ಪತಿ ನಿಮ್ಮನ್ನು ಸರಿಯಾಗಿ ಮಾತನಾಡಿಸುತ್ತಿಲ್ವಾ? ಈ ಕಾರಣಗಳು ಇರಬಹುದು!

ಹೆಚ್ಚಿನ ಮನೆಗಳಲ್ಲಿ ಗಂಡಂದಿರು ತಮ್ಮ ಪತ್ನಿಯ ಬಳಿ ಮಾತನಾಡೋದೇ ಇಲ್ಲ. ಹೆಂಡತಿಯ ಸಹಾಯ ಪಡೆಯೋದಾಗಲಿ ಅಥವಾ ಹೆಂಡತಿಯೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳೋದಕ್ಕೆ ಅವರು ಹೋಗೋದಿಲ್ಲ. ಖುಷಿಯ ವಿಷಯವಾಗಲಿ, ದುಃಖದ ವಿಷಯವಾಗಲಿ ಅದನ್ನು ತಮ್ಮೊಳಗೆ ಇಟ್ಟುಕೊಳ್ಳುತ್ತಾರೆ ಹೊರತು ಪತ್ನಿಗೆ ಯಾವುದೇ ಕಾರಣಕ್ಕೂ ಆ ವಿಚಾರ ಗೊತ್ತಾಗೋದಿಲ್ಲ.

ಅವರ ಜೊತೆಗೆ ಹಂಚಿಕೊಳ್ಳೋದು ಇಲ್ಲ. ಅಷ್ಟಕ್ಕು ಗಂಡಂದಿರು ಯಾಕೆ ಪತ್ನಿಯ ಬಳಿ ಏನನ್ನೂ ಹೇಳಿಕೋಳ್ಳೋದಿಲ್ಲ. ಜೊತೆಗೆ ಹೆಚ್ಚಿನ ಸಂದರ್ಭದಲ್ಲಿ ಮಾತನಾಡೋದಕ್ಕೆ ಇಷ್ಟ ಪಡೋದಿಲ್ಲ ಅನ್ನೋದನ್ನು ತಿಳಿಯೋಣ.

Reason Why Your Husband Wont Talk to you in Kannada

1. ಗಂಡ ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡಿರಬಹುದು

ಗಂಡ ನಿಮ್ಮ ಮೇಲೆ ಮುನಿಸಿಕೊಂಡಿದ್ದಾಗಲೂ ಕೂಡ ನಿಮ್ಮ ಜೊತೆಗೆ ಅವರು ಮಾತನಾಡೋದಕ್ಕೆ ಇಷ್ಟ ಪಡೋದಿಲ್ಲ. ನೀವು ಏನಾದರೂ ತಪ್ಪು ಮಾಡಿರಬಹುದು. ಅದು ಅವರಿಗೆ ಇಷ್ಟ ಆಗದಿದ್ದಾಗ ಅವರು ನಿಮ್ಮ ಜೊತೆ ಮಾತನಾಡೋದನ್ನು ಬಿಟ್ಟು ಬಿಡುತ್ತಾರೆ. ಅವರನ್ನು ಸರಿಯಾಗಿ ಗಮನಿಸಿ ನೋಡಿ, ಪರಿಸ್ಥಿತಿ ಹೀಗಿದ್ದಾಗ ಅವರು ನಿಮ್ಮ ಜೊತೆ ಮಾತನಾಡೋದಿರಲಿ, ನಿಮ್ಮ ಪಕ್ಕ ಕೂರೋದು ಇಲ್ಲ.

2. ನೀವು ಅವರ ಕಡೆಗೆ ಹೆಚ್ಚು ಗಮನ ಕೊಡಲಿ ಎಂದು ಬಯಸುತ್ತಾರೆ

ಹೆಚ್ಚಿನ ಸಮಯದಲ್ಲಿ ಪತ್ನಿಯರು ಅವರವರ ಕೆಲಸದಲ್ಲಿ ಬ್ಯುಸಿಯಾಗಿ ಹೋಗುತ್ತಾರೆ. ಇನ್ನೂ ಕೆಲಸ ಎಲ್ಲಾ ಮುಗಿದು ಫ್ರೀ ಇರೋ ಸಮಯದಲ್ಲಿ ಫೋನ್ ಹಿಡ್ಕೊಂಡು ಕೂರುತ್ತಾರೆ. ಇಲ್ಲದಿದ್ದರೆ ಅಕ್ಕ-ಪಕ್ಕದ ಹೆಂಗಸರಲ್ಲಿ ಮಾತನಾಡುತ್ತಿರುತ್ತಾರೆ.

ಇಂತಹ ಸಂದರ್ಭದಲ್ಲಿ ಪತಿಗೆ ಒಂಟಿಯಾದಂತಹ ಅನುಭವವಾಗುತ್ತದೆ. ಹೀಗಾಗಿ ಪತಿ ನಿಮ್ಮ ಗಮನ ಅವನೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಾನೆ. ನಿಮ್ಮಲ್ಲಿ ಮಾತನಾಡುವುದನ್ನು ನಿಲ್ಲಿಸುತ್ತಾನೆ. ಆಗ ನೀವಾಗಿಯೇ ಅವನ ಬಗ್ಗೆ ಚಿಂತಿಸೋದಕ್ಕೆ ಶುರು ಮಾಡುತ್ತೀರಿ. ಅವರ ಮೇಲೆ ಬಿದ್ದು ಮಾತನಾಡುತ್ತೀರಿ.

3. ನಿಮ್ಮ ಪತಿಗೆ ವಾದಿಸೋದು ಇಷ್ಟ ಇರೋದಿಲ್ಲ

ಪ್ರತಿ ಸಾರಿ ಏನಾದರೂ ವಿಚಾರ ಬಂದಾಗಲೂ ನೀವಿಬ್ಬರು ಆ ವಿಚಾರದಲ್ಲಿ ವಾದಿಸೋದಕ್ಕೆ ಶುರು ಮಾಡುತ್ತೀರಿ. ಅದ್ರಲ್ಲೂ ಹೆಂಡತಿ ಇದೇ ವಿಚಾರವನ್ನು ಇಟ್ಟುಕೊಂಡು ಪದೇ ಪದೇ ಖ್ಯಾತೆ ತೆಗೆಯುತ್ತಿದ್ದರೆ ಗಂಡನಿಗೆ ಕಿರಿಕಿರಿ ಅನ್ನಿಸುತ್ತದೆ. ಹೀಗಾಗಿ ಅವನು ನಿಮ್ಮಲ್ಲಿ ಮಾತನಾಡುವುದನ್ನೇ ಕಡಿಮೆ ಮಾಡುತ್ತಾನೆ. ನಿಮ್ಮೊಂದಿಗೆ ಮಾತನಾಡದಿದ್ದರೆ ಮನಃಶಾಂತಿ ಸಿಗುತ್ತೆ ಅಂತ ನಿಮ್ಮ ಪತಿಗೆ ಅನಿಸಿರಬಹುದು.

4. ನಿಮ್ಮ ಪತಿಯನ್ನು ನೀವು ಪ್ರಶಂಸಿಸದಿದ್ದಾಗ

ಪ್ರತಿಯೊಬ್ಬ ವ್ಯಕ್ತಿಯೂ ಪ್ರಶಂಸೆಯನ್ನು ತುಂಬಾನೇ ಇಷ್ಟ ಪಡುತ್ತಾರೆ. ಅದೇ ರೀತಿ ನಿಮ್ಮ ಪತಿಯೂ ಕೂಡ ನೀವು ಅವರನ್ನು ಪ್ರಶಂಸಿಸಲಿ ಎಂದು ಬಯಸಿಬಹುದು. ಆದರೆ ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಮ್ಮದೇ ಲೋಕದಲ್ಲಿ ಇದ್ದರೆ ಅವರು ಬೇಸರಗೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿದರೂ ನನ್ನ ಪತ್ನಿಯೇ ನನ್ನನ್ನು ಪ್ರಶಂಸಿಸುತ್ತಿಲ್ಲವಲ್ಲ ಅನ್ನೋ ನೋವು ಅವರನ್ನು ಕಾಡಬಹುದು. ಅದೇ ಸಿಟ್ಟಿನಲ್ಲಿ ಅವರು ನಿಮ್ಮನ್ನು ಮಾತನಾಡಿಸಲು ಇಷ್ಟ ಪಡದಿರಬಹುದು.

5. ಸಮಸ್ಯೆಗಳನ್ನು ಹೇಳಿಕೊಂಡರೆ ಪತ್ನಿ ಏನು ಅಂದುಕೊಳ್ಳುತ್ತಾಳೆ ಎಂಬ ಭಯ

ಮದುವೆಯಾದ ಆರಂಭದಲ್ಲಿ ಹೆಂಡತಿ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳೋದಕ್ಕೆ ಗಂಡಂದಿರು ಭಯ ಪಡುತ್ತಾರೆ. ಯಾಕೆಂದರೆ ತನ್ನ ಸಮಸ್ಯೆಗಳ ಬಗ್ಗೆ ಹೆಂಡತಿಗೆ ಹೇಳಿದರೆ ಆಕೆ ಏನು ಅಂದುಕೊಳ್ಳುತ್ತಾಳೋ? ಅಥವಾ ಸಮಸ್ಯೆಗಳಿಗೆ ಹೆದರಿ ಆಕೆ ನನ್ನನ್ನು ಏಕಾಏಕಿ ಬಿಟ್ಟು ಹೋಗುತ್ತಾಳೋ ಅನ್ನೋ ಭಯ ಕಾಡುತ್ತದೆ. ಇದೇ ಭಯದಲ್ಲಿ ಅವರು ಹೆಂಡತಿಯ ಬಳಿ ಏನನ್ನೂ ಹೇಳಿಕೊಳ್ಳೋದಿಲ್ಲ. ಜೊತೆಗೆ ಹೆಂಡತಿಯ ಜೊತೆಗೆ ಹೆಚ್ಚು ಮಾತನಾಡೋದು ಇಲ್ಲ.

6. ಪತಿ ಈಗಲೇ ಮಕ್ಕಳನ್ನು ಪಡೆಯೋದಕ್ಕೆ ಸಿದ್ಧವಿರೋದಿಲ್ಲ

ಮಕ್ಕಳನ್ನು ಪಡೆಯೋದು ಒಬ್ಬರ ನಿರ್ಧಾರ ಮಾತ್ರ ಆಗಿರೋದಿಲ್ಲ. ಪತಿ-ಪತ್ನಿ ಇಬ್ಬರೂ ಒಟ್ಟಾಗಿ ಈ ನಿರ್ಧಾರವನ್ನು ಮಾಡಬೇಕು. ಆದರೆ ನಿಮ್ಮ ಪತಿ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಜೊತೆಗೆ ಮಕ್ಕಳ ವಿಚಾರವನ್ನು ಅವರು ಮಾತನಾಡೋದಕ್ಕೂ ಇಷ್ಟ ಪಡೋದಿಲ್ಲ. ಬಹುಶಃ ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಇರಬಹುದು. ಇದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳೋದಕ್ಕೆ ಆಗದೇ ಒತ್ತಡಕ್ಕೆ ಒಳಗಾಗಿರಬಹುದು.

7. ಬೇರೊಬ್ಬರ ಜೊತೆಗೆ ಸಂಬಂಧದಲ್ಲಿ ಇರಬಹುದು

ಗಂಡನು ಪತ್ನಿಯ ಮೇಲೆ ಆಸಕ್ತಿಯನ್ನು ಕಳೆದುಕೊಂಡು ಆಕೆಯ ಜೊತೆಗೆ ಮಾತು ಬಿಡೋದಕ್ಕೆ ಅನೇಕ ಕಾರಣಗಳು ಇರಬಹುದು. ಅದ್ರಲ್ಲಿ ಮುಖ್ಯವಾಗಿ ಗಂಡನಿಗೆ ಅನ್ಯ ಮಹಿಳೆಯ ಜೊತೆಗೆ ಸಂಬಂಧವಿರಬಹುದು. ಹೀಗಾದಾಗ ಖಂಡಿತ ಅವರು ಪತ್ನಿಯ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ನಿಮ್ಮ ಗಂಡನಿಗೆ ಬೇರೆಯವರ ಮೇಲೆ ಮನಸ್ಸಾದಾಗಲೂ ನಿಮ್ಮ ಜೊತೆ ಮಾತನಾಡೋದಕ್ಕೆ ಇಷ್ಟ ಪಡದೇ ಇರಬಹುದು.

ನಿಮ್ಮ ಪತಿ ನಿಮ್ಮ ಜೊತೆಗೆ ಚೆನ್ನಾಗಿ ಮಾತನಾಡುತ್ತಿಲ್ಲ ಎಂದಾಗ ಅದಕ್ಕೆ ಅನೇಕ ಕಾರಣಗಳು ಇರಬಹುದು. ಹಾಗಂತ ನೀವು ಏಕಾಏಕಿ ನಿರ್ಧಾರಕ್ಕೆ ಬರೋದು ಒಳ್ಳೆಯದಲ್ಲ. ಗಂಡನ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

English summary

Reason Why Your Husband Won't Talk to you in Kannada

These are the Reason Why Your Husband Won't Talk to you.
Story first published: Wednesday, June 7, 2023, 10:50 [IST]
X
Desktop Bottom Promotion