Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಡೇಟಿಂಗ್ ಮಾಡುತ್ತಿದ್ದರೆ ಯಾವುದು ಸರಿ, ಯಾವುದು ಸರಿ ಅಲ್ವೇ ಅಲ್ಲ
ಯಾವುದೇ ಹುಡುಗ ಹುಡುಗಿ ಆರಂಭದ ಪ್ರೀತಿಯಲ್ಲಿ ಇದ್ದರೆ ಅಥವಾ ಹೊಸ ಸಂಬಂಧ ಬೆಸೆದುಕೊಳ್ಳಲು ಪ್ರಯತ್ನಿಸಿದರೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಳ್ಳಲು ಒಟ್ಟಿಗೆ ಒಂದಷ್ಟು ಸಮಯ ಕಳೆಯಲು ಬಯಸುತ್ತಾರೆ. ಇದನ್ನೇ ನಾವು ಡೇಟಿಂಗ್ ಎನ್ನುವುದು.
ಡೇಟಿಂಗ್ ಹೋಗುವ ಹುಡುಗ ಹುಡುಗಿ ಸಾಕಷ್ಟು ವಿಷಯಗಳ ಬಗ್ಗೆ ಗಮನ ವಹಿಸಬೇಕು. ಒಂದು ಹೊಸ ಸಂಬಂಧ ಬೆಸೆಯಲು ಪ್ರಯತ್ನಿಸುವ ಹಂತದಲ್ಲಿ ನಿಮ್ಮಿಂದ ಯಾವ ಲೋಪ ದೋಷಗಳು ಆಗದಂತೆ ನೋಡಿಕೊಳ್ಳಬೇಕು. ಭಾವನಾತ್ಮಕವಾಗಿ ಮಾತ್ರವಲ್ಲ ಪ್ರಾಕ್ಟಿಕಲ್ ಆಗಿಯೂ ಕೂಡ ಮುಂದಿನ ಜೀವನ ಈ ವ್ಯಕ್ತಿಯ ಜೊತೆಗೆ ಹೇಗಿರಬಹುದು ಎನ್ನುವ ಬಗ್ಗೆ ಯೋಚನೆ ಮಾಡಬೇಕು.

ನಿಮ್ಮ ಕಲ್ಪನೆಗೆ ತಕ್ಕ ಹಾಗೆ ಆ ಹುಡುಗ ಅಥವಾ ಹುಡುಗಿ ಇದ್ದಾರೆ ಎಂಬುದನ್ನ ತಿಳಿದುಕೊಳ್ಳಬೇಕು. ನಿಮ್ಮನ್ನ ಎಷ್ಟು ಕಾಳಜಿ ಮಾಡುತ್ತಾರೆ, ಎಷ್ಟು ಎಚ್ಚರಿಕೆಯಿಂದ ನಿಮ್ಮನ್ನ ಮಾತನಾಡಿಸುತ್ತಾರೆ, ನಿಮ್ಮ ಭಾವನೆಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬ ಪ್ರತಿಯೊಂದು ವಿಷಯದ ಮೇಲೆಯೂ ಕೂಡ ನಿಮ್ಮ ಗಮನ ಇರಬೇಕು. ಸಂದರ್ಭದಲ್ಲಿ ಮಾಡಬಹುದಾದ ಹಾಗೂ ಮಾಡಬಾರದ ಕೆಲವು ವಿಷಯಗಳು ಹೀಗಿವೆ.
ಸಮಯದಲ್ಲಿ ಈ ರೀತಿ ನಡೆದುಕೊಳ್ಳಿ!
ಸಂವಹನ:
ಹುಡುಗ ಅಥವಾ ಹುಡುಗಿ ಎಷ್ಟು ಮುಕ್ತವಾಗಿ ಪ್ರಾಮಾಣಿಕವಾಗಿ ಇನ್ನೊಬ್ಬರ ಜೊತೆಗೆ ಸಂವಹನ ಮಾಡುತ್ತಾರೆ ಎನ್ನುವುದು ಬಹಳ ಮುಖ್ಯವಾದ ವಿಚಾರ. ಈ ಸಂವಹನದ ಮೂಲಕವೇ ನೀವು ಎದುರಿಗೆ ಇರುವ ವ್ಯಕ್ತಿ ಎಂತಹ ಸ್ವಭಾವ ಹೊಂದಿರುತ್ತಾರೆ ಅವರ ಯೋಚನೆಗಳು ಏನು ಎಂಬುದನ್ನು ತಿಳಿದುಕೊಳ್ಳಬಹುದು ಹಾಗಾಗಿ ನಿಮ್ಮ ಕಲ್ಪನೆ ಆ ವ್ಯಕ್ತಿಯ ಬಗ್ಗೆ ಏನಿದೆ ಯಾವೆಲ್ಲ ನಿರೀಕ್ಷೆಗಳು ಇವೆ ಎಂಬುದನ್ನ ಮುಕ್ತವಾಗಿ ಹಂಚಿಕೊಳ್ಳಿ.
ಗೌರವಿಸುವುದು:
ವ್ಯಕ್ತಿಯನ್ನು ನೀವು ಮೊದಲ ಬಾರಿಗೆ ಭೇಟಿ ಆಗುತ್ತಿರಬಹುದು. ಆದರೆ ಮೊದಲ ಭೇಟಿಯಲ್ಲಿಯೇ ನೀವು ಪರಸ್ಪರ ಒಬ್ಬರನ್ನೊಬ್ಬರು ಎಷ್ಟು ಗೌರವಿಸಿಕೊಳ್ಳುತ್ತೀರಿ ಎನ್ನುವುದು ಕೂಡ ಸಂಬಂಧದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಅವರ ಮಾತುಗಳನ್ನು ನೀವು ಆಲಿಸುವುದು ಅವರ ಭಾವನೆಗಳಿಗೆ ನೀವು ಬೆಲೆ ಕೊಡುವುದು ಹಾಗೆ ನಿಮ್ಮ ಮಾತುಗಳನ್ನು ಅವರು ಗೌರವಿಸುವುದು ಬಹಳ ಮುಖ್ಯವಾಗಿರುತ್ತದೆ.
ನಂಬಿಕೆ ಬೆಳೆಸಿಕೊಳ್ಳುವುದು:
ಒಂದು ಆರೋಗ್ಯಕರ ಸಂಬಂಧದಲ್ಲಿ ಅಡಿಪಾಯವೇ ನಂಬಿಕೆ ಹಾಗಾಗಿ ನೀವು ಒಬ್ಬ ವ್ಯಕ್ತಿಯನ್ನು ಭೇಟಿಯಾಗಲು ಹೋಗುವ ಸಮಯದಿಂದ ಹಿಡಿದು ಅವರ ಜೊತೆಗೆ ಯಾವ ರೀತಿ ಮಾತನಾಡುತ್ತೀರಿ ಎನ್ನುವ ವಿಚಾರದಲ್ಲಿಯೂ ಕೂಡ ನಂಬಿಕೆ ಉಳಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮೇಲೆ ನಂಬಿಕೆ ಮೂಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ.
ಗುಣಮಟ್ಟದ ಸಮಯ ಕಳೆಯಿರಿ:
ಡೇಟಿಂಗ್ ಗೆ ಹೋಗುವಾಗ ಯಾವ ರೀತಿ ಇರಬೇಕು ಯಾವ ರೀತಿ ಮಾತನಾಡಬೇಕು ಎನ್ನುವುದರ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ. ಆ ವಾತಾವರಣಕ್ಕೆ ತಕ್ಕ ಹಾಗೆ ನಿಮ್ಮನ್ನ ನೀವು ಸಿದ್ಧಪಡಿಸಿಕೊಳ್ಳಲು ಪ್ರಯತ್ನಿಸಿ. ವಾತಾವರಣ ನಿಮ್ಮಿಂದ ಹಾಳಾಗದಂತೆ ನೋಡಿಕೊಳ್ಳಿ. ಇಬ್ಬರೂ ಗುಣಮಟ್ಟದ ಸಮಯ ಕಳೆದಾಗ ಮಾತ್ರ ಆ ಡೇಟಿಂಗ್ ಅರ್ಥಪೂರ್ಣವಾಗುತ್ತದೆ.
ಡೇಟಿಂಗ್ ಸಮಯದಲ್ಲಿ ಈ ಕೆಲಸ ಮಾಡಬೇಡಿ!
ಆಕರ್ಷಣೆ!
ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಆತನ ದೇಹ ಸೌಂದರ್ಯಕ್ಕೆ ಮರುಳಾಗುವುದು ಒಳ್ಳೆಯದಲ್ಲ ಅದರ ಬದಲಿಗೆ ಅವರ ಮನಸ್ಥಿತಿ ಎಷ್ಟು ಸುಂದರವಾಗಿದೆ ಎಂಬುದನ್ನ ತಿಳಿದುಕೊಳ್ಳಿ ನಂತರವಷ್ಟೇ ಅವರನ್ನು ಒಪ್ಪಿಕೊಳ್ಳಿ.
ಪ್ರಶಂಸೆಗೆ ಮರುಳಾಗದಿರಿ!
ಆ ವ್ಯಕ್ತಿ ನಿಮ್ಮನ್ನ ಮೆಚ್ಚಿಸಲು ಬಂದಿರುವವರಾಗಿದ್ದರೆ ಖಂಡಿತವಾಗಿಯೂ ನಿಮ್ಮ ಸೌಂದರ್ಯವನ್ನು ಹೊಗಳಬಹುದು ಹೀಗೆ ನಿಮ್ಮನ್ನ ಹೊಗಳಿದ್ದಾರೆ ಎನ್ನುವ ಕಾರಣಕ್ಕೆ ಅದಕ್ಕೆ ಮರುಳಾಗಲು ಹೋಗಬೇಡಿ ಅದರ ಬದಲು ಅದರ ಹಿಂದಿರುವ ಭಾವನೆಯನ್ನು ಅರ್ಥ ಮಾಡಿಕೊಳ್ಳಿ.
ಪರಸ್ಪರ ಅನ್ಯೂನ್ಯತೆ!
ಡೇಟಿಂಗ್‌ನಲ್ಲಿ ಭಾವನಾತ್ಮಕವಾಗಿಯೂ ಕೂಡ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆರೆಯಲು ಪ್ರಯತ್ನಿಸಬೇಕು. ಹಾಗಾಗಿ ಮೊದಲ ಡೇಟಿಂಗ್ಸ್ ನಲ್ಲಿಯೇ ಈ ಎಲ್ಲಾ ವಿಚಾರಗಳ ಬಗ್ಗೆ ಗಮನಹರಿಸುವುದು ಸೂಕ್ತ.
ಡೇಟಿಂಗ್ ಎಂದಾಕ್ಷಣ ಸಾಕಷ್ಟು ಜನ ಅದು ಟೈಮ್ ಪಾಸ್ ಎಂದೇ ಭಾವಿಸುತ್ತಾರೆ. ಆದರೆ ನೀವು ನಿಜವಾದ ಒಂದು ಸಂಬಂಧವನ್ನು ಆರಿಸಿಕೊಳ್ಳಲು ಬಯಸಿದರೆ ಡೇಟಿಂಗ್ ಅನ್ನು ಗಂಭೀರವಾಗಿಯೇ ಪರಿಗಣಿಸಬೇಕು. ಮೊದಲ ಭೇಟಿಯಲ್ಲಿಯೇ ವ್ಯಕ್ತಿಯ ಬಗ್ಗೆ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲದಿದ್ದರೆ ಸ್ವಲ್ಪ ಸಮಯ ತೆಗೆದುಕೊಂಡು ಮುಂದುವರೆಯುವುದು ಸೂಕ್ತ.



Click it and Unblock the Notifications