Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪತಿ-ಪತ್ನಿ ಮಾಡೋ ಈ ತಪ್ಪುಗಳು ಸಂಸಾರಕ್ಕೆ ಕೊಳ್ಳಿ ಇಡಬಹುದು ಎಚ್ಚರ!
ದಾಂಪತ್ಯದಲ್ಲಿ ಪ್ರೀತಿ ಇದ್ದಷ್ಟೇ ಜಗಳ, ಕೋಪ, ಮನಸ್ಥಾಪಗಳು ಕೂಡ ಇರುತ್ತದೆ. ಹಾಗಂತ ದಂಪತಿಗಳು ಅದನ್ನೇ ದೊಡ್ಡದು ಮಾಡುತ್ತಾ ಕೂರಬಾರದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮಾತ್ರ ಸಂಸಾರದಲ್ಲಿ ಸುಖ ಕಾಣೋದಕ್ಕೆ ಸಾಧ್ಯ. ಕೆಲವೊಂದು ಸಲ ಸಂಪತಿಗಳನ್ನು ಮಾಡೋ ಸಣ್ಣ ತಪ್ಪುಗಳು ಬಹುದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಕೊನೆಗೆ ಈ ಕಲಹ ವಿಚ್ಛೇದನದವರೆಗೂ ಹೋದ ಉದಾಹರಣೆಗಳಿದೆ. ಹಾಗಾದ್ರೆ ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ಮಾಡಲೇಬಾರದ ಆ ತಪ್ಪುಗಳು ಯಾವುದು ಅನ್ನೋದನ್ನ ತಿಳಿಯೋಣ.

1. ನೀವು ಹೇಳಿದ್ದೇ ಸರಿ ಎಂದು ವಾದಿಸಬೇಡಿ
ದಂಪತಿಗಳ ಮಧ್ಯೆ ಯಾವುದಾದರೊಂದು ವಿಚಾರಕ್ಕೆ ಜಗಳ ನಡೆದಾಗ ದಂಪತಿಗಳಲ್ಲಿ ಯಾರಾದರೂ ಒಬ್ಬರು ಆ ಜಗಳವನ್ನು ನಿಲ್ಲಿಸೋದಕ್ಕೆ ಪ್ರಯತ್ನಿಸಿ. ಅದನ್ನು ಬಿಟ್ಟು ನಾನು ಹೇಳಿದ್ದೇ ಸರಿ ಎಂದು ವಾದಿಸೋದಕ್ಕೆ ಹೋಗಬೇಡಿ. ಒಂದೆರಡು ಸಲ ನಿಮ್ಮ ಸಂಗಾತಿ ಸುಮ್ಮನಿರಬಹುದು. ಆದರೆ ಪ್ರತಿ ಸಲ ನೀವು ಹೇಳಿದ್ದೇ ಸರಿ ಎಂದು ವಾದಿಸುತ್ತಾ ಹೋದರೆ ನಿಮ್ಮ ಸಂಗಾತಿ ನಿಮ್ಮ ನಡವಳಿಕೆಯಿಂದ ಬೇಸತ್ತು ಹೋಗಿ ಕೊನೆಗೆ ಅವರಿಗೆ ಸಂಸಾರವೇ ಸಾಕು ಎನಿಸಬಹುದು.
2. ನೀವೇ ಗೆಲ್ಲಬೇಕು ಎಂಬ ಹಠ ಬೇಡ
ಸಂಸಾರ ಎಂದ ಮೇಲೆ ಸರಿದೂಗಿಸಿಕೊಂಡು ಹೋಗಬೇಕು. ಅದನ್ನು ಬಿಟ್ಟು ನಾನು ಮಾಡಿದ್ದೇ ಸರಿ. ಪ್ರತಿ ಬಾರಿ ನನ್ನ ಮಾತೇ ಮೇಲಾಗಬೇಕು. ಮನೆಯಲ್ಲಿ ಎಲ್ಲವೂ ನನ್ನ ಮಾತಿನಂತೆ ನಡೆಯಬೇಕು ಎನ್ನುವ ನಿಮ್ಮ ನಡವಳಿಕೆ ತಪ್ಪು. ನಿಮ್ಮ ಸಂಗಾತಿಯ, ಮಾತು, ನಿರ್ಧಾರಗಳನ್ನು ಗಣನೆಗೆ ತೆಗೆದುಕೊಳ್ಳಿ. ಸಂಸಾರದಲ್ಲಿ ಇಬ್ಬರ ನಿರ್ಧಾರಗಳು ಮುಖ್ಯವಾಗುತ್ತದೆ. ಅದನ್ನು ಬಿಟ್ಟು ನೀವೆ ಗೆಲ್ಲಬೇಕೆನ್ನುವ ಹಠ ಬೇಡ.
3. ನಿಮ್ಮ ಮನೆ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಅದೇ ರೀತಿ ನಿಮ್ಮ ಮನೆಯಲ್ಲಿ ಏನು ನಡೆಯುತ್ತೋ ಅದು ಮೂರು ಗೋಡೆಯ ಮಧ್ಯೆ ಇರಬೇಕೇ ಹೊರತು. ನಿಮ್ಮ ಸ್ನೇಹಿತರು ಅಥವಾ ಆಪ್ತರ ಜೊತೆಗೆ ಮನೆಯಲ್ಲಾದ ವಿಚಾರಗಳ ಬಗ್ಗೆ ಹೇಳಿಕೊಳ್ಳಬೇಡಿ. ನಿಮ್ಮ ಸಂಗಾತಿಗೆ ನಿಮ್ಮ ಈ ನಡವಳಿಕೆಗಳು ಇಷ್ಟ ಆಗೋದಿಲ್ಲ. ಇದರಿಂದ ನಿಮ್ಮ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಬಹುದು.
4. ರಾಜಿ ಮಾಡಿಕೊಳ್ಳದೇ ಇರುವುದು
ದಾಂಪತ್ಯ ಎಂದ ಮೇಲೆ ಜಗಳ ನಡೆಯೋದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಒಬ್ಬರಲ್ಲ ಮತ್ತೊಬ್ಬರು ರಾಜಿ ಮಾಡಿಕೊಳ್ಳಲೇಬೇಕು. ಅದನ್ನು ಬಿಟ್ಟು ನೀವು ಅವರ ಮುಂದೆ ಚಿಕ್ಕವರಾಗುತ್ತೀರಿ ಎಂದು ರಾಜಿ ಮಾಡಿಕೊಳ್ಳಲು ಹೋಗದೇ ಇದ್ದರೆ ಖಂಡಿತ ಇದು ನಿಮ್ಮ ಜೀವನದಲ್ಲಿ ಸಮಸ್ಯೆಯನ್ನು ಉಂಟು ಮಾಡದೇ ಇರೋದಿಲ್ಲ. ಪ್ರತಿ ಬಾರಿ ನಿಮ್ಮ ಸಂಗಾತಿಯೇ ರಾಜಿ ಮಾಡಿಕೊಳ್ಳಲಿ ಎಂದು ಕಾಯಬೇಡಿ. ಕೆಲವೊಂದು ಸಾರಿ ನೀವು ಅವರ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಳ್ಳೋದ್ರಲ್ಲಿ ತಪ್ಪಿಲ್ಲ.
5. ಮಾತು ಬಿಡಬೇಡಿ
ಕೆಲವರ ಗುಣ ಹೇಗಿರುತ್ತೆ ಎಂದರೆ ಸ್ವಲ್ಪ ಜಗಳವಾದ ತಕ್ಷಣ ಸಂಗಾತಿಯೊಂದಿಗೆ ಮಾತನಾಡೋದನ್ನೇ ನಿಲ್ಲಿಸಿ ಬಿಡುತ್ತಾರೆ. ಸಣ್ಣ-ಪುಟ್ಟ ಜಗಳಕ್ಕೆ ಮಾತನಾಡೋದನ್ನು ನಿಲ್ಲಿಸಿದರೆ ನಿಮ್ಮೊಳಗಿನ ಸಮಸ್ಯೆ ದೊಡ್ಡದಾಗುತ್ತಾ ಹೋಗುತ್ತದೆ. ದಾಂಪತ್ಯದಲ್ಲಿ ಮಾತುಕತೆ ನಿಂತು ಹೋದರೆ ಚಿಕ್ಕ ಸಮಸ್ಯೆ ದೊಡ್ಡದಾಗುತ್ತಾ ಹೋಗಬಹುದು. ಇದುವೇ ನಿಮ್ಮ ಸಂಸಾರದಲ್ಲಿ ಬಿರುಕುಂಟು ಮಾಡಿದ್ರು ಕೂಡ ಯಾವುದೇ ಅನುಮಾನವಿಲ್ಲ.
6. ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು
ಮದುವೆಗೂ ಮೊದಲು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಸಾಮಾನ್ಯ. ಆದರೆ ಎಂತಹ ವ್ಯಕ್ತಿಗಳು ಕೂಡ ಮದುವೆಯಾದ ಮೇಲೆ ಬದಲಾಗುತ್ತಾರೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಆದರೆ ಮದುವೆಯಾದ ಮೇಲೆಕೂಡ ನೀವು ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಳ್ಳದಿದ್ದರೆ ಖಂಡಿತ ಸಂಸಾರದಲ್ಲಿ ಕಲಹ ಹುಟ್ಟಿಕೊಳ್ಳುತ್ತದೆ. ನಿಮ್ಮ ಸಂಗಾತಿಯೊಬ್ಬರ ಮೇಲೆ ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಹೊರಿಸಬೇಡಿ. ಇಬ್ಬರು ಸಮನಾಗಿ ಸಂಸಾರದ ದೋಣಿಯನ್ನು ಸಾಗಿಸಿದರೆ ಮಾತ್ರ ಸುಖವಾಗಿರಲು ಸಾಧ್ಯ.
ಇದೆಲ್ಲಾ ದಾಂಪತ್ಯ ಜೀವನದಲ್ಲಾಗುವ ಸಣ್ಣ-ಪುಟ್ಟ ತಪ್ಪುಗಳು. ಇದನ್ನೆಲ್ಲಾ ಸರಿಪಡಿಸಿಕೊಂಡು ಮುನ್ನಡೆದರೆ ಮಾತ್ರ ಸಂಸಾರದಲ್ಲಿ ಸುಖ ಕಾಣಲು ಸಾಧ್ಯ.



Click it and Unblock the Notifications


