Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಸೈಲೆಂಟ್ ಕಿಲ್ಲರ್! ಈ ಚಿಂತೆ ನಿಮ್ಮ ಮೆಂಟಲ್ ಹೆಲ್ತ್ ಮತ್ತು ಸಂಬಂಧ ಹಾಳುಮಾಡುತ್ತೆ; ಇದರ ಕಂಟ್ರೋಲ್ ಹೇಗೆ?
ಚಿಂತೆಗೂ ಚಿತೆಗೂ ಒಂದು ಸೊನ್ನೆಯಷ್ಟೆ ವ್ಯತ್ಯಾಸ! ಚಿತೆ ಸತ್ತ ದೇಹವನ್ನು ಸುಟ್ಟರೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತೆ. ಹೌದು, ಅತಿಯಾಗಿ ಯೋಚಿಸುವುದರಿಂದ (Overthinking) ರೋಗ ಬರುತ್ತದೆ ಮತ್ತು ಸಂಬಂಧಗಳನ್ನು ಸಹ ಹಾಳು ಮಾಡುತ್ತದೆ. ಹೌದು, ಸಮಯಕ್ಕೆ ಸರಿಯಾಗಿ ಇದರ ಲಕ್ಷಣಗಳನ್ನು ತಿಳಿಯದಿದ್ದರೆ ಗಂಡಾಂತರ ಖಚಿತ. ಪ್ರಸ್ತುತ ಬಹುತೇಕರು ಅತಿಯಾಗಿ ಯೋಚನೆ (Overthinking Problem) ಮಾಡುವ ಗೀಳು ಬೆಳಸಿಕೊಂಡಿದ್ದಾರೆ. ಅನಾವಶ್ಯಕವಾಗಿ ಚಿಂತೆ ಮಾಡುವುದು, ಏನೇನೂ ಊಹಿಸಿಕೊಂಡು ಭಯ ಪಡುವುದು, ಖಿನ್ನತೆಗೆ ಒಳಗಾಗುವುದು ಹೀಗೆ ಹಲವು ರೀತಿಯ ಸಮಸ್ಯೆ ಸಾಮಾನ್ಯ. ಬನ್ನಿ, ನೀವು ಅತಿಯಾಗಿ ಚಿಂತಿಸುವಿಕೆಗೆ ಬಲಿಪಶುವಾಗುತ್ತಿರುವ ಈ ಲಕ್ಷಣಗಳ ಬಗ್ಗೆ ತಿಳಿಯೋಣ.
ನೀವು ಪ್ರತಿಯೊಂದು ಸಣ್ಣ ವಿಷಯಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳುತ್ತೀರಾ? ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ. ನೀವು ಯಾವುದೇ ವಿಷಯದ ಬಗ್ಗೆ ಹೆಚ್ಚು ಚಿಂತಿಸಲು ಪ್ರಾರಂಭಿಸಿದಾಗ, ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಈ ಪರಿಸ್ಥಿತಿಯಲ್ಲಿ, ನಿಮ್ಮ ಮನಸ್ಸಿನ ಶಾಂತಿಯೂ ಹಾಳಗುತ್ತದೆ. ಈ ಅತಿಯಾಗಿ ಚಿಂತೆಗೆ ಅಥವಾ ಯೋಚಿಸುವಿಕೆಯು ನಾವು (ಜನರು) ಸಿಕ್ಕಿಹಾಕಿಕೊಳ್ಳುವ ಒಂದು ಬಲೆಯಾಗಿದೆ. ಈ ವಿಷಯಗಳು ನಮ್ಮ ನಿದ್ರೆ, ಸಂಬಂಧಗಳು, ಕೆಲಸದ ಗುಣಮಟ್ಟ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದಲ್ಲದೆ, ನಮ್ಮ ಮೇಲೆಯೂ ಪ್ರಶ್ನೆಗಳನ್ನು ಹುಟ್ಟುಹಾಕಲು ಶುರು ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ, ನೀವು ಈ ಚಿಂತಿಸುವಿಕೆಯ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಬೇಕು. ಆಗ, ನಿಮ್ಮನ್ನು ನೀವು ಸರಿಯಾಗಿ ನಿಭಾಯಿಸಬಹುದು.

ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸಬೇಡಿ
ಬಹುತೇಕರ ಸಮಸ್ಯೆ ಎಂದರೆ, ಹಲವು ಬಾರಿ ಒಂದೇ ವಿಷಯದ ಬಗ್ಗೆ ಪದೇ ಪದೆ ಯೋಚಿಸುವುದು. ಈ ರೀತಿ ಮಾಡುವುದರಿಂದ ಆ ಎಲ್ಲಾ ವಿಷಯಗಳು ಇನ್ನೂ ಸಂಭವಿಸದ ಮನಸ್ಸಿನಲ್ಲಿ ಪ್ರವೇಶಿಸಲು ಪ್ರಾರಂಭಿಸುತ್ತವೆ. ನೀವು ಒಂದು ಸ್ಥಳಕ್ಕೆ ಹೋಗಿರುತ್ತೀರಿ ಮತ್ತು ಅಲ್ಲಿ ಯಾರೋ ನಿಮಗೆ ಏನನ್ನಾದರೂ ಹೇಳಿರುತ್ತಾರೆ. ಆದರೆ, ಅಲ್ಲಿ ಆ ವಿಷಯದ ಬಗ್ಗೆ ಮಾತು (ಸಂಭಾಷಣೆ) ಮುಗಿದ ಬಳಿಕವೂ ನೀವು ಅದೇ ವಿಷಯದ ಬಗ್ಗೆ ಯೋಚಿಸುತ್ತಲೇ ಇರುತ್ತೀರಿ. ನೀವು ಇದನ್ನು ಅರ್ಥಮಾಡಿಕೊಳ್ಳಬೇಕು. ಆಗ ನೀವು ಅತಿಯಾಗಿ ಚಿಂತಿಸುವುದನ್ನು ಬಿಡಬೇಕು.
ಕಾರಣವಿಲ್ಲದೆ ಅಳಬೇಡಿ
ಹಳೆಯ ವಿಷಯಗಳಿಗೆ ಅಳುವುದು ದೊಡ್ಡ ವಿಷಯವಲ್ಲ. ಆದರೆ, ನೀವು ಒಂದೇ ವಿಷಯಕ್ಕೆ ಅಳುತ್ತಿದ್ದರೆ, ಅದು ನಿಮ್ಮ ಮೇಲೆ ಮತ್ತು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಹೆಚ್ಚು ಯೋಚಿಸುವುದು ಅಥವಾ ಯಾವುದಾದರೂ ವಿಷಯದ ಬಗ್ಗೆ ಅಳುವುದು ಸಹ ಅತಿಯಾಗಿ ಯೋಚಿಸಲು ಕಾರಣವಾಗಬಹುದು.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸ್ವಲ್ಪ ಸಮಯ ತೆಗೆದುಕೊಳ್ಳಿ
ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬೇಕು. ಅಥವಾ ಯಾವುದೇ ನಿರ್ಧಾರಕ್ಕೆ ಅಂಟಿಕೊಳ್ಳದಿರುವುದು. ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಥವಾ ಮಂಡಿಸಲು ಹೆದರಬಾರದು. ನಿಮ್ಮ ಅಭಿಪ್ರಾಯಗಳನ್ನು (ವಿಷಯ) ಬೇರೆಯವರಿಗೆ ಹೇಳಲು ಹಿಂಜರಿಯಬಾರದು. ಇವೆಲ್ಲವೂ ಅತಿಯಾಗಿ ಚಿಂತಿಸುವ ಅಥವಾ ಯೋಚಿಸುವುದರ ಲಕ್ಷಣಗಳು.
ನಿದ್ದೆ ಮಾಡುವಾಗ ಇದ್ದಕ್ಕಿದ್ದಂತೆ ಎಚ್ಚರ
ಬಹುತೇಕರಿಗೆ ಹೆಚ್ಚು ನಿದ್ರೆ ಬರಲ್ಲ. ನಿದ್ರೆಯ ಕೊರತೆಯು ಅನೇಕ ವಿಷಯಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಲವು ಬಾರಿ, ಅತಿಯಾಗಿ ಯೋಚಿಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಒಬ್ಬರು ನಿದ್ದೆ ಮಾಡುವಾಗ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ರೋಗಗಳು ಸಹ ಬರುವ ಸಾಧ್ಯತೆ ಹೆಚ್ಚಿದೆ.
ಚಿಂತೆ ತಡೆಗಟ್ಟುವುದು ಹೇಗೆ?
ಎಲ್ಲರಿಗೂ ಚಿಂತೆ ತಡೆಗಟ್ಟುವುದೇ ದೊಡ್ಡ ಚಿಂತೆ. ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ, ನಿಮ್ಮ ಆಲೋಚನೆಗಳನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಏಕೆಂದರೆ ನೀವು ನಿಮ್ಮ ಆಲೋಚನೆಗಳನ್ನು ಇತರರೊಂದಿಗೆ ಹೆಚ್ಚು ಹಂಚಿಕೊಂಡಷ್ಟೂ ಒಳ್ಳೆಯದು. ನಿಮ್ಮ ಆಲೋಚನೆಗಳ ಬಗ್ಗೆ ಅವರಿಂದ ಅಭಿಪ್ರಾಯ ಸಂಗ್ರಹಿಸಬಹುದು. ಇದು ಅತಿಯಾಗಿ ಯೋಚಿಸುವ ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಹೆಚ್ಚು ಚಿಂತಿಸುವಿಕೆಯಲ್ಲಿದ್ದಾಗ, ಆ ಪರಿಸ್ಥಿತಿಯಲ್ಲಿ ನಿಮ್ಮ ನೆಚ್ಚಿನ ಸಾಂಗ್ (ಹಾಡು) ಕೇಳುವುದು ಉತ್ತಮ. ಇದು ಅತಿಯಾಗಿ ಚಿಂತೆಯನ್ನು ತೊಡೆದುಹಾಕಲು ಬಹಳಷ್ಟು ಸಹಾಯ ಮಾಡುತ್ತದೆ.



Click it and Unblock the Notifications