Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪಾಸ್ಟ್ ರಿಲೇಷನ್‌ಶಿಪ್ ಬಗ್ಗೆ ಹೇಳುವುದಾ ಬೇಡ್ವಾ ಎಂಬ ಆತಂಕದಲ್ಲಿದ್ದೀರಾ?
ರಿಲೇಷನ್‌ಶಿಪ್‌ನಲ್ಲಿದ್ದಾಗ ಇಬ್ಬರ ನಡುವೆ ಯಾವುದೇ ಮುಚ್ಚುಮರೆ ಇರಬಾರ, ಹಾಗಿದ್ದರೆ ಮಾತ್ರ ಇಬ್ಬರ ನಡುವೆ ನಂಬಿಕೆ ಬೆಳೆಯುತ್ತದೆ ಎಂಬುವುದು ಸತ್ಯ, ಆದರೆ ಪಾಸ್ಟ್ ರಿಲೇಷನ್‌ಶಿಪ್ ಇದ್ದಿದ್ದರೆ ಅದರ ಬಗ್ಗೆ ಹೇಳಬೇಕೆ, ಬೇಡ್ವೆ ಎಂಬ ಗೊಂದಲ ಬಹುತೇಕರಲ್ಲಿ ಇರುತ್ತದೆ.
ನಾನು ಹೇಳಿದರೆ ಅವರು ಹೇಗೆ ತೆಗೆದುಕೊಳ್ಳಬಹುದು, ಹೇಳದೇ ಇದ್ದರೆ ಮುಂದೆ ಈ ವಿಷಯ ಅವರಿಗೆ ಗೊತ್ತಾದರೆ ಏನಾದರು ಸಮಸ್ಯೆಯಾಗುವುದೇ ಎಂಬ ಆತಂಕದಿಂದ ಹೇಳಲೇ ಬೇಡ್ವೆ ಎಂದು ಒದ್ದಾಡುತ್ತಿರುತ್ತಾರೆ, ಹಾಗಾದರೆ ಇಂಥ ಗೊಂದಲ ಮೂಡಿದಾಗ ಏನು ಮಾಡಬೇಕು? ಯಾವ ನಿರ್ಧಾರ ಒಳ್ಳೆಯದು ಈ ಬಗ್ಗೆ ಕೆಲವೊಂದಿಷ್ಟು ಸಲಹೆ ನೀಡಲಾಗಿದೆ ನೋಡಿ:

ನಿಮ್ಮ ಪಾಸ್ಟ್ ಈಗೀನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಆತಂಕವಿದ್ದರೆ ಹೇಳಲೇಬೇಡ: ನಿಮ್ಮ ಸಂಗಾತಿ ಸ್ವಭಾವ ಹೇಗಿದೆ ಎಂಬುವುದು ನಿಮಗೆ ಗೊತ್ತಿರುತ್ತದೆ. ಅವರಗೆ ಸಂಶಯ ಸ್ವಭಾವ ಇದ್ದರೆ ಪಾಸ್ಟ್ ಬಗ್ಗೆ ಹೇಳಿದರೆ ಅವರ ಸಂಶಯಲಕ್ಕೆ ಗೊಬ್ಬರ ಹಾಕಿದಂತೆ , ಹಾಗಾಗಿ ಹಿಂದಿನ ವಿಷಯ ಹೇಳಲು ಹೋಗಬೇಡಿ.
ಒಂದು ವೇಳೆ ಅವರಿಗೆ ಗೊತ್ತಾದರೆ?
ಅವರಿಗೆ ಮೊದಲೇ ಸಂಶಯ, ಬೇರೆ ಯಾವುದೋ ಮೂಲದಿಂದ ಅವರಿಗೆ ಗೊತ್ತಾದರೆ ಅವರ ನಿಮ್ಮ ಮೇಲೆ ಮತ್ತಷ್ಟು ಸಂಶಯ ಪಡಬಹುದು, ಆದರೆ ಆ ರೀತಿಯಾದಾಗ ನೀವು ಅವರಿಗೆ ಕಳೆದು ಹೋದ ಬದುಕಿನ ಬಗ್ಗೆ ನನಗೆ ಆಸಕ್ತಿ ಇಲ್ಲ,ಈಗ ನಾನು ಪ್ರೀತಿಸುತ್ತಿರುವ ವ್ಯಕ್ತಿ ನೀವು ಮಾತ್ರ, ನನ್ನ ಬದುಕಿನಲ್ಲಿ ನಿಮಗೆ ಮಾತ್ರ ಸ್ಥಾನ ಇಷ್ಟು ಮಾತ್ರ ಹೇಳುತ್ತೇನೆ ಎಂದು ದೃಢವಾಗಿ ಹೇಳಿ, ಈ ರೀತಿ ಹೇಳಿದಾಗ ಅದರ ಬಗ್ಗೆ ಮತ್ತೆ ಅವರು ಮಾತನಾಡುವುದಕ್ಕೆ ಬರಲ್ಲ.
ಕಾರಣಗಳನ್ನು ಹೇಳುವುದು, ಕ್ಷಮೆ ಕೇಳುವುದು ಮಾಡಬೇಡಿ
ಅವರು ವಿಷಯ ಗೊತ್ತಾಗಿ ನಿಮ್ಮ ಬಳಿ ಅದರ ಬಗ್ಗೆ ಕೇಳಿದಾಗ ನೀವು ಏನೋ ತಪ್ಪು ಮಾಡಿದಂತೆ ಕ್ಷಮೆ ಕೇಳುವುದು ಅಥವಾ ಕಾರಣಗಳನ್ನು ಹೇಳುವುದು ಮಾಡಬೇಡಿ, ಇದು ನಿಮ್ಮ ಸಂಬಂಧ ಮತ್ತಷ್ಟು ಹದಗೆಡಿಸುತ್ತದೆ. ಅಲ್ಲದೆ ಅವರು ಪ್ರತಿಯೊಂದು ವಿಷಯಕ್ಕೆ ಈ ವಿಚಾರ ಹಿಡಿದು ಕೊಂಕು ನುಡಿಯಲಾರಂಭಿಸುತ್ತಾರೆ, ಹಾಗಾಗಿ ಹಳೆಯ ವಿಚಾರ ಕೆದಕುವುದು ನನಗೆ ಇಷ್ಟವಿಲ್ಲ, ಈಗ ನಾನು ನಿಮ್ಮ ಜೊತೆ 100% ನಿಯತ್ತಿನಿಂದಿದ್ದೀನಿ ಎಂಬುವುನ್ನು ಸ್ಪಷ್ಟವಾಗ ಹೇಳಿ,
ಒಂದು ಸಂಬಂಧ ಗಟ್ಟಿಯಾದ ಮೇಲೆ ಪಾಸ್ಟ್ ಬಗ್ಗೆ ಹೇಳುವುದಕ್ಕಿಂತ ಸಂಬಂಧ ಶುರು ಮಾಡುವಾಗಲೇ ಹೇಳಿದರೆ ಹೆಚ್ಚಿನ ಸಮಸ್ಯೆ ಇರಲ್ಲ
ನನಗೆ ಈ ಮೊದಲು ಒಂದು ಸಂಬಂಧವಿತ್ತು, ಅದು ವರ್ಕ್ ಆಗಲಿಲ್ಲ ಎಂಬುವುದನ್ನು ಪ್ರಾರಂಭದಲ್ಲಿಯೇ ಹೇಳುವುದು ಒಳ್ಳೆಯದು. ಆವಾಗ ಅವರಿಗೆ ನಿಮ್ಮ ಹಳೆಯ ವಿಚಾರ ಗೊತ್ತಿರುತ್ತದೆ, ಭವಿಷ್ಯದಲ್ಲಿ ಸಮಸ್ಯೆಯಾಗುವ ಸಾಧ್ಯತೆ ತುಂಬಾ ಕಡಿಮೆ.
ಎಕ್ಸ್ ಜೊತೆ ಈಗಲೂ ಕಾಂಟ್ಯಾಕ್ಟ್‌ನಲ್ಲಿರುವ ತಪ್ಪು ಮಾಡಬೇಡಿ
ಆ ರಿಲೇಷನ್‌ಶಿಪ್ ಬೇಡ ಎಂದು ನೀವು ಮೂವ್ ಆನ್ ಆದ ಮೇಲೆ ಮತ್ತೆ ಅವರ ಜೊತೆ ಯಾವುದೇ ಕಾಂಟ್ಯಾಕ್ಟ್‌ನಲ್ಲಿರಬೇಡಿ, ಅದರಲ್ಲಿಯೂ ಅದರ ನಂತರ ನೀವು ಬೇರೆ ಜೀವನ ಆಯ್ಕೆ ಮಾಡಿಕೊಂಡ ಮೇಲೆ ಆ ವ್ಯಕ್ತಿ ಜೊತೆ ಫೋನ್ ಕಾಂಟ್ಯಾಕ್ಟ್, ಸೋಷಿಯಲ್ ಮೀಡಿಯಾದಲ್ಲಿ ಟಚ್‌ನಲ್ಲಿರುವುದು ಈ ತಪ್ಪು ಮಾಡಲೇಬೇಡಿ. ಈ ರೀತಿ ಇದ್ದಾಗ ನಿಮ್ಮ ಈ ತಪ್ಪು ಈಗೀನ ಸಂಬಂಧದ ಮೇಲೆ ಪರಿಣಾಮ ಬೀರುವುದು.
ಪಾಸ್ಟ್ ಲೈಫ್ ಬಗ್ಗೆ ಹೇಳಿದ್ದೀರಿ ಎಂದು ಇವರ ಬಳಿ ಎಕ್ಸ್ ಬಗ್ಗೆ ಹೇಳುವುದು ಅಥವಾ ಎಕ್ಸ್ ಜೊತೆ ಹೋಲಿಕೆ ಮಾಡಿ ಮಾತನಾಡುವುದು ಮಾಡಬೇಡಿ
ಹೌದು ಈಗ ನಿಮ್ಮ ಬದುಕಿನಲ್ಲಿರುವ ವ್ಯಕ್ತಿಯನ್ನು ನೀವು ಗುಡ್‌ಬೈ ಹೇಳಿರುವ ವ್ಯಕ್ತಿ ಜೊತೆ ಹೋಲಿಕೆ ಮಾಡುವುದು, ಯಾವುದಾದರು ವಿಚಾರಕ್ಕೆ ಆ ಬಗ್ಗೆ ಹೇಳುವುದು ಮಾಡಬೇಡಿ. ನಿಮ್ಮ ಈ ವರ್ತನೆಗಳು ಈಗೀನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.
ಕೊನೆಯದಾಗಿ:ನಮ್ಮ ಸಲಹೆ ಏನೆಂದರೆ ನಿಮ್ಮ ಪಾಸ್ಟ್ ಬಗ್ಗೆ ಹೇಳುವುದಾದರೆ ನೀವು ಈ ಸಂಬಂಧ ಶುರುವಾಗುವ ಮುನ್ನವೇ ಹೇಳುವುದು ಸೂಕ್ತ, ಇಲ್ಲದಿದ್ದರೆ ಹೇಳುವುದು ಬೇಡ ಎಂಬುವುದೇ ನಮ್ಮ ಸಲಹೆ.



Click it and Unblock the Notifications