Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮದುವೆಯಾಗಿ ಸ್ವಲ್ಪವೇ ಸಮಯದಲ್ಲಿ ಬಹುತೇಕ ದಂಪತಿಗಳಲ್ಲಿ ಸಮಸ್ಯೆ ಉಂಟಾಗುವುದು, ಕಾರಣವೇನು?
ಮದುವೆಯಾಗಿ ಒಂದು ತಿಂಗಳು ಆಗಿಲ್, ಅವರಿಬ್ಬರಿಗೆ ಆಗಿ ಬರ್ತಾ ಇಲ್ಲ, ಆ ಜೋಡಿ ಹನಿಮೂನ್‌ಗೆ ಖುಷಿ-ಖುಷಿಯಿಂದ ಹೋಗಿತ್ತು, ಅದರೆ ಅಲ್ಲಿ ಹೋದ ತಕ್ಷಣ ಇಬ್ಬರು ಜಗಳ ಮಾಡಿಕೊಂಡು ಬಂದಿರುತ್ತಾರೆ, ಹೀಗೆ ಬಂದವರಲ್ಲಿ ಕೆಲವರು ನನಗೆ ಈ ಸಂಬಂಧದಲ್ಲಿ ಇಷ್ಟವಿಲ್ಲ ಡಿವೋರ್ಸ್‌ಬೇಕು ಎಂದು ಕೇಳುತ್ತಾರೆ, ಇದೆಲ್ಲ ಈಗೀಗ ಸರ್ವೇ ಸಾಮಾನ್ಯ. ಅರೇ ಮದುವೆಯಲ್ಲಿ ಆ ಜೋಡಿ ಅಷ್ಟೊಂದು ಚೆನ್ನಾಗಿತ್ತು, ಇವರಿಗೆ ಏನಾಯ್ತು ಎಂದನಿಸಬಹುದು.

ಇನ್ನು ಕೆಲವರು ಪ್ರೀತಿಸಿ ನನಗೆ ಅವನೇಬೇಕು ಎಂದು ಇವಳು, ನನಗೆ ಅವಳೇ ಬೇಕೆಂದು ಅವನು ಹಠ ಮಾಡಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿರುತ್ತಾರೆ, ಇವರಿಬ್ಬರು ಇಷ್ಟೊಂದು ಇಷ್ಟಪಟ್ಟು ಮದುವೆಯಾಗಿದ್ದಾರೆ, ಅವರು ಚೆನ್ನಾಗಿ ಇರುತ್ತಾರೆ ಎಂದು ಮನೆಯವರು ಅಂದುಕೊಂಡಿರುವಾಗ ಮದುವೆಯಾಗಿ ಕೆಲವೇ ತಿಂಗಳಿನಲ್ಲಿ ಭಿನ್ನಾಬಿಪ್ರಾಯ ಭುಗಿಲೆದ್ದು ಅದು ಮನೆಯವರಿಗೆ ತಿಳಿದಾಗ ಮನೆಯವರಿಗೆ ಫುಲ್ ಶಾಕ್! ಅರೆ ಪ್ರೀತಿಸಿ ಮದುವೆಯಾದವರು ತಾನೆ ಇವರು, ಇವರಿಗೇನಾಯ್ತು ಎಂದನಿಸುವುದು.
ಮದುವೆಯಾದ ಮೊದಲ ಕೆಲ ತಿಂಗಳು ತುಂಬಾ ಸೂಕ್ಷ್ಮ
ಅದು ಅರೇಂಜ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ, ಮದುವೆಯಾಗಿ ಇಬ್ಬರು ಒಂದೇ ಕೋಣೆಯಲ್ಲಿ ಇರಲು ಆರಂಭಿಸಿದಾಗ ಅವರ ಬಗ್ಗೆ ಎಷ್ಟೇ ಗೊತ್ತಿದ್ದರೂ ಭಿನ್ನ ವ್ಯಕ್ತಿ ಅನಿಸಲಾರಂಭಿಸುತ್ತದೆ, ಅದುವರೆಗೆ ಗೊತ್ತೇ ಇರದ ಕೆಲ ಅಭ್ಯಾಸ, ಸ್ವಭಾವಗಳು ಗೊತ್ತಾಗುವುದು, ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವುದು ಸುಲಭವಾಗಿರಲ್ಲ, ಏನಾದರು ಚಿಕ್ಕ ವಿಷಯಕ್ಕೆ ಜಗಳ ಬಂದರೆ ಅದು ದೊಡ್ಡದಾಗುವ ಸಾಧ್ಯತೆ ಹೆಚ್ಚು, ಕಡ್ಡಿಯನ್ನು ಗುಡ್ಡ ಮಾಡುವುದು ಎಂಬಂತೆ ಚಿಕ್ಕ ವಿಷಯ ಈ ಸಮಯದಲ್ಲಿಯೇ ದೊಡ್ಡದಾಗುವುದು.
ಹೊಸದೊಂದು ವಾತಾವರಣ
ಹೊಸದಾಗಿ ಮದುವೆಯಾದಾಗ ಆ ವಾತಾವರಣವೇ ಭಿನ್ನ ಅನಿಸುವುದು, ಅದರಲ್ಲಿಯೂ ಹೆಣ್ಮಕ್ಕಳಿಗೆ ಆ ಸಮಯ ತುಂಬಾನೇ ಕಳವಳದ ಸಮಯ, ಹೊಸದಾದ ಕುಟುಂಬ, ಹೊಸ ಜನ, ಅವರ ಮೆಚ್ಚುಗೆ ಗಳಿಸುವ ಹೋರಾಟದಲ್ಲಿರುತ್ತಾಳೆ, ಇನ್ನು ಅವನಿಗೆ ಮನೆಗೆ ಬಮದ ಅವಳು ಅಲ್ಲಿಗೆ ಹೊಂದಿಕೊಳ್ಳಲು ತಡವಾದರೆ ಕೋಪ ಬರಬಹುದು, ಇನ್ನು ಕೆಲವರು ಪ್ರೀತಿಯಲ್ಲಿ ಇದ್ದಾಗ ಇದ್ದಂತೆ ಮದುವೆಯಾದ ಮೇಲೆ ಇರಲ್ಲ, ಬದಲಾಗುತ್ತಾರೆ ಇವೆಲ್ಲಾ ಮದುವೆಯಾಗಿ ಹೊಸತರಲ್ಲಿ ಸಮಸ್ಯೆ ಉಂಟು ಮಾಡುವುದು.
ಕುಟುಂಬದವರ ಹಸ್ತಕ್ಷೇಪವೂ ಇದ್ದರೆ ಸಮಸ್ಯೆ ಹೆಚ್ಚುವುದು
ಮನೆಗೆ ಬಂದ ಸೊಸೆ ಬಗ್ಗೆ ಮಗನಲ್ಲಿ ಹೇಳುವುದು, ಅವಳಿಗೆ ಅವಳ ತಾಯಿ ನೀನು ಆಗಿರಬೇಕು, ಹೀಗಿರಬಕು ಎಂದು ಹೇಳುತ್ತಾ ಗಂಡನ ಮನೆಯವರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದರೆ ಅಥವಾ ಇವಳಿಗೆ ಮದುವೆಯಾಗಿ ಬಂದ ಮೇಲೆ ಇಲ್ಲಿಯ ಪ್ರತಿಯೊಂದು ವಿಷಯವನ್ನು ತಾಯಿಗೆ ಹೇಳುವ ಅಭ್ಯಾಸವಿದ್ದರೆ ನವ ಜೋಡಿಗಳ ವೈವಾಹಿಕ ಬದುಕಿನಲ್ಲಿ ಸಮಸ್ಯೆ ಶುರುವಾಗುವುದು. ಈ ಎಲ್ಲಾ ಕಾರಣದಿಂದ ಮದುವೆಯಾಗಿ ಕೆಲವೇ ತಿಂಗಳಿನಲ್ಲಿ ಬಹುತೇಕ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು.
ಇಂಥ ಸಮಸ್ಯೆ ತಡೆಗಟ್ಟಲು ಸರಳ ಸೂತ್ರವೆಂದರೆ
No Expectation..... ಹೌದು ಸಂಗಾತಿ ಬಗ್ಗೆ ಅತಿಯಾದ ನಿರೀಕ್ಷೆ ಬೇಡ, ಅವರು ಹೀಗೆಯೇ ಇರಬೇಕು ಎಂಬ ಕಲ್ಪನೆಯೂ ಬೇಡ, ಬದುಕನ್ನು ಬಂದಂತೆ ಸ್ವೀಕರಿಸಬೇಕು, ಪರಸ್ಪರ ಹೊಂದಾಣಿಕೆ ಮುಖ್ಯವಾಗಿರುತ್ತದೆ, ಆವಾಗ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯ ದೊಡ್ಡದಾಗುವುದಿಲ್ಲ.



Click it and Unblock the Notifications