ಣಿಗೆ ದೊಡ್ಡ ವಿಷಯವಲ್ಲ, ಅವಳು ಮನಸ್ಸು ಮಾಡಿದರೆ ಯಾವ ಸೆಲೆಬ್ರಿಟಿಗೂ ಕಡಿಮೆಯಿಲ್ಲದ ಮೈ ಮಾಟ ಪಡೆಯಬಲ್ಲಳು, ಆದರೆ ಅದಕ್ಕೆ ತಕ್ಕ ಸೌಲಭ್ಯ ವಾತಾವರಣ ನಿಮ್ಮಲ್ಲಿದೆಯೇ? ಹೌದು ಇದನ್ನ ಯೋಚಿಸಿದ ಬಳಿಕವಷ್ಟೇ ಅವಳ ದೇಹದ ಬಗ್ಗೆ ಕಮೆಂಟ್‌ ಮಾಡಿ.

ನಿಮ್ಮನ್ನು ನೋಡಿಕೊಳ್ಳಬೇಕು, ನಿಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು, ನಿಮ್ಮ ಮನೆಯನ್ನು ಶುದ್ಧವಾಗಿ ಇಡಬೇಕು , ರುಚಿ ರುಚಿಯಾಗಿ ಬಡಿಸಬೇಕು , ಅವಳಿಗೆ ಅವಳಿಗೋಸ್ಕರ ಟೈಮ್ ಇರಲ್ಲ, ವರ್ಕೌಟ್‌, ಡಯಟ್‌ ಅಂತ ಫಾಲೋ ಮಾಡುವುದಕ್ಕೆ ಸಾಧ್ಯವಿಲ್ಲ, ಆದರೂ ಅವು ಬಳಕುವ ಬಳ್ಳಿಯಂತೆ ಇರಬೇಕು.

ನೀನು ದಪ್ಪಗೆ ಇದ್ದೀಯ ನಿನ್ನ ನೋಡಿದರೆ ಮೂಡ್‌ ಬರುತ್ತಿಲ್ಲ ಎಂದು ಹೇಳುತ್ತಿದ್ದರೆ ಅವನು ಮಹಾ ವಂಚಕ

ಸಂಗಾತಿಯ ಜೊತೆಗೆ ರೊಮ್ಯಾಂಟಿಕ್‌ ಫೀಲ್‌ ಬರಲು ದಪ್ಪ ಒಂದು ವಿಷಯವೇ ಅಲ್ಲ, ಅವಳ ಮೇಲೆ ಪ್ರೀತಿ ಇದ್ದರೆ ಖಂಡಿತ ಅವನಿಗೆ ಅವಳ ದಪ್ಪ ಒಂದು ವಿಷಯವೇ ಅಲ್ಲ, ಅವನಿಗೆ ಅವಳ ಮೇಲೆ ಪ್ರೀತಿ ಕಡಿಮೆಯಾದಾಗ, ಬೇರೆ ಕಡೆ ಆಕರ್ಷಣೆ ಇದ್ದಾಗ ಮಾತ್ರ ನೀವು ಅವನಿಗೆ ಬೋರ್‌ ಅನಿಸಲಾರಂಭಿಸುವುದು, ಆವಾಗ ಅವನು ಇಲ್ಲದ ಕಾರಣ ಹೇಳಿ ನಿಮ್ಮ ಮನಸ್ಸು ನೋಯಿಸಿ ಇಷ್ಟಪಡುತ್ತಾನೆ.

ನೀನು ದಪ್ಪಗಾಗುತ್ತಿದ್ದೀಯ ಎಂದು ಹೇಳುವುದು ತಪ್ಪೇ?
ಹೌದು ಈ ಪ್ರಶ್ನೆಯನ್ನು ಪುರುಷರು ಕೇಳಬಹುದು ಹೌದು ತಪ್ಪೇ... ಹೆಂಡತಿ ದಪ್ಪಗಾಗುತ್ತಿದ್ದಾಳೆ ಅವಳು ಸ್ವಲ್ಪ ಸಣ್ಣಗಾದರೆ ಚೆನ್ನಾಗಿತ್ತು ಎಂದು ನಿಮಗೆ ಅನಿಸಿದರೆ ಅವಳಿಗೆ ಅವಳ ದೇಹದ ಆರೈಕೆ ಕಡೆ ಗಮನಹರಿಸಲು ಸಹಾಯ ಮಾಡಿ, ಅವಳು ಜಿಮ್‌ನಲ್ಲಿ ಹೋಗಿ ವರ್ಕೌಟ್‌ ಮಾಡಬೇಕೆಂದಿದ್ದರೆ ನೀವು ಅವಳಿಗೆ ಮನೆಯಲ್ಲಿ ಅವಳ ಕೆಲಸ ಮುಗಿಸಲು ಸಹಾಯ ಮಾಡಿ. ಆವಾಗ ಅವಳು ಅವಳ ದೇಹದ ಮೇಲೆ ಗಮನಹರಿಸಿ ತೆಳ್ಳಗಾಗುತ್ತಾಳೆ, ಅದರ ಬದಲಿಗೆ ಸುಮ್ಮನೆ ಕಮೆಂಟ್‌ ಮಾಡುತ್ತಿದ್ದರೆ ಆ ಪುರುಷನ ನಂಬಲೇಬಾರದು.

ಕೆಲವೊಂದು ಮಹಿಳೆಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಈ ಕಾರಣಕ್ಕೆ ದಪ್ಪಗಾಗಿರುತ್ತಾರೆ, ಬೇರೆಯವರು ಹೇಳಿದರೆ ಒಂದು ಲೆಕ್ಕ, ಅವಳ ಆರೋಗ್ಯದ ಬಗ್ಗೆ ಗೊತ್ತಿರುವ ಗಂಡನೇ ಹೇಳಿದರೆ ಅವನ ಮನಸ್ಥಿತಿ ಹೇಗಿರಬೇಡ, ಹಾಗಾಗಿ ಮಹಿಳೆಯರೇ ಇಂಥ ಪುರುಷನನ್ನು ಯಾವುದೇ ಕಾರಣಕ್ಕೆ ನಂಬಬೇಡಿ, ನಂಬಿದರೆ ನೀವು ಇನ್ನಷ್ಟು ನೋವು ಅನುಭವಿಸಬೇಕಾಗುತ್ತೆ, ಜಾಗ್ರತೆ.... ಜಾಗ್ರತೆ.

English summary

Rujuta Diwekar Says: Body weight Size And Shape Don’t Matter In Intimate Relationships

Rujuta Diwekar Says if your man says he get mood only after loosing weight, he is a cheater, read on...
Story first published: Friday, July 12, 2024, 17:39 [IST]
X
Desktop Bottom Promotion