ಅನ್ಯ ಸಂಸ್ಕೃತಿಯ ಹುಡುಗನನ್ನು ಮದುವೆಯಾದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತೆ? ಇದಕ್ಕೆ ಪರಿಹಾರವೇನು?

ಭಾರತದಲ್ಲಿ ಅನೇಕ ಸಂಸ್ಕೃತಿಗಳಿದೆ ಹಾಗೂ ಆಚರಣೆಗಳಿದೆ. ನಮ್ಮ ಕುಟುಂಬದಲ್ಲಿ ಯಾವ ರೀತಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತೇವೆ. ನಾವು ಪಾಲಿಸುವ ಸ್ಸ್ಕೃತಿಗಳೇನು ಅನ್ನೋದು ನಮಗೆ ಖಂಡಿತ ಗೊತ್ತಿರುತ್ತದೆ. ಅದೇ ನಾವು ಬೇರೊಂದು ಮನೆಗೆ ಮದುವೆಯಾಗಿ ಹೋದಾಗ ಅಲ್ಲಿನ ಆಚಾರ-ವಿಚಾರಗಳೇ ಬೇರೆಯಾಗಿರುತ್ತದೆ. ಅದಕ್ಕೆ ಒಗ್ಗಿಕೊಳ್ಳೋದು ತುಂಬಾನೇ ಕಷ್ಟ ಆಗುತ್ತದೆ.

Relationship Tips: Effective Ways to Tackle the Cultural Differences in Marriage in Kannada.

ಅದ್ರಲ್ಲೂ ಬೇರೆ ಜಾತಿ, ಧರ್ಮದಲ್ಲಿ ಮದುವೆಯಾದ್ರಂತೂ ನಮಗೆ ಎಲ್ಲವೂ ಹೊಸತು ಅನ್ನಿಸೋದಕ್ಕೆ ಶುರುವಾಗುತ್ತದೆ. ಮೊದಲ ಮೊದಲು ನಮಗೆ ಆ ಪರಿಸ್ಥಿತಿಯನ್ನು ಸ್ವೀಕರಿಸೋದೇ ಕಷ್ಟ ಅನ್ನಿಸಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬದಲ್ಲಿರುವ ಸಾಂಸ್ಕೃತಿಕ ಭಿನ್ನಾಬಿಪ್ರಾಯಗಳು ಎದುರಾದಾಗ ಅದಕ್ಕೆ ಒಗ್ಗಿಕೊಳ್ಳೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

1. ಸಂಗಾತಿಯ ಜೊತೆಗೆ ಸಂವಹನ ನಡೆಸಿ

ಮದುವೆಯಾದ ಹೊಸತರಲ್ಲಿ ಗಂಡನ ಮನೆಯಲ್ಲಿ ಹೆಣ್ಣಿಗೆ ಕಲಿಯಬೇಕಾದ ವಿಚಾರಗಳು ತುಂಬಾನೇ ಇರುತ್ತದೆ. ಅದ್ರಲ್ಲೂ ಕೆಲವೊಂದು ಪೂಜೆಗಳು, ಅವರು ಆಚರಿಸುವ ಕಟ್ಟು ಪಾಡುಗಳಿಗೆ ಒಗ್ಗಿಕೊಳ್ಳೋದು ಕೊಂಚ ಕಷ್ಟ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಿ. ನಿಮಗಾಗುತ್ತಿರುವ ಕಷ್ಟದ ಬಗ್ಗೆ ಅವರಿಗೆ ತಿಳಿಸಿ. ಸಾಧ್ಯಾವಾದರೆ ನಿಮ್ಮ ಅತ್ತೆಯಿಂದ ಎಲ್ಲಾ ವಿಚಾರಗಳನ್ನು ನಿಧಾನವಾಗಿ ಕಲಿಯಿರಿ.

ಇಷ್ಟೇ ಅಲ್ಲ, ನಿಮ್ಮ ಪತಿಯು ನಿಮ್ಮ ಮನೆಗೆ ಯಾವತ್ತೋ ಒಂದು ದಿನ ಹಬ್ಬಕ್ಕೆ ಬಂದಾಗ ಅವರಿಗೂ ನಿಮ್ಮ ಸಂಸ್ಕೃತಿಗೆ ಒಗ್ಗಿಕೊಳ್ಳೋದು ಕಷ್ಟ ಅನ್ನಿಸಬಹುದು. ಇಂತಹ ಸಂದರ್ಭದಲ್ಲಿ ನೀವು ಅವರ ಜೊತೆಗೆ ಮಾತನಾಡಿ. ಸಾಧ್ಯವಾದಷ್ಟು ವಿಚಾರಗಳನ್ನು ಅವರಿಗೆ ತಿಳಿಸುವ ಪ್ರಯತ್ನ ಮಾಡಿ. ಹೀಗೆ ಒಬ್ಬರಿಗೊಬ್ಬರು ಸಹಾಯ ಮಾಡಿರೆ ಉತ್ತಮ.

2. ನಿಮಗೆ ಗೊತ್ತಿಲ್ಲದ ವಿಚಾರವನ್ನು ಕಲಿಯಿರಿ

ದಂಪತಿಗಳಿಬ್ಬರ ಸಂಸ್ಕೃತಿ, ಆಚಾರ, ಪೂಜಾ ವಿಧಾನ, ಭಾಷೆಗಳು ಬೇರೆ ಆಗಿರಬಹುದು. ಆದರೆ ಮನಸ್ಸಿನಿಂದ ನೀವಿಬ್ಬರೂ ಒಂದಾಗಿದ್ದೀರಿ ಎಂದ ಮೇಲೆ ಅವರ ಸಂಸ್ಕೃತಿಯನ್ನು ಕಲಿತುಕೊಳ್ಳೋದು ದೊಡ್ಡ ವಿಚಾರ ಆಗೋದಿಲ್ಲ. ಆದರೆ ಇದಕ್ಕೆಲ್ಲಾ ನಮಗೆ ಬೇಕಾಗಿರೋದು ಆಸಕ್ತಿ. ಹೌದು, ಆಸಕ್ತಿಯೊಂದಿದ್ದರೆ ಕಲ್ಲು ಬಂಡೆಯನ್ನು ಬೇಕಾದರೂ ಕರಗಿಸಬಹುದುದಂತೆ. ಹಾಗೆಯೇ ಹೊಸ ವಿಚಾರವನ್ನು ಕಲಿತುಕೊಳ್ಳೋದ್ರಲ್ಲಿ ತಪ್ಪಿಲ್ಲ.

3. ಪರಸ್ಪರ ಗೌರವವಿರಲಿ

ದಂಪತಿಗಳಿಬ್ಬರು ಹೇಗೆ ಒಬ್ಬರಿಗೊಬ್ಬರು ಗೌರವ ನೀಡುತ್ತಾರೋ ಅದೇ ರೀತಿ ಅವರ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆಯೂ ಕೂಡ ಅಷ್ಟೇ ಗೌರವವಿರಬೇಕು. ಅದನ್ನು ಬಿಟ್ಟು ಒಬ್ಬರ ಸಂಸ್ಕೃತಿಯನ್ನು ಕೀಳಾಗಿ ನೋಡೋದು. ಪ್ರತಿನಿತ್ಯ ಅದೇ ವಿಚಾರಕ್ಕಾಗಿ ಮನೆಯಲ್ಲಿ ಜಗಳವಾಡೋದು ಸರಿಯಲ್ಲ. ನನಗೆ ನಿಮ್ಮ ಸಂಸ್ಕೃತಿಯನ್ನು ಆಚರಣೆ ಮಾಡೋದಕ್ಕೆ ಇಷ್ಟ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟರೆ ಖಂಡಿತ ನಿಮ್ಮ ಸಂಗಾತಿಯ ಮನಸ್ಸು ಮುರಿದು ಹೊಗುತ್ತದೆ. ಹಾಗೂ ಇಬ್ಬರ ಮಧ್ಯೆ ಮನಸ್ಥಾಪ ಹೆಚ್ಚಾಗುತ್ತದೆ.

4. ಸೂಕ್ಷ್ಮ ವಿಚಾರಗಳನ್ನು ಕಲಿಯಿರಿ

ಪ್ರತಿಯೊಂದು ಜಾತಿ ಅಥವಾ ಧರ್ಮದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರಗಳು ಇರುತ್ತದೆ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗಿರುತ್ತದೆ. ನೀವು ಗಂಡನ ಮನೆಗೆ ಹೋದಾಗ ಇಂತಹ ಸೂಕ್ಷ್ಮ ವಿಚಾರಗಳನ್ನು ಕಲಿಯಬೇಕಾದ ಅನಿವಾರ್ಯತೆ ಇರುತ್ತದೆ. ಒಂದು ವೇಳೆ ನಿಮಗೆ ಕಲಿಯೋದಕ್ಕೆ ಇಷ್ಟ ಇಲ್ಲದಿದ್ದರೂ ಕೂಡ ನೀವು ಮನೆಯವರನ್ನು ಧಿಕ್ಕರಿಸಿ, ನಿಮ್ಮ ಸಂಗಾತಿಯ ಮನಸ್ಸಿಗೆ ನೋವು ಮಾಡೋದು ಸರಿಯಲ್ಲ. ಎಲ್ಲಾ ಆಚರಣೆಗಳನ್ನು ಕಲಿಯೋದಕ್ಕೆ ಸಾಧ್ಯ ಆಗದಿದ್ದರೂ ಕೂಡ ಇಂತಹ ಕೆಲವು ವಿಚಾರಗಳನ್ನು ಕಲಿತುಕೊಂಡರೆ ಸಾಕು.

5. ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಿ

ಮನೆಗೆ ಬಂದ ಸೊಸೆಯು ಆರಂಭದಲ್ಲೇ ಎಲ್ಲವನ್ನೂ ಕಲಿತುಕೊಂಡು ಬಿಡಬೇಕೆಂದು ನಾವು ಅವರ ಮೇಲೆ ಒತ್ತಡ ಹೇರೋದಕ್ಕೆ ಸರಿಯಲ್ಲ. ಗಂಡ ಸೇರಿದಂತೆ ಅತ್ತೆ, ಮಾವ ಎಲ್ಲರೂ ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಕೈಯಿಂದ ಸಾಧ್ಯವಾದಷ್ಟು ಆಕೆಗೆ ನಿಮ್ಮ ಆಚಾರಗಳ ಬಗ್ಗೆ ಹೇಳಿಕೊಡಿ. ನಿಧಾನವಾಗಿ ಒಂದಲ್ಲ ಒಂದು ದಿನ ಆಕೆ ಖಂಡಿತ ಕಲಿತುಕೊಳ್ಳುತ್ತಾಳೆ.

ಯಾವತ್ತಿಗೂ ಸಂಸ್ಕೃತಿಯನ್ನು ಒಬ್ಬರ ಮೇಲೆ ಹೇರುವ ಕೆಲಸ ಮಾಡಬಾರದು. ಅದರ ಬದಲಿಗೆ ಅವರಿಗೆ ಅರ್ಥ ಆಗೋ ರೀತಿಯಲ್ಲಿ ಪ್ರೀತಿಯಿಂದ ಕಲಿಸಿದರಷ್ಟೇ ಸಾಕು. ನಮಗೆ ಒಬ್ಬರು ಇಷ್ಟ ಆದರೆ ಅವರ ಸಂಸ್ಕೃತಿಗೆ ಒಗ್ಗಿಕೊಳ್ಳೋದು ಕಷ್ಟ ಆಗೋದಿಲ್ಲ ಅಲ್ವಾ? ಆದರೆ ಕಲಿಯುವ ಆಸಕ್ತಿ ಇರಬೇಕು ಅಷ್ಟೇ.

English summary

Relationship Tips: Effective Ways to Tackle the Cultural Differences in Marriage in Kannada.

These are the Ways to Overcome the Cultural Differences in Marriage.
X
Desktop Bottom Promotion