Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚೈಸ್ಯಾಮ್ ಮತ್ತೆ ಒಂದಾದರೆ? ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ ನಾಗಚೈತನ್ಯ ಹಂಚಿಕೊಂಡಿರುವ ಆ ಫೋಟೋಗಳು
ಸಮಂತಾ-ನಾಗಚೈತನ್ಯ ಮದುವೆಯಾದಾಗ ಈ ಜೋಡಿಯನ್ನು ತುಂಬಾನೇ ಮೆಚ್ಚಿಕೊಂಡಿದ್ದರು. 10 ವರ್ಷ ಪ್ರೇಮಿಸಿ ಮದುವೆಯಾದ ಜೋಡಿ ಮದುವೆಯಾಗಿ 3 ವರ್ಷದಲ್ಲಿ ಬೇರ್ಪಟ್ಟಾಗ ಎಲ್ಲಾ ಹುಸಿ ಮುನಿಸು ಮರೆತು ಈ ಜೋಡಿ ಮತ್ತೆ ಒಂದಾಗಬಾರದಾ? ಎಂದು ಅವರ ಅಭಿಮಾನಿಗಳು ಬಯಸಿದ್ದರು.

ಇಬ್ಬರು ಒಂದಾಗುವಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದರು. ಆದರೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಾವು ಜೊತೆಗಿರುವ ಫೋಟೋಗಳನ್ನು ರಿಮೂವ್ ಮಾಡುವ ಮೂಲಕ ಇಬ್ಬರು ತಮ್ಮ-ತಮ್ಮ ದಾರಿ ನೋಡಿಕೊಂಡು ನಡೆದಿದ್ದರು. ಆದರೆ ಈ ಜೋಡಿ ಮತ್ತೆ ಒಂದಾಗುವುದೇ ಎಂಬ ಕುತೂಹಲ ಜನರಲ್ಲಿ ಮೂಡಿದೆ, ಅದಕ್ಕೆ ಕಾರಣ ನಾಗಚೈತನ್ಯ ಹಂಚಿಕೊಂಡ ಆ ಫೋಟೋಗಳು....
ವಿಚ್ಛೇದನದ ಬಳಿಕ ಸಮಂತಾ ಬದುಕಿನಲ್ಲಿ ಸಮುದ್ರದ ಅಲೆಯಂತೆ ಬಂದೆರಗಿದ ಸಮಸ್ಯೆಗಳು ಎಲ್ಲರಿಗೆ ಗೊತ್ತಿರುವ ವಿಷಯ... ವಿಚ್ಛೇದನದ ಬಳಿಕ ವೃತ್ತಿ ಬದುಕಿನಲ್ಲಿ ಅದೇ ಪಾಪ್ಯೂಲರಿಟಿ ಉಳಿಸಿಕೊಂಡಿದ್ದ ಸಮಂತಾರಿಗೆ ಆರೋಗ್ಯ ಹದಗೆಟ್ಟಿತು. ಮಯೋಸೈಟಿಸ್ ಎಂಬ ಅಟೊಇಮ್ಯೂನೆ ಕಾಯಿಲೆ ಅವರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿತು. ಸಮಂತಾ ತಮ್ಮ ಅನಾರೋಗ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಾಗ ಅಯ್ಯೋ ಹೀಗಾಯ್ತಲ್ಲ ಎಂದು ಜನ ಮರುಗಿದ್ದರು. ಆ ಕಾಯಿಲೆ ಸಮಂತಾರನ್ನು ತುಂಬಾನೇ ಕುಗ್ಗುವಂತೆ ಮಾಡಿತು. ಎದ್ದು ಓಡಾಡುವುದು ಕೂಡ ಕಷ್ಟವಾಯಿತು.
ಆದರೆ ಆತ್ಮವಿಶ್ವಾಸ ಮೂಲಕ ಆ ಕಾಯಿಲೆಯನ್ನು ಮಣಿಸುವ ಪ್ರಯತ್ನದಲ್ಲಿದ್ದಾರೆ ಸಮಂತಾ. ಸಮಂತಾ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬುವುದು ಅವರ ಈಗೀನ ಫೋಟೋಗಳನ್ನು ನೋಡಿದಾಗ ತಿಳಿಯುತ್ತೆ. ಸಮಂತಾ ತುಂಬಾನೇ ಗೆಲುವಿನಿಂದ ಕಾಣುತ್ತಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತೆ ಸಕ್ರೀಯವಾಗುತ್ತಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾಗಚೈತನ್ಯ ಮತ್ತೆ ಅವರ ಬಳಿ ಮರಳಿ ಬರಬಾರದೇ , ಸಿನಿಮಾಗಳಲ್ಲಿ ಕಾಣುವಂತೆ ಇವರ ಜೀವನ ಹ್ಯಾಪಿ ಎಂಡಿಂಗ್ ಆಗಬಾರದೇ ಎಂದು ಸ್ಯಾಮ್-ಚೈ ಕಟ್ಟಾಭಿಮಾನಿಗಳು ಮತ್ತೊಮ್ಮೆ ಬಯಸಿದ್ದರು. ಈಗ ನಾಗ ಚೈತನ್ಯ ಹಂಚಿಕೊಂಡಿರುವ ಫೋಟೋಗಳು ಈ ಜೋಡಿ ಮುಂದಾಗುವ ಸೂಚನೆ ಮೂಡಿಸುತ್ತಿದೆ.
ಇತ್ತೀಚೆಗೆ ನಾಗಚೈತನ್ಯ ಸಮಂತಾ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನ ಬಳಿಕ ಜೋಡಿಯಾಗಿರುವ ಫೋಟೋವನ್ನು ನಾಗಚೈತನ್ಯ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಹ್ಯಾಪಿ ಟೈಮ್ ವಿಥ್ ಹ್ಯಾಶ್ ಎಂದು ಅವರ ಸಾಕುನಾಯಿಯ ಫೋಟೋವನ್ನು ಹಂಚಿಕೊಂಡಿದ್ದರು. ಕಾರಿನಲ್ಲಿ ಕುಳಿತು ಸೂರ್ಯಾಸ್ತ ಕಣ್ತುಂಬಿಕೊಳ್ಳುವ ಫೋಟೋ ಅದಾಗಿದೆ. ಈ ಹ್ಯಾಶ್ ನಾಯಿ ನಾಗಚೈತನ್ಯ ಹಾಗೂ ಸಮಂತಾ ಮೊದಲ ವಿವಾಹ ವಾರ್ಷಿಕೋತ್ಸವದಲ್ಲಿ ಮನೆಗೆ ಸ್ವಾಗತಿಸಿದ್ದರು. ವಿಚ್ಛೇದನದ ಬಳಿಕ ಈ ಮುದ್ದಿನ ನಾಯಿಯನ್ನು ಸಮಂತಾ ನೋಡಿಕೊಳ್ಳುತ್ತಿದ್ದರು. ಇದೀಗ ಈ ನಾಯಿ ಜೊತೆಗೆ ನಾಗಚೈತನ್ಯ ಹಾಕಿಕೊಂಡಿರುವ ಫೋಟೋಗಳು ಇವರ ಬದುಕಿನ ಕಾರ್ಮೋಡಗಳು ದೂರಾಗಿ , ಪ್ರೀತಿಯ ತಂಗಾಳಿ ಮತ್ತೊಮ್ಮೆ ಬೀಸುವುದೇ.... ಏನೇ ಆಗಲಿ ಈ ಜೋಡಿ ಒಂದಾಗಿ ಬಾಳಲಿ ಎಂಬುವುದೇ ಅವರ ಅಭಿಮಾನಿಗಳ ಆಶಯ....



Click it and Unblock the Notifications
