Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ತನ್ನ ಹಾಗೂ ಎ ಆರ್ ರಹಮಾನ್ ನಡುವೆ ಇರುವ ಸಂಬಂಧ ಯಾವ ರೀತಿಯದ್ದು, ಗಿಟಾರ್ ಪ್ಲೇಯರ್ ಮೋಹಿನಿ ಡೇ ಓಪನ್ ಟಾಕ್
ಒಂದು ವಾರದಿಂದ ತುಂಬಾ ಸುದ್ದಿಯಲ್ಲಿರುವ ಸೆಲೆಬ್ರಿಟಿಯೆಂದರೆ ಸಂಗೀತ ಮಾಂತ್ರಿಕ ಎ ಆರ್ ರಹಮಾನ್. ಮನಸ್ಸಿಗೆ ಮುದ ನೀಡುವ ಸಂಗೀತ ಮೂಲಕ ಗಮನ ಸೆಳೆಯುತ್ತಿದ್ದ ರಹಮಾನ್ ಬಾಳಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಅವರದ್ದು ಸುದೀರ್ಘ 29 ವರ್ಷಗಳ ದಾಂಪತ್ಯ ಜೀವನ, ಇಷ್ಟು ವರ್ಷ ಜೊತೆಯಾಗಿ ಬಾಳಿದವರು ಈಗ ಇದ್ದಕ್ಕಿದ್ದಂತೆ ಪರಸ್ಪರ ದೂರಾಗಿದ್ದಾರೆ, ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ, ಇಷ್ಟು ವರ್ಷ ಜೊತೆಯಾಗಿ ಬಾಳ್ವೆ ನಡೆಸಿದ ಜೋಡಿಯ ಬದುಕಿನಲ್ಲಿ ಈಗೇನಾಯ್ತು ಎಂಬ ಕಾರಣ ಮಾತ್ರ ನಿಗೂಢ.

ಚಿಕ್ಕ ಪ್ರಾಯದವರಾದರೆ ಅನೈತಿಕ ಸಂಬಂಧದ ಕಾರಣ ಎಂಬ ಗಾಸಿಪ್‌ಗಳು ಬರಲಾರಂಭಿಸುತ್ತದೆ, ಆದರೆ ರಹಮಾನ್ ಮಗಳ ಮದುವೆ ಮಾಡಿಕೊಟ್ಟಿದ್ದಾರೆ, ಇನ್ನಿಬ್ಬರು ಮಕ್ಕಳು ಮದುವೆ ಪ್ರಾಯದವರು, ಅಲ್ಲದೆ ಚಿಕ್ಕ ಪ್ರಾಯದಲ್ಲಿ ಯಶಸ್ವಿನ ಉತ್ತುಂಗದಲ್ಲಿರುವವರು ರಹಮಾನ್, ಇದುವರೆಗೆ ಯಾವ ಮಹಿಳೆ ಜೊತೆಯೂ ಇವರು ಕ್ಲೋಸ್ ಆಗಿರಲಿಲ್ಲ, ಅವರ ಸ್ನೇಹಿತರು ಹೇಳುವ ಪ್ರಕಾರ ಇವರು ಯಾವುದೇ ಮಹಿಳೆಗೆ ಶೇಕ್ ಹ್ಯಾಂಡ್ ಕೂಡ ಮಾಡುತ್ತಿರಲಿಲ್ಲ, ಸದಾ ಒಂದು ಅಂತರ ಕಾಯ್ದುಕೊಳ್ಳುತ್ತಿದ್ದರು, ವೈಯಕ್ತಿಕ ಬದುಕಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಅಷ್ಟು ಕ್ಲೀನ್ ಆಗಿ ಇಟ್ಟುಕೊಂಡಿದ್ದರು.
ವಿಚ್ಛೇದನ ಎಲ್ಲರಿಗೆ ಅಚ್ಚರಿ ಮೂಡಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಗಾಸಿಪ್ ಸುದ್ದಿಗಳು ಹರಡಲಾರಂಭಿಸಿತು
ರಹಮಾನ್ ಪತ್ನಿ ಈಗ ಏಕೆ ವಿಚ್ಛೇದನ ನೀಡುತ್ತಿದ್ದಾರೆ ಎಂಬುವುದೇ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಮಕ್ಕಳಿಗೆ ಮದುವೆ ಮಾಡಿ ಕೊಟ್ಟ ಮೇಲೆ ಪೋಷಕರು ವಿಚ್ಛೇದನ ಕೊಡುವುದು ತುಂಬಾ ಕಡಿಮೆ, ಅವರ ನಡುವೆ ಸಾಮರಸ್ಯದ ಕೊರತೆಯಿದ್ದರೂ ಹೊಂದಾಣಿಕೆ ಮಾಡಿಕೊಂಡು ಇದ್ದು ಬಿಡುತ್ತಾರೆ. ಆದರೆ ವಿಚ್ಛೇದನ ತೆಗೆದ ಅದೇ ದಿನ ಅವರ ಮ್ಯೂಸಿಕ್ ಗ್ರೂಪ್‌ನ ಗಿಟಾರ್ ವಾದಕಿ ಕೂಡ ತನ್ನ ಗಂಡನಿಗೆ ವಿಚ್ಛೇದನ ನೀಡಿರುವ ಬಗ್ಗೆ ಪೋಸ್ಟ್ ಹಾಕುತ್ತಾರೆ. ರಹಮಾನ್ ವಿಚ್ಛೇದನಕ್ಕೆ ಕಾರಣವೇನು ಎಂದು ಯೋಚಿಸುತ್ತಿರುವವರಿಗೆ ಈಕೆಯ ವಿಚ್ಛೇದನ ಸುದ್ದಿ ಕೇಳಿದಾಗ ಅಂತೆ ಕಂತೆ ಅಂತ ಕತೆ ಕಟ್ಟಿ ಹೇಳಲಾರಂಭಿಸಿದರು.
ಇದರ ಬಗ್ಗೆ ಮೋಹಿನಿ ಡೇ ಹೇಳಿದ್ದೇನು?
ತನ್ನ ಹಾಗೂ ರಹಮಾನ್ ಅವರ ಬಗ್ಗೆ ಇಲ್ಲ ಸಲ್ಲದ ಕತೆಗೆ ಪ್ರತಿಕ್ರಿಯಿಸಿರುವ ಮೋಹಿನಿ ಡೇ ನಾನು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೆ, ಈಗ ಸ್ವಲ್ಪ ಬಿಡುವು ಸಿಕ್ಕಿದೆ, ನನ್ನ ಬದುಕಿನಲ್ಲಿ ರಹಮಾನ್ ಅವರಿಗೆ ಇರುವುದು ಅಪ್ಪನ ಸ್ಥಾನ(Fatherly Figure) , ನಾನು ಅವರ ಮಗಳು ಒಂದೇ ಪ್ರಾಯದವರು. ನಾನು ಅವರ ಮ್ಯೂಸಿಕ್ ಗ್ರೂಪ್‌ನಲ್ಲಿದ್ದೆ ಈಗ ನಾನು ನನ್ನದೇ ಮ್ಯೂಸಿಕ್ ಗ್ರೂಪ್ ಕಟ್ಟಿ ವಿದೇಶದಲ್ಲಿದ್ದೇನೆ ಎಂಬುವುದಾಗಿ ಹೇಳುವ ಮೂಲಕ ನನ್ನ ಹಾಗೂ ರಹಮಾನ್‌ರ ಹೆಸರು ಸೇರಿಸಿ ಗಾಸಿಪ್ ಮಾಡಬೇಡಿ ಎಂಬುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
ಮಾಧ್ಯಮದಲ್ಲಿ ರಹಮಾನ್ ಬಗ್ಗೆ ಇಲ್ಲ ಸಲ್ಲದ ವಿಷಯಗಳು ಬರಲಾರಂಭಿಸಿದಾಗ ಸೈರಾ ರಹಮಾನ್ ಕೂಡ ನನ್ನ ಪತಿ ಜೆಮ್ ಆಫ್ ದಿ ಪರ್ಸನ್ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ವೃತ್ತಿ ಬದುಕಿನಲ್ಲಿ ಎಲ್ಲಿಯೂ ಸೋಲದ ರಹಮಾನ್ ವೈವಾಹಿಕ ಬದುಕಿನಲ್ಲಿ ಸೋತರಲ್ಲಾ ಎಂಬುವುದೇ ಬೇಸರದ ಸಂಗಾತಿ
ರಹಮಾನ್ ಮ್ಯೂಸಿಕ್ ಎಂದರೆ ಅಷ್ಟೊಂದು ಬೇಡಿಕೆ, ಅವರು ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಕೋಟಿ-ಕೋಟಿ, ಇಂದು ಅವರ ಬಳಿ ಎಲ್ಲವೂ ಇದೆ, ಸ್ವಂತ ಮ್ಯೂಸಿಕ್ ಸ್ಟುಡಿಯೋ ಇದೆ, ವಿದೇಶದಲ್ಲಿಯೂ ಮ್ಯೂಸಿಕ್ ಸ್ಟುಡಿಯೋ ಇದೆ, ಮನಸ್ಸಿಗೆ ಚಿಕ್ಕ ಬೇಸರವಾದರೂ ರಹಮಾನ್‌ರ ಹಾಡುಗಳನ್ನು ಕೇಳಿದರೆ ಸಾಕು ಜಗತ್ತನ್ನೇ ಮರೆತು ಬಿಡುತ್ತೇವೆ. ತನ್ನ ಕುಟುಂಬಕ್ಕೆ ಅವರು ಸಮಯ ನೀಡಿದ್ದು ತುಂಬಾ ಕಡಿಮೆ ಸದಾ ಮ್ಯೂಸಿಕ್ ಮ್ಯೂಸಿಕ್ ಅಂತ ಇರ್ತಾ ಇದ್ದಿದ್ದೇ ಅವರ ವೈವಾಹಿಕ ಬದುಕಿಗೇ ಮುಳುವಾಯ್ತೇ, ಜಗಳ, ಮನಸ್ತಾಪ ಎಲ್ಲಾ ಸಂಸಾರದಲ್ಲಿ ಇರುತ್ತದೆ, ಈ ವಯಸ್ಸಿನಲ್ಲಿ ಈ ಜೋಡಿ ಬೇರೆಯಾಗಬಾರದಿತ್ತು, ಮತ್ತೆ ಒಂದಾಗಿ ಬಾಳಲಿ ಎಂದು ಅವರ ಅಭಿಮಾನಿಗಳು ಬಯಕೆಯಾಗಿದೆ.



Click it and Unblock the Notifications