Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
93ನೇ ವಯಸ್ಸಲ್ಲಿ 5ನೇ ಮದುವೆಯಾದ ಮಾಧ್ಯಮ ದೊರೆ..! ರೂಪರ್ಟ್ ಮುರ್ಡೋಕ್ ಯಾರು ಗೊತ್ತಾ?
ಮಾಧ್ಯಮ ಲೋಕದ ದೊರೆ ಎಂದೇ ಕರೆಸಿಕೊಳ್ಳುವ ರೂಪರ್ಟ್ ಮುರ್ಡೋಕ್ ಕುರಿತು ನೀವು ಎಲ್ಲಿಯಾದರು ಕೇಳಿರುತ್ತೀರಿ. ಇಂದು ಚಾಲ್ತಿಯಲ್ಲಿರುವ ಬಹುತೇಕ ಅಂತಾರಾಷ್ಟ್ರೀಯ ಮಾಧ್ಯಮಗಳ ಹುಟ್ಟಿಗೆ ಇವರು ಕಾರಣೀಕರ್ತರಾಗಿದ್ದರು. ಆದ್ರೆ ಈಗ ಅವರು ನಿವೃತ್ತಿ ಪಡೆದಿದ್ದಾರೆ.
ಆದರೆ ಇತ್ತಿಚಿಗೆ ಅವರ ಕುರಿತು ಸುದ್ದಿಯೊಂದು ಹರಿದಾಡುತ್ತಿದ್ದು, 93 ವರ್ಷದ ಅವರು ಮತ್ತೊಂದು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಫಾಕ್ಸ್ ಮತ್ತು ನ್ಯೂಸ್ ಕಾರ್ಪೊರೇಶನ್‌ನ ಮಂಡಳಿಗಳಿಂದ ನಿವೃತ್ತಿ ಪಡೆದ ಮುರ್ಡೋಕ್, ಶನಿವಾರ ಎಲೆನಾ ಝುಕೋವಾ ಅವರೊಂದಿಗೆ 5ನೇ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಬ್ಬರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ಸುದ್ದಿ ಎಲ್ಲೆಡೆ ಹರಿದಾಡಿ ಕೆಲವರು ಈ ಸುದ್ದಿ ನಂಬಿರಲಿಲ್ಲ. ಆದ್ರೆ ಇದೀಗ ಜೂನ್ 1ರಂದು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ನೂತನ ದಂಪತಿಯ ಸಂಬಂಧವು ಪ್ರಾರಂಭವಾಯಿತು. 1991 ರಲ್ಲಿ ಮಾಸ್ಕೋದಿಂದ ಅಮೆರಿಕಗೆ ವಲಸೆ ಬಂದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞ ಝುಕೋವಾ ಅವರು ಹಿಂದೆ ಬಿಲಿಯನೇರ್ ಇಂಧನ ಹೂಡಿಕೆದಾರ ಅಲೆಕ್ಸಾಂಡರ್ ಝುಕೋವ್ ಅವರನ್ನು ವಿವಾಹವಾಗಿದ್ದರು.
ಆಗಾಗ ಇಬ್ಬರು ಕೆಲವು ಪ್ರಸಿದ್ಧ ಹೋಟೆಲ್‌ಗಳು, ಹಾಲಿಡೆ ಡೆಸ್ಟಿನೇಷನ್‌ಗಳಲ್ಲಿ ಕಂಡುಬಂದಿದ್ದರು. ಝುಕೋವಾ ಅವರ ವಿವಾಹದ ಕುರಿತಂತೆ ಚರ್ಚೆಗಳು ಸಹ ಇದೆ. ಆಕೆಯ ಮೊದಲ ಪತಿ ಬ್ರಿಟಿಷ್ ಪ್ರಜೆ ಅಲೆಕ್ಸಾಂಡರ್ ಝುಕೋವ್ ಅವರನ್ನು ಭೇಟಿಯಾದರು, ಇಬ್ಬರೂ ಸೋವಿಯತ್ ಒಕ್ಕೂಟದಲ್ಲಿ ವಿದ್ಯಾರ್ಥಿಗಳಾಗಿದ್ದರು. ಅವರ ಮದುವೆಯು ಮೂರು ವರ್ಷಗಳ ಕಾಲ ದಶಾ ಝುಕೋವಾ ಎಂಬ ಉದ್ಯಮಿ ಮಗಳ ಜನನಕ್ಕೆ ಕಾರಣವಾಗಿತ್ತು. ಆದರೆ ಅವರಿಗೆ ವಿಚ್ಚೇದನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಯಾರು ಈ ರೂಪರ್ಟ್ ಮುರ್ಡೋಕ್?
ರೂಪರ್ಟ್ ಮುರ್ಡೋಕ್ ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ಮಾಧ್ಯಮಗಳ ಮಾಲೀಕರಾಗಿದ್ದು, ದಿ ವಿಲ್ ಸ್ಟ್ರೀಟ್ ಜರ್ನಲ್, ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಪ್ರಸಿದ್ಧ ಸುದ್ದಿ ಮಾಧ್ಯಮಗಳ ಒಡೆಯರಾಗಿದ್ದರು. ಈ ಎಲ್ಲಾ ಕಂಪನಿಗಳಿಗೆ ಪೋಷಕ ಕಂಪನಿ ಹುಟ್ಟುಹಾಕಿದ್ದ ಇದೇ ಮುರ್ಡೋಕ್ ಆಗಿದ್ದಾರೆ. ಇವರು ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 2022ರಲ್ಲಿ 31ನೇ ಸ್ಥಾನ ಪಡೆದಿದ್ದರು. ರೂಬರ್ಟ್ ಮುರ್ಡೋಕ್ ಅವರ ನಿವ್ವಳ ಆಸ್ತಿ ಮೌಲ್ಯವು 21.7 ಬಿಲಿಯನ್ ಡಾಲರ್ ಆಗಿದೆ.
ಮಹತ್ವದ ಸುದ್ದಿ ಮತ್ತು ಮನರಂಜನಾ ಸಾಮ್ರಾಜ್ಯವನ್ನು ನಿರ್ಮಿಸಿದ ರೂಪರ್ಟ್ ಮುರ್ಡೋಕ್ ಅವರ ಪ್ರಭಾವವು ಜಾಗತಿಕ ಮಟ್ಟದಲ್ಲಿ ವ್ಯಾಪಿಸಿದೆ. ಆಸ್ಟ್ರೇಲಿಯಾದಲ್ಲಿ 1952 ರಲ್ಲಿ ತನ್ನ ತಂದೆಯಿಂದ ವಾರ್ತಾಪತ್ರಿಕೆಯನ್ನು ಪಡೆದ ಮುರ್ಡೋಕ್ ತನ್ನ ಸಾಮ್ರಾಜ್ಯವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ನಲ್ಲಿ ಪ್ರಮುಖ ಮಾಧ್ಯಮಗಳ ಆರಂಭಕ್ಕೆ ಕಾರಣರಾದರು. ಮುರ್ಡೋಕ್ 1996 ರಲ್ಲಿ ಫಾಕ್ಸ್ ನ್ಯೂಸ್ ಚಾನೆಲ್ ಅನ್ನು ಸ್ಥಾಪಿಸಿದರು. ಬಳಿಕ ಫಾಕ್ಸ್ ನ್ಯೂಸ್ ಸಂಸ್ಥೆ ದೊಡ್ಡ ಜಾಲವಾಗಿ ಹರಡಿತು.
ಫಾಕ್ಸ್ ನ್ಯೂಸ್‌ನ ಪೋಷಕ ಕಂಪನಿ ಮತ್ತು ನ್ಯೂಸ್ ಕಾರ್ಪೊರೇಷನ್‌ನ ಹುದ್ದೆಗಳಿಂದ ಅವರು ನಿವೃತ್ತಿ ಪಡೆದರು. ಬಳಿಕ ಅವರ ಪುತ್ರ ಲಾಚ್ಲಾನ್ ಮುರ್ಡೋಕ್, ಆಧುನಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡರು.



Click it and Unblock the Notifications
