Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಮ್ಮಂದಿರ ದಿನವನ್ನು ತುಂಬಾನೇ ಸ್ಪೆಷಲ್ ಆಗಿಸಲು ಇಲ್ಲಿವೆ ಒಂದಿಷ್ಟು ಐಡಿಯಾ
ಪ್ರತೀವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುವುದು. ಈ ದಿನ ಬರೀ ಒಂದು ಸ್ಟೇಟಸ್ ಹಾಕಿ ಅಮ್ಮಂದಿರ ದಿನಕ್ಕೆ ವಿಶ್ ಮಾಡುವ ಬದಲಿಗೆ ಅವಳ ಆ ದಿನವನ್ನು ಮತ್ತಷ್ಟು ಸ್ಪೆಷಲ್ ಆಗಿಸಲು ಪ್ರಯತ್ನಿಸಿದರೆ ಅವಳಿಗೆ ತುಂಬಾನೇ ಖುಷಿಯಾಗುವುದು. ಅದಲ್ಲದೆ ಎಷ್ಟೋ ಅಮ್ಮಂದಿರಿಗೆ ನಮಗೋಸ್ಕರವೇ ಒಂದು ದಿನವಿದೆ, ಆ ದಿನವನ್ನು ಸಂಭ್ರಮಿಸಲಾಗುವುದು ಎಂದು ಗೊತ್ತು ಕೂಡ ಇರುವುದಿಲ್ಲ. ಆಕೆ ಏನನ್ನು ನಿರೀಕ್ಷೆ ಮಾಡದೆ ಹಗಲು-ಇರಳು ಸದಾ ಮಕ್ಕಳು-ಮಕ್ಕಳು ಅಂತ ದುಡಿಯುತ್ತಿರುತ್ತಾಳೆ.

ಅಮ್ಮ ನಮಗೋಸ್ಕರ ದಿನವಿಡೀ ದುಡಿಯುತ್ತಾಳೆ, ಆದರೆ ಅವಳು ಆ ಕುರಿತು ಒಂದು ಕಂಪ್ಲೇಂಟ್ ಹೇಳುವುದಿಲ್ಲ, ಅವಳಿಗೇನು ಬೇಕು ಎಂದು ಚಿಂತಿಸುವುದರ ಬದಲಿಗೆ ನಿಮ್ಮ ಇಷ್ಟಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಾಳೆ, ಅವಳ ಆ ದಿನವನ್ನು ನಾವು ಸಂಭ್ರಮಿಸಿದರೆ ಅವಳಿಗೆಷ್ಟು ಖುಷಿಯಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಅಮ್ಮಂದಿರ್ ದಿನಕ್ಕೆ ಗಿಫ್ಟ್ಸ್ ಕೊಡಲು ನೀವು ಬಯಸಿದರೆ ಅದರ ಜೊತೆಗೆ ನಾವಿಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ, ಅವುಗಳನ್ನು ನೋಡಿದಾಗ ನಿಮಗೂ ಒಂದಿಷ್ಟು ಐಡಿಯಾ ಮೂಡುವುದು, ಈ ದಿನ ತುಂಬಾ ಸ್ಪೆಷಲ್ ಆಗಿಸಬಹುದು, ಆರ್ ಯೂ ರೆಡಿ:
* ಬರ್ತ್‌ಡೇ ರೀತಿಯಲ್ಲಿ ಅರೇಂಜ್ ಮಾಡಿ
ಅಮ್ಮಂದಿರ ದಿನಕ್ಕೆ ಬರ್ತ್‌ಡೇ ರೀತಿ ಆಚರಿಸುವವರು ತುಂಬಾ ಕಡಿಮೆ. ಹೆರಿಗೆಯಾದಾಗ ತಾಯಿಗೆ ಅದು ಮರುಜನ್ಮ, ಅಂದರೆ ಅವಳು ಅವಳ ಪ್ರಾಣವನ್ನು ಪಣಕ್ಕಿಟ್ಟು ಈ ಭೂಮಿಗೆ ನಮ್ಮನ್ನು ತಂದಿರುತ್ತಾಳೆ. ಅವಳ ಆ ದಿನವನ್ನು ಬರ್ತ್‌ಡೇ ರೀತಿಯಲ್ಲಿ ಸಂಭ್ರಮಿಸಿದರೆ ಅವಳಿಗೂ ತುಂಬಾನೇ ಖುಷಿಯಾಗಬಹುದು. ನನ್ನ ಮಕ್ಕಳು ನನಗಾಗಿ ಇಷ್ಟೆಲ್ಲಾ ಮಾಡಿದ್ದಾರೆ ಎಂದು ತುಂಬಾನೇ ಖುಷಿ ಪಡುವುದರಲ್ಲಿ ನೋ ಡೌಟ್.
* ಅಮ್ಮನಿಗಾಗಿ ಸ್ಪೆಷಲ್ ಅಡುಗೆ ತಯಾರಿಸಿ
ಈ ದಿನ ಅಮ್ಮನಿಗೆ ಯಾವ ಅಡುಗೆ ಇಷ್ಟವೋ ಅದನ್ನು ನೀವು ತಯಾರಿಸಿ, ನಿಮಗೆ ಅಡುಗೆ ಬರದಿದ್ದರೆ ಆರ್ಡರ್ ಮಾಡಿ ತರಿಸಿ ಆದರೆ ಈ ದಿನ ಅವಳಿಗೆ ಎಲ್ಲಾ ಕೆಲಸದಿಂದ ಫ್ರೀ ಮಾಡಿ, ಯಾವುದೇ ಮನೆ ಕೆಲಸದ ತಲೆ ಬಿಸಿಯಿಲ್ಲದೆ ಅವಳು ಆರಾಮವಾಗಿ ಇರುವಂತೆ. ಅಮ್ಮನಿಗೆ ಒಂದು ದಿನವೂ ರೆಸ್ಟ್ ಎಂಬುವುದು ಇರುವುದಿಲ್ಲ, ಈ ದಿನ ಅವಳಿಗೆ ಯಾವುದೇ ಕೆಲಸ ಕೊಡದೆ ನೋಡಿಕೊಳ್ಳುವ ಮೂಲಕ ಆ ದಿನವನ್ನು ಸ್ಪೆಷಲ್ ಆಗಿಸಿ. ಅವಳು ಜೊತೆ ಮೂವಿಗೆ ಹೋಗಿ ಬರುವುದು, ಶಾಪಿಂಗ್ ಅಂತ ಹೋಗಿ ಅವಳಿಗೆ ಬೇಕಾಗಿರುವುದು ಕೊಡಿಸಿ. ನೀವಿನ್ನೂ ದುಡಿಯಲು ಪ್ರಾರಂಭಿಸಿಲ್ಲ ಅಂದ್ರೆ ಒಕೆ, ಪಾಕೆಟ್ ಮನಿ ನಿಮ್ಮ ಬಳಿ ಒಂದಿಷ್ಟು ಅಮೌಂಟ್ ಇದ್ದೇ ಇರುತ್ತದೆ. ತನ್ನಲ್ಲಿ ಎಷ್ಟೇ ಇರಲಿ, ಮಕ್ಕಳು ಏನಾದರೂ ಚಿಕ್ಕ ವಸ್ತು ಕೊಡಿಸಿದರೂ ಅದು ಅಮ್ಮನಿಗೆ ಹೆಮ್ಮೆಯ ವಿಷಯ. ಆದ್ದರಿಂದ ಈ ದಿನ ಅವಳ ಊಹಿಸದ ರೀತಿಯಲ್ಲಿ ಸರ್ಪ್ರೈಸ್ ಮಾಡಿ.
ಸಾಧ್ಯವಾದರೆ ಚಿಕ್ಕ ಟ್ರಿಪ್ ಪ್ಲ್ಯಾನ್ ಮಾಡಬಹುದು
ಈ ದಿನ ನೀವು ಅಮ್ಮನ ಜೊತೆ ಹೊರಗಡೆ ಸುತ್ತಾಡಿಕೊಂಡು ಬರಲು ಪ್ಲ್ಯಾನ್ ಮಾಡಬಹುದು. ಈ ರೀತಿ ಕುಟುಂಬದ ಜೊತೆ ಹೊರಗಡೆ ಸುತ್ತಾಡಿಕೊಂಡು ಬಂದರೆ ಅದರಲ್ಲೂ ಇಂಥ ಸ್ಪೆಷಲ್ ದಿನ ಸುತ್ತಾಡಿಕೊಂಡು ಬಂದರೆ ತುಂಬಾನೇ ಸ್ಪೆಷಲ್ ಫೀಲ್ ನೀಡುವುದು. ಅವಳು ಕೂಡ ತುಂಬಾ ಖುಷಿ ಪಡುತ್ತಾಳೆ.
ಫೋಟೋಫ್ರೇಮ್ ಗಿಫ್ಟ್ ನೀಡಿ
ನಿಮ್ಮ ಕುಟುಂಬದ ಫೋಟೋವನ್ನು ಫ್ರೇಮ್ ಮಾಡಿಸಿ ಅವಳಿಗೆ ಗಿಫ್ಟ್ಸ್ ನೀಡಿ, ಈ ಗಿಫ್ಟ್ಸ್ ನೋಡಿದರೆ ಅವಳಿಗೆ ತುಂಬಾನೇ ಖುಷಿಯಾಗುವುದು. ಏಕೆಂದರೆ ಪ್ರತಿನಿಮಿಷ ಅವಳು ಕುಟುಂಬಕ್ಕಾಗಿಯೇ ಜೀವಿಸುತ್ತಿರುತ್ತಾಳೆ, ಅವಳಿಗೆ ಕಂಪ್ಲೀಟ್ ಫ್ಯಾಮಿಲಿ ಫೋಟೋ ಕೊಟ್ಟರೆ ತುಂಬಾ ಖುಷಿಯಾಗುವುದು.
ಅಮ್ಮಂದಿರ ದಿನ ಮನೆಯಲ್ಲಿರುವ ಬೇರೆ ತಾಯಿಂದಿರ ಬಗ್ಗೆಯೂ ಗಮನಹರಿಸಿ
ಅಮ್ಮಂದಿರ ದಿನದಂದು ನಮ್ಮ ತಾಯಿಗೆ ಮಾತ್ರವಲ್ಲ, ಮನೆಯಲ್ಲಿ ಅಜ್ಜಿ, ಅತ್ತೆ, ಚಿಕ್ಕಮ್ಮ ಹೀಗೆ ಯಾರಾದರೂ ಜೊತೆಗಿದ್ದರೆ ಅವರು ಕೂಡ ಖುಷಿಯಾಗಿರಬೇಕು, ಹಾಗಾಗಿ ಅಮ್ಮನಿಗೆ ಸ್ಪೆಷಲ್ ಗಿಫ್ಟ್ಸ್ ಮಾಡುವಾಗ ಅವರಿಗೂ ಗಿಫ್ಟ್ಸ್ ತನ್ನಿ.
ಗಂಡನೂ ತನ್ನ ಪತ್ನಿಗೆ ಈ ದಿನ ಏನಾದರೂ ಗಿಫ್ಟ್ಸ್ ಖರೀದಿಸಿ
ನೀವು ಗಂಡ-ಹೆಂಡತಿ ಪುಟ್ಟ ಮಕ್ಕಳ ಜೊತೆ ವಾಸಿಸುತ್ತಿದ್ದರೆ ಪುಟ್ಟ ಮಕ್ಕಳು ಅಮ್ಮಂದಿರ ದಿನವನ್ನು ಆಚರಿಸಲು ಸಾಧ್ಯವಿಲ್ಲ. ನಿಮ್ಮ ಪತ್ನಿ ನಿಮ್ಮ ಮುದ್ದಾದ ಮಕ್ಕಳಿಗೆ/ಮಗುವಿಗೆ ತಾಯಿ, ಆದ್ದರಿಂದ ಈ ದಿನವನ್ನು ಸ್ಪೆಷಲ್ ಆಗಿಸಲು ನೀವು ಪ್ರಯತ್ನಿಸಬೇಕಾಗಿದೆ.
ಮನೆಯಿಂದ ದೂರವಿದ್ದರೆ ಏನು ಮಾಡಬಹುದು?
ನೀವು ಮನೆಯಿಂದ ದೂರವಿದ್ದು ಅಮ್ಮಂದಿರ ದಿನದಂದು ಅವಳ ಜೊತೆ ಸಮಯ ಕಳೆಯಲು ಸಾಧ್ಯವಾಗದಿದ್ದರೆ ಬೇಸರಪಡಬೇಕಾಗಿಲ್ಲ ನೀವು ಸ್ವಲ್ಪ ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಆ ದಿನ ಅವಳನ್ನು ಖುಷಿಯಾಗಿರುವಂತೆ ನೋಡಿಕೊಳ್ಳಬಹುದು.
* ಅವಳಿಗೆ ಇಷ್ಟವಾದ ಆಹಾರಕ್ಕೆ ಆರ್ಡರ್ ಕೊಡಬಹುದು.
* ಗಿಫ್ಟ್ಸ್ ಅನ್ನು ಅಲ್ಲಿರುವ ನಿಮ್ಮ ಸ್ನೇಹಿತರ ಮುಖಾಂತರ ಅಮ್ಮನಿಗೆ ತಲುಪಿಸುವಂತೆ ಮಾಡಬಹುದು
* ಅಪ್ಪನಿಗೆ ಕರೆ ಮಾಡಿ ಅವಳಿಗಾಗಿ ಈ ದಿನ ಸರ್‌ಫ್ರೈಸ್ ಅರೇಂಜ್ ಮಾಡಲು ವ್ಯವಸ್ಥೆ ಮಾಡಿ, ವೀಡಿಯೋ ಕಾಲ್ ಮಾಡುವ ಮೂಲಕ ಸಂಭ್ರಮಿಸಬಹುದು.



Click it and Unblock the Notifications