Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಿಂಗಲ್ ಅಲ್ಲ ಎಂದಾದರೆ ನ್ಯೂಇಯರ್ ಸೆಲೆಬ್ರೇಷನ್‌ಗೆ ರೊಮ್ಯಾಂಟಿಕ್ ಟಿಪ್ಸ್, ಹೀಗೆ ಮಾಡಿದರೆ ಅದೃಷ್ಟ ಕೂಡ ಹೌದಂತೆ!
ಹೊಸ ವರ್ಷ ಬರುತ್ತಿದೆ, ಈ ವರ್ಷವನ್ನು ಹೇಗೆ ಸೆಲೆಬ್ರೇಟ್ ಮಾಡಬೇಕು ಎಂದು ಈಗಾಗಲೇ ನೀವು ಪ್ಲ್ಯಾನ್ ಮಾಡಿರುತ್ತೀರಿ, ಆದರೆ ಒಂದು ರೊಮ್ಯಾಂಟಿಕ್ ನ್ಯೂ ಇಯರ್ ವೆಲ್‌ಕಂ ಪ್ಲ್ಯಾನ್ ಮಾಡಿದ್ದೀರಾ?
ನೀವು ನಿಮ್ಮ ಸಂಗಾತಿಯೊಂದಿಗೆ ನ್ಯೂ ಇಯರ್ ಅನ್ನು ತುಂಬಾನೇ ಸುಂದರವಾಗಿ ವೆಲ್‌ಕಂ ಮಾಡಬೇಕು, ಅದು ಆ ವರ್ಷ ಪೂರ್ತಿ ನೆನಪಿಡುವಷ್ಟು ಸುಂದರವಾಗಿರಬೇಕು ಎಂದು ನೀವು ಬಯಸುವುದಾದರೆ ಈ ಟಿಪ್ಸ್ ಟ್ರೈ ಮಾಡಿ, ಇನ್ನೊಂದು ವಿಷಯ ಏನಪ್ಪಾ ಅಂದರೆ ಕೆಲವೊಂದು ರಾಷ್ಟ್ರಗಳಲ್ಲಿ ಗುಡ್‌ಲಕ್‌ಗಾಗಿ ಸಂಪ್ರದಾಯದಂತೆ ಇದನ್ನು ಪಾಲಿಸುತ್ತಾರೆ. ಹಾಗೆಂದ ಮೇಲೆ ರೊಮ್ಯಾಂಟಿಕ್ ಹಾಗೂ ಗುಡ್‌ಲಕ್ ಎರಡೂ ನಿಮ್ಮಿಬ್ಬರ ಸಂಬಂಧದಲ್ಲಿ ಇರುತ್ತದೆ, ಬನ್ನಿ ಆ ರೊಮ್ಯಾಂಟಿಕ್ ಸಂಬಂಧ ಹೇಗಿರಲಿದೆ ಎಂದು ನೋಡೋಣ:

ಮಿಡ್‌ನೈಟ್ ಕಿಸ್
ಸಕತ್ ರೊಮ್ಯಾಂಟಿಕ್ ಆಗಿದೆ ಅಲ್ವಾ? ಹಲವಾರು ದೇಶಗಳಲ್ಲಿ ಸಂಗಾತಿಗೆ ಕಿಸ್ ನೀಡುವ ಮೂಲಕ ನ್ಯೂ ಇಯರ್ ವೆಲ್‌ಕಂ ಮಾಡುತ್ತಾರೆ. ನಿಮಗೆ ಇಷ್ಟವಾದವರನ್ನು ಮಧ್ಯರಾತ್ರಿ 12 ಗಂಟೆಗೆ ಚುಂಬಿಸಿದರೆ ನಿಮ್ಮಿಬ್ಬರ ಸಂಬಂಧ ವರ್ಷಪೂರ್ತಿ ಮಧುರವಾಗಿರುತ್ತದೆ ಎಂಬ ನಂಬಿಕೆ. ಹೊಸ ವರ್ಷದಲ್ಲಿ ನಮ್ಮವರು ನಮ್ಮನ್ನು ಮುದ್ದಿಸಿದರೆ ಯಾರಿಗೆ ತಾನೆ ಇಷ್ಟವಾಗಲ್ಲ ಅಲ್ವಾ?
12 ದ್ರಾಕ್ಷಿ ತಿನ್ನುವುದು
12 ದ್ರಾಕ್ಷಿ ತಿಂದು ಹೊಸ ವರ್ಷವನ್ನು ಸ್ವಾಗತಿಸುವ ಆಚರಣೆ ಕೆಲವು ಕಡೆ ಇದೆ. ಹೀಗೆ ಮಾಡಿದರೆ ಲಕ್ ಲಭಿಸುತ್ತದೆ ಎಂದು ನಂಬಲಾಗುವುದು. ನೀವು ನಿಮ್ಮ ಸಂಗಾತಿ ಜೊತೆ ನೀವು 12, ಅವರು 12 ದ್ರಾಕ್ಷಿ ಸೇವಿಸಿ, ಇದರಿಂದ ದೊರೆಯುವ ಗುಡ್‌ಲಕ್ ವರ್ಷಪೂರ್ತಿ ನಿಮ್ಮಿಬ್ಬರಿಗೂ ದೊರೆಯಲಿ.
ಅವರ ಪರ್ಸ್‌ನಲ್ಲಿ ಹಣವಿಡಿ
ನಿಮ್ಮ ಸಂಗಾತಿಯ ಪರ್ಸ್‌ನಲ್ಲಿ ಹಣವಿಡಿ, ಹಣವಿಟ್ಟರೆ ವರ್ಷ ಪೂರ್ತಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದು, ಆದ್ದರಿಂದ ಪರ್ಸ್‌ನಲ್ಲಿ ಹಣವಿಡಿ.
ಮಿಡ್‌ನೈಟ್‌ನಲ್ಲಿ ಮನೆಯ ಡೋರ್ ತೆಗೆಯಿರಿ
ಇಬ್ಬರು ಬಂದು ಮನೆ ಬಾಗಿಲು ತೆರೆದು ಆಕಾಶದಲ್ಲಿ ಕಾಣುವ ನಕ್ಷತ್ರಗಳನ್ನು ಎಣಿಸಿ, ಈ ಐಡಿಯಾ ತುಂಬಾ ರೊಮ್ಯಾಂಟಿಕ್ ಅಲ್ವಾ? ಹೊಸ ವರ್ಷದಂದು ಬಾಗಿಲು ತೆರೆಯಬೇಕು ಎಂದು ಹೇಳಲಾಗುವುದು.
ಕಣ್ಣೀರು ಬೇಡ, ಮುಖದಲ್ಲಿ ನಗು ಬರಲಿ
ಹೊಸ ವರ್ಷದ ದಿನ ಜಗಳವಾಡಬೇಡಿ, ಕಣ್ಣೀರು ಹಾಕಬೇಡಿ, ಇಬ್ಬರು ಖುಷಿಯಾಗಿ ಸಮಯವನ್ನು ಕಳೆಯಿರಿ, ಈ ದಿನ ಯಾವುದೇ ವಾದ, ವಿವಾದ ಬೇಡ್ವೆ ಬೇಡ... ನಿಮ್ಮಿಬ್ಬರ ನಡುವೆ ನಡೆದ ಖುಷಿಯ ವಿಚಾರಗಳನ್ನು ಮೆಲುಕು ಹಾಕಿ, ಒಟ್ಟಿನಲ್ಲಿ ಖುಷಿಯಾಗಿ ಕಳೆಯಿರಿ.
ಜೊತೆಯಾಗಿ ಕುಣಿದು ಕುಪ್ಪಳಿಸಿ
ಹೊಸ ವರ್ಷದ ದಿನ ಎಲ್ಲಾ ಕಡೆ ಸಂಭ್ರಮವಿರುವುದರಿಂದ ನೀವು ಮ್ಯೂಸಿಕ್ ಹಾಕಿ ಸ್ಟೆಪ್ ಹಾಕಿದರೆ ಯಾರು ಏನೂ ಹೇಳುವುದಿಲ್ಲ, ಹಾಗಂತ ಬೇರೆಯವರಿಗೆ ತೊಂದರೆಯಾಗುವಂತೆ ಬೇಡ, ನಿಮ್ಮಿಬ್ಬರಿಗೆ ಕೇಳುವಂತೆ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿ.. ಇಲ್ಲದಿದ್ದರೆ ಇಬ್ಬರು ಜೊತೆಯಲ್ಲಿ ಕುಳಿತು ರೊಮ್ಯಾಂಟಿಕ್ ಹಾಡುಗಳನ್ನು ಕೇಳಿ.
ಊಟವನ್ನು ಆನಂದಿಸಿ
ಈ ದಿನ ನಿಮಗೆ ಇಷ್ಟವಾದ ಭೋಜನವನ್ನು ಸವಿಯಿರಿ, ಮನೆಯಲ್ಲಿ ಆದರೆ ಡೈನಿಂಗ್ ಡೇಬಲ್ ಕ್ಯಾಂಡಲ್ ಲೈಟ್ ಡಿನ್ನರ್ ಆದರೆ ಇನ್ನೂ ಸೂಪರ್, ಇಬ್ಬರು ಹೊರಗಡೆ ಹೋಗಿ ರೆಸ್ಟೋರೆಂಟ್‌ನಲ್ಲಿ ತಿಂದು ಬಂದು ನಂತರ ಮಿಡ್‌ನೈಟ್‌ನಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಬಹುದು...
ಹ್ಯಾಪಿ ನ್ಯೂ ಇಯರ್....



Click it and Unblock the Notifications
