Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯ್ ಫ್ರೆಂಡ್ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ? ಹಾಗಾದ್ರೆ ಈ ಕಾರಣಗಳಿರಬಹುದು!
ಒಂದು ಸಾರಿ ಪ್ರೀತಿಯಲ್ಲಿ ಬಿದ್ದ ಮೇಲೆ ಪ್ರೀತಿಸಿದವರೇ ಎಲ್ಲಾ ಎಂದು ಅಂದುಕೊಳ್ಳುತ್ತೇವೆ. ನಾವು ಅವರಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಅವರು ಕೂಡ ನೀಡಬೇಕು ಎಂದು ಬಯಸುತ್ತೇವೆ. ಯಾವಾಗ ನಮ್ಮ ಹುಡುಗ ನಮ್ಮ ನಿರ್ಲಕ್ಷ್ಯ ಮಾಡೋದಕ್ಕೆ ಶುರು ಮಾಡುತ್ತಾನೋ ಆಗ ನಮಗೆ ನಿಜವಾದ ನೋವಿನ ಅನುಭವ ಆಗುತ್ತದೆ. ಇಷ್ಟು ದಿನ ನಮ್ಮ ಪ್ರಪಂಚವೇ ಅವನು ಅಂತ ಅಂದು ಕೊಂಡಿದ್ದ ನಮ್ಮ ಮನಸ್ಸು ಒಡೆದು ಹೋಗುತ್ತದೆ. ಅಷ್ಟಕ್ಕು ನಿಮ್ಮ ಹುಡುಗ ನಿಮ್ಮನ್ನು ನಿರ್ಲಕ್ಷಿಸೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
1. ಅವನಿಗೆ ವೈಯಕ್ತಿಕ ಸಮಯ ಬೇಕಿರಬಹುದು
ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಸಮಯ ಬೇಕಿರುತ್ತದೆ. ಆ ಸಮಯವನ್ನು ಅವರು ಒಂಟಿಯಾಗಿ ಕಳೆಯೋದಕ್ಕೆ ಇಷ್ಟ ಪಡುತ್ತಾರೆ. ಇಲ್ಲವಾದರೆ ಆ ಸಮಯದಲ್ಲಿ ಬೇರೇನನ್ನೂ ಮಾಡೋದಕ್ಕೆ ಇಚ್ಛಿಸಿರಬಹುದು. ಆತನ ಹುಡುಗಿಯಾಗಿ ನೀವು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು ಅದನ್ನು ಬಿಟ್ಟು ಆತ ಇಡೀ ದಿನ ನಿಮ್ಮ ಜೊತೆಗೆ ಸಮಯ ಕಳೆಯಬೇಕು, ನಿಮಗೆ ಸಮಯ ಕೊಡಬೇಕೆಂದು ನೀವು ಬಯಸೋದು ತಪ್ಪು.

2. ಅವರು ಏನಾದರೂ ಸವಾಲುಗಳನ್ನು ಎದುರಿಸುತ್ತಿರಬಹುದು
ಜೀವನ ಯಾವಾಗಲೂ ಒಂದೇ ರೀತಿ ಇರೋದಿಲ್ಲ. ಕೆಲವೊಂದು ಸಲ ಏರಿಳಿತಗಳು ಖಂಡಿತ ಆಗುತ್ತದೆ. ನಿಮ್ಮ ಹುಡುಗ ಕೂಡ ಇಂತಹದ್ದೇ ಸಮಸ್ಯೆಯಲ್ಲಿ ಸಿಲುಕಿರಬಹುದು. ಆದರೆ ಆ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದ ಪರಿಸ್ಥಿತಿಗೆ ಅವರು ತಲುಪಿಬಹುದು. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಅವರು ನಿಮ್ಮ ಬಗ್ಗೆ ಹೆಚ್ಚಿನ ಗಮನ ಕೊಡೋದಕ್ಕೆ ಸಾಧ್ಯವಾಗದೇ ಇರಬಹುದು. ಇಂತಹ ಸಮಯದಲ್ಲಿ ಹುಡುಗನ ಕಷ್ಟಗಳನ್ನು ಅರ್ಥ ಮಾಡಿಕೊಳ್ಳೋದು ಹುಡುಗಿಯಾದವಳ ಕರ್ತವ್ಯ.
3. ನಿಮ್ಮ ಹುಡುಗನಿಗೆ ಮುಜುಗರ ಇರಬಹುದು
ಪ್ರಪಂಚದಲ್ಲಿ ಎಲ್ಲರ ಗುಣವು ಒಂದೇ ರೀತಿ ಇರಬೇಕೆಂದೇನಿಲ್ಲ. ನಿಮ್ಮ ಗೆಳತಿಯ ಬಾಯ್ ಫ್ರೆಂಡ್ ಜೊತೆಗೆ ನಿಮ್ಮ ಹುಡುಗನನ್ನು ಹೋಲಿಕೆ ಮಾಡಬೇಡಿ. ನೀವು ಇತ್ತೀಚಿಗಷ್ಟೇ ಪ್ರೀತಿಯಲ್ಲಿ ಬಿದ್ದಿದ್ದರೆ ನಿಮ್ಮ ಹುಡುಗ ನಿಮ್ಮ ಜೊತೆಗೆ ಎಲ್ಲಾ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳೋದಕ್ಕೆ ಮುಜುಗರ ಪಟ್ಟುಕೊಳ್ಳುತ್ತಿರಬಹುದು. ಅವರ ಸ್ವಭಾವ ಮುಂಚಿನಿಂದಲೂ ಅದೇ ರೀತಿ ಇರಬಹುದು. ಅವರು ನಿಮ್ಮ ಜೊತೆಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳೋದಕ್ಕೆ ಮತ್ತಷ್ಟು ಸಮಯಾವಕಾಶ ತೆಗೆದುಕೊಳ್ಳಬಹುದು. ಇದನ್ನು ನೀವು ನಿರ್ಲಕ್ಷ್ಯ ಅಂದುಕೊಳ್ಳಬೇಡಿ.
4. ಅವರಿಗೆ ನಿಮ್ಮಿಂದ ನೋವಾಗಿರಬಹುದು
ಪ್ರೀತಿ ಎಂದ ಮೇಲೆ ಒಂದು ಮಾತು ಬರುತ್ತದೆ. ಒಂದು ಮಾತು ಹೋಗುತ್ತದೆ. ಕೆಲವೊಂದು ಸಾರಿ ನೀವು ಆಡಿರುವ ಕೆಲವು ಮಾತುಗಳಿಂದ ಅವರ ಮನಸ್ಸಿಗೆ ತುಂಬಾನೇ ನೋವಾಗಿರಬಹುದು. ಅವರು ಆ ವಿಚಾರಕ್ಕೆ ನೊಂದುಕೊಂಡಿರಬಹುದು. ಆದರೆ ನಿಮ್ಮ ಬಳಿ ಅವರು ಈ ವಿಚಾರದ ಬಗ್ಗೆ ಹೇಳಿರಲಿಕ್ಕಿಲ್ಲ. ಹೀಗಾಗಿ ಕೊಂಚ ಸಮಯ ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿರಬಹುದು. ಇಂತಹ ಸಂದರ್ಭದಲ್ಲಿ ಅವರು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನಿಸಿರಬಹುದು.
5. ಅವರು ನಿಮ್ಮ ಮೇಲೆ ಹೊಟ್ಟೆ ಕಿಚ್ಚು ಪಟ್ಟಿರಬಹುದು
ಇಬ್ಬರು ಪ್ರೀತಿಸುತ್ತಿದ್ದಾರೆ ಎಂದ ಮೇಲೆ ಸಂಗಾತಿಯ ಸಾಧನೆ ನೋಡಿ ಖಂಡಿತ ನಿಮ್ಮ ಹುಡುಗ ಖುಷಿ ಪಡುತ್ತಾರೆ. ಆದರೆ ಎಲ್ಲರಲ್ಲಿ ಈ ಗುಣ ಇರಬೇಕೆಂದೇನಿಲ್ಲ. ಕೆಲವೊಂದು ಸಲ ನೀವು ಕೆಲಸದಲ್ಲಿ ಒಂದು ಹಂತಕ್ಕೆ ಮೇಲೆ ಏರಿದಾಗ, ಎಲ್ಲರೂ ನಿಮ್ಮನ್ನು ಶ್ಲಾಘಿಸಿದಾಗ ಖಂಡಿತ ನಿಮ್ಮ ಹುಡುಗ ಕೊಂಚ ಹೊಟ್ಟೆಕಿಚ್ಚು ಪಟ್ಟಿರುತ್ತಾರೆ. ಅವರು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರಲು ಈ ಕಾರಣವು ಇರಬಹುದು.
6. ನಿಮಗೆ ಮೋಸ ಮಾಡುತ್ತಿರಬಹುದು
ಕೆಲವೊಂದು ಸಲ ನಾವು ಪ್ರೀತಿಸಿದವರನ್ನು ತುಂಬಾನೇ ನಂಬುತ್ತೀವಿ. ಅವರಿಗಾಗಿ ನಮ್ಮ ಇಡೀ ಜೀವನವನ್ನೇ ಧಾರೆ ಎರೆಯುತ್ತೀವಿ. ಆದರೆ ಎಲ್ಲಾ ಹುಡುಗರು ಪ್ರೀತಿಯಲ್ಲಿ ಪ್ರಾಮಾಣಿಕತೆ ತೋರುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲ ಹುಡುಗರು ಪ್ರೀತಿಸಿದ ಹುಡುಗಿ ಇದ್ದರೂ ಕೂಡ ಬೇರೆ ಹುಡುಗಿಯರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ನಿಮ್ಮ ಕಡೆಗೆ ಹೆಚ್ಚು ಗಮನ ಕೊಡೋದಿಕ್ಕೆ ಆಗೋದಿಲ್ಲ. ಹೀಗಾಗಿ ನಿಮ್ಮನ್ನು ನಿರ್ಲಕ್ಷಿಸುತ್ತಾರೆ.
ಪ್ರೀತಿ ಹುಟ್ಟೋದು ಮುಖ್ಯವಲ್ಲ. ಆದರೆ ನಾವು ಅದನ್ನು ಯಾವ ರೀತಿ ಉಳಿಸಿಕೊಂಡು ಹೋಗುತ್ತೇವೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಮುಖ್ಯವಾಗಿ ಪ್ರೀತಿಯ ವಿಚಾರದಲ್ಲಿ ಹುಡುಗಿಯರು ತುಂಬಾನೇ ಹುಷಾರಾಗಿರಬೇಕು. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು.



Click it and Unblock the Notifications
