Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮದುವೆಯಾದ ಗಂಡಸರು ಪರ ಸ್ತ್ರೀ ಹಿಂದೆ ಹೋಗೋದ್ಯಾಕೆ?
ದಾಂಪತ್ಯ ಮುರಿದು ಬೀಳೋದಕ್ಕೆ ಅನೇಕ ಕಾರಣಗಳು ಇರುತ್ತದೆ. ಅದಕ್ಕೆ ಪತ್ನಿಯೂ ಕಾರಣ ಇರಬಹುದು. ಪತಿಯು ಕಾರಣ ಇರಬಹುದು. ಒಬ್ಬರದ್ದೇ ತಪ್ಪು ಅಂತ ದೂಷಿಸೋದಕ್ಕೆ ಆಗೋದಿಲ್ಲ. ಆದರೆ ಕೆಲವೊಂದು ಸಾರಿ ಗಂಡ ತಪ್ಪು ಮಾಡಿದ್ದರೆ, ಇನ್ನೂ ಕೆಲವು ಸಲ ಹೆಂಡತಿಯಿಂದಲೂ ತಪ್ಪುಗಳು ಆಗಿರುತ್ತೆ.

ಅದ್ರಲ್ಲೂ ಹೆಚ್ಚಿನ ಸಂದರ್ಭದಲ್ಲಿ ಗಂಡಂದಿರು ತಮ್ಮ ಹೆಂಡತಿಗೆ ಮೋಸ ಮಾಡುತ್ತಾರೆ. ಹೆಂಡತಿಗೆ ಗೊತ್ತಿಲ್ಲದ ಹಾಗೆ ಅವರಿಗೆ ನಂಬಿಕೆ ದ್ರೋಹ ಮಾಡುತ್ತಾರೆ. ಅಷ್ಟಕ್ಕೂ ಯಾವ ಕಾರಣಕ್ಕಾಗಿ ಗಂಡಂದಿರು ತಮ್ಮ ಹೆಂಡತಿಗೆ ಮೋಸ ಮಾಡಿ ತಪ್ಪೊಪ್ಪಿಕೊಂಡಿದ್ದಾರೆ ಅನ್ನೋದನ್ನು ತಿಳಿಯೋಣ.
1. ಆಕೆ ನನ್ನಿಂದ ಉಡುಗೊರೆಗಳನ್ನು ಮಾತ್ರ ಬಯಸುತ್ತಿದ್ದಳು
ಒಂದು ಅಧ್ಯಯನದಿಂದ ಸಾಭೀತಾದಂತೆ ಹೆಚ್ಚಿನ ಗಂಡಂದಿರು ತಮ್ಮ ಹೆಂಡತಿಗೆ ಮೋಸ ಮಾಡೋದಕ್ಕೆ ಕಾರಣ ಏನು ಅನ್ನೋದನ್ನು ಹೇಳಿಕೊಂಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಹೆಂಡತಿಗೆ ತನ್ನ ಗಂಡನಿಗಿಂತ ಉಡುಗೊರೆಗಳೇ ಹೆಚ್ಚಾಗಿ ಬಿಡುತ್ತದೆ. ಪ್ರತಿಸಾರಿ ಹುಟ್ಟುಹಬ್ಬ ಅಥವಾ ಮತ್ಯಾವುದೋ ಸಮಾರಂಭಗಳಲ್ಲಿ ಗಂಡನಿಂದ ದುಬಾರಿ ಉಡುಗೊರೆಯನ್ನು ಬಯಸುತ್ತಾರೆ.
ಒಂದು ವೇಳೆ ಚಿಕ್ಕ ಉಡುಗೊರೆಯನ್ನು ತಂದು ಕೊಟ್ಟರೆ ಆಕೆಯ ಮುಖ ಚಿಕ್ಕದಾಗುತ್ತದೆ. ಬ್ಯಾಂಕ್ ಅಕೌಂಟ್ ನಲ್ಲಿ ದುಡ್ಡು ಇಲ್ಲದ ಸಂದರ್ಭದಲ್ಲಿ ಆಕೆಗೆ ಉಡುಗೊರೆಗಳನ್ನು ತೆಗೆಸಿಕೊಡುವುದು ತುಂಬಾನೇ ಕಷ್ಟ. ಇದರ ಮಧ್ಯೆ ನಿನ್ನನ್ನು ಮದುವೆಯಾಗಿ ನನ್ನ ವೃತ್ತಿ ಜೀವನವೇ ನಾಶವಾಯ್ತು ಎಂದು ಪದೇ ಪದೇ ಹೇಳುತ್ತಾಳೆ. ಇಂತಹ ಸಂದರ್ಭದಲ್ಲಿ ಮನಃಶಾಂತಿಗಾಗಿ ಹೆಂಡತಿಗೆ ಮೋಸ ಮಾಡುವ ಸಂದರ್ಭ ಎದುರಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.
2. ಹೆಂಡತಿಗಿದ್ದ ಸಂಬಂಧದ ಬಗ್ಗೆ ನನ್ನಿಂದ ಮುಚ್ಚಿಟ್ಟಿದ್ದಳು
ನಾನು ನನ್ನ ಹೆಂಡತಿಯನ್ನು ಮದುವೆಯಾದ ಮೂರು ತಿಂಗಳ ನಂತರವಷ್ಟೇ ಆಕೆಗೆ ಮದುವೆಗೂ ಮೊದಲಿದ್ದ ಸಂಬಂಧದ ಬಗ್ಗೆ ತಿಳಿಯಿತು. ಆದರೆ ಮದುವೆಯಾದ ನಂತರವೂ ಆತನ ಜೊತೆಗೆ ನನ್ನ ಪತ್ನಿ ಸಂಪರ್ಕದಲ್ಲಿದ್ದಳು ಈ ನೋವು ನನ್ನನ್ನು ಸಾಕಷ್ಟು ಕಾಡಿತ್ತು. ನಾನು ಎಷ್ಟು ಬಾರಿ ಹೇಳಿದರೂ ಕೂಡ ಆಕೆ ಕೇಳುತ್ತಿರಲಿಲ್ಲ. ಕೊನೆಗೆ ನಾನು ಕೂಡ ನನ್ನ ದಾರಿ ನೋಡಿಕೊಂಡೆ ನಾನು ನನ್ನ ಹಳೆಯ ಗೆಳತಿಯ ಜೊತೆಗೆ ಸಂಪರ್ಕದಲ್ಲಿದ್ದೇನೆ. ಇದರ ಬಗ್ಗೆ ಆಕೆ ಏನು ಅಂದುಕೊಳ್ಳುತ್ತಾಳೆ ಅನ್ನೋದ್ರ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ.
3. ನನ್ನ ಹೆಂಡತಿ ದಡ್ಡಿ!
ನನ್ನ ಹೆಂಡತಿಯನ್ನು ನಾನು ಪ್ರೀತಿಸಿ ಮಾದುವೆಯಾಗಿದ್ದೆ. ಮದುವೆಗೂ ಮೊದಲು 6-7 ತಿಂಗಳ ಮೊದಲು ಇಬ್ಬರೂ ಕೂಡ ಡೇಟ್ ಮಾಡಿದ್ವಿ. ಆದ್ರೆ ಮದುವೆಯಾದ ನಂತರ ಗೊತ್ತಾಯ್ತು ಆಕೆಗೆ ಏನು ಗೊತ್ತಿಲ್ಲ. ಆಕೆ ಶತ ದಡ್ಡಿ ಎಂದು. ಆಕೆಗೆ ಸಾಮಾನ್ಯ ಜ್ಞಾನ, ಪುಸ್ತಕಗಳು, ರಾಜಕೀಯ, ದೇಶ-ವಿದೇಶಗಳ ಬಗ್ಗೆ ಕೇಳಿದ್ರೆ ಏನಂದ್ರೆ ಏನು ಗೊತ್ತಿಲ್ಲ.
ಹೀಗಾಗಿ ನನ್ನ ಆಫೀಸ್ ನಲ್ಲಿ ನನ್ನೊಂದಿಗೆ ಕೆಲಸ ಮಾಡುವ ಮಹಿಳೆಯ ಜೊತೆಗೆ ನಾನು ಸಂಬಂಧದಲ್ಲಿ ಇದ್ದೀನಿ. ಆಕೆ ತುಂಬಾನೇ ಬುದ್ಧಿವಂತೆ. ಎಲ್ಲವನ್ನೂ ತುಂಬಾ ಚೆನ್ನಾಗಿ ನಿಭಾಯಿಸುತ್ತಾಳೆ. ನನಗೆ ಮದುವೆಯಾಗಿರೋ ವಿಚಾರದ ಬಗ್ಗೆ ಕೂಡ ಆಕೆಗೆ ಗೊತ್ತಿದೆ. ನಾನು ಸಂಬಂಧದಲ್ಲೇ ಖುಷಿಯಾಗಿದ್ದೀನಿ.
4. ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ಅತಿಯಾಗಿ ನಂಬಿಕೆ ಇಟ್ಟಿದ್ದಾಳೆ!
ನನ್ನ ಹೆಂಡತಿ ನೋಡೋದಕ್ಕೆ ಚೆನ್ನಾಗಿದ್ದಾಳೆ. ಜೊತೆಗೆ ಆಕೆ ತುಂಬಾನೇ ಬುದ್ಧಿವಂತೆಯೂ ಕೂಡ ಹೌದು. ಆದರೆ ಕೆಲವೊಂದು ಧಾರ್ಮಿಕ ವಿಚಾರಗಳನ್ನು ಅತಿಯಾಗಿ ನಂಬುತ್ತಾಳೆ. ಸಂತಾನ ಪ್ರಾಪ್ತಿಯಾಗಿಲ್ಲ ಅನ್ನೋ ಕಾರಣಕ್ಕೆ ವೈದ್ಯರ ಬಳಿ ಹೋಗೋದನ್ನು ಬಿಟ್ಟು ಇಡೀ ಹೊತ್ತು ಪೂಜೆ-ಪುನಸ್ಕಾರ ಮಾಡುತ್ತಾಳೆ. ಕೆಲವು ತಿಂಗಳುಗಳ ಕಾಲ ನನ್ನನ್ನು ಹತ್ತಿರಕ್ಕೂ ಸೇರಿಸೋದಿಲ್ಲ.
ಈ ಎಲ್ಲಾ ವಿಚಾರಗಳನ್ನು ಆಕೆಗೆ ಹೇಳೋದಕ್ಕೆ ಪ್ರಯತ್ನಿಸಿದರೂ ಕೂಡ ಅದು ವ್ಯರ್ಥ. ನನ್ನ ಮಾತನ್ನು ಆಕೆ ಕೇಳುತ್ತಿಲ್ಲ. ಹೀಗಾಗಿ ನಾನು ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧದಲ್ಲಿದ್ದೀನಿ.
ಸೂಚನೆ: ಮದುವೆಯಾದ ಮೇಲೂ ಕೂಡ ಗಂಡಂದಿರೂ ಹೆಂಡತಿಗೆ ಮೋಸ ಮಾಡೋದ್ಯಾಕೆ ಅನ್ನೋದಕ್ಕೆ ಕೆಲವೊಂದು ಕಾರಣಗಳನ್ನು ಹೇಳಿದ್ದಾರೆ. ಇವುಗಳು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಬೋಲ್ಡ್ ಸ್ಕೈ ಕನ್ನಡಕ್ಕೂ ಇದಕ್ಕೂ ಸಂಬಂಧ ಇರೋದಿಲ್ಲ.



Click it and Unblock the Notifications
