Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ರಕ್ಷಾ ಬಂಧನ 2024: ಸಿನಿಮಾ ಕತೆಯಂತಿದೆ ಈ ಅಣ್ಣ ತಂಗಿಯ ಕತೆ
ಈ ಅಣ್ಣ-ತಂಗಿಯ ಕತೆ ಥೇಟ್ ಸಿನಿಮಾ ಕತೆಯಂತಿದೆ
ಈ ಅಣ್ಣನಿಗೆ ತಂಗಿಯೇ ಎಲ್ಲಾ, ತಂಗಿಗೂ ಅಷ್ಟೇ ಅಣ್ಣನೇ ಪ್ರಪಂಚ. ಚಿಕ್ಕ ಪ್ರಾಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ, ನಂತರ ಬೆಳೆಯುವುದು ಅಜ್ಜಿಯ ಆಶ್ರಯದಲ್ಲಿ. ಮನೆಯಲ್ಲಿ ಕಡು ಬಡತನ, ಅಜ್ಜಿ ಕೂಲಿ ಮಾಡಿ ಬಂದ ಅಲ್ಪ ದುಡಿಮೆಯಿಂದಲೇ ಹೊಟ್ಟೆ ತುಂಬಬೇಕು. ಅಜ್ಜಿ, ಅಣ್ಣ-ತಂಗಿ ಇದೇ ಅವರ ಪುಟ್ಟ ಪ್ರಪಂಚ.

ಪುಟ್ಟ ಹುಡುಗನಾಗಿದ್ದಾಗಲೇ ಅಣ್ಣನಿಗೆ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವಳಿಗೆ ಬೇಕಾಗಿರುವುದನ್ನು ಕೊಡಿಸುವ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆ, ಹೀಗಾಗಿ ಪುಟ್ಟ ಹುಡುಗನಾಗಿದ್ದಾಲೇ ಶಾಲೆಗೆ ರಜೆ ಇದ್ದಾಗ ಕೂಲಿ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ಹಣದಲ್ಲಿ ತಂಗಿಗೆ ಏನಾದರು ಕೊಡಿಸಿ ಖುಷಿ ಪಡುತ್ತಿದ್ದ. ಡಿಗ್ರಿ ಓದು ಮುಗಿಯುವಷ್ಟರಲ್ಲಿ ಅಜ್ಜಿಯೂ ಇಲ್ಲ, ಅಣ್ಣ-ತಂಗಿಗೆ ಸ್ವಂತ ಸೂರಿಲ್ಲ, ಕಾಲೇಜು ಓದುತ್ತಿರುವ ತಂಗಿ, ಯಾರ ಸಹಾಯವು ಇಲ್ಲ, ಆದರೂ ತನ್ನ ತಂಗಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟೇ ಕೊಡುತ್ತೇನೆ, ಅವಳನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳುತ್ತೇನೆ ಎಂಬ ಅಣ್ಣನ ಹಠ. ಹೀಗಾಗಿ ತಂಗಿಗಾಗಿ ಏನಾದರೂ ಮಾಡಲೇಬೇಕೆಂಬ ಛಲದಲ್ಲಿ ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾನೆ.
ಈ ಸಮಯದಲ್ಲಿ ಸಿಕ್ಕ ಸಣ್ಣ-ಪುಟ್ಟ ಕೆಲಸ ಮಾಡುತ್ತಾ ತನ್ನ ಹಾಗೂ ತಂಗಿಯ ಹೊಟ್ಟೆ ತುಂಬುತ್ತಿದ್ದ, ಅಣ್ಣನ ಶ್ರಮಕ್ಕೆ ಸರ್ಕಾರಿ ನೌಕರಿ ಸಿಗುತ್ತೆ. ಅಷ್ಟೆಲ್ಲಾ ಕಷ್ಟಪಟ್ಟ ಬದುಕಿನಲ್ಲಿ ಹೊಸ ಭರವಸೆಗಳು ಮೂಡುತ್ತೆ, ಇನ್ನು ನಾನು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಾಗುತ್ತೆ. ದುಡಿದ ಹಣ ಕೂಡಿಟ್ಟು ಸ್ವಲ್ಪ ಜಾಗ ಖರೀದಿಸಿ, ಇರಲು ಒಂದು ಮನೆ ಮಾಡುತ್ತಾರೆ, ತಂಗಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾನೆ.
ನನ್ನ ತಂಗಿಯನ್ನು ಒಂದು ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂದುವುದು ಅಣ್ಣನ ಕನಸು, ನನ್ನ ಅಣ್ಣನಿಗೆ ಸಂಗಾತಿ ಬಂದ ಮೇಲಷ್ಟೇ ನಾನು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಅಣ್ಣ ಒಂಟಿಯಾಗುತ್ತಾನೆ ಎಂಬ ತಂಗಿಯ ಆತಂಕ, ಈ ಅಣ್ಣ-ತಂಗಿಯ ಬಾಂಧವ್ಯ ಹೀಗೆಯೇ ಗಟ್ಟಿಯಾಗಿ, ಸಂತೋಷವಾಗಿರಲಿ.
ಎಲ್ಲಾ ಸಹೋದರ-ಸಹೋದರಿ ಸಂಬಂಧ ಹೀಗೆ ಇರುತ್ತೆ ಅಲ್ವಾ?
ನಾವಿಬ್ಬರು ಜಗಳ ಆಡುವುದನ್ನು ನೋಡಿದರೆ, ನಮ್ಮನ್ನು ಹಿಂದಿನ ಜನ್ಮದ ವೈರಿಗಳು ಎಂದು ಅಂದುಕೊಳ್ಳಬಹುದು. ನಮ್ಮ ಮಾತು ಜಗಳದ ರೂಪದಲ್ಲಿ ಇದ್ದರೂ ಮನದಲ್ಲಿ ಇಬ್ಬರಿಗೂ ಪರಸ್ಪರ ಪ್ರೀತಿ ಹಾಗೂ ಕಾಳಜಿ ಜಗದಷ್ಟೇ ಆಳವಾಗಿರುವುದು ಖಂಡಿತ. ದಿನದ 24 ಗಂಟೆ ಮುಗಿಯುವ ಮುನ್ನವೇ ನಮ್ಮ ಜಗಳ ಮುಗಿದು ಮತ್ತೆ ಒಂದಾಗುತ್ತೇವೆ.
ಅದೆಷ್ಟೋ ಬಾರಿ ವಯಸ್ಸಿನಲ್ಲಿ ಚಿಕ್ಕವನಾದರೂ ಅವನಿಂದ ಕಲಿಯುವುದು ತುಂಬಾ ಇದೆ ಅನಿಸುತ್ತೆ . ಜೀವನ ಎಷ್ಟೇ ಸವಾಲು ಮುಂದಿಟ್ಟರು, ಮನದಲ್ಲಿ ಸಾವಿರ ಚಿಂತೆ ಇದ್ದರೂ ತಾನು ಸಂತೋಷವಾಗಿರಲೂ, ತನ್ನವರನ್ನು ನಗಿಸುಲೂ ಪ್ರಯತ್ನ ಮಾಡುತ್ತಾನೆ. ಕೊಂಚ ಹಿಂಜರಿಕೆ ಸ್ವಭಾವವಿದ್ದರೂ ತನ್ನ ಕೈಲಾದ ಶ್ರಮ ಪಡುತ್ತಾನೆ. ಅದೆಷ್ಟೋ ಬಾರಿ ನಾವೇನು ಹೇಳದೆ ಹೋದರು ಪರಿಸ್ಥಿತಿಗೆ ತಕ್ಕಂತೆ ಅವನೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾನೆ.
ಅವನು ಜೊತೆ ಇರುವುದೇ ನನ್ನ ಜೀವನಕ್ಕೆ ಉಡುಗೊರೆ ಇದ್ದ ಹಾಗೆ. ನೂರು ಬಾರಿ ಜಗಳ ಆಡಿದರು ನಮ್ಮ ಸಂಬಂಧ ನೂರು ಕಾಲ ಹೀಗೆ ಇರಬೇಕು ಎನ್ನುವುದು ನನ್ನ ಆಸೆ ಹಾಗೂ ನನ್ನ ತಮ್ಮ ಎಂದಿಗೂ ದೂರ ಆಗುವುದಿಲ್ಲ ಎನ್ನುವುದು ನನ್ನ ಭರವಸೆ.
ಈ ರಕ್ಷಾ ಬಂಧನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಲಿ.
ರಕ್ಷಾ ಬಂಧನ ಶುಭಾಶಯಗಳು ಮನ್ನು!
ಎಂದಿಗೂ ನಾನು ನಿನ್ನೊಂದಿಗೆ ಇರುವೆ.
-ಮಾನಸ ಅಗ್ನಿಹೋತ್ರಿ, ಬಳ್ಳಾರಿ



Click it and Unblock the Notifications

