Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೊದಲ ಬಾರಿಗೆ ತನ್ನ ಪಾರ್ಟನರ್ ಬಗ್ಗೆ ಹೇಳಿದ ರಶ್ಮಿಕಾ, ಆತನಲ್ಲಿ ಆಕರ್ಷಿಸಿದ್ದು ಈ ಗುಣವಂತೆ
ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನವರೆಗೆ ತುಂಬಾ ಸಕ್ಸಸ್‌ಫುಲ್ ಸಿನಿ ಪಯಣ ಕಾಣುತ್ತಿರುವ ವ್ಯಕ್ತಿ. ರಶ್ಮಿಕಾ ಕರ್ನಾಟಕದ ಮಗಳ, ಆದರೂ ಕನ್ನಡಿಗರಲ್ಲಿ ರಶ್ಮಿಕಾರನ್ನು ಇಷ್ಟಪಡುವವರಿಗಿಂತ ಅವರನ್ನು ಟೀಕೆ ಮಾಡುವವರ ಸಂಖ್ಯೆ ಹೆಚ್ಚಿದೆ, ಅದಕ್ಕೆ ಕಾರಣವಾಗಿದ್ದು ರಶ್ಮಿಕಾರ ವರ್ತನೆ ಮತ್ತು ಮಾತು.
ಕನ್ನಡದಿಂದ ಪರಭಾಷೆಗೆ ಹೋದ ಬಳಿಕ ಕನ್ನಡದ ನೆಲದ ಪರಿಚಯವೇ ಇಲ್ಲದಂತೆ ಹಲವು ಸಂದರ್ಭದಲ್ಲಿ ವರ್ತಿಸಿದ್ದರು ರಶ್ಮಿಕಾ ಮಂದಣ್ಣ, ಕನ್ನಡ ಮಾತನಾಡಲು ಬರದವರಂತೆ, ಟಾಲಿವುಡ್, ಬಾಲಿವುಡ್ ಹೋದ ಮೇಲೆ ತನ್ನ ಬೆಳೆಸಿದ ಕನ್ನಡ ಇಂಡಸ್ಟ್ರಿ ಕಡೆಗೆ ತಿರುಗಿ ಕೂಡ ನೋಡದಿರುವುದು ಇವೆಲ್ಲಾ ಕನ್ನಡಿಗರಿಗೆ ರಶ್ಮಿಕಾ ಮೇಲೆ ಇರುವ ಕೋಪ. ಈಗ ಸ್ಯಾಂಡಲ್‌ವುಡ್ ಬಾಲಿವುಡ್ ಅಚ್ಚರಿಯಿಂದ ತಿರುಗಿ ನೋಡುವಂತೆ ಸಿನಿಮಾಗಳನ್ನು ತರುತ್ತಿದೆ, ಹೀಗಾಗಿ ಬಾಲಿವುಡ್‌ಗಿಂತ ಕಡಿಮೆಯಿಲ್ಲ ಎಂಬ ಮಟ್ಟದಲ್ಲಿ ಬೆಳೆದಿದೆ ಸ್ಯಾಂಡಲ್‌ವುಡ್, ಆದರೆ ರಶ್ಮಿಕಾ ಕನ್ನಡದ ಚಿತ್ರದ ಕಡೆಗೆ ಹೆಚ್ಚಾಗಿ ಆಸಕ್ತಿ ತೋರಿಸುತ್ತುಲ್ಲ, ಇವೆಲ್ಲಾ ರಶ್ಮಿಕಾರನ್ನು ಟೀಕಿಸಲು ಹಾಗೂ ಕಟು ವಿಮರ್ಶೆ ಮಾಡಲು ಒಂದು ಕಾರಣವಾದರೆ ಅವರ ಮುರಿದು ಹೋದ ನಿಶ್ಚಿತಾರ್ಥ ಕೂಡ ಒಂದು ಕಾರಣ.

ರಕ್ಷಿತ್ ಶೆಟ್ಟಿ ಜೊತೆಗೆ ಲಬ್-ಬ್ರೇಕಪ್
ವಯಸ್ಸಿನ ಅಂತರವಿದ್ದರೂ ರಕ್ಷಿತ್ ಶೆಟ್ಟಿಯನ್ನು ಪ್ರೀತಿಸಿ, ಮದುವೆ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ನಂತರ ಇವರಿಬ್ಬರ ನಡುವೆ ಏನಾಯ್ತು ಗೊತ್ತಿಲ್ಲ ಬ್ರೇಕಪ್ ಸುದ್ದಿ ಹೊರ ಬಂತು, ರಕ್ಷಿತ್ ಈ ಬಗ್ಗೆ ಏನೂ ಹೇಳದೆ ಮೌನವಾದರೆ ರಶ್ಮಿಕಾ - ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಗಾಸಿಪ್ ಹರಡಲಾರಂಭಿಸಿತು. ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಳ್ಳಲು ದೇವರಕೊಂಡ ಕಾರಣ ಎಂಬ ಗಾಸಿಪ್ ಕೂಡ ಹರಿದಾಡಿಟು, ಅವರಬ್ಬರು ಯಾವ ಕಾರಣಕ್ಕೆ ಬೇರೆಯಾದರು ಎಂಬುವುದು ಅವರಿಬ್ಬರಿಗಷ್ಟೇ ಗೊತ್ತು. ಅದಾದ ಬಳಿಕ ರಶ್ಮಿಕಾ ಮತ್ತೊಂದು ಪ್ರೀತಿ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ, ಆದರೆ ಈಗ ಮೊದಲ ಬಾರಿಗೆ ಪಾರ್ಟನರ್ ಬಗ್ಗೆ ಹೇಳಿದ್ದಾರೆ.
ನನಗೆ ಹ್ಯಾಪಿ ಪ್ಲೇಸ್ ಅಂದರೆ ಅದು ನ್ನ ಮನೆ,ಯಶಸ್ಸು ಇವತ್ತು ಬರುತ್ತೆ, ನಾಳೆ ಹೋಗುತ್ತೆ,ಈ ಖ್ಯಾತಿಯೆಲ್ಲಾ ಬದಿಗಿಟ್ಟು ನೋಡಿದರೆ ನಾನೊಬ್ಬಳು ಮಗಳು, ಅಕ್ಕ ಹಾಗೂ ಸಂಗಾತಿ, ನನ್ನ ಖಾಸಗಿ ಬದುಕನ್ನು ತುಂಬಾನೇ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ರಶ್ಮಿಕಾಳ ಹುಡುಗನಲ್ಲಿ ಇಷ್ಟವಾದ ಗುಣದ ಬಗ್ಗೆ ಕೇಳಿದಾಗ
ಕಣ್ಣುಗಳು ಮನಸ್ಸಿನ ಕಿಟಕಿ ಅಂತಾರೆ, ಮುಖದಲ್ಲಿ ನಗುವಿರುವ ವ್ಯಕ್ತಿ ಇಷ್ಟವಾಗುತ್ತಾರೆ, ಅಲ್ಲದೆ ಅವರು ಯಾರೇ ಯಾಗಿರಲಿ ತನ್ನ ಸುತ್ತಿರುವ ವ್ಯಕ್ತಿಗಳನ್ನ ಗೌರವಿಸುತ್ತಾರೆ ಎಂಬುವುದಾಗಿ ಹೇಳಿದ್ದಾರೆ.
ರಶ್ಮಿಕಾರ ಸಂಗಾತಿ ವಿಜಯ್ ದೇವರಕೊಂಡ?
ಇಬ್ಬರು ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಹೇಳಿಲ್ಲ, ಆದರೆ ಕೆಲವೊಂದು ಫೋಟೋಗಳು ಇವರಿಬ್ಬರು ರಿಲೇಷನ್‌ಶಿಪ್‌ನಲ್ಲಿ ಇರುವುದಕ್ಕೆ ಸಾಕ್ಷಿಗಳು ಎಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುತ್ತದೆ. ಇದೀಗ ರಶ್ಮಿಕಾ ಮಂದಣ್ಣ ಸಂಗಾತಿ ಬಗ್ಗೆ ಚಿಕ್ಕದಾಗಿ ಒಂದು ಕ್ಲೂ ಕೊಟ್ಟಿದ್ದಾರೆ.



Click it and Unblock the Notifications
