Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ ರವಿಚಂದ್ರನ್ ಅಶ್ವಿನ್ ಲವ್‌ಸ್ಟೋರಿ
14 ವರ್ಷದ ಕ್ರಿಕೆಟ್ ವೃತ್ತಿಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿರುವವರು ರವಿಚಂದ್ರನ್ ಅಶ್ವಿನ್. ಅವರ ವೃತ್ತಿ ಬದುಕಿನಂತೆ ವೈಯಕ್ತಿಕ ಬದುಕು ಕೂಡ ತುಂಬಾನೇ ಸುಂದರವಾಗಿದೆ. ಪತ್ನಿ, ಇಬ್ಬರು ಮಕ್ಕಳ ಸುಂದರ ಕುಟುಂಬ. ಇವರ ಬದುಕಿನಲ್ಲಿಯೂ ಸಿನಿಮಾ ಕತೆಯಂಥ ಅದ್ಭುತ ಲವ್‌ಸ್ಟೋರಿ ಇದೆ.

ಬಾಲ್ಯದಲ್ಲಿ ಮೂಡಿದ ಆಕರ್ಷಣೆ
ರವಿಚಂದ್ರನ್ ಅಶ್ವಿನ್ ಹಾಗೂ ಪ್ರೀತಿ ಇಬ್ಬರು ಒಂದೇ ಶಾಲೆಯಲ್ಲಿ ಓದಿದವರು, ಆವಾಗಲೇ ಪ್ರೀತಿಯನ್ನು ಕಂಡಾಗ ರವಿಚಂದ್ರನ್ ಅಶ್ವಿನ್ ಅವರಿಗೆ ಏನೋ ಒಂದು ಸೆಳೆತ. ಇವರ ಪ್ರೀತಿ ಬಗ್ಗೆ ಇಡೀ ಸ್ಕೂಲ್‌ಗೆ ಗೊತ್ತಿತ್ತಂತೆ, ಆದರೆ ಕ್ರಿಕೆಟ್ ಅಭ್ಯಾಸಕ್ಕಾಗಿ ರವಿಚಂದ್ರನ್ ಹೋದಾಗ ಎಲ್ಲರೂ ಇವರಿಬ್ಬರ ನಂಟು ಇಲ್ಲಿಗೆ ಮುಗೀತು ಅಂದುಕೊಂಡಿದ್ದರು, ಆದರೆ ಪ್ರೀತಿ ಹಾಗೂ ರವಿಚಂದ್ರನ್ ಆಗಾಗ ಫ್ರೆಂಡ್ಸ್ ಬರ್ತ್‌ಡೇ, ಕೆಲವೊಂದು ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಬೆಳೆಯುತ್ತಿದ್ದಂತೆ ಇಬ್ಬರ ನಡುವೆ ಯಾವ ಸಂಪರ್ಕವೂ ಇರಲಿಲ್ಲ. ರವಿಚಂದ್ರನ್ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳಲಾರಂಭಿಸಿದರು, ಪ್ರೀತಿ ಈವೆಂಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಹೀಗೆ ಒಂದು ಕಾರ್ಯಕ್ರಮದಲ್ಲಿ ಇಬ್ಬರು ಮತ್ತೆ ಭೇಟಿಯಾಗುತ್ತಾರೆ. ಇಬ್ಬರ ನಡುವೆ ಪ್ರೀತಿ ಅಂಕುರವಾಗುತ್ತೆ.
ನೇರವಾಗಿಯೇ ಪ್ರೀತಿ ವ್ಯಕ್ತ ಪಡಿಸಿದ್ದರು ಅಶ್ವಿನ್
ಪ್ರೀತಿ ಅವರು ಒಂದು ಸಂದರ್ಶನದಲ್ಲಿ ತಮ್ಮಿಬ್ಬರ ಪ್ರೀತಿ ಬಗ್ಗೆ ಹೇಳುವಾಗ ಹೀಗೆ ಹೇಳುತ್ತಾರೆ ' ಅವರು ನನ್ನನ್ನು ಗ್ರೌಂಡ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೇರವಾಗಿಯೇ ನನಗೆ ಪ್ರಪೋಸ್ ಮಾಡುತ್ತಾರೆ, ಅಶ್ವಿನ್ "ನಾನು ನಿನ್ನನ್ನು ತುಂಬಾನೇ ಇಷ್ಟಪಡುತ್ತಿದ್ದೇನೆ, ನಿನ್ನ ಮೇಲಿನ ಇಷ್ಟ ಈ 10 ವರ್ಷಗಳಲ್ಲಿ ಬದಲಾಗಲೇ ಇಲ್ಲ, ಈಗ ನಾವಿಬ್ಬರೂ ನಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪ್ರಾಯದಲ್ಲಿದ್ದೇವೆ, ಎಂದು ಪ್ರಪೋಸ್ ಮಾಡುತ್ತಾರೆ.
ಇವರ ಮದುವೆಗೆ ಮನೆಯವರು ಕೂಡ ಒಪ್ಪುತ್ತಾರೆ, 2011ರಲ್ಲಿ ತಮಿಳು ಸಂಪ್ರದಾಯದಂತೆ ಅದ್ಧೂರಿ ಮದುವೆಯಾಗುತ್ತಾರೆ, ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೂ ಅಶ್ವಿನ್ ಕುಟುಂಬಕ್ಕೂ ಸಮಯ ನೀಡುತ್ತಾರೆ.
ಅಶ್ವಿನ್ ಹಾಗೂ ಪ್ರೀತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಕ್ರಿಕೆಟ್‌ನಲ್ಲಿ ಎಷ್ಟೇ ಬ್ಯುಸಿಯಿದ್ದರೂ ಅಶ್ವಿನ್ ಕುಟುಂಬಕ್ಕೆ, ಮಕ್ಕಳಿಗೆ ಸಮಯ ಕೊಡುತ್ತಾರೆ, ಪ್ರೀತಿಯವರು ಗಂಡನಿಗೆ ಸದಾ ಸಪೋರ್ಟಿವ್ ಆಗಿರುತ್ತಾರೆ. ತಮ್ಮ ಸಂಸಾರದ ಬಗ್ಗೆ ಹೇಳುತ್ತಾ ಎಲ್ಲಾ ಸಂಸಾರದಲ್ಲಿ ಜಗಳವಾಡುವಂತೆ ನಾವಿಬ್ಬರು ಕೂಡ ಕೆಲವೊಮ್ಮೆ ಜಗಳವಾಡುತ್ತೇವೆ, ಆದರೆ ಜಗಳವಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಆ ಜಗಳ ಮರೆತು ಮತ್ತೆ ಖುಷಿಯಿಂದ ಇರುತ್ತೇವೆ ಎಂದು ಹೇಳುತ್ತಾರೆ. ಸುಂದರ ಕುಟುಂಬದ ರಹಸ್ಯ ಕೂಡ ಇದೇ ತಾನೆ. ಜಗಳವಾಡದ ದಂಪತಿ ಇರಲ್ಲ, ಆದರೆ ಅದನ್ನು ಅಲ್ಲಿಗೆ ಮರೆತು ಮತ್ತೆ ಚೆನ್ನಾಗಿರಬೇಕು, ಆ ರೀತಿಯಿದ್ದರೆ ಮಾತ್ರ ಬದುಕು ತುಂಬಾ ಚೆನ್ನಾಗಿರುತ್ತದೆ.
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಿರುವ ಸೆಲೆಬ್ರಿಟಿ ಜೋಡಿ
ಸಾಕಷ್ಟು ಸೆಲೆಬ್ರಿಟಿ ಜೋಡಿ ನೋಡುವಾಗ ಮದುವೆ ಜೀವನ ಅಷ್ಟು ಗಂಭೀರವಾಗಿ ತೆಗೆದುಕೊಂಡಂತೆ ಕಾಣಲ್ಲ,ಆದರೆ ಈ ಜೋಡಿ ಎಲ್ಲರಿಗೆ ಮಾದರಿಯೆಂಬಂತೆ ಬದುಕುತ್ತಿದ್ದಾರೆ. ಅಶ್ವಿನ್ ಕೂಡ ಎಲ್ಲಿಯೂ ಗಾಸಿಪ್ ವಿಷಯದಲ್ಲಿ ಸಿಲುಕಿಕೊಂಡಿಲ್ಲ, ಇವರ ಬಗ್ಗೆ ಯಾವುದೇ ವಿವಾದಗಳಿಲ್ಲ. ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ತುಂಬಾ ಅದ್ಭುತವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.



Click it and Unblock the Notifications
