Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಹೆಂಡತಿ ಈ 5 ಮಾತಗಳನ್ನು ಗಂಡನಿಗೆ ಹೇಳಿದ್ದೇ ಆದರೆ ಅವರ ಸಂಬಂಧ ದುರ್ಬಲವಾಗುತ್ತೆ
ಗಂಡ ಹೆಂಡತಿ ಸಂಬಂಧ ಎಂದರೆ ಯಾವುದೇ ಮುಚ್ಚುಮರೆ ಇರಬಾರದು, ಆದರೆ ಇಬ್ಬರ ನಡುವೆ ಬಾಂಧವ್ಯ ಚೆನ್ನಾಗಿರಲು ಕೆಲವೊಂದು ವಿಷಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಂಡರೆ ಒಳ್ಳೆಯದು, ಒಂದು ವೇಳೆ ಹೇಳಿದರೆ ಅದುವೇ ಸಾಕು ನಿಮ್ಮ ಸಂಬಂಧವನ್ನು ಹಾಳು ಮಾಡಲು ಹಾಗಾಗಿ ಈ ಮಾತುಗಳನ್ನು ನಿಮ್ಮ ಗಂಡನ ಬಳಿ ಹೇಳಲೇಬೇಡಿ ಅಥವಾ ಈ ಬಗ್ಗೆ ಚರ್ಚಿಸಲೇಬೇಡಿ ನೋಡಿ:

ನಿನ್ನ ಮನೆಯವರನ್ನು ಕಂಡರೆ ನನಗಾಗಲ್ಲ
ಈ ಮಾತನ್ನು ನಿಮ್ಮ ಸಂಗಾತಿಗೆ ಹೇಳಲೇಬೇಡಿ. ಅವರ ನೀವು ಸಿಗುವ ಮುನ್ನ ಆ ಕುಟುಂಬದ ಜೊತೆಗೆ ಬೆಳೆದವರು, ನೀವು ಸಿಕ್ಕ ಮೇಲೆ ನಿಮಗಿಷ್ಟವಲ್ಲದಿದ್ದರೆ ಅವರು ಕೂಡ ಅವರ ಕುಟುಂಬದಿಂದ ದೂರವಿರಬೇಕು ಎಂದು ಬಯಸುವುದೇ ತಪ್ಪು ನೋಡಿ. ಅಲ್ಲದೆ ನೀವು ಈ ಮಾತುಗಳನ್ನು ಅವರಿಗೆ ಹೇಳುವುದರಿಂದ ಅವರಿಗೆ ಅವರ ಕುಟುಂಬದ ಮೇಲಿನ ಅಭಿಪ್ರಾಯ ಬದಲಾಗಲ್ಲ, ಬದಲಿಗೆ ನಿಮ್ಮ ಮೇಲಿನ ಅಭಿಪ್ರಾಯ ಬದಲಾಗುವುದು, ಇದೇ ಕಾರಣಕ್ಕೆ ಅವರು ನಿಮ್ಮ ಬಗ್ಗೆ ನಿರ್ಲಕ್ಷ್ಯ ಕೂಡ ಮಾಡಬಹುದು, ಹೌದು ನಿಮ್ಮ ಗಂಡನ ಕುಟುಂಬದ ಜೊತೆ ಕೆಲವೊಂದು ಭಿನ್ನಾಭಿಪ್ರಾಯ ನಿಮಗಿರಬಹುದು, ಆದರೆ ಇದರ ಬಗ್ಗೆ ನೀವು ಮಾತ್ರ ನಿಮ್ಮ ಗಂಡನ ಬಳಿ ಚರ್ಚೆ ಮಾಡಲು ಹೋಗಬೇಡಿ.
ಮಾಜಿ ಪ್ರೇಮಿ ಜೊತೆಗಿನ ಖಾಸಗಿ ಅನುಭವ
ಮಾಜಿ ಪ್ರೇಮಿ ಬಗ್ಗೆ ನೀವು ನಿಮ್ಮ ಸಂಗಾತಿಗೆ ಹೇಳಿರಬಹುದು ಅಥವಾ ಅವರಿಗೆ ಆ ಬಗ್ಗೆ ಗೊತ್ತಿದ್ದೇ ನಿಮ್ಮನ್ನು ಮದುವೆಯಾಗಿರಬಹುದು, ಆದರೆ ಆ ವಿಷಯ ಮತ್ತೆ ಹೇಳುವುದು ಮಾಡಬೇಡಿ, ಅಲ್ಲದೆ ಅವನೊಂದಿಗೆ ಕಳೆದ ಖಾಸಗಿ ಕ್ಷಣಗಳ ಬಗ್ಗೆಯೂ ಹೇಳಲು ಹೋಗಬಾರದು.
ಹಣದ ವಿಷಯಕ್ಕೆ ಹೀಯಾಳಿಸುವುದು
ಇದನ್ನು ಯಾವತ್ತಿಗೂ ಮಾಡಬಹುದು, ಈಗ ನಿಮ್ಮ ಪತಿಗೆ ಆರ್ಥಿಕ ಸಮಸ್ಯೆಗಳಿರಬಹುದು ಆದರೆ ನೀವು ಬೆಂಬಲ ನೀಡಿದರೆ ಅದರಿಂದ ಹೊರ ಬರಲು ಸಾಧ್ಯವಾಗುವುದು.ಅದೇ ನೀವೇ ಹೀಯಾಳಿಸಿದರೆ ಅವರ ಆತ್ಮವಿಶ್ವಾಸ ಕಡಿಮೆಯಾಗುವುದು. ಹಾಗಾಗಿ ಕಷ್ಟದ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಿ. ಅಲ್ಲದೆ ಬೇರೆಯವರ ಮುಂದೆ ಕೂಡ ಇದೇ ವಿಷಯ ಹೇಳಿ ಹೀಯಾಳಿಸುವುದು ಮಾಡಬೇಡಿ.
ಬೇರೆಯವರ ಜೀವನದ ಜೊತೆ ಹೋಲಿಕೆ ಮಾಡಿ ಹೇಳುವುದು
ಹೌದು ಈ ರೀತಿ ಹೇಳುತ್ತಿದ್ದರೆ ನಿಮ್ಮ ಜೀವನವನ್ನು ನೀವು ಅನುಭವಿಸುವುದು ಯಾವಾಗ? ಅಲ್ಲದೆ ಈ ಬಗ್ಗೆ ಹೋಲಿಕೆ ಮಾಡುತ್ತಿದ್ದರೆ ನಿಮ್ಮ ಪತಿಗೆ ನಿಮ್ಮ ಮೇಲೆ ತುಂಬಾನೇ ಬೇಸರವಾಗುವುದು, ಅಲ್ಲದೆ ತನ್ನ ಪತ್ನಿ ಹೇಳುವಂತೆ ನಾನು ಅಸಮರ್ಥನೇ ಎಂದೆಲ್ಲಾ ಅನಿಸಲಾರಂಭಿಸುವುದು. ಹಾಗಾಗಿ ನಿಮ್ಮ ಜೀವನ ಆನಂದಿಸಿ, ಬೇರೆಯವರ ಜೊತೆ ಹೋಲಿಕೆ ಮಾಡಿ ಇರುವ ಅಲ್ಪ ಖುಷಿಯನ್ನು ಕಳೆದುಕೊಳ್ಳಬೇಡಿ.
ನೀನು ಬದಲಾಗುವುದೇ ಇಲ್ಲ, ಉದ್ಧಾರವಾಗುವುದೇ ಇಲ್ಲ
ಈ ರೀತಿಯೆಲ್ಲಾ ಪರಿಗೆ ಹೇಳಬೇಡಿ, ಯಾವುದೋ ಕಾರಣಕ್ಕೆ ನಿಮಗೆ ಅವರ ಮೇಲೆ ಬೇಸರವಾಗಬಹುದು, ಅದನ್ನು ಅವರಿಗೆ ಒಳ್ಳೆಯ ರೀತಿಯಲ್ಲಿ ತಿಳಿಸಿ ಅದರ ಬದಲಿಗೆ ನೀನು ಹೀಗೆ ಅಂತ ಗೊತ್ತು, ಬದಲಾಗಲ್ಲ, ಉದ್ಧಾರವಾಗಲ್ಲ ಎಂದೆಲ್ಲಾ ಹೇಳಬೇಡಿ. ನಿನ್ನಿಂದ ಅಸಾಧ್ಯ ಅಂತೆಲ್ಲಾ ಹೇಳಲೇಬೇಡಿ. ಇಂಥ ಮಾತುಗಳೇ ಸಂಬಂಧದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದು.' ಹಾಗಾಗಿ ಈ ಬಗೆಯ ಮಾತುಗಳನ್ನು ನಿಮ್ಮ ಗಂಡನಿಗೆ ಹೇಳಲೇಬೇಡಿ.
ಸಂಸಾರ ಎಂದ ಮೇಲೆ ಅಲ್ಲಿ ಪ್ರೀತಿ, ನಾನಾ ಸಮಸ್ಯೆಗಳು ಎಲ್ಲಾ ಇರುತ್ತದೆ. ಸಮಸ್ಯೆಗಳು ಬಂದಾಗ ಅವರ ಜೊತೆಗೂಡಿ ಎದುರಿಸುವ ಪ್ರಯತ್ನ ಮಾಡಿ, ಆವಾಗ ಇಬ್ಬರ ಸಂಬಂಧ ತುಂಬಾನೇ ಗಟ್ಟಿಯಾಗುವುದು.



Click it and Unblock the Notifications
