Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ನಿಮ್ಮಿಬ್ಬರ ಸಂಬಂಧದಲ್ಲಿ ರೊಮ್ಯಾನ್ಸ್ ಎಂಬುವುದೇ ಮರೆಯಾಗಿದೆಯೇ?
ಸುಖ-ದುಃಖ, ನೋವು-ನಲಿವು ದಾಂಪತ್ಯದ ಒಂದು ಭಾಗ. ಅದೇ ರೀತಿ ದಾಂಪತ್ಯ ಎಂದ ಮೇಲೆ ಅಲ್ಲಿ ರೊಮಾನ್ಸ್ ಮುಖ್ಯವಾಗಿ ಇರಬೇಕಾಗುತ್ತದೆ. ಪತ್ನಿಯನ್ನು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಕರೆದುಕೊಂಡು ಹೋಗಬೇಕು. ಆಕೆಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯಬೇಕು. ಹೀಗಾದಾಗ ಜೀವನ ತುಂಬಾನೇ ಸುಂದರವಾಗಿರುತ್ತೆ. ಒಂದು ವೇಳೆ ಸಂಬಂಧದಲ್ಲಿ ರೊಮ್ಯಾನ್ಸ್ ಇಲ್ಲದೇ ಹೋದರೆ ಏನಾಗಲಿದೆ ಗೊತ್ತಾ? ಕೆಲವೊಂದು ಸಂಬಂಧಗಳಲ್ಲಿ ರೊಮ್ಯಾನ್ಸ್ ಇಲ್ಲದಿರೋದಕ್ಕೆ ಕಾರಣ ಏನು ಗೊತ್ತಾ?
1. ಸಂವಹನದ ಕೊರತೆ
ಸಂಬಂಧವನ್ನು ಗಟ್ಟಿಯಾಗಿಸಲು ಸಂವಹನ ತುಂಬಾನೇ ಮುಖ್ಯವಾಗುತ್ತದೆ. ಯಾವಾಗ ಪತಿ-ಪತ್ನಿಯ ಮಧ್ಯೆ ಸಂವಹನ ಚೆನ್ನಾಗಿರುತ್ತದೆಯೋ ಆಗ ಆ ಸಂಬಂಧ ಗಟ್ಟಿಯಾಗಿರುತ್ತದೆ. ಯಾವ ಸಂಬಂಧದಲ್ಲಿ ಗಂಡ-ಹೆಂಡತಿಯ ಮಧ್ಯೆ ಸರಿಯಾದ ಮಾತುಕತೆ ಇರೋದಿಲ್ಲವೋ ಆಗ ಆ ಸಂಬಂಧ ಉತ್ತಮವಾಗಿರೋದಕ್ಕೆ ಸಾಧ್ಯವೇ ಇಲ್ಲ. ಸಂವಹನವೇ ಸರಿಯಾಗಿ ಇಲ್ಲ ಅಂದ ಮೇಲೆ ಇನ್ನೂ ಜೋಡಿಗಳ ಮಧ್ಯೆ ರೊಮ್ಯಾಂಟಿಕ್ ಮಾತುಕತೆಯಂತೂ ದೂರದ ಮಾತೇ ಸರಿ.

2. ಕೆಲಸದ ಒತ್ತಡ
ಗಂಡ- ಹೆಂಡತಿ ಎಂದ ಮೇಲೆ ಅವರಿಗೆ ಅವರದ್ದೇ ಆದ ಜವಾಬ್ದಾರಿ ಇದ್ದೇ ಇರುತ್ತದೆ. ಗಂಡ ಹೊರಗಡೆ ಕೆಲಸಕ್ಕೆ ಹೋಗೋದ್ರಿಂದ ಆತನಿಗೆ ಸಾಮಾನ್ಯವಾಗಿ ಒತ್ತಡ ಇದ್ದೇ ಇರುತ್ತದೆ. ಇನ್ನೂ ಹೆಂಡತಿ ಮನೆ ಹಾಗೂ ಮಕ್ಕಳನ್ನು ನಿಭಾಯಿಸುತ್ತಿರುತ್ತಾಳೆ. ಈ ಒತ್ತಡದಲ್ಲಿ ಅವರಿಗೆ ರೊಮ್ಯಾನ್ಸ್ ಮಾಡೋದಕ್ಕೆ ಸಮಯವೇ ಸಿಗದಂತಾಗುತ್ತದೆ. ಕೆಲವೊಂದು ಸಲ ಒತ್ತಡದ ಜೀವನದಿಂದಾಗಿ ರೊಮ್ಯಾನ್ಸ್ ಮಾಡೋ ಆಸಕ್ತಿಯನ್ನೂ ಕಳೆದುಕೊಂಡು ಬಿಡುತ್ತಾರೆ.
3. ಮೆಚ್ಚುಗೆಯ ಕೊರತೆ
ದಾಂಪತ್ಯದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಸಂಬಂಧಗಳಲ್ಲಿ ಗಂಡ-ಹೆಂಡತಿಯನ್ನು, ಹೆಂಡತಿ-ಗಂಡನ ಮೇಲೆ ಮೆಚ್ಚುಗೆ ವ್ಯಕ್ತ ಪಡಿಸೋದಿಲ್ಲ. ಇಬ್ಬರೂ ಅವರವರ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿಯಾಗಲಿ, ರೊಮ್ಯಾನ್ಸ್ ಆಗಲಿ ಇರೋದಿಲ್ಲ.
4. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಿದ್ದಾಗ
ಕೆಲವೊಂದು ದಾಂಪತ್ಯದಲ್ಲಿ ಏನಾಗುತ್ತೆ ಎಂದರೆ ಸಮಾಜಕ್ಕೋಸ್ಕರ ಮಾತ್ರ ಪತಿ-ಪತ್ನಿ ಜೀವನ ನಡೆಸುತ್ತಿರುತ್ತಾರೆ. ಪ್ರತಿ ದಿನ ಜಗಳ, ಮನಸ್ಥಾಪ ಇಬ್ಬರ ಮಧ್ಯೆ ಇದ್ದೇ ಇರುತ್ತದೆ. ಇಬ್ಬರೂ ಕೂಡ ನಿಂದಿಸುತ್ತಾ, ಹೀಯಾಳಿಸುತ್ತಾ ಮಾತನಾಡುತ್ತಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಅವರ ಮಧ್ಯೆ ಪ್ರೀತಿ ಅನ್ನೋದು ದೂರದ ಮಾತು ಬಿಡಿ. ಇನ್ನೂ ಈ ಸಂಬಂಧದಲ್ಲಿ ರೊಮ್ಯಾನ್ಸ್ ಇರೋದಕ್ಕೆ ಸಾಧ್ಯಾನಾ? ಖಂಡಿತ ಸಾಧ್ಯವಿಲ್ಲ.
5. ಗಂಡ-ಹೆಂಡತಿ ಆತ್ಮೀಯವಾಗಿ ಇಲ್ಲದಿರೋದು
ಗಂಡ- ಹೆಂಡತಿ ಇಬ್ಬರು ಆತ್ಮೀಯವಾಗಿದ್ದಾಗ ಆ ಸಂಬಂಧ ಚೆನ್ನಾಗಿರುತ್ತದೆ. ಕೆಲವು ಸಂಬಂಧಗಳು ಹೆಸರಿಗಷ್ಟೇ ಎನ್ನುವಂತೆ ಇರುತ್ತದೆ. ಆತ್ಮೀಯತೆ ಅನ್ನೋದು ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳುವುದು, ಮುದ್ದಿಸುವುದು, ಒಬ್ಬರ ಕೈಯನ್ನು ಮತ್ತೊಬ್ಬರು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇತ್ಯಾದಿ. ಈ ರೀತಿ ಇರೋದನ್ನೇ ರೊಮ್ಯಾನ್ಸ್ ಅಂತ ಕರೆಯಲಾಗುತ್ತದೆ. ಇಬ್ಬರ ಮಧ್ಯೆ ಆತ್ಮೀಯತೆ ಚೆನ್ನಾಗಿದ್ದಾಗ ರೊಮ್ಯಾನ್ಸ್ ಕೂಡ ಚೆನ್ನಾಗಿರುತ್ತದೆ.
6. ಇಬ್ಬರ ಆಸಕ್ತಿಗಳನ್ನು ಹಂಚಿಕೊಳ್ಳದೇ ಇರುವುದು
ಕೆಲವು ಸಂಬಂಧಗಳಲ್ಲಿ ಗಂಡ-ಹೆಂಡತಿಗೆ ಅವರಿಬ್ಬರ ಆಸಕ್ತಿ ಹಾಗೂ ಇಷ್ಟಗಳು ಏನು ಅನ್ನೋದೇ ಗೊತ್ತಿರೋದಿಲ್ಲ. ಗಂಡನಿಗೆ ಹೇಳೋ ಆಸಕ್ತಿಯು ಇರೋದಿಲ್ಲ. ಹೇಳಿದರೂ ಹೆಂಡತಿಗೆ ಅದನ್ನು ಕೇಳುವ ಆಸಕ್ತಿ ಅಂತೂ ಮೊದಲೇ ಇರೋದಿಲ್ಲ. ಇಂತಹ ಸಂಬಂಧಗಳಲ್ಲಿಯೂ ರೊಮ್ಯಾನ್ಸ್ ಇರೋದಿಲ್ಲ. ಬೆಳಗ್ಗೆ ಏಳ್ತಾರೆ ಅವರವರ ಕೆಲಸಗಳಲ್ಲಿ ಬ್ಯೂಸಿಯಾಗ್ತಾರೆ ರಾತ್ರಿ ಮಲಗ್ತಾರೆ. ಅಷ್ಟೇ ಅದನ್ನು ಬಿಟ್ಟು ಬೇರೇನೂ ಇರೋದೇ ಇಲ್ಲ. ಒಂದು ರೀತಿ ಯಾಂತ್ರಿಕ ಜೀವನ ನಡೆಸುತ್ತಿರುತ್ತಾರೆ.
7. ಪ್ರಯತ್ನ ಪಡೋದಿಲ್ಲ
ಅರೇಂಜ್ ಮ್ಯಾರೇಜ್ ಗಳಲ್ಲಿ ಹೇಗಾಗುತ್ತೆ ಅಂದ್ರೆ ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಇರೋದಿಲ್ಲ. ಮದುವೆಯಾದ ಮೇಲೆ ಆ ಬಾಂಧವ್ಯವನ್ನು ಉತ್ತಮಗೊಳಿಸಬೇಕು ಅಂತ ಅವರು ಬಯಸೋದು ಇಲ್ಲ. ಇಬ್ಬರು ಕೂಡ ಗಟ್ಟಿಯಾದ ಪ್ರೀತಿ ಬಾಂಧವ್ಯ ಬೆಸೆಯೋದಕ್ಕೆ ಪ್ರಯತ್ನನೂ ಪಡೋದಿಲ್ಲ. ಹೀಗಾಗಿ ಈ ಸಂಬಂಧ ಬರೀ ಮದುವೆಯಗಷ್ಟೇ ಸೀಮಿತ ಎನ್ನುವಂತೆ ಇರುತ್ತೇ ಹೊರತು ಅಲ್ಲಿ ವಿಶೇಷ ಪ್ರೀತಿ, ರೊಮ್ಯಾನ್ಸ್ ಇರೋದಿಲ್ಲ.
ರೊಮ್ಯಾನ್ಸ್ ದಾಂಪತ್ಯದ ಒಂದು ಭಾಗವಷ್ಟೇ. ದಂಪತಿಗಳ ಮಧ್ಯೆ ರೊಮ್ಯಾನ್ಸ್ ಇದ್ದಾಗ ಅವರಿಬ್ಬರ ಬಾಂಧವ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧದಲ್ಲಿ ರೊಮ್ಯಾನ್ಸ್ ಗೆ ಆಧ್ಯತೆ ನೀಡೋದನ್ನು ಮರೀಬೇಡಿ.



Click it and Unblock the Notifications
