Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಹೆಂಡತಿ ಮಾಡುವ ಈ ತಪ್ಪುಗಳಿಂದಾಗಿ ಗಂಡನು ಹೆಂಡತಿಯ ಮೇಲೆ ಗೌರವ ಕಳೆದುಕೊಳ್ಳುತ್ತಾನೆ!
ಒಂದು ಸಂಬಂಧದಲ್ಲಿ ಗೌರವ ಕೊಡೋದು ಹಾಗೂ ತೆಗೆದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಹೆಂಡತಿಯು ಗಂಡನಿಗೆ ಗೌರವ ಕೊಟ್ಟಾಗ ತನ್ನ ಗಂಡನಿಂದಲೂ ಆಕೆ ಅದನ್ನೇ ಬಯಸುತ್ತಾಳೆ. ಆಗ ಮಾತ್ರ ಸಂಸಾರ ಚೆನ್ನಾಗಿರೋದಕ್ಕೆ ಸಾಧ್ಯ. ಆದರೆ ಕೆಲವೊಂದು ಕಾರಣಗಳಿಂದ ಗಂಡನು ತನ್ನ ಹೆಂಡತಿಯ ಮೇಲೆ ಗೌರವ ಕಳೆದುಕೊಳ್ಳುತ್ತಾನೆ. ಅಷ್ಟಕ್ಕು ಗಂಡನು ಹೆಂಡತಿಯ ಮೇಲೆ ಗೌರವ ಕಳೆದುಕೊಳ್ಳೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
1. ಅತ್ತೆಯನ್ನು ಕೆಟ್ಟದಾಗಿ ನಡೆಸಿಕೊಂಡಾಗ
ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲೆ ಅಪಾರವಾದ ಪ್ರೀತಿ ಕಾಳಜಿ ಇದ್ದೇ ಇರುತ್ತದೆ. ಹೆಂಡತಿಯಾಗಿ ಬಂದವಳು ಕೂಡ ತನ್ನ ತಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಆತ ಬಯಸುತ್ತಾಳೆ. ಆದರೆ ಹೆಂಡತಿಯು ತನ್ನ ಅಮ್ಮನ ಬಳಿ ನಿಷ್ಠುರವಾಗಿ ನಡೆದುಕೊಂಡಿದ್ದರೆ ಖಂಡಿತ ಅವನಿಗೆ ಇಷ್ಟ ಆಗೋದಿಲ್ಲ. ಹೇಳುವಷ್ಟು ತನ್ನ ಹೆಂಡತಿಗೆ ಬುದ್ಧಿ ಹೇಳುತ್ತಾನೆ. ಕೊನೆಗೆ ತನ್ನ ಹೆಂಡತಿಯ ಮೇಲೆ ಆತನಿಗೆ ಗೌರವವೇ ಹೋಗಿ ಬಿಡುತ್ತದೆ.

2. ತನ್ನ ಗಂಡನನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿದಾಗ
ಮನುಷ್ಯನ ಆಸೆಗೆ ಮಿತಿ ಅನ್ನೋದೇ ಇರೋದಿಲ್ಲ. ಪ್ರತಿ ಬಾರಿಯೂ ಒಂದಲ್ಲ ಒಂದು ವಿಚಾರಕ್ಕೆ ಆತ ಹಂಬಲಿಸುತ್ತಾ ಇರುತ್ತಾನೆ. ಅದೇ ರೀತಿ ಪತ್ನಿಯರ ಆಸೆಗಳ ಪಟ್ಟಿ ಮುಗಿಯಿತು ಅಂತಿಲ್ಲ. ಪ್ರತಿ ಸಾರಿ ಗಂಡನನ್ನು ಒಂದಲ್ಲ ಒಂದು ವಿಚಾರಕ್ಕೆ ಪೀಡಿಸುತ್ತಾ ಇರುತ್ತಾಳೆ.
ಯಾವಾಗ ಗಂಡ ಆಸೆಗಳನ್ನು ಪೂರೈಸೋದಿಲ್ಲವೋ ಆಗ ಬೇರೆಯವರ ಗಂಡನ ಜೊತೆಗೆ ಆಕೆಯ ಗಂಡನನ್ನು ಹೋಲಿಕೆ ಮಾಡಿ ಮಾತನಾಡುತ್ತಾಳೆ. ಹೆಂಡತಿ ಇದೇ ರೀತಿ ಮಡುತ್ತಿದ್ದರೆ ಖಂಡಿತ ಗಂಡನಿಗೆ ಇಷ್ಟ ಆಗೋದಿಲ್ಲ. ಆತನಿಗೆ ಮನಃಶಾಂತಿ ಇಲ್ಲದಂತಾಗುತ್ತದೆ. ಆತ ಹೆಂಡತಿಗೆ ಗೌರವ ಕೊಡೋದನ್ನು ಬಿಟ್ಟು ಬಿಡುತ್ತಾನೆ.
3. ಪತ್ನಿಯಲ್ಲಿ ಆಕ್ರಮಣಶೀಲ ಗುಣ ಇದ್ದಾಗ
ಯಾವುದೇ ಸಮಸ್ಯೆಯಾಗಲಿ ಅದು ತಾಳ್ಮೆಯಿಂದ ಮಾತನಾಡಿದರೆ ಮಾತ್ರ ಸರಿಯಾಗೋದಕ್ಕೆ ಸಾಧ್ಯ. ಆದರೆ ಪತ್ನಿಯು ಪ್ರತಿ ಸಾರಿ ಚಿಕ್ಕ-ಪುಟ್ಟ ವಿಷಯಕ್ಕೆ ಗಂಡನ ಮೇಲೆ ಎಗರಾಡುತ್ತಾಳೆ. ಮೆತ್ತಗೆ ಮಾತನಾಡಿ ಗೊತ್ತೇ ಇಲ್ಲ ಎನ್ನುವಂತೆ ಆಡುತ್ತಾಳೆ. ಏನೇ ತಪ್ಪಾದರೂ ಅದನ್ನು ಗಂಡನ ಮೇಲೆ ಹಾಕುತ್ತಾ ಕಿರುಚಾಡುತ್ತಾಳೆ. ಪತ್ನಿಯ ಗುಣ ಈ ರೀತಿ ಇದ್ದರೆ ಖಂಡಿತ ಗಂಡನಿಗೆ ಇಷ್ಟ ಆಗೋದಿಲ್ಲ. ಹಾಗೂ ಆಕೆಯ ಮೇಲಿದ್ದ ಗೌರವ ಕಳೆದುಕೊಳ್ಳುತ್ತಾನೆ.
4. ಆಕೆಗೆ ದಾಂಪತ್ಯದಲ್ಲಿ ಆಸಕ್ತಿ ಇಲ್ಲದಿದ್ದಾಗ
ಎಷ್ಟೋ ವರ್ಷಗಳ ಬಳಿ ಗಂಡ-ಹೆಂಡತಿ ಒಟ್ಟಿಗೆ ಖುಷಿಯಾಗಿ ಜೀವನ ನಡೆಸಿದ ಮೇಲೆಯೂ ಕೆಲವೊಂದು ಸಾರಿ ಹೆಂಡತಿ ಆ ಸಂಬಂಧದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾಳೆ. ಗಂಡನ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡು ಬಿಡುತ್ತಾಳೆ.
ಗಂಡ ಸಂಬಂಧವನ್ನು ಸರಿ ಪಡಿಸೋದಕ್ಕೆ ಪ್ರಯತ್ನಿಸಿದರೂ ಕೂಡ ಹೆಂಡತಿ ಈ ಬಗ್ಗೆ ಸ್ಪಂದನೆ ನೀಡೋದಿಲ್ಲ. ಸಂಬಂಧ ಮುರಿದು ಬೀಳಲಿ ಎಂದು ಕಾಯುತ್ತಿರುತ್ತಾಳೆ. ಇಂತಹ ಸಂದರ್ಭದಲ್ಲಿ ಗಂಡನು ಹೆಂಡತಿಯ ಮೇಲೆ ಗೌರವ ಕಳೆದುಕೊಳ್ಳುತ್ತಾನೆ.
5. ಆಕೆಗೆ ಅನೈತಿಕ ಸಂಬಂಧ ಇದ್ದಾಗ
ಮದುವೆಯಾದ ಮೇಲೂ ಹೆಚ್ಚಿನ ಮಹಿಳೆಯರು ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಗಂಡ ಇದ್ದರೂ ಕೂಡ ಪರ ಪುರುಷನತ್ತ ಆಕರ್ಷಿತರಾಗುತ್ತಾರೆ. ಇಷ್ಟು ದಿನ ಗಂಡನಿಗೆ ಗೊತ್ತಾಗದ ಹಾಗೆ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದ ಪತ್ನಿಯ ನಿಜ ಬಣ್ಣ ಗಂಡನಿಗೆ ಗೊತ್ತಾದಾಗ ಆತ ಆಕೆಯ ಮೇಲೆ ಅಸಹ್ಯ ಪಟ್ಟುಕೊಳ್ಳುತ್ತಾನೆ. ಆಕೆಯ ಮೇಲಿದ್ದ ಇಟ್ಟದ್ದ ಗೌರವವನ್ನು ಕಳೆದುಕೊಂಡು ಬಿಡುತ್ತಾನೆ.
6. ಹೆಂಡತಿಯು ಗಂಡನಿಗಿಂತ ಹೆಚ್ಚು ದುಡಿಯುತ್ತಿದ್ದಾಗ
ಕೆಲವೊಂದು ಮನೆಗಳಲ್ಲಿ ಗಂಡನಿಗಿಂತ ಹೆಂಡತಿಯ ಸಂಪಾದನೆ ಹೆಚ್ಚಾಗಿರುತ್ತದೆ. ಅಂತಹ ಮನೆಗಳಲ್ಲಿ ಹೆಂಡತಿಗೆ ಗಂಡನ ಮೇಲೆ ಒಂದು ರೀತಿಯ ತಾತ್ಸಾರ ಇರುತ್ತದೆ. ತಾನು ಹೆಚ್ಚು ದುಡಿಯುತ್ತಿದ್ದೇನೆ ಎನ್ನುವ ದರ್ಪವನ್ನು ಆಕೆ ತೋರುತ್ತಾಳೆ. ಗಂಡನನ್ನು ಕೀಳಾಗಿ ನಡೆಸಿಕೊಳ್ಳುತ್ತಾಳೆ. ದುಡ್ಡಿನ ಅಹಂಕಾರ ತೋರುತ್ತಾ ಗಂಡನಿಗೆ ಮರ್ಯಾದಿಯೇ ನೀಡೋದಿಲ್ಲ. ಹೆಂಡತಿಯ ಈ ನಡವಳಿಕೆಯಿಂದ ಗಂಡ ಬೇಸತ್ತು ಹೋಗುತ್ತಾನೆ. ಇಂತಹ ಸಂದರ್ಭದಲ್ಲಿ ಹೆಂಡತಿಯ ಮೇಲಿನ ಗೌರವ ಕಳೆದುಕೊಳ್ಳುವ ಸಾಧ್ಯತೆಯಿದೆ.
7. ಹೆಂಡತಿಯು ತನ್ನ ಕುಟುಂಬಕ್ಕೆ ಪ್ರಾಮುಖ್ಯತೆ ನೀಡದಿದ್ದಾಗ
ಒರ್ವ ಮಹಿಳೆಯಾದವಳಿಗೆ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುವ ಕಲೆ ಗೊತ್ತಿರಬೇಕು. ಅದೇ ರೀತಿ ಕುಟುಂಬವನ್ನು ನಿಭಾಯಿಸುವುದು ಆಕೆಯ ಕರ್ತವ್ಯವೂ ಕೂಡ. ಮಹಿಳೆಗೆ ಯಾವಾಗಲೂ ಗಂಡ ಹಾಗೂ ಮಕ್ಕಳೇ ಮೊದಲ ಪ್ರಾಮುಖ್ಯತೆ ಆಗಿರಬೇಕು. ಅದನ್ನು ಬಿಟ್ಟು ಆಕೆ ಬೇರೆ ವಿಚಾರಗಳ ಕಡೆಗೆ ಗಮನ ಹೆಚ್ಚು ಕೊಟ್ಟು ಕುಟುಂಬವನ್ನು ಕಡೆಗಣಿಸಿದಾಗ ಗಂಡನಿಗೆ ಖಂಡಿತ ಇಷ್ಟ ಆಗೋದಿಲ್ಲ.
ದಾಂಪತ್ಯ ಎನ್ನುವುದು ತುಂಬಾನೇ ಸೂಕ್ಷ್ಮ ವಿಚಾರ. ಈ ಪವಿತ್ರ ದಾಂಪತ್ಯದಲ್ಲಿ ಎಂತಹ ಸಮಸ್ಯೆಗಳು ಎದುರಾದರೂ ಕೂಡ ಅದನ್ನು ಸರಿ ಪಡಿಸೋದು ಹೇಗೆ ಎನ್ನುವುದು ದಂಪತಿಗಳಿಬ್ಬರಿಗೆ ಗೊತ್ತಿರಬೇಕು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದೇ ದಾಂಪತ್ಯ.



Click it and Unblock the Notifications
