Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೆಸ್ಟ್ ಫ್ರೆಂಡ್ ಜೊತೆಗೆ ಡೇಟ್ ಮಾಡೋದು ಎಲ್ಲದಕ್ಕಿಂತಲೂ ಬೆಸ್ಟ್ ಅನ್ನೋದು ಇದೇ ಕಾರಣಕ್ಕೆ
ಪ್ರತಿಯೊಬ್ಬರಿಗೂ ಕೂಡ ಉತ್ತಮ ಬಾಳ ಸಂಗಾತಿಯನ್ನು ಹೊಂದಬೇಕು ಎನ್ನುವ ಆಸೆ ಖಂಡಿತ ಇರುತ್ತದೆ. ಹೀಗಾಗಿ ತುಂಬಾ ಜನ ತಮಗೆ ಸರಿ ಹೊಂದುವ ಬಾಳ ಸಂಗಾತಿಗಾಗಿ ಹುಡುಕಾಡುತ್ತಾರೆ. ಕೆಲವೊಂದು ಸಲ ಎಷ್ಟು ಜನರ ಜೊತೆಗೆ ಡೇಟ್ ಮಾಡಿದ್ರು ನಮಗೆ ಹೇಳಿ ಮಾಡಿಸಿದ ಜೋಡಿ ಅಲ್ಲ ಅಂತ ಅನ್ನಿಸೋದಕ್ಕೆ ಶುರುವಾಗುತ್ತೆ. ಯಾರೋ ಅಪರಿಚಿತರ ಜೊತೆಗೆ ಡೇಟ್ ಮಾಡುವ ಬದಲು ನಿಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ಡೇಟ್ ಮಾಡಿ. ಅಷ್ಟಕ್ಕು ಬೆಸ್ಟ್ ಫ್ರೆಂಡ್ ಜೊತೆಗೆ ಡೇಟ್ ಮಾಡೋದ್ರಿಂದ ಎಷ್ಟೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.
1. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಚೆನ್ನಾಗಿ ಗೊತ್ತಿರುತ್ತದೆ
ನಿಮ್ಮ ಅತ್ಯತ್ತಮ ಸ್ನೇಹಿತ ಅಥವಾ ಸ್ನೇಹಿತೆ ಎಂದ ಮೇಲೆ ಅವರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಅವರ ಇಷ್ಟಗಳೇನು? ಅವರ ಆಸಕ್ತಿಯ ವಿಚಾರಗಳ್ಯಾವುದು? ಅವರ ಪಾಸ್ಟ್, ಪ್ರೆಸೆಂಟ್. ಅವರಿಗೆ ಹಿಂದೆ ಯಾರ ಜೊತೆಗಾದರೂ ಲವ್ ಇತ್ತಾ? ಈ ಎಲ್ಲಾ ವಿಚಾರಗಳನ್ನು ಖಂಡಿತ ತಿಳಿದುಕೊಂಡಿರುತ್ತೀರಿ. ಹೀಗಾಗಿ ಇಬ್ಬರ ಮಧ್ಯೆ ಸುಳ್ಳು ಹೇಳಬೇಕಾದ ಪ್ರಸಂಗ ಎದುರಾಗೋದೇ ಇಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರೆ ಬದುಕು ಚೆನ್ನಾಗಿರುತ್ತೆ.

2. ನಿಮ್ಮಬ್ಬರ ಮಧ್ಯೆ ಒಂದು ರೀತಿಯ ಕಾಳಜಿ ಇರುತ್ತದೆ
ನೀವಿಬ್ಬರೂ ಅತ್ಯುತ್ತಮ ಸ್ನೇಹಿತರು ಎಂದ ಮೇಲೆ ಒಬ್ಬರನ್ನೊಬ್ಬರು ಖಂಡಿತ ಕಾಳಜಿ ಮಾಡಿರುತ್ತೀರಿ. ನಿಮ್ಮ ಕಷ್ಟದಲ್ಲಿ ಅವರು, ಅವರ ಕಷ್ಟದಲ್ಲಿ ನೀವು ಖಂಡಿತ ಹೆಗಲಾಗಿರುತ್ತೀರಿ. ಹೀಗಾಗಿ ನಿಮ್ಮಿಬ್ಬರ ಮಧ್ಯೆ ಒಂದು ರೀತಿಯ ಉತ್ತಮ ಬಾಂಧವ್ಯ ಇದ್ದೇ ಇರುತ್ತದೆ. ಹೀಗಾಗಿ ಬೆಸ್ಟ್ ಫ್ರಂಡ್ ಜೊತೆಗೆ ಡೇಟ್ ಹೋಗುವುದು ಒಂದು ರೀತಿ ಒಳ್ಳೆಯದು.
3. ನೀವು ನೀವಾಗಿ ಇರಬಹುದು
ಸಾಮಾನ್ಯವಾಗಿ ಡೇಟ್ ಗೆ ಹೋದಾಗ ಏನಾಗುತ್ತೆ ಅಂದ್ರೆ ನಾನು ನಾವಾಗಿ ಇರೋದಿಲ್ಲ. ನಾನು ಈ ರೀತಿ ಮಾತನಾಡಿದರೆ ಅವರೇನು ಅಂದುಕೊಳ್ಳುತ್ತಾರೋ ಅನ್ನೋ ಭಯದಲ್ಲಿ ನಮ್ಮ ತನವನ್ನು ನಾವು ಬಿಟ್ಟು ಕೊಡುತ್ತೇವೆ. ಔಪಚಾರಿಕವಾಗಿ ಮಾತನಾಡೋದಕ್ಕೆ ಪ್ರಯತ್ನಿಸುತ್ತೇವೆ. ಆದರೆ ನಮ್ಮ ಆತ್ಮೀಯ ಸ್ನೇಹಿತರ ಜೊತೆಗೆ ಡೇಟ್ ಹೋದಾಗ ನಾಟಕ ಮಾಡಬೇಕೆಂದೇನಿಲ್ಲ. ನಾವು ನಾವಾಗಿದ್ದರೆ ಸಾಕು. ನಾವು ಹೇಗಿದ್ದರೂ ನಮ್ಮ ಫ್ರೆಂಡ್ ನಮ್ಮನ್ನು ಸ್ವೀಕರಿಸುತ್ತಾರೆ.
4. ನಿಮ್ಮಿಬ್ಬರ ಮಧ್ಯೆ ನಂಬಿಕೆ ಬೆಳೆದಿರುತ್ತದೆ
ಒಂದು ಸಂಬಂಧ ಗಟ್ಟಿಯಾಗಿ ಇರಬೇಕೆಂದರೆ ಅಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಂಬಂಧದಲ್ಲಿ ನಂಬಿಕೆಯನ್ನು ಬೆಳೆಸೋದು ಸುಲಭವಾದ ವಿಚಾರ ಅಲ್ವೇ ಅಲ್ಲ. ಯಾರದ್ದೋ ಜೊತೆಗೆ ನೀವು ಡೇಟ್ ಗೆ ಹೋದ್ರೆ ನಿಮ್ಮಿಬ್ಬರ ಮಧ್ಯೆ ಆ ನಂಬಿಕೆ ಅನ್ನೋದು ಇರೋದಿಲ್ಲ. ಮುಂದೆ ನಂಬಿಕೆ ಬೆಳೆಯಬಹುದು ಅಂತ ಹೇಳೋದಿಕ್ಕೂ ಆಗೋದಿಲ್ಲ. ಆದ್ರೆ ನಿಮ್ಮ ಬೆಸ್ಟ್ ಫ್ರೆಂಡ್ ಮತ್ತು ನಿಮ್ಮ ಮಧ್ಯೆ ಈಗಾಗಲೇ ನಂಬಿಕೆ ಬೆಳೆದಿರುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಆಗೋದಿಲ್ಲ.
5. ನಿಮ್ಮಬ್ಬರ ಮಧ್ಯೆ ಈಗಾಗಲೇ ಪ್ರೀತಿ ಹುಟ್ಟಿಕೊಂಡಿರಬಹುದು
ಇತ್ತೀಚಿನ ಮಾರ್ಡನ್ ಲವ್ ಹೇಗಂದ್ರೆ ಮೊದಲು ಡೇಟ್ ಗೆ ಹೋಗಿ ಆನಂತರ ಎಲ್ಲವೂ ಸರಿ ಹೋದ್ರೆ ಪ್ರೀತಿಸೋದಕ್ಕೆ ನಿರ್ಧರಿಸುತ್ತಾರೆ. ಒಂದು ವೇಳೆ ನೀವು ನಿಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ಡೇಟ್ ಹೋಗೋದಾದ್ರೆ ಮೊದಲ ಭೇಟಿಯಲ್ಲೇ ಪ್ರೀತಿ ಪಕ್ಕಾ ಆಗುವ ಸಾಧ್ಯತೆಯಿದೆ. ಯಾಕಂದ್ರೆ ಮೊದಲೇ ಇಬ್ಬರಲ್ಲಿ ಒಬ್ಬರಿಗೆ ಪ್ರೀತಿ ಇರಬಹುದು. ಇದ್ರಿಂದ ಮುಂದಿನ ಮಾತುಕತೆ ಸರಾಗವಾಗಿ ನಡೆಯುತ್ತದೆ.
6. ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ಗೌರವ ಇರುತ್ತದೆ
ಗೌರವ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ತುಂಬಾನೇ ಮುಖ್ಯವಾಗುತ್ತದೆ. ನಾನು ಹೇಗೆ ಬೇರೆಯವರಿಗೆ ಗೌರವ ಕೊಡುತ್ತೇವೆಯೋ ಇತರರಿಂದ ಕೂಡ ನಾವು ಅದನ್ನೇ ಬಯಸುತ್ತೇವೆ. ನಾವು ಅಪರಿಚಿತರೊಂದಿಗೆ ಡೇಟ್ ಗೆ ಹೋದ್ರೆ ಅವರು ಮುಂದೆ ಜೀವನದಲ್ಲಿ ನಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಅನ್ನೋದು ನಮಗೆ ಗೊತ್ತಿರೋದಿಲ್ಲ. ಅದುವೇ ನಮ್ಮ ಬೆಸ್ಟ್ ಫ್ರೆಂಡ್ ಆದ್ರೆ ಅವರು ನಮಗೆ ಎಷ್ಟು ಗೌರವ ನೀಡುತ್ತಾರೆ ಅನ್ನೋದು ಖಂಡಿತ ಗೊತ್ತಿರುತ್ತೆ.
7. ಇಬ್ಬರು ಒಟ್ಟಿಗೆ ಎಂಜಾಯ್ ಮಾಡಬಹುದು
ನಮ್ಮ ಹುಚ್ಚುತನವನ್ನು ಯಾರು ಸಹಿಸಿಕೊಳ್ಳುತ್ತಾರೆಯೋ ಅವರ ಜೊತೆಗಿದ್ರೆ ಜೀವನ ತುಂಬಾನೇ ಚೆನ್ನಾಗಿರುತ್ತೆ. ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಹುಚ್ಚುತನವನ್ನು ಇಷ್ಟು ದಿನ ಸಹಿಸಿಕೊಂಡಿಲ್ವಾ? ಮುಂದೆ ನೀವು ಮದುವೆಯಾದರೆ ಒಟ್ಟಿಗೆ ಖುಷಿಯ ಕ್ಷಣಗಳನ್ನು ಕಳೆಯಬಹುದು. ಅಡ್ವೆಂಚರ್ ಆಗಿ ಇರಬಹುದು, ಮೋಜು ಮಸ್ತಿ ಮಾಡಬಹುದು.
ಯಾರೋ ಅಪರಿಚಿತರಿಗೆ ಹೊಸತಾಗಿ ನಿಮ್ಮನ್ನು ಅರ್ಥ ಮಾಡಿಸಲು ಪ್ರಯತ್ನಿಸೋದಕ್ಕಿಂತ ನಿಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ನಿಮ್ಮ ಬಾಳು ಖಂಡಿತ ಚೆನ್ನಾಗಿರುತ್ತೆ.



Click it and Unblock the Notifications
