Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬೇಜವಾಬ್ದಾರಿ ಗಂಡನನ್ನು ನಿಭಾಯಿಸೋದು ಹೇಗೆ?
ಹೆಚ್ಚಿನ ಗಂಡು ಮಕ್ಕಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಆದ್ರೆ ಅದ್ರಲ್ಲಿ ಕೆಲವರು ಪೋಲಿಯಂತೆ ಅಲೆದಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯವರು ಮೊದಲು ಮಾಡೋ ಕೆಲಸ ಅಂದ್ರೆ ಆ ಹುಡುಗನಿಗೆ ಮದುವೆ ಮಾಡಿಸಿ ಬಿಡುತ್ತಾರೆ. ಯಾಕಂದ್ರೆ ಮದುವೆಯಾದ ಮೇಲಾದ್ರು ಆತ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ಎಂದು ಅವರು ನಂಬಿರುತ್ತಾರೆ.
ಹೌದು, ಮದುವೆಯಾದ ಮೇಲೆ ಹೆಚ್ಚಿನ ಹುಡುಗ್ರು ಸರಿಯಾಗ್ತಾರೆ. ಆದರೆ ಅದ್ರಲ್ಲಿ ಇನ್ನೂ ಕೆಲವರು ಮದುವೆಯಾದ ಮೇಲೆ ಬೇಜವಾಬ್ದಾರಿಯಿಂದ ನಡೆದುಕೊಳ್ಳೋ ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಒಂದು ವೇಳೆ ನಿಮ್ಮ ಗಂಡ ಮದುವೆಯಾದ ಮೇಲೂ ಬೇಜವಾಬ್ದಾರಿಯಿಂದ ನಡೆದುಕೊಳ್ತಿದ್ರೆ ಏನು ಮಾಡ್ಬೇಕು? ಈ ಟಿಪ್ಸ್ ಫಾಲೋ ಮಾಡಿ.

1. ಮುಕ್ತವಾಗಿ ಸಂವಹನ ನಡೆಸಿ
ಒಂದು ಅಧ್ಯಯನದ ಪ್ರಕಾರ ದಂಪತಿಗಳ ಮಧ್ಯೆ ಮುಕ್ತ ಸಂವಹನ ಮಾಡದ ಹೊರತಾಗಿ ಎಷ್ಟೋ ಸಂಬಂಧಗಳು ಹಾಳಾಗಿದ್ಯಂತೆ. ನೀವು ಆ ತಪ್ಪುನ್ನು ಮಾಡೋದಕ್ಕೆ ಹೋಗಬೇಡಿ. ನಿಮಗೆ ನಿಮ್ಮ ಗಂಡನ ಬೇಜವಾಬ್ದಾರಿತನದ ಬಗ್ಗೆ ಖಂಡಿತ ಗೊತ್ತಿರುತ್ತದೆ. ಒಂದು ವೇಳೆ ಅವರು ಅದನ್ನು ತಿದ್ದಿಕೊಳ್ಳುತ್ತಿಲ್ಲ ಅಂತಾದ್ರೆ ಅವರ ಜೊತೆಗೆ ಮುಕ್ತವಾಗಿ ಸಂವಹನ ನಡೆಸೋದು ನಿಮ್ಮ ಕರ್ತವ್ಯ. ಇಬ್ಬರೂ ಕೂಡ ಕೂತು ಮಾತನಾಡಿ. ನಿಮಗೆ ಅವರಿಂದ ಯಾವ ರೀತಿ ಸಮಸ್ಯೆಯಾಗ್ತಿದೆ. ಅವರ ತಪ್ಪುಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ.
2. ಒಂದು ಗಡಿಯನ್ನು ಸೃಷ್ಟಿಸಿಕೊಳ್ಳಿ
ಒಂದು ವೇಳೆ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತೀರಿ ಎಂದಾದರೆ ಇಬ್ಬರೂ ಕೂಡ ಖರ್ಚುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಹೆಚ್ಚಿನ ಮನೆಯಲ್ಲಿ ಎಲ್ಲಾ ಜವಾಬ್ದಾರಿಯನ್ನು ಗಂಡಂದಿರೂ ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ಮನೆಯಲ್ಲಿ ಗಂಡ ದುಡಿದ ದುಡ್ಡನ್ನೆಲ್ಲಾ ಖುರ್ಚು ಮಾಡಿ ಕೊನೆಗೆ ದುಡಿಯುವ ಹೆಂಡತಿಯ ಬಳಿ ಕೈಗೊಡ್ಡುತ್ತಾನೆ. ಇದಕ್ಕೆ ನೀವು ಅವಕಾಶ ಕೊಡಬಾರದು.
ನಿಮ್ಮ ಗಂಡ ಬೇಜಬ್ದಾರಿ ತನವನ್ನು ಮೈಗೂಡಿಸಿಕೊಂಡಿದ್ದರೆ ಮನೆಯ ಖರ್ಚಿನಲ್ಲಿ ಇಷ್ಟು ಅಂತ ಪ್ರತಿ ತಿಂಗಳು ಆತನ ಕೈಯಿಂದ ತೆಗೆದುಕೊಳ್ಳಿ. ಮತ್ತೆ ಯಾವುದೇ ಕಾರಣಕ್ಕೂ ನೀವು ಆತನಿಗೆ ಖರ್ಚಿಗೆ ದುಡ್ಡು ಕೊಡೋದಕ್ಕೆ ಹೋಗಬೇಡಿ. ಇದರಿಂದ ಆತ ಮತ್ತಷ್ಟು ಬೇಜವಾಬ್ದಾರಿತನವನ್ನುಮೈಗೂಡಿಸಲು ನೀವೇ ಅವಕಾಶ ಕೊಟ್ಟಂತಾಗುತ್ತದೆ. ದುಡ್ಡಿನ ವಿಚಾರದಲ್ಲಿ ಕಟ್ಟುನಿಟ್ಟಾಗಿರಿ ಹಾಗೂ ಒಂದು ಗಡಿಯನ್ನು ಸೃಷ್ಟಿಸಿಕೊಳ್ಳಿ.
3. ಕೌನ್ಸಿಲಿಂಗ್ ಮಾಡಿಸಿಕೊಳ್ಳಿ
ದಾಂಪತ್ಯದಲ್ಲಿರುವ ಸಮಸ್ಯೆಗಳು ಬಗೆ ಹರಿಯುತ್ತಿಲ್ಲ ಎಂದಾದಾಗ ಕೌನ್ಸಿಲಿಂಗ್ ಮಾಡಿಸಿಕೊಳ್ಳುವುದು ತುಂಬಾನೇ ಮುಖ್ಯ ಆಗುತ್ತದೆ. ನಿಮ್ಮ ದಾಂಪತ್ಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿ ಅವರಿಂದ ಸಲಹೆ ಪಡೆಯಿರಿ. ಒಂದು ವೇಳೆ ಪತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಿ. ಇಲ್ಲದಿದ್ದರೆ ಮುಂದೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.
4. ಅವನನ್ನು ಹೊಣೆಗಾರನನ್ನಾಗಿ ಮಾಡಿ
ಗಂಡ-ಹೆಂಡತಿ ಇಬ್ಬರೇ ಇದ್ದರೂ ಪರವಾಗಿಲ್ಲ. ಆದರೆ ಮಕ್ಕಳು ಇದ್ದಾಗ ಆ ಕುಟುಂಬದ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಗಂಡನಾದವನು ಕೆಲವೊಂದು ಕಮಿಟ್ಮೆಂಟ್ ಗಳನ್ನು ನಿಭಾಯಿಸಲೇಬೇಕು. ಯಾವಾಗ ಆತ ಈ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸೋದಕ್ಕೆ ಶುರು ಮಾಡುತ್ತಾನೆಯೋ ಎಲ್ಲಾ ಹೊಣೆಯನ್ನು ಅವನ ಮೇಲೆ ಹೊರಿಸಿ ನೀವು ಸುಮ್ಮನ್ನಿದ್ದು ಬಿಡಿ.
5. ನಿಮ್ಮ ಕಾಳಜಿ ನೀವೇ ಮಾಡಿಕೊಳ್ಳೋದನ್ನು ಅಭ್ಯಾಸ ಮಾಡಿಕೊಳ್ಳಿ
ಬೇಜವಾಬ್ದಾರಿ ಗಂಡನಿಂದ ನಾವು ಏನನ್ನೂ ಬಯಸೋದಕ್ಕೆ ಆಗೋದಿಲ್ಲ. ಇನ್ನೂ ಆತ ನಿಮ್ಮ ಕಾಳಜಿ ಮಾಡುತ್ತಾನೆ ಎಂಬುದು ದೂರದ ಮಾತು ಬಿಡಿ. ಹೀಗಾಗಿ ನಿಮ್ಮ ಹಾಗೂ ಮಕ್ಕಳ ಕಾಳಜಿಯನ್ನು ನೀವೇ ಮಾಡಿಕೊಳ್ಳಬೇಕು. ಕೆಲವೊಂದು ಸಲ ಸ್ನೇಹಿತರು, ಸಂಬಂಧಿಕರು ನಿಮ್ಮ ಕಾಳಜಿ ಮಾಡಬಹುದು. ಆದರೆ ನಿತ್ಯ ಯಾರೂ ನಮ್ಮ ಜೊತೆಗೆ ಇರೋದಿಲ್ಲ.
ಹೀಗಾಗಿ ಇಂತಹ ಗಂಡನ ಜೊತೆಗೆ ಬದುಕುತ್ತಿದ್ದೀರಿ ಎಂದ ಮೇಲೆ ದುಃಖ ಪಟ್ಟುಕೊಳ್ಳಬೇಕಾದುದು ಸಹಜ. ಹೀಗಾಗಿ ನಿಮ್ಮನ್ನು ನೀವು ಬ್ಯುಸಿಯಾಗಿ ಇಟ್ಟುಕೊಳ್ಳಿ. ಫ್ರೀ ಇದ್ದಾಗ ಮಕ್ಕಳ ಜೊತೆಗೆ ಹೊರಗಡೆ ಹೋಗಿ. ಬೇರೆ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಆಗ ನಿಮಗೆ ಈ ನೋವು ನೆನಪಾಗೋದಿಲ್ಲ.
6. ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಾಯ ಪಡೆಯಿರಿ
ಗಂಡನಿಗೆ ಬೇಜವಾಬ್ದಾರಿತನ ಇದ್ದಾಗ ನೀವು ಅದನ್ನೇ ನೆನೆಯುತ್ತಾ ಕೊರಗುತ್ತಾ ಕೂರಬಾರದು. ನಿಮ್ಮ ಜೀವನವನ್ನು ನೀವು ಮುನ್ನಡೆಸಿಕೊಂಡು ಹೋಗಬೇಕು. ಇನ್ನೇನು ಗಂಡ ಸರಿ ಆಗೋದಿಲ್ಲ ಅನ್ನೋವಾಗ ಮನೆಯಿಂದ ಹೊರಗೆ ಬಂದು ಮಕ್ಕಳೊಂದಿಗೆ ಸ್ವತಂತ್ರ ಜೀವನ ನಡೆಸಿ. ಮೊದ ಮೊದಲು ಕಷ್ಟ ಆಗಬಹುದು. ಹೀಗಾಗಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಾಯ ಪಡೆಯಿರಿ. ನಿಮ್ಮ ಜೀವನ ಒಂದು ಹಂತಕ್ಕೆ ಬಂದ ಮೇಲೆ ಸ್ವತಂತ್ರವಾಗಿ ಬದುಕೋದು ಅಭ್ಯಾಸ ಆಗುತ್ತದೆ.
ಜೀವನ ತುಂಬಾನೇ ಚಿಕ್ಕದು. ನಾವು ಯಾರ ಮೇಲೆಯೂ ಅವಲಂಬಿಸಿ, ಅವರನ್ನು ನಂಬಿ ಇರೋದಕ್ಕೆ ಆಗೋದಿಲ್ಲ. ಅವರು ಯಾವಾಗ ಬೇಕಾದರೂ ನಿಮ್ಮ ಕೈ ಬಿಡಬಹುದು. ಹೀಗಾಗಿ ಸ್ವತಂತ್ರವಾಗಿ ಬದುಕುವ ಕಲೆ ನಮಗೆ ಗೊತ್ತಿರಬೇಕು.



Click it and Unblock the Notifications
