Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಅಮ್ಮಂದಿರ ದಿನ: ಅಮ್ಮನ ವಿಷಯದಲ್ಲಿ ಈ 4 ತಪ್ಪುಗಳನ್ನು ಮಾಡಿದರೆ ನಾವು ಒಳ್ಳೆಯ ಮಕ್ಕಳಾಗಲು ಸಾಧ್ಯವೇ ಇಲ್ಲ
ಅಮ್ಮಂದಿರ ದಿನದ ಶುಭಾಶಯಗಳು ಎಂದು ಶುಭ ಕೋರಿ, ಅಮ್ಮನ ಫೋಟೋವನ್ನು ಹಾಕಿದ ತಕ್ಷಣ ಅಮ್ಮನ ನಾವು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂದು ಕೊಂಡರೆ ಅದು ನಮ್ಮ ಭ್ರಮೆಯಷ್ಟೇ....
ಈಗ ಬಹುತೇಕ ಅಮ್ಮಂದಿರಿಗೆ ಒಂಟಿತನ ತುಂಬಾನೇ ಕಾಡುತ್ತಿದೆ. ಹೌದು ಮಕ್ಕಳೆಲ್ಲಾ ಓದಿ ಒಳ್ಳೆಯ ಕೆಲಸದಲ್ಲಿ ಇರುತ್ತಾರೆ, ಅದರ ಬಗ್ಗೆ ಅಮ್ಮನಿಗೆ ತುಂಬಾನೇ ಖುಷಿ ಇರುತ್ತದೆ, ಆದರೆ ಮಕ್ಕಳಿಗೆ ಅಮ್ಮನ ಹತ್ರ ಮಾತನಾಡಲು ಸಮಯವಿರಲ್ಲ, ಈ ಬ್ಯುಸಿ ಬ್ಯುಸಿ ಅಂತ ಇನ್ನಷ್ಟು ಹಣ ಮಾಡಬೇಕು, ಕಮಿಟ್‌ಮೆಂಟ್ ಇದೆ ಎಂದು ಓಡುತ್ತಿರುವಾಗ ಅಮ್ಮ ಹೇಗಿದ್ದೀಯ? ನಿನ್ನ ಆರೋಗ್ಯ ಹೇಗಿದೆ ಎಂದು ಕೇಳಲು ಎಷ್ಟೋ ಮಕ್ಕಳಿಗೆ ಸಮಯವಿಲ್ಲ, ಹಾಗಾಗಿ ಈ ಅಮ್ಮಂದಿರ ದಿನ ಅಮ್ಮನಿಗೆ ನೋವುಂಟಾಗದಿರಲು ಯಾವ ತಪ್ಪುಗಳನ್ನು ಮಾಡಲೇಬಾರದು ಎಂದು ನೋಡೋಣ ಬನ್ನಿ:

ಎಷ್ಟೇ ದೂರವಿರಿ, ಆದರೆ ಅವರ ಮನಸ್ಸಿಗೆ ನೀವು ದೂರ ಆಗಿದ್ದೀರಿ ಎಂದು ಅನಿಸಬಾರದು
ಕೆಲಸದ ಕಾರಣಕ್ಕೆ ನೀವು ದೂರ ಇದ್ದರೂ ಅವರಿಂದ ದೂರ ಇದ್ದೀರಿ ಎಂಬ ಎಂದು ಅವರಿಗೆ ಅನಿಸುವಂತೆ ನಡೆದುಕೊಳ್ಳಬೇಡಿ. ದಿನಾ ಫೋನ್ ಮಾಡಿ ನಿಮ್ಮ ಬಗ್ಗೆ ಹೇಳಿಕೊಳ್ಳಿ, ಅವರ ಬಗ್ಗೆ ವಿಚಾರಿಸಿ ಹೀಗೆ ಮಾಡಿದಾಗ ಅವರ ಮನಸ್ಸಿಗೂ ತುಂಬಾನೇ ನೆಮ್ಮದಿ ಇರುತ್ತದೆ. ಮಗ- ಮಗಳು ದೂರ ಇದ್ದರೂ ನಮ್ಮನ್ನು ಸುರಕ್ಷತೆವಾಗಿ ಇಟ್ಟಿದ್ದೀರಿ ಎಂಬ ಭಾವನೆ ಅವರಲ್ಲಿ ಮೂಡಬೇಕು.
ಮನೆಗೆ ಬಂದಾಗ ಅಮ್ಮನ ಜೊತೆ ಮಾತನಾಡಿ
ತುಂಬಾ ಮಕ್ಕಳನ್ನು ನೋಡುತ್ತೇವೆ ಹದಿ ಹರೆಯದ ಪ್ರಾಯಕ್ಕೆ ಬಂದಾಗ, ಯೌವನ ಪ್ರಾಯಕ್ಕೆ ಬಂದಾಗ ಅಮ್ಮನ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡುತ್ತಾರೆ, ಆದರೆ ಅಮ್ಮನಿಗೆ ಮಗ-ಮಕ್ಕಳು ಈಗ ನನ್ನ ಜೊತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ಅನಿಸುತ್ತಿರುತ್ತದೆ, ಆದರೆ ನೀವು ಮೊಬೈಲ್ ಅಂತ ಮುಳುಗಿ ಹೋಗದೆ ಅವರ ಜೊತೆ ಮಾತನಾಡಿ, ಅವಳ ಜತೆ ಟೈಂ ಕಳೆದರೆ ಅವಳಿಗೂ ಖುಷಿಯಾಗುವುದು.
ಅವಳ ಇಷ್ಟಗಳನ್ನೂ ತಿಳಿಯಲು ಪ್ರಯತ್ನಿಸಬೇಕು
ಅವಳು ನಮ್ಮ ಇಷ್ಟವನ್ನು ಗಮನಿಸಿ ನಮಗೆ ಬೇಕಾಗಿರುವುದು ಮಾಡಿಕೊಡಲು ಪ್ರಯತ್ನಿಸುತ್ತಾಳೆ, ನಮಗೆ ಇಷ್ಟದ ತಿಂಡಿ ಯಾವುದು ಎಲ್ಲವೂ ಅವಳಿಗೆ ಗೊತ್ತಿರುತ್ತದೆ, ಆದರೆ ಅವಳ ಇಷ್ಟದ ಕಡೆಗೆ ನಾವು ಸಾಕಷ್ಟು ಬಾರಿ ಗಮನ ಹರಿಸುವುದೇ ಇಲ್ಲ, ಅವಳ ಇಷ್ಟಗಳನ್ನೂ ಗಮನಿಸಿ. ಈ ರೀತಿ ಅವಳನ್ನು ನೋಡಿಕೊಂಡರೆ ಅವಳಿಗೂ ಖುಷಿಯಾಗುತ್ತದೆ.
ಅಮ್ಮನ ಜೊತೆ ಜಗಳವಾಡಬಹುದು, ಆದರೆ ಮನಸ್ಸು ನೋಯಿಸಬಾರದು
ನಾವು ಯಾರ ಜೊತೆ ಹೆಚ್ಚು ಜಗಳ ಮಾಡಿದ್ದೇವೆ ಎಂದು ನೋಡುವುದಾದರೆ ಅದು ನಮ್ಮ ಅಮ್ಮನ ಜೊತೆನೇ ಆಗಿರುತ್ತದೆ, ಆ ವಸ್ತು ಕೊಡಿಸು ಎಂದು ಜಗಳವಾಡುತ್ತೇವೆ, ಇವತ್ತು ಏಕೆ ಈ ತಿಂಡಿ ಮಾಡಿದ್ದೀಯ ಎಂದು ಕೋಪಗೊಳ್ಳುತ್ತೇವೆ, ಅವಳ ಜೊತೆ ಜಗಳವಾಡುವಾಗ ಭಯ ಆಗಲ್ಲ ಏಕೆಂದರೆ ಅವಳು ಏನನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಲ್ಲ , ನಮ್ಮ ಮೇಲಿನ ಪ್ರೀತಿ ಒಂದಿಷ್ಟು ಕಡಿಮೆಯಾಗಲ್ಲ, ಅವಳಿಗೆ ವಿಚಾರಕ್ಕೆ ನೋವಾಗಲ್ಲ, ಆದರೆ ಅವಳಿಗೆ ನೋವಾಗುವುದು ನಾವು ಅವಳನ್ನು ನಿರ್ಲಕ್ಷ್ಯ ಮಾಡಿದಾಗ ಮಾತ್ರ.
ಅಮ್ಮನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ
ಜೀವನದಲ್ಲಿ ಯಾರು ಎಷ್ಟೇ ಪ್ರೀತಿ ತೋರಿಸಲಿ, ಆದರೆ ಅಮ್ಮನ ಸ್ಥಾನ ತುಂಬಲು ಸಾಧ್ಯವಾಗಲ್ಲ, ಅವಳು ತಾನು ಎಷ್ಟೇ ಕಷ್ಟಪಟ್ಟರು ಮಕ್ಕಳು ಚೆನ್ನಾಗಿರಲಿ ಎಂದು ಬಯಸುತ್ತಾಳೆ, ಆ ಅಮ್ಮ ವಯಸ್ಸಾದಾಗ ಮಕ್ಕಳ ಆಸರೆ ಬಯಸುತ್ತಾಳೆ, ಆ ಸಮಯದಲ್ಲಿ ಅವಳನ್ನು ಚೆನ್ನಾಗಿ ನೋಡಿಕೊಳ್ಳಿ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಸದಾ ಚೆನ್ನಾಗಿ ಇರುತ್ತಾರೆ... ಯಾವ ಅಮ್ಮಂದಿರು ವೃದ್ಧಾಶ್ರಮ ನೋಡುವಂತೆ ಆಗದಿರಲಿ... ಎಲ್ಲಾ ಅಮ್ಮಂದಿಗೆ ಅಮ್ಮಂದಿರ ದಿನದ ಶುಭಾಶಯಗಳು



Click it and Unblock the Notifications











