Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಗೌರಿ ವಿಷಯದಲ್ಲಿ ಶಾರೂಖ್ ಖಾನ್‌ಗೂ ಕಾಡಿತ್ತೇ ಇನ್ ಸೆಕ್ಯೂರಿಟಿ? ಗೌರಿಗೆ ವೈಟ್ ಶರ್ಟ್ ಧರಿಸಲು ಬಿಡ್ತಾ ಇರ್ಲ್ವಂತೆ!
ಬಾಲಿವುಡ್ ಮಾದರಿ ದಂಪತಿ ಎಂದು ಕರೆಸಿಕೊಂಡಿದ್ದಾರೆ ಶಾರೂಖ್ ಖನ್- ಗೌರಿ ಖಾನ್. ಮತ ಬೇರೆ-ಬೇರೆಯಾಗಿದ್ದರೂ ಪ್ರೀತಿಇಸಿ ಮದುವೆಯಾದ ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಗೌರಿ ನಟಿ ಅಲ್ಲದಿದ್ದರೂ ಬಾಲಿವುಡ್ ಕಾರ್ಯಕ್ರಮಗಳಲ್ಲಿಪತಿ ಶಾರೂಖ್ ಖಾನ್ ಜೊತೆ ಭಾಗವಹಿಸುವ ಗೌರಿ ಖಾನ್ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ. ಇವರಿಬ್ಬರ ಜೋಡಿಯನ್ನು ಬಾಲಿವುಡ್‌ನಲ್ಲಿ ಪರ್ಫೆಕ್ಟ್ ಜೋಡಿ ಎಂದು ಕರೆಯುತ್ತಾರೆ.

ಇನ್ನು ಶಾರೂಖ್‌ಗೆ ಆ ಕಾಲದಿಂದಲೂ ಗರ್ಲ್ಸ್ ಫ್ಯಾನ್ಸ್. ಶಾರೂಖ್ ಲುಕ್, ಅವರ ಮಾತು ಎಲ್ಲವೂ ಹುಡುಗಿಯರಿಗೆ ತುಂಬಾನೇ ಇಷ್ಟವಾಗುವುದು, ಹೀಗಾಗಿ ಶಾರೂಖ್‌ಗೆ ಗರ್ಲ್ಸ್ ಫ್ಯಾನ್ಸ್ ತುಂಬಾನೇ ಇದ್ದಾರೆ. ಶಾರೂಖ್ ಸಿನಿ ಜಗತ್ತಿಗೆ ಬರುವ ಮೊದಲೇ ಗೌರಿಯನ್ನು ಪ್ರೀತಿಸುತ್ತಿದ್ದರು. ಸಿನಿ ಜಗತ್ತಿನಲ್ಲಿ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದರು, ಆವಾಗ ತಾನು ಪ್ರೀತಿಸಿದ ಹುಡುಗಿ ಗೌರಿಯನ್ನು ಮದುವೆಯಾಗುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಈ ಜೋಡಿ ಖುಷಿ-ಖುಷಿಯಿಂದ ಬದುಕುತ್ತಿದ್ದಾರೆ. ಶಾರೂಖ್ ಖಾನ್‌ಗೆ ಪ್ರಿಯಾಂಕಾ ಚೋಪ್ರಾ ಜೊತೆ ಅಫೇರ್ ಇತ್ತು ಎಂಬ ಸುದ್ದಿಗಳು ಬಂದಾಗ ಕೂಡ ಗೌರಿ ಕುಟುಂಬದ ವಿಷಯ ಹೊರಗಡೆ ಹೇಳಲಿಲ್ಲ. ತನ್ನ ಗಂಡನ ಬಾಳಿನಲ್ಲಿ ಯಾವ ನಟಿಯೂ ಸಮೀಪಿಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಗೌರಿ ಶಾರೂಖ್ ಖಾನ್ ಕೆಲವೊಂದು ವಸ್ತ್ರಗಳನ್ನು ಧರಿಸದಂತೆ ಹೇಳುತ್ತಿದ್ದರು, ಅವರಿಗೆ ತುಂಬಾ ಪೊಸೆಸಿವ್‌ನೆಸ್ ಇತ್ತು ಎಂದು ಹೇಳಿದ್ದಾರೆ. ತಾನು ವೈಟ್ ಶರ್ಟ್ ಹಾಕಲು ಶಾರೂಖ್ ಬಿಡ್ತಾ ಇರ್ಲಿಲಿಲ್ಲ ಎಂದು ಹೇಳಿದರು, ಆವಾಗ ಶಾರೂಖ್ ಬಿಳಿ ಬಟ್ಟೆ ಪಾರದರ್ಶಕವಾಗಿರುವುದರಿಂದ ಬಿಳಿ ಶರ್ಟ್ ಹಾಕುವುದು ಇಷ್ಟವಾಗಿರಲಿಲ್ಲ, ಗೌರು ಶಾರೂಖ್ ಗರ್ಲ್ ಫ್ರೆಣಡ್ ಆಗಿದ್ದ ಸಮಯದಲ್ಲಿ ಕೂದಲನ್ನು ಫ್ರೀ ಬಿಟ್ಟು ಸ್ಟೈಲ್ ಮಾಡಲ ಕೂಡ ಬಿಡ್ತಾ ಇರಲಿಲ್ಲ ಎಂಬುದಾಗಿ ಹೇಳಿದ್ದಾರೆ.
ಶಾರೂಖ್‌ನಲ್ಲಿ ಇನ್‌ಸೆಕ್ಯೂರಿಟಿಯಿಂದಾಗಿ ಶಾರೂಖ್ ಹಾಗೆ ವರ್ತಿಸುತ್ತಿದ್ದರು ಎಂಬುವುದಾಗಿ ಹೇಳಿದ್ದಾರೆ. ಗೌರಿಯನ್ನು ಈ ರೀತಿ ಕಂಟ್ರೋಲ್ ಮಾಡ್ತಾ ಇರುವುದು ಚೀಪ್ ಎಂದನಿಸಿತ್ತು,ಆದರೂ ಒಂದು ರೀತಿಯ ತೃಪ್ತಿ ಸಿಗ್ತಾ ಇತ್ತು ಎಂಬುವುದನ್ನು ಶಾರೂಖ್ ಒಪ್ಪಿಕೊಂಡಿದ್ದರೆ.
ಶಾರೂಖ್ ವರ್ತನೆಯಿಂದ ಬೇಸರವಾಗಿ ಗೌರಿ ನಿನ್ನ ಸಹವಾಸವೇ ಬೇಡ ಎಂದು ದೂರವಾಗಿದ್ದರಂತೆ, ತುಂಬಾ ಸಮಯ ಇಬ್ಬರು ಮಾತನಾಡ್ತಾ ಇರ್ಲಲಿಲ್ಲ, ಶಾರೂಖ್ ತಾನು ಮಾಡುತ್ತಿರುವ ತಪ್ಪು ಅರಿಯಬೇಕು ಎಂದು ಗೌರಿ ಬಯಸಿದ್ದರು, ಕೊನೆಗೂ ಶಾರೂಖ್‌ಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರಂತೆ. ಅದಾದ ಬಳಿಕ ಶಾರೂಖ್ ಆ ರೀತಿ ವರ್ತಿಸಲಿಲ್ಲ ಎಂಬುವುದಾಗಿ ಹೇಳಿದ್ದಾರೆ.
ಸಲ್ಮಾನ್ ಗರ್ಲ್ ಫ್ರೆಂಡ್ ಬಗ್ಗೆ ತುಂಬಾನೇ ಪೊಸೆಸಿವ್ ಆಗ್ತಾ ಇದ್ದರು ಎಂಬ ಗಾಸಿಪ್‌ಗಳು ಕೇಳಿ ಬರ್ತಾ ಇತ್ತು, ಅವರು ಹಲವರನ್ನು ಪ್ರೀತಿಸಿದ್ರೂ ಎಲ್ಲರೂ ಅವರಿಂದ ದೂರವಾಗಿದ್ದರೆ, ಅವರ ಮಾಜಿ ಪ್ರೇಯಸಿ ಸಂಗೀತ ಬಿಜ್‌ಲಾನಿ Indian Idol 15ಶೋದಲ್ಲಿ ತನ್ನ ಮಾಜಿ ಪ್ರೇಮಿ ನನ್ನನ್ನು ತುಂಬಾನೇ ಕಂಟ್ರೋಲ್ ಮಾಡ್ತಾ ಇದ್ದರು, ಶಾರ್ಟ್ ಡ್ರೆಸ್ ಹಾಕಲು ಬಿಡ್ತಾ ಇರಲಿಲ್ಲ ಎಂದು ಹೇಳಿದ್ದಾರೆ, ಆಕೆ ಸಲ್ಮಾನ್ ಖಾನ್ ಹೆಸರು ಹೇಳದೇ ಇದ್ದರು ಆಕೆಯ ಮಾಜಿ ಪ್ರೇಮಿ ಸಲ್ಮಾನ್ ಖಾನ್ ಎಂಬುವುದು ಗೊತ್ತಿರುವ ವಿಚಾರವಾಗಿರುವುದರಿಂದ ಅವರು ಹೇಳಿರುವ ಮಾಜಿ ಬಾಯ್ಫ್ರೆಂಡ್ ಪೊಸಿಸಿವ್ ಕತೆ ತುಂಬಾನೇ ವೈರಲ್ ಆಗ್ತಾ ಇದೆ.



Click it and Unblock the Notifications

