Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿಚ್ಚೇದನ ಆದರೆ ಆಸ್ತಿ ನಷ್ಟವಾಗಬಾರದೆಂದು ಹಾರ್ದಿಕ್ ಹಾಗೆ ಮಾಡಿದರೇ? ವಿಚ್ಛೇದನ ಬಗ್ಗೆ ಸುಳಿವು ಕೊಟ್ಟ ನತಾಶಾರ ಆ ಮಾತುಗಳು
ಬಹುತೇಕ ಸೆಲೆಬ್ರಿಟಿಗಳ ವಿವಾಹ ಬಂಧ ವಿಚ್ಛೇದನದಲ್ಲಿ ಕೊನೆಯಾದಾಗ ತುಂಬಾನೇ ಸದ್ದು ಮಾಡುತ್ತದೆ. ಕೆಲವೊಂದು ರೂಮರ್ ಹಬ್ಬುತ್ತದೆ, ಇನ್ನು ಕೆಲ ರೂಮರ್‌ಗಳು ಅದು ರೂಮರ್ ಅಲ್ಲ ಸತ್ಯ ಎಂಬುವುದು ಅವರು ವಿಚ್ಛೇದನ ಘೋಷಿಸಿಕೊಂಡಾಗ ತಿಳಿಯುತ್ತದೆ, ಈಗ ಎಲ್ಲಾ ಕಡೆ ಕೇಳಿ ಬರುತ್ತಿರುವ ಸುದ್ದಿ ಅಂದ್ರೆ ಅದು ಹಾರ್ದಿಕ್ ಪಾಂಡ್ಯ ವಿಚ್ಛೇದನ.

ವಿಚ್ಚೇದನದ ಸುಳಿವು ಕೊಟ್ಟರೇ ನತಾಶಾ ಸ್ಟಾನ್ಕೊವಿಕ್
ಕಳೆದ ವಾರದಿಂದ ಹಾರ್ದಿಕ್ ಪಾಂಡ್ಯ ವಿಚ್ಚೇದನ ಸುದ್ದಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ನತಾಶಾ ಹಾರ್ದಿಕ್ ಪಾಂಡ್ಯರ ಇತ್ತೀಚಿನ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಐಪಿಎಲ್ ಮ್ಯಾಚ್ ನೋಡಲು ಬಾರದೇ ಇರುವುದು, ಇನ್ನು ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಯಾವುದೇ ಶುಭಾಶಯ ತಿಳಿಸಿರಲಿಲ್ಲ ಇವೆಲ್ಲವೂ ಇವರಿಬ್ಬರು ವಿಚ್ಚೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಮೂಡಲು ಕಾರಣವಾಯ್ತು.
ಈಗ ನತಾಶಾ ಪ್ರತಿಕ್ರಿಯೆ ವಿಚ್ಛೇದನ ಸುಳಿವು ಇರಬಹುದೇ?
ಮಾಧ್ಯಮದವರ ಕಣ್ಣಿಗೆ ನತಾಶಾ ಬಿದ್ದಾಗ ವಿಚ್ಚೇದನದ ರೂಮರ್ ಬಗ್ಗೆ ಕೇಳಲಾಯ್ತು ಅದಕ್ಕೆ ಅವರು ಕೊಟ್ಟ ಉತ್ತರ ಮಾತ್ರ ತುಂಬಾನೇ ಸರ್‌ಪ್ರೈಸ್ ಆಗಿತ್ತು ಥ್ಯಾಂಕ್ಯೂ ವೆರಿ ಮಚ್ ಎಂದು ಹೇಳಿ ಮತ್ತೇನೂ ಪ್ರತಿಕ್ರಿಯಿಸದೆ ಕಾರಿನಲ್ಲಿ ಹೊರಟು ಹೋದರು. ಅವರಿಗೆ ರೂಮರ್ ಅಂತ ಹೇಳಬಹುದಿತ್ತು, ಆದರೆ ಥ್ಯಾಂಕ್ಯೂ ವೆರಿಮಚ್ ಎಂದು ಹೇಳಿರುವುದು ಮಾತ್ರ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ.
ವೈರಲ್ ಆದ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿ ಬಗ್ಗೆ ಹೇಳಿದ ಹಳೆಯ ವೀಡಿಯೋ ಕೂಡ ವೈರಲ್
ವೈರಲ್ ಮದುವೆಗೆ ಮೊದಲು ಹೇಳಿರುವ ಮಾತು ಈಗ ವೈರಲ್ ಆಗುತ್ತಿದೆ, ಏನೆಂದರೆ ಅವರು ನಮ್ಮ ಎಲ್ಲಾ ಆಸ್ತಿ ನಮ್ಮ ಹೆಸರಿನಲ್ಲಿ ಇಲ್ಲ ಅಪ್ಪ-ಅಮ್ಮ, ಒಡ ಹುಟ್ಟಿದವರ ಹೆಸರಿನಲ್ಲಿ ಇದೆ. ಹಾಗಾಗಿ ನನ್ನ ಆಸ್ತಿಯಲ್ಲಿ ಜೀವಾಂಶ ಅಂತ ಏನೂ ಸಿಗಲ್ಲ ಎಂದು ತಮಾಷೆಯಾಗಿ ಹೇಳಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಸೆಲೆಬ್ರಿಟಿಗಳು ವಿಚ್ಚೇದನವಾದಾಗ ಅವರು ಕೊಡುವ ಜೀವಾಂಶ ಕೋಟಿ-ಕೋಟಿ ಇರುತ್ತದೆ, ಹಾಗಾಗಿ ನೂರಾರು ಕೋಟಿಯ ಒಡೆಯನಾಗಿರುವ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯನ್ನೆಲ್ಲಾ ಪೋಷಕರ ಹೆಸರಿನಲ್ಲಿ ಇಟ್ಟಿದ್ದಾರೆ, ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿ ಯಾವ ಕೋಟಿಗಳೂ ಇಲ್ಲ, ಹಾಗಾಗಿ ಪತ್ನಿಗೆ ಜೀವನಾಂಶ ಕೋಟಿಗಳೇನು ಸಿಗಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ವಿಚ್ಛೇದನದ ಬಗ್ಗೆ ಇಬ್ಬರೂ ಏನೂ ಹೇಳಿಲ್ಲ.
ಹಾರ್ದಿಕ್ ಪಾಂಡ್ಯಗೆ ಮದುವೆಯಾದರೆ ಮುಂದೆ ಈ ರೀತಿ ಆಗಬಹುದು ಎಂಬ ಸಂಶಯವಿತ್ತೇ?
ಮದುವೆ ಅಂತ ಆಗುವಾಗ ಈ ವ್ಯಕ್ತಿಯ ಜೊತೆಗೆ ಕೊನೆಯವರೆಗೂ ಬಾಳುತ್ತೇನೆ ಎಂದು ಅಂದುಕೊಳ್ಳುತ್ತೇವೆ, ಆದರೆ ಹಾರ್ದಿಕ್ ಪಾಂಡ್ಯ ಆಡಿರುವ ಮಾತುಗಳನ್ನು ಕೇಳಿದಾಗ ಅವರಿಗೆ ಅವರ ವೈವಾಹಿಕ ಬದುಕು ಮುರಿದು ಬಿದ್ದರೂ ಬೀಳಬಹುದು ಎಂಬ ಕಲ್ಪನೆಯಿತ್ತು, ಬಹುಶಃ ಅವರು ತುಂಬಾ ಸೆಲೆಬ್ರಿಟಿಗಳ ಬದುಕಿನಲ್ಲಿ ಮದುವೆ-ವಿಚ್ಛೇದನ ಕೇಳಿ ಈ ಮದುವೆ ಜೀವನ ಕೊನೆಯವರೆಗೆ ಇರುತ್ತೆ ಅಂತ ಹೇಳಲು ಸಾಧ್ಯವಿಲ್ಲ ಎಂಬ ಸಂಶಯ ಅವರ ಮನಸ್ಸಿನಲ್ಲಿತ್ತು ಇತ್ತು ಎಂಬುವುದು ಸತ್ಯ.
ಹಾರ್ದಿಕ್ ಪಾಂಡ್ಯಗೆ ಈ ವರ್ಷ ಹೊಡೆತ ಮೇಲೆ ಹೊಡೆತ
ವೃತ್ತಿ ಜೀವನದಲ್ಲಿಯೂ ಈ ವರ್ಷ ಹಾರ್ದಿಕ್ ಪಾಂಡ್ಯಗೆ ಟೀಕೆಗಳ ಮೇಲೆ ಟೀಕೆ... ಇತ್ತ ವೈಯಕ್ತಿಕ ಬದುಕಿನಲ್ಲಿಯೂ ಬಿರುಗಾಳಿಯ ಸೂಚನೆ... ಯಾರ ಬದುಕಿನಲ್ಲಿ ಆದರೂ ಒಂದು ಕೆಟ್ಟ ಕ್ಷಣಗಳಿರುತ್ತದೆ, ಇವೆಲ್ಲಾ ದೂರಾಗಿ ಅವರ ಬದುಕು ಶಾಂತ ರೀತಿಯಲ್ಲಿ ಮುಂದುವರೆಯಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.



Click it and Unblock the Notifications
