Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
76 ಲಕ್ಷ ಖರ್ಚು ಮಾಡಿ ಕೆನಡಾಗೆ ಓದಲು ಕಳುಹಿಸಿದರೆ ಪತಿ ನಂಬರ್ ಬ್ಲಾಕ್ ಮಾಡಿದ ಪತ್ನಿ!
ಕೆಲವರು ಮದುವೆಯಾದ ಮೇಲೆ ಹೆಂಡತಿಯನ್ನು ಹೊರಗಡೆ ಕಳುಹಿಸಲು ಇಷ್ಟಪಡಲ್ಲ, ಅಂತವರನ್ನು ನೋಡುವಾಗ ಇವನದ್ದು ಎಂಥ ಸಂಕುಚಿತ ಬುದ್ಧಿ ಎಂದನಿಸುವುದು, ಆದರೆ ಇನ್ನು ಕೆಲವರು ನನ್ನ ಹೆಂಡತಿ ಎಷ್ಟು ಓದುತ್ತಾಳೋ ಓದಲಿ ಎಂದು ಅವಳಿಗೆ ಸಪೋರ್ಟಿವ್ ಆಗಿ ನಿಲ್ಲುತ್ತಾನೆ, ಅಂಥ ಗಂಡನಿಗೆ ಮೋಸ ಮಾಡಲು ಕೆಲವೊಂದು ಹೆಣ್ಮಕ್ಕಳಿಗೆ ಹೇಗೆ ಮನಸ್ಸು ಬರುತ್ತೋ? ಇಂಥದ್ದೇ ಒಂದು ಪ್ರಕರಣ ಈಗ ಸುದ್ದಿ ಮಾಡಿದೆ. ಈತನ ಕತೆ ಕೇಳಿದರೆ ಎಂಥವರಿಗೂ ಅಯ್ಯೋ ಅನಿಸುವುದು.

ಆತ ಪತ್ನಿ ಮೋಸದಿಂದಾಗಿ 76 ಲಕ್ಷ ಹಣ ಕೂಡ ಕಳೆದುಕೊಂಡಿದ್ದಾನೆ
ಆಕೆಗೆ ಕೆನಡಾದಲ್ಲಿ ಹೋಗಿ ಉನ್ನತ ವ್ಯಾಸಂಗ ಮಾಡುವಾಸೆ, ಇದನ್ನು ಪತಿ ಬಳಿ ಹೇಳಿದಾಗ ಆತನು ಕೂಡ ಆಕೆಯ ಆಸೆಗೆ ಅಡ್ಡಿಬರಲ್ಲ, ಅಲ್ಲದೆ ಆಕೆಯ ಓದಿಗೆ ಅವಶ್ಯಕವಾದ ಹಣ, ಆಕೆಯ ಖರ್ಚಿಗೆ ಹಣ ಎಲ್ಲವನ್ನೂ ತನ್ನ ಕೈಯಿಂದ ಹಾಕುತ್ತಾನೆ, ಎಷ್ಟಾದರೂ ಪತ್ನಿಯಲ್ಲವೇ ಅವಳಿಗೆ ಖರ್ಚು ಮಾಡಿದರೆ ಏನಂತೆ, ಅವಳು ಓದಿ ದೊಡ್ಡ ವ್ಯಕ್ತಿಯಾಗಿ ಬರಲಿ ಎಂಬ ಒಳ್ಳೆಯ ಆಲೋಚನೆ ಆತನಿಗೆ , ಹೀಗಾಗಿ ಆತ ಬರೋಬರಿ 76 ಲಕ್ಷ ಖರ್ಚು ಮಾಡಿ ಆಕೆಯನ್ನು ಏರ್‌ಪೋರ್ಟ್‌ಗೆ ಕರೆದುಕೊಂಡು ಹೋಗಿ ಟಾಟಾ ಮಾಡಿ ಬರುತ್ತಾನೆ, ಆದರೆ ನಗು ನಗುತ್ತಾ ಟಾಟಾ ಮಾಡಿ ಹೋದವಳು ಈ ರೀತಿ ಕೈ ಕೊಡುತ್ತಾಳೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಕೆನಡಾ ತಲುಪುತ್ತಿದ್ದಂತೆ ಆಕೆ ಈತನ ನಂಬರ್ ಬ್ಲಾಕ್ ಮಾಡಿದ್ದಾಳೆ
ಈತ ಹೆಂಡತಿ ತಲುಪಿದ ಬಳಿಕ ಆಕೆಯನ್ನು ವಿಚಾರಿಸಲು ಕಾಲ್ ಮಾಡಿದರೆ ಆಕೆ ಈತನ ನಂಬರ್ ಬ್ಲಾಕ್ ಮಾಡಿ ಬಿಟ್ಟಿದ್ದಾಳೆ, ಈತನ ಸಂಪರ್ಕಕ್ಕೆ ಸಿಗುತ್ತಿಲ್ಲ, ಇದಿಗ ಈ ಪತಿರಾಯನಿಗೆ ದಿಕ್ಕೇ ತೋಚುತ್ತಿಲ್ಲ, ಈತ ಪಾಕಿಸ್ತಾನದವ, ಅಲ್ಲಿ ಈ ರೀತಿ ಪತ್ನಿಗೆ ಸ್ವಾತಂತ್ರ್ಯ ನೀಡುವವರೇ ಕಮ್ಮಿ, ಅಂಥದ್ದರಲ್ಲಿ ಆಕೆ ಈತನ ನಂಬಿಕೆಗೆ ಮೋಸ ಮಾಡಿದ್ದಾಳೆ. ಅವಳು ಪ್ರೀಪ್ಲ್ಯಾನ್ ಮಾಡಿಯೇ ಹೊಗಿದ್ದಾಳೆ, ಅಲ್ಲಿ ಹೋದ ಬಳಿಕ ಇವನಿಗೆ ಮೋಸ ಮಾಡುವ ಸಂಚಿನಿಂದ ಹೊರಟ ಆ ಮೋಸಗಾರ್ತಿ ಸುಳಿವು ಈ ಬಡಪಾಯಿಗೆ ತಿಳಿದಿರಲಿಲ್ಲ ಅಷ್ಟೆ..
ನಮಲ್ಲಿಯೂ ಇಂಥ ಅನೇಕ ಘಟನೆಗಳು ನಡೆದಿವೆ
ಇತ್ತೀಚೆಗಷ್ಟೇ ಯುಪಿಯ ಘಟನೆ ತುಂಬಾನೇ ಗಮನ ಸೆಳೆದಿತ್ತು. ಜ್ಯೋತಿ ಎಂಬ ಮಹಿಳೆಯನ್ನು ಗಂಡ ಗುಮಸ್ತ ಕೆಲಸದಲ್ಲಿದ್ದು ಕಷ್ಟಪಟ್ಟು ಓದಿಸಿದ್ದ, ಓದಿ ನಾಗಾರಿಕ ಪರೀಕ್ಷೆ ಬರೆದು ದೊಡ್ಡ ಆಫೀಸರ್ ಆದ ಮೇಲೆ ಅಲ್ಲಿ ಬೆರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧಕ್ಕೆ ಬಿದ್ದು ತನ್ನ ಗಂಡ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ತನ್ನ ಪವರ್ ಉಪಯೋಗಿಸಿ ಅವರಿಗೆ ಕಿರುಕುಳ ನೀಡಿದ್ದಳು, ಆದರೆ ಪತಿ ಈಕೆಯ ಕಳ್ಳಾಟವನ್ನು ಸಾಕ್ಷಿ ಸಮೇತ ಮಾಧ್ಯಮದ ಮುಂದೆ ತಂದಾಗ ಆಕೆಯ ನಡತೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು. ಎಲ್ಲರು ಅವಳ ವರ್ತನೆ ಬಗ್ಗೆ ಹೀಯಾಳಿಸಿದ್ದರು.
ಎಲ್ಲಾ ಹೆಂಡತಿಯರು ಕೆಟ್ಟವರಲ್ಲ, ಎಲ್ಲಾ ಗಂಡಂದಿರು ಕೆಟ್ಟವರಲ್ಲ
ಒಳ್ಳೆಯ ಹೆಂಡತಿಗೆ ಗಂಡ ಮೋಸ ಮಾಡಿದ ಕತೆಗಳು, ಒಳ್ಳೆಯ ಗಂಡನಿಗೆ ಹೆಂಡತಿ ಮೋಸ ಮಾಡಿದ ಕತೆಗಳು ಎಷ್ಟೋ ಇವೆ, ಹಾಗಾಗಿ ಎಲ್ಲಾರನ್ನು ಒಂದೇ ರೀತಿ ಜಡ್ಜ್ ಮಾಡುವುದು ತಪ್ಪು, ದಾಂಪತ್ಯದಲ್ಲಿ ನಂಬಿಕೆ ಎಂಬುವುದೇ ಮುಖ್ಯ, ಒಳ್ಳೆಯ ಸಂಗಾತಿಗೆ ಯಾವತ್ತಿಗೂ ನಂಬಿಕೆ ದ್ರೋಹ ಮಾಡಬಾರದು.



Click it and Unblock the Notifications