Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪತ್ನಿ ಹೀಗೆ ಬದಲಾದರೆ ಪತಿಗೆ ಮನೆ ಸ್ವರ್ಗ ಅನಿಸುವುದು!
ಗಂಡ ಹೊರಗಡೆ ಹೋಗಿ ದುಡಿಯೋದ್ರಿಂದ ಕೆಲಸದ ಒತ್ತಡ ಇರುತ್ತೆ. ಜೊತೆಗೆ ಕುಟುಂಬದ ಜವಾಬ್ದಾರಿ ಪೂರ್ತಿ ಆತ ಒಬ್ಬನೇ ಹೊತ್ತಿರೋದ್ರಿಂದ ಎಲ್ಲವನ್ನೂ ನಿಭಾಯಿಸಬೇಕಾದ ಹೊಣೆ ಅವನ ಮೇಲಿರುತ್ತೆ. ಈ ಸಮಯದಲ್ಲಿ ಗಂಡ ಖುಷಿಯಾಗಿರೋದು ಹೇಗೆ ಹೇಳಿ.
ಆಗ ಪತ್ನಿಯಾದವಳು ತನ್ನ ಗಂಡನನ್ನು ಸಂತೋಷವಾಗಿಡೋದಕ್ಕೆ ಪ್ರಯತ್ನಿಸಬೇಕು. ಅವನನ್ನು ಖುಷಿ ಪಡಿಸೋದಕ್ಕೆ ನಿಮ್ಮಿಂದ ಆಗುವ ಎಲ್ಲಾ ಪ್ರಯತ್ನಗಳನ್ನು ಮಾಡಿ. ಅಷ್ಟಕ್ಕು ಗಂಡನನ್ನು ಖುಷಿಯಾಗಿಡೋದಕ್ಕೆ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

1. ರೊಮ್ಯಾಂಟಿಕ್ ಆಗಿರಿ
ಹೆಚ್ಚಿನವರು ಮದುವೆಯಾದ ಮೇಲೆ ದಂಪತಿಗಳ ಮಧ್ಯೆ ರೊಮ್ಯಾನ್ಸ್ ಕಡಿಮೆಯಾಗುತ್ತೆ ಅಂತಾರೆ. ಆದ್ರೆ ಇದು ನಿಜವಲ್ಲ. ನಾವು ನಮ್ಮ ಸಂಬಂಧವನ್ನು ಯಾವ ರೀತಿ ಉಳಿಸಿಕೊಳ್ಳುತ್ತೇವೆ ಅನ್ನೋದ್ರ ಮೇಲೆ ಎಲ್ಲವೂ ನಿರ್ಧಾರವಾಗುತ್ತೆ. ಮದುವೆಯಾದ ಮೇಲೂ ನಿಮ್ಮ ಗಂಡನನ್ನು ನೀವು ಪ್ರೀತಿ ಮಾಡಬಹುದು. ಗಂಡನ ಜೊತೆಗೆ ಪ್ರೀತಿ ಮಾತನಾಡಿ, ಅವರಿಗಾಗಿ ಮನೆಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಸಿದ್ಧಪಡಿಸಿ, ಅವರ ಹುಟ್ಟುಹಬ್ಬಕ್ಕೆ ಸಪ್ರೈಸ್ ಕೊಡಿ, ಮದುವೆಯ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಿ.
2. ಲೈಂಗಿಕ ಜೀವನಕ್ಕೆ ಮಹತ್ವವನ್ನು ನೀಡಿ
ಮಕ್ಕಳಾದ ಮೇಲೆ ಲೈಂಗಿಕ ಕ್ರಿಯೆಯಯಲ್ಲಿ ಆಸಕ್ತಿ ಕಡಿಮೆ ಆಗಬೇಕೆಂದೇನಿಲ್ಲ. ನೀವು ರೋಮ್ಯಾಂಟಿಕ್ ಆಗಿದ್ದರೆ ಗಂಡನು ಖುಷಿಯಾಗಿ ಇರಬಹುದು. ದಾಂಪತ್ಯದಲ್ಲಿ ಲೈಂಗಿಕ ಸಂತೃಪ್ತಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಲೈಂಗಿಕ ಸಂತೃಪ್ತಿ ಇದ್ದರೆ ಮಾತ್ರ ಅಂತಹ ದಾಂಪತ್ಯ ಚೆನ್ನಾಗಿರೋದಕ್ಕೆ ಸಾಧ್ಯ.
3. ಅವರಿಗಾಗಿ ಸಮಯ ಮೀಸಲಿಡಿ
ಗೃಹಿಣಿಯಾಗಿದ್ದರೂ ಕೂಡ ಮನೆಯಲ್ಲಿ ಸಾಕಷ್ಟು ಕೆಲಸ, ಜವಾಬ್ದಾರಿಗಳು ಇರುತ್ತದೆ. ಈ ಮಧ್ಯೆ ಸಮಯವೇ ಸಿಗೋದಿಲ್ಲ. ಎಷ್ಟೇ ಕಷ್ಟ ಆದರೂ ನೀವು ನಿಮ್ಮ ಗಂಡನಿಗಾಗಿ ಸಮಯ ಮಾಡಿಕೊಳ್ಳಲೇಬೇಕು. ಗಂಡನಿಗೆ ನೂರಾರು ಆಲೋಚನೆಗಳು ಇರುತ್ತದೆ. ಇಂತಹ ಸಂದರ್ಭದಲ್ಲಿ ಆತನಲ್ಲಿ ಪ್ರೀತಿಯಿಂದ ಮಾತನಾಡಿ. ಆತನಿಗೆ ಸಮಾಧಾನ ಮಾಡಿ. ನಿನ್ನ ಜೊತೆಗೆ ನಾನಿದ್ದೇನೆ ಎಂದು ಹೇಳಿ. ಕಷ್ಟಗಳನ್ನು ಜೊತೆಯಾಗಿ ಎದುರಿಸೋಣ ಎಂಬ ಭರವಸೆಯ ಮಾತುಗಳನ್ನು ಆಡಿ.
4. ಗಂಡನಿಗೆ ಇಷ್ಟ ಆಗೋ ಅಡುಗೆ ಮಾಡಿ
ರುಚಿ ರುಚಿಯ ಆಹಾರಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ನಿಮ್ಮ ಪತಿಯ ಮೆಚ್ಚಿನ ಆಹಾರಗಳ ಲಿಸ್ಟ್ ಮಾಡಿ. ಪ್ರತಿ ದಿನ ಅವರಿಗೆ ಇಷ್ಟ ಆಗುವ ರೀತಿಯಲ್ಲಿ ಆರೋಗ್ಯಕರವಾಗಿ, ರುಚಿ ರುಚಿಯಾದ ಆಹಾರವನ್ನು ಮಾಡಿ ಬಡಿಸಿ. ಆಗ ನಿಮ್ಮ ಪತಿ ಸಂತೃಪ್ತಗೊಳ್ಳುತ್ತಾರೆ. ಇನ್ನೂ ಭಾನುವಾರದ ದಿನ ವಿಶೇಷವಾದ ಆಹಾರವನ್ನು ತಯಾರಿಸಿ ಸ್ಪೆಷಲ್ ಡಿನ್ನರ್ ಮನೆಯಲ್ಲೇ ಮಾಡಿಕೊಳ್ಳಿ. ಆಗ ಹೊರಗಡೆ ಹೋಗಿ ಖರ್ಚು ಮಾಡಬೇಕಾಗಿ ಇರೋದಿಲ್ಲ. ಇದ್ರಿಂದ ನಿಮ್ಮ ಪತಿಯನ್ನು ಖುಷಿ ಪಡಿಸಬಹುದು.
5. ಪತಿಯ ನಿರ್ಧಾರಗಳನ್ನು ಗೌರವಿಸಿ
ಸಾಮಾನ್ಯವಾಗಿ ಮನೆಯಲ್ಲಿ ಒಬ್ಬನೇ ದುಡಿಯುತ್ತಿದ್ದಾಗ ಆತ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸಬೇಕಾಗುತ್ತದೆ. ಮಕ್ಕಳ ಶಿಕ್ಷಣ, ಮಕ್ಕಳ ಮದುವೆಗೆ ಹಣ ಕೂಡಿಟ್ಟು ಆತ ಕೆಲವು ನಿರ್ಧಾರಗಳನ್ನು ಮಾಡಿರುತ್ತಾನೆ. ಈ ಸಂದರ್ಭದಲ್ಲಿ ಹೆಂಡತಿಯಾಗಿ ನೀವು ಯಾವುದೇ ಕಾರಣಕ್ಕೂ ಎದುರು ಮಾತನಾಡೋದಕ್ಕೆ ಹೋಗಬಾರದು. ಬದಲಾಗಿ ಅವರ ನಿರ್ಧಾರಗಳನ್ನು ಗೌರವಿಸಿ. ಆಗ ಖಂಡಿತ ನಿಮ್ಮ ಗಂಡ ಖುಷಿ ಪಡುತ್ತಾರೆ.
6. ಪ್ರಾಮಾಣಿಕವಾಗಿರಿ
ಕಷ್ಟ ಪಟ್ಟು ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತಿರುವ ಗಂಡನಿಗೆ ಯಾವುದೇ ಕಾರಣಕ್ಕೂ ಮೋಸ ಮಾಡಬೇಡಿ. ಆ ವ್ಯಕ್ತಿ ಕುಟುಂಬದ ಮೇಲೆ ಜೀವವನ್ನೇ ಇಟ್ಟಿರುತ್ತಾನೆ. ಅನ್ಯ ಪುರುಷನ ಮೇಲೆ ಯಾವತ್ತೂ ಆಸಕ್ತಿಯನ್ನು ತೋರಬೇಡಿ. ಗಂಡನ ಪ್ರೀತಿಗೆ ಪ್ರಾಮಾಣಿಕವಾಗಿ ಇರೋದಕ್ಕೆ ಪ್ರಯತ್ನಿಸಿ. ಕಷ್ಟದಲ್ಲೂ ನೀವು ಆತ ಜೊತೆಗಿದ್ದಾಗ ಖಂಡಿತ ಆತ ಖುಷಿ ಪಡುತ್ತಾನೆ.
7. ಆರ್ಥಿಕವಾಗಿ ಸಹಕರಿಸಿ
ಮನೆಯಲ್ಲಿ ಒಬ್ಬನೇ ದುಡಿಯುತ್ತಿದ್ದರೆ ಮನೆ ನಡೆಸೋದಕ್ಕೆ ಕೊಂಚ ಕಷ್ಟ ಆಗಬಹುದು. ಹೀಗಾಗಿ ಪತ್ನಿಯಾಗಿ ಗಂಡನಿಗೆ ನೀವು ಆರ್ಥಿಕವಾಗಿ ಸಹಾಯ ಮಾಡೋದಕ್ಕೆ ಪ್ರಯತ್ನಿಸಿ. ಸಮಯ ಸಿಕ್ಕಾಗ ಟೈಲರಿಂಗ್ ಕೆಲಸ, ಹಪ್ಪಳ, ಬಜ್ಜಿ, ಚಕ್ಕಲಿ ಮಾಡಿ ಮಾರಬಹುದು. ಒಂದು ವೇಳೆ ನೀವು ಚೆನ್ನಾಗಿ ಓದಿ ಕೊಂಡಿದ್ದರೆ ಮಕ್ಕಳು ಇರೋದ್ರಿಂದ ಕೆಲಸಕ್ಕೆ ಹೋಗೋದಕ್ಕೆ ಕಷ್ಟ ಆಗೋದಾದ್ರೆ ವರ್ಕ್ ಫರ್ಮ್ ಹೋಮ್ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುತ್ತೆ.
ಗಂಡನನ್ನು ಸಂತೋಷವಾಗಿರಿಸಬೇಕೆಂದು ನಿರ್ಧರಿಸಿದ್ರೆ ಸಾಕು ಅದಕ್ಕಾಗಿ ನೂರಾರು ದಾರಿಗಳಿದೆ. ನಿಮಗಾಗಿ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತಿರುವ ಗಂಡನನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಖಂಡಿತ ಆತ ನಿಮಗಿಂತ ನೂರು ಪಟ್ಟು ಖುಷಿ ಪಡುತ್ತಾನೆ.



Click it and Unblock the Notifications

