Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಣದ ಕುರಿತ ಈ ಸೀಕ್ರೆಟ್ ಗೊತ್ತಿದ್ದರೆ ಸಂಸಾರ ಎಂದಿಗೂ ಒಡೆಯಲ್ಲ
ರಿಲೇಷನ್‌ಶಿಪ್‌ನಲ್ಲಿ ಹಣ ಮುಖ್ಯವೇ? ಎಂದು ಕೇಳುವುದಾದರೆ ಹೌದು , ಹಣವೇ ಮುಖ್ಯವೇ ಎಂದು ಕೇಳುವುದಾದರೆ ಖಂಡಿತ ಅಲ್ಲ. ಈ ಎರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲದೆ ಬಹುತೇಕರು ಒದ್ದಾಡುತ್ತಿರುತ್ತಾರೆ. ರಿಲೇಷನ್‌ಶಿಪ್‌ನಲ್ಲಿ ಹಣ ಯಾವೆಲ್ಲಾ ರೀತಿಯಲ್ಲಿ ಪರಿಣಾಮ ಬೀರುವುದು ಎಂದು ನೋಡುವುದಾದರೆ...

ಜೋಡಿ 1
ಇಷ್ಟು ದಿನ ಹಣದ ತೊಂದರೆಯಿರುತ್ತದೆ, ನಮ್ಮ ಜೀವನದಲ್ಲಿ ಹಣವಿದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ, ಇಬ್ಬರು ಕಷ್ಟಪಟ್ಟು ಒಂದು ಬ್ಯುಸ್‌ನೆಸ್ ಸ್ಟಾರ್ಟ್ ಮಾಡ್ತಾರೆ .... ದುಡ್ಡು ಬರಲಾರಂಭಿಸುತ್ತದೆ, ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತಾರೆ, ಮನೆ, ಕಾರು ಅಂತ ಎಲ್ಲವೂ ಇರುತ್ತದೆ, ಆದರೆ ಬದುಕಿನಲ್ಲಿ ಏನೋ ಖಾಲಿ ಖಾಲಿಯಾದಂತೆ ಅನಿಸಲಾರಂಭಿಸಿದರೆ ಸಂಬಂಧದ ವಿಷಯದಲ್ಲಿ ನೀವು ಎಡವಿದಿರಿ ಎಂದರ್ಥ.
ಜೋಡಿ 2
ಅವನಿಗೆ ಒಳ್ಳೆಯ ಕೆಲಸ ಸಿಗುತ್ತದೆ, ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ, ಆಹಾ ಇನ್ನೇನು ಬೇಕು ಅಲ್ವಾ? ಎಲ್ಲವೂ ಸರಿಯಾಗುತ್ತೆ ಎಂದರೆ ಲೆಕ್ಕಾಚಾರ ಉಲ್ಟಾ ಆಗುತ್ತದೆ,ಮೊದಲಿದ್ದಂತೆ ನಾವಿಬ್ಬರು ಇಲ್ಲ ಎಂದನಿಸಲಾರಂಭಿಸುತ್ತದೆ. ಏಕೋ ಒಂದು ರೀತಿಯ ಅಂತರ... ಏಕೆ, ಏನಾಯ್ತು? ಹಣವಿದ್ದರೆ ಎಲ್ಲವೂ ಸರಿಯಾಗುತ್ತೆ ಅಂದುಕೊಂಡಿದ್ದರು, ಈಗ ಎಲ್ಲವೂ ಅಂದುಕೊಂಡಂತೆ ಆಗಿದೆ. ಆದರೂ ಏಕೆ ಏನೋ ಮಿಸ್ ಹೊಡೆಯುತ್ತಿದೆ ಎಂದು ಅನಿಸಲಾರಂಭಿಸಿದೆ?
ಜೋಡಿ 3
ಆ ಜೋಡಿಗೆ ಶ್ರೀಮಂತಿಕೆತಯಲ್ಲಿಯೂ ಯಾವ ಕೊರತೆಯೂ ಇರಲ್ಲ, 10 ತಲೆಮಾರಿಗೆ ಇರುವಷ್ಟು ಆಸ್ತಿ ಇರುತ್ತದೆ, ಹಣ ಅವರಿಗೆ ಒಂದು ವಿಷಯವೇ ಇಲ್ಲ, ಆದರೂ ಖುಷಿಯಿರಲ್ಲ, ಇಬ್ಬರಲ್ಲಿ ಹೊಂದಾಣಿಕೆ ಬರಲ್ಲ, ಹಣವಿದ್ದ ಮೇಲೆ ಎಲ್ಲವ ಸರಿಯಾಗಿರಬೇಕು ತಾನೆ?
ಇನ್ನೊಂದು ಜೋಡಿ
ಅವರಿಗೆ ಹಣಕಾಸಿಗೆ ತೊಂದರೆ ಇರುತ್ತದೆ, ಕೆಲವೊಮ್ಮೆ ಅಗ್ಯತ ವಸ್ತುಗಳನ್ನ ಪೂರೈಸಲು, ಮಕ್ಕಳ ಪೀಸ್ ಕಟ್ಟಲು ಎಲ್ಲವೂ ಕಷ್ಟವಾಗುವುದು, ಹಣದ ಸಮಸ್ಯೆ ದೊಡ್ಡದಾಗಿರುತ್ತದೆ, ಆದರೆ ಅವರಿಬ್ಬರಿಗೆ ಎಂದಿಗೂ ನಮ್ಮ ಸಂಬಂಧದಲ್ಲಿ ಒಂದು ಅಂತರ ಉಂಟಾಗಿದೆ ಎಂದನಿಸುವುದೇ ಇಲ್ಲ...
ಈ ನಾಲ್ಕು ಜೋಡಿಗಳ ಸಂಬಂಧದಲ್ಲಿ ನೋಡಿ ಹಣ ಬಂದಾಗ ಪ್ರೀತಿ ಕಡಿಮೆಯಾಗಿದೆ, ಹಣವಿಲ್ಲದೆ ಇದ್ದರೂ ಪ್ರೀತಿಗೆ ಕೊರತೆಯಾಗಿಲ್ಲ, ಹಾಗಾದರೆ ಸಂಬಂಧದಲ್ಲಿ ಹಣವನ್ನು ದೂರುವುದು ಎಷ್ಟು ಸರಿ. ಹಣವಿಲ್ಲದಿದ್ದಾಗ ಬಿಟ್ಟು ಹೋಗುವವರೂ ಇದ್ದರೂ, ಹಣ ಹೆಚ್ಚಾದ ಮೇಲೂ ಬಿಟ್ಟು ಹೋಗುವವರು ಇದ್ದಾರೆ, ಹಾಗಾಗಿ ಸಂಬಂಧದಲ್ಲಿ ಮೊದಲು ಗಮನ ನೀಡಬೇಕಾಗಿರುವುದು ಹಣ ಕಡೆಯಲ್ಲ, ಸಂಬಂಧ ಬಲಪಡಿಸುವತ್ತ..
ಸಂಬಂಧ ಸುಂದರವಾಗಿಸಲು ಈ ವಿಷಯಗಳತ್ತ ಗಮನಹರಿಸಿ:
ನಿಮ್ಮ ನಡುವೆ ಸಂವಹನದ ಕೊರತೆಯಾಗಬಾರದು: ಇಬ್ಬರು ಎಲ್ಲಾ ವಿಷಯಗಳನ್ನು ಮನಸ್ಸು ಬಿಚ್ಚಿ ಮಾತನಾಡಬೇಕು, ಯಾವುದೇ ಮುಚ್ಚುಮರೆ ಇರಬಾರದು. ಎಷ್ಟೇ ಬ್ಯುಸಿಯಿದ್ದರೂ ಒಬ್ಬರಿಗೊಬ್ಬರು ಸಮಯ ನೀಡಬೇಕು, ಇದು ನಿಮ್ಮ ಬಾಂಧವ್ಯವನ್ನು ಗಟ್ಟಿಯಾಗಿಸುತ್ತದೆ.
ಅವರಿಗೆ ನೀವು ಎಲ್ಲಾ ಸಮಯದಲ್ಲಿ ಸಿಗುವಂತಿರಬೇಕು
ಅವರಿಗೆ ದುಃಖವಾದಾಗ ತೋಳುಕೊಟ್ಟು ಸಮಧಾನ ಪಡಿಸಲು, ಖುಷಿಯಾದಾಗ ಆ ಸಂತೋಷದಲ್ಲಿ ನೀವು ಭಾಗಿಯಾಗಬೇಕು. ಕೆಲಸ, ಬ್ಯುಸಿ ಅಂತ ಇದ್ದರೆ ಅಲ್ಲಿ ಸಂಬಂಧ ಕ್ಷೀಣಿಸುವುದು. ನಾವು ವೈಯಕ್ತಿಕವಾಗಿ ಬೆಳೆಯುವುದರ ಜೊತೆಗೆ ಸಂಬಂಧ ಬಲಪಡಿಸಲು ಗಮನಹರಿಸಬೇಕು.
ಒಬ್ಬರನ್ನೊಬ್ಬರು ಬೆಂಬಲಿಸಿ
ಕಷ್ಟದಲ್ಲಿ-ಸುಖದಲ್ಲಿ ಸಮಭಾಗಿಗಳಾಗಬೇಕು, ಅವರು ಕುಗ್ಗಿದಾಗ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು, ಅವರ ಕನಸುಗಳಿಗೆ ಸದಾ ಬೆಂಬಲ ನೀಡಬೇಕು, ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಬೇಕು.
ಹಣದ ವಿಷಯದಲ್ಲಿ ಕೆಲವೊಮ್ಮೆ ಚರ್ಚೆ ಬಂದರೆ ಇಟ್ಸ್ ಒಕೆ
ಒಬ್ಬರು ತುಂಬಾ ಖರ್ಚು ಮಾಡುತ್ತಿದ್ದರೆ ಇದರಿಂದಾಗಿ ಕುಟುಂಬದಲ್ಲಿ ನೆಗೆಟಿವ್ ಪರಿಣಾಮ ಬೀರಬಹುದು, ಹಣಕಾಸಿನ ಸಮಸ್ಯೆಗೆ ಕಾರಣವಾಗಬಹುದು ಅಥವಾ ಗಂಡ ಕೆಲಸ ಕಾರ್ಯದ ಕಡೆಗೆ ಗಮನಹರಿಸುತ್ತಿಲ್ಲ ಎಂದಾದಾಗ ಇದರಿಂದ ಹಣಕಾಸಿನ ಸಮಸ್ಯೆ ಉಂಟು ಮಾಡಬಹುದು, ಈ ವಿಷಯಕ್ಕೆ ಮನೆಯಲ್ಲಿ ಚರ್ಚೆ ಬಂದರೆ ಒಳ್ಳೆಯದೇ.. ಬದುಕು ಸುಂದರವಾಗಿಸಲು ಈ ತಪ್ಪು ಸರಿಪಡಿಸಲು ಮುಂದುವರೆಯದೇ ಜಾಣತನ.
ಈಗ ನೀವೇ ಹೇಳಿ ಹಣ ಬೇಕು, ಆದರೆ ಸಂಬಂಧದಲ್ಲಿ ಹಣವೇ ಎಲ್ಲ ಅಲ್ಲ ಅಲ್ವಾ?



Click it and Unblock the Notifications