ಆರೇಂಜ್ ಪೀಲ್ ಥಿಯರಿ ಮೂಲಕ ನಿಜವಾದ ಪ್ರೀತಿ ಕಂಡು ಹಿಡಿಯಬಹುದೇ?

ನಮ್ಮ ಹುಡುಗ ನಮಗಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದಾನಾ? ಅವನು ನನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದಾನಾ ಎಂದು ತಿಳಿಯಲು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ನಿಮ್ಮ ಹುಡುಗ ಸ್ವಭಾವ ತಿಳಿಯಲು ಆರೇಂಜ್ ಪೀಲ್ ಥಿಯರಿ ಸಹಾಯ ಮಾಡುತ್ತದೆಯಂತೆ, ಇದೀಗ ಟಿಕ್‌ಟಾಕ್‌ನಲ್ಲಿ ಆರೇಂಜ್‌ ಪೀಲ್ ಥಿಯರಿ ಅಂದರೆ ಕಿತ್ತಳೆಯ ಸಿಪ್ಪೆ ಸುಲಿಯುವ ಥಿಯರಿ ತುಂಬಾನೇ ಗಮನ ಸೆಳೆಯುತ್ತಿದೆ.

Orange Peel Theory

ಆರೇಂಜ್ ಪೀಲ್ ಥಿಯರಿ ಎಂದರೇನು?
ನಿಮ್ಮ ಸಂಗಾತಿ ಕಿತ್ತಾಳೆ ಸುಲಿಯುವ ರೀತಿ ನೋಡಿ ಅವರು ನಮ್ಮನ್ನು ತುಂಬಾನೇ ಇಷ್ಟಪಡುತ್ತಿದ್ದಾರಾ? ಅವರು ನಮ್ಮನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರಾ ಎಂದು ತಿಳಿಯಬಹುದಂತೆ, ಇದು ಕ್ರೇಝಿ ಅನಿಸಿದರೂ ಈ ಲವ್ ಟೆಸ್ಟ್ ತುಂಬಾನೇ ಟ್ರೆಂಡ್ ಆಗುತ್ತಿದೆ. ಥಿಯರಿ ಏನು ಹೇಳುತ್ತದೆ ಎಂದರೆ ನಿಮ್ಮನ್ನು ತುಂಬಾನೇ ಇಷ್ಟಪಡುತ್ತಿದ್ದರೆ, ನಿಮ್ಮನ್ನು ಕೇರ್ ಮಾಡುತ್ತಿದ್ದರೆ ಅವರು ನಿಮ್ಮನ್ನು ಕೇಳದೆ ನಿಮಗೆ ಇಷ್ಟವಾಗಿದ್ದನ್ನು ಮಾಡುತ್ತಾರೆ.

ಡಿನ್ನರ್ ಕೂತಿರುತ್ತೇವೆ, ಅಲ್ಲೊಂದು ಆರೇಂಜ್ ಇರುತ್ತೆ. ಹುಡುಗ ಆ ಆರೇಂಜ್ ತೆಗೆದು ಅದರ ಸಿಪ್ಪೆ ಸುಲಿದು ಹುಡುಗಿಗೆ ನೀಡಿದರೆ ಅವನು ಅವಳನ್ನು ತುಂಬಾನೇ ಕೇರ್ ಮಾಡುತ್ತಿದ್ದಾನೆ ಎಂದರ್ಥ. ಅವಳನ್ನು ಕೇಳದೆಯೇ ಅವಳಿಷ್ಟಗಳನ್ನು ಅರಿತುಕೊಂಡಿದ್ದಾನೆಯೇ ಎಂದು ತಿಳಯುವುದೇ ಈ ಆ ಆರೇಂಜ್ ಪೀಲ್ ಥಿಯರಿಯ ಪ್ರಮುಖ ಉದ್ದೇಶವಾಗಿದೆ.

ಇತ್ತೀಚೆಗೆ ಟಿಕ್‌ಟಾಕ್‌ನ ಒಂದು ವೀಡಿಯೋ ತುಂಬಾನೇ ವೈರಲ್ ಆಗಿತ್ತು. Jenna (@jennaskates) ಎಂಬುವರು ಪೋಸ್ಟ್ ಮಾಡಿದ ವೀಡಿಯೋ ಅದಾಗಿತ್ತು. ಅದರಲ್ಲಿ ಅವಳ ಬಾಯ್‌ ಫ್ರೆಂಡ್ ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಅವಳಿಗೆ ಮೊಟ್ಟೆಯ ಬಿಳಿ ಭಾಗವನ್ನು ನೀಡುತ್ತಾಳೆ. ಅದರಲ್ಲಿ ಅವರಿಗೆ ತಿನ್ನಲು ಒಂದಿಷ್ಟು ಮೊಟ್ಟೆ ಬರುತ್ತದೆ, ಆದರೆ ಆಕೆಯ ಉಗುರುಗಳು ಸ್ವಲ್ಪ ಉದ್ದವಾಗಿರುವುದರಿಂದ ಮೊಟ್ಟೆಯ ಹಳದಿಯನ್ನು ಬಿಳಿಯಿಂದ ಬೇರ್ಪಡಿಸಲು ಕಷ್ಟವಾಗುತ್ತೆ ಎಂದು ತಾನೇ ಮೊಟ್ಟೆಯ ಹಳದಿಯನ್ನು ಬೇರ್ಪಡಿಸಿ ನೀಡುತ್ತಾನೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾ ಗಮನ ಸೆಳೆದಿದ್ದು ಬಾಯ್‌ಫ್ರೆಂಡ್ ಅಂದರೆ ಹೀಗಿರಬೇಕು ಎಂದು ಹೇಳುತ್ತಿದ್ದಾರೆ.

ಮತ್ತೊಂದು ವೀಡಿಯೋದಲ್ಲಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುತ್ತಾರೆ, ಅವನು ಅವಳಲ್ಲಿ ಕೇಳದೆಯೇ ಕಿತ್ತಳೆಯ ಸಿಪ್ಪೆ ಸುಲಿದು ಕೊಡುತ್ತಾನೆ.

ಇದೀಗ ಜನರು ತಮ್ಮ ಬದುಕಿನಲ್ಲಿ ಆ ವ್ಯಕ್ತಿ ನಮ್ಮನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುವುದನ್ನು ತಿಳಿಯಲು ಈ ರೀತಿ ಪರೀಕ್ಷೆ ಮಾಡುತ್ತಿದ್ದು ಅದರ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಆದ್ದರಿಂದ ಇದು ತುಂಬಾನೇ ಟ್ರೆಂಡ್ ಆಗುತ್ತಿದೆ.

ಹೆಣ್ಣು ಬಯಸುವುದೇ ಇದನ್ನು
ಪ್ರತಿಯೊಬ್ಬ ಹೆಣ್ಮಕ್ಕಳು ನಾನು ಹೇಳದೆಯೇ ನನ್ನ ಪತಿ ಅಥವಾ ಪ್ರಿಯತಮ ನನ್ನನ್ನು ಹೆಚ್ಚು ಕೇರ್ ಮಾಡಬೇಕೆಂದು ಬಯಸುತ್ತಿರುತ್ತಾರೆ. ತಮ್ಮ ಸಂಗಾತಿ ಈ ರೀತಿ ಕೇರ್ ಮಾಡಿದರೆ ಅವಳು ಅವನಿಗೆ ಕಂಪ್ಲೀಟ್ ಫಿದಾ ಆಗುತ್ತಾಳೆ, ಹುಡುಗಿಯನ್ನು ಇಂಪ್ರೆಸ್‌ ಮಾಡಲು ಬಾಡಿ ಬಿಲ್ಡ್ ಮಾಡಬೇಕಾಗಿಲ್ಲ, ಇಂಥ ಕ್ಯೂಟ್‌ ಕೇರಿಂಗ್ ಸಾಕು ಅವಳಿಗೆ ಅವನೆಂದರೆ ತುಂಬಾನೇ ಇಷ್ಟವಾಗುವುದು.

ನಾನು ಹೇಳದೆಯೇ ಅವನು ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತಾಳೆ
ನನಗೆ ಇದು ಇಷ್ಟ ಅದನ್ನು ತೆಗೆದುಕೊಡು ಎಂದು ಕೇಳಿ ಪಡೆಯುವುದಕ್ಕಿಂತ ಅವಳಿಗೆ ಇಷ್ಟವಾಗಿರುವ ವಿಷಯವನ್ನು ತಿಳಿದು ಅವಳಿಗೆ ಅದನ್ನು ಮಾಡಿದರೆ ತುಂಬಾನೇ ಇಷ್ಟವಾಗುವುದು. ಅವಳು ಎಷ್ಟು ಸಂಭ್ರಮಿಸುತ್ತಾಳೆ ಎಂಬುವುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಎಲ್ಲರೂ ಒಂದೇ ರೀತಿ ಪ್ರೀತಿ ವ್ಯಕ್ತಪಡಿಸಬೇಕೆಂದೇನಿಲ್ಲ
ಈ ವಿಷಯದಲ್ಲಿ ನೀವು ಯಾರನ್ನೂ ಹೋಲಿಕೆ ಮಾಡಲು ಹೋಗಬೇಡಿ, ಏಕೆಂದರೆ ಇನ್ನೊಬ್ಬರ ಬದುಕಿನ ಜೊತೆ ನಮ್ಮ ಬದುಕನ್ನು ಹೋಲಿಕೆ ಮಾಡಬಾರದು. ನೀವು ಈ ಟ್ರೆಂಡ್‌ ನೋಡಿ ನಿಮ್ಮ ಹುಡುಗನ್ನು ಪರೀಕ್ಷೆ ಮಾಡಲು ಹೋಗಿ ನಿಮ್ಮ ನಿರೀಕ್ಷೆಯಂತೆ ಅವನು ಮಾಡದಿದ್ದರೆ ಅದಕ್ಕಾಗಿ ದೊಡ್ಡ ರಂಪಾಟ ಮಾಡಲು ಹೋಗಬೇಡಿ. ನಿಮ್ಮವನು ನಿಮ್ಮನ್ನು ಕೇರ್ ಮಾಡುವ ರೀತಿ ಭಿನ್ನವಾಗಿರಬಹುದು, ಆದರೆ ಆ ಕೇರ್ ನಿಮಗೆ ಗೊತ್ತಾಗುವುದು. ಕೆಲವರು ಒಂದು ಬಾರಿಯೂ ಐ ಲವ್‌ ಯೂ ಎಂದು ಹೇಳುವುದಿಲ್ಲ, ಆದರೆ ಅವರು ನಿಮ್ಮ ಪ್ರತಿಯೊಂದು ಬೇಕು-ಬೇಡಗಳನ್ನು ತಿಳಿದುಕೊಂಡು ಮಾಡುತ್ತಾರೆ.
ಅದ್ದರಿಂದ ಐ ಲವ್‌ ಯೂ ಹೇಳಿಲ್ಲ ಎಂದ ಮಾತ್ರಕ್ಕೆ ನಿಮ್ಮ ಮೇಲೆ ಪ್ರೀತಿನೇ ಇಲ್ಲ ಎಂದು ಜಡ್ಜ್‌ ಮಾಡಲು ಹೋಗಬೇಡಿ.

ಪುರುಷರಿಗೂ ಕಿವಿಮಾತು
ಕೆಲವರು ತಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ, ಅದನ್ನು ವ್ಯಕ್ತಪಡಿಸುವುದಿಲ್ಲ, ಆದರೆ ಈ ವಿಚಾರಕ್ಕೆ ನಿಮ್ಮ ಸಂಗಾತಿಗೆ ತುಂಬಾನೇ ಬೇಸರವಿರುತ್ತದೆ. ನೀವು ನಿಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಬಚ್ಚಿಡುವ ಬದಲಿಗೆ ವ್ಯಕ್ತಪಡಿಸಿ, ಇದರಿಂದ ಅವರಿಗೆ ಖುಷಿ ಆಗುತ್ತೆ, ನಿಮ್ಮಿಬ್ಬರ ಸಂಬಂಧ ತುಂಬಾನೇ ಚೆನ್ನಾಗಿರುತ್ತದೆ. ನೀವು ಅವರನ್ನು ಕೇರ್ ಮಾಡುವ ರೀತಿಯೇ ಸಾಕು ನಿಮಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಎಂದು ತಿಳಿಸಲು, ಪ್ರಿತಿಯನ್ನು ವ್ಯಕ್ತಪಡಿಸಿ, ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.

English summary

Orange Peel Theory: How It Help To Prove True Love

Orange Peel Theory: How this theory help to prove true love read on...
X
Desktop Bottom Promotion