Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದು ಮಗುವಾದ ಮೇಲೆ ದಾಂಪತ್ಯದಲ್ಲಿ ಈ ರೀತಿ ಬದಲಾವಣೆಗಳು ಆಗುತ್ತೆ!
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ. ಆದರೆ ಒಂದು ಮಗುವಾದ ಮೇಲೆ ದಂಪತಿಗಳ ಬಾಳಲ್ಲಿ ಎಲ್ಲವೂ ಬದಲಾಗುತ್ತದೆ. ದಾಂಪತ್ಯದಲ್ಲಿ ಒತ್ತಡ ಹೆಚ್ಚಾಗುತ್ತದೆ, ಜಗಳ, ಮನಸ್ಥಾಪ ಇದರ ಜೊತೆಗೆ ಆರ್ಥಿಕವಾಗಿಯೂ ಸದೃಢರಾಗೋದು ತುಂಬಾನೇ ಮುಖ್ಯವಾಗುತ್ತದೆ.
ಈ ಎಲ್ಲಾ ಕಾರಣಗಳಿಗಾಗಿ ಒಂದು ಮಗುವಾದ ಮೇಲೆ ದಾಂಪತ್ಯದಲ್ಲಿ ಕಲಹಗಳು ಶುರುವಾಗುತ್ತದೆ. ಹಾಗಾದ್ರೆ ಮಗುವಾದ ಮೇಲೆ ಜೀವನ ಯಾವ ರೀತಿ ಬದಲಾಗುತ್ತದೆ? ದಂಪತಿಗಳ ಮಧ್ಯೆ ಯಾವೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದನ್ನ ತಿಳಿಯೋಣ.

1. ನಿಮ್ಮ ಸಂಗಾತಿಯ ಕೆಲವೊಂದು ಗುಣಗಳು ಇಷ್ಟ ಆಗೋದಿಲ್ಲ
ಮಕ್ಕಳಾದ ಮೇಲೆ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಇದರಿಂದ ಕೆಲವೊಂದು ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. ಇನ್ನೂ ಇಡೀ ದಿನ ಮಗುವಿನ ಮೇಲೆ ಕಣ್ಣಿಡುವ ಅವಶ್ಯಕತೆ ಇರೋದ್ರಿಂದ ಇತ್ತ ಆಕೆಗೆ ಕೆಲಸದ ಒತ್ತಡವು ಹೆಚ್ಚಾಗುತ್ತದೆ. ಈ ವೇಳೆ ಪತಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಅಥವಾ ಎಲ್ಲಾ ಕೆಲಸಗಳಿಗೂ ಪತ್ನಿಯನ್ನೇ ಅವಲಂಬಿಸಿದರೆ ಇಂತಹ ಸಂದರ್ಭದಲ್ಲಿ ಪತ್ನಿಯು ಪತಿಯ ಕೆಲವೊಂದು ಗುಣಗಳನ್ನು ಇಷ್ಟ ಪಡೋದಿಲ್ಲ.
2. ಮಗುವಿನ ಮೇಲಿನ ಅಕ್ಕರೆ ಹೆಚ್ಚಾಗುತ್ತದೆ
ಮನೆಗೆ ಪುಟ್ಟ ಪಾಪು ಬಂದ ಮೇಲೆ ಎಲ್ಲರ ಗಮನ ಮಗುವಿನ ಮೇಲೆಯೇ ಇರುತ್ತದೆ. ಅದರ ಬೇಕು, ಬೇಡಗಳನ್ನು ವಿಚಾರಿಸಿಕೊಳ್ಳೋದ್ರಲ್ಲೇ ಪತಿ, ಪತ್ನಿ ಇಬ್ಬರು ಬ್ಯುಸಿ ಆಗುತ್ತಾರೆ. ಇಂತಹ ಸಂದರ್ಭದಲ್ಲಿ ಪತಿ-ಪತ್ನಿಯ ನಡುವಿದ್ದ ಪ್ರೀತಿ ಕೊಂಚ ಕಡಿಮೆಯಾಗುತ್ತದೆ. ಎಲ್ಲಾ ಪ್ರೀತಿಯು ಮಗುವಿಗೆ ಧಾರೆ ಎರೆಯುತ್ತಾರೆ.
3. ಲೈಂಗಿಕ ಜೀವನವು ಬದಲಾಗುತ್ತದೆ
ಮಗುವಿಗೂ ಮೊದಲು ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಿರಬಹುದು. ಆದರೆ ಒಂದು ಮಗುವಾದ ಮೇಲೆ ನಿಮ್ಮ ಲೈಂಗಿಕ ಆಸಕ್ತಿ ಬೇರೆಯದ್ದೇ ರೀತಿ ಇರುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಹೆರಿಗೆಯಾದ ಕೆಲವು ವಾರಗಳವರೆಗೂ ನೋವು ಇದ್ದೇ ಇರುತ್ತದೆ. ಇನ್ನೂ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗಿರೋದ್ರಿಂದ ಅವರಿಗೆ ಲೈಂಗಿಕ ಆಸಕ್ತಿ ಹೆಚ್ಚಾಗಿ ಇರೋದಿಲ್ಲ.
4. ಜಗಳ, ಮನಸ್ಥಾಪ ಹೆಚ್ಚಾಗಬಹುದು
ಮಗುವಾದ ಮೇಲೆ ಮಗುವಿನ ಮೇಲೆ ಹೆಚ್ಚು ಗಮನ ಕೊಡಬೇಕಾದ ಅವಶ್ಯಕತೆ ಇರೋದ್ರಿಂದ ಗಂಡನ ಮೇಲಿನ ಗಮನ ಕಡಿಮೆಯಾಗುತ್ತದೆ. ಪತಿಗೆ ಬೇಕಾದ ಕೆಲವೊಂದು ಅವಶ್ಯಕತೆಗಳನ್ನು ನಿಮ್ಮಿಂದ ಪೂರೈಸೋದಕ್ಕೆ ಆಗೋದಿಲ್ಲ. ಈ ವೇಳೆ ಜಗಳ, ಮನಸ್ಥಾಪ ಉಂಟಾಗುವ ಸಾಧ್ಯತೆ ಇದೆ.
5. ಒಟ್ಟಾಗಿ ಹೊರಗಡೆ ಸುತ್ತಾಡೋದಕ್ಕೆ ಹೋಗೋದಿಕ್ಕೆ ಆಗೋದಿಲ್ಲ
ಮದುವೆಯಾದ ಹೊಸತರಲ್ಲಿ ಹೊರಗಡೆ ಹೋಗೋದು, ಪಾರ್ಟಿ ಮಾಡೋದು, ಕೆಲವೊಂದು ಸಂದರ್ಭಗಳಲ್ಲಿ ನೈಟ್‌ಔಟ್ ಹೋಗಿರುತ್ತೀರಿ. ಆದರೆ ಮಗುವಾದ ನಂತರ ಗಂಡ ಹೇಗೋ ಹೊರಗಡೆ ಹೋಗಿ ದುಡಿಯುತ್ತಾನೆ. ಆದರೆ ತಾಯಿಯಾದವಳಿಗೆ ಈ ಅವಕಾಶಗಳು ಸಿಗೋದು ಕಡಿಮೆ. ಸುಮಾರು ಎಂಟು ತಿಂಗಳವರೆಗೂ ಮಗುವನ್ನು ಎಲ್ಲೆಂದರಲ್ಲಿ ಹೊರಗಡೆ ಕರೆದುಕೊಂಡು ಹೋಗಬಾರದು, ಅದ್ರಲ್ಲೂ ರಾತ್ರಿಯ ಸಮಯದಲ್ಲಿ ಹೊರಗಡೆ ಹೋಗೋದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಮಹಿಳೆಯರು ಕೊಂಚ ಮಟ್ಟಿಗೆ ತಮ್ಮ ಸ್ವಾತಂತ್ರ ಕಳೆದುಕೊಳ್ಳುತ್ತಾರೆ. ಹಾಗೂ ಗಂಡನ ಜೊತೆಗೆ ಹೊರಗಡೆ ಕಾಲ ಕಳೆಯೋದಕ್ಕೆ ಆಗೋದಿಲ್ಲ.
6. ಸಂತೋಷ ಹೆಚ್ಚಾಗುತ್ತದೆ
ಮಗು ಬಂದ ಮೇಲೆ ಕೇವಲ ಋಣಾತ್ಮಕ ಬದಲಾವಣೆ ಮಾತ್ರ ಆಗೋದಿಲ್ಲ ಧನಾತ್ಮಕ ಬದಲಾವಣೆಯೂ ಆಗುತ್ತದೆ. ಮಗುವಿನ ಆ ಒಂದು ನಗು ನಿಮ್ಮ ಕುಟುಂಬದ ಸಂತೋಷವನ್ನು ಮತ್ತಷ್ಟು ಹೆಚ್ಚು ಮಾಡಬಹುದು. ಮಗು ಬಂದ ಮೇಲೆ ನಿಮ್ಮಬ್ಬರ ನಡುವಿನ ಪ್ರೀತಿ ಹೆಚ್ಚಾಗಬಹುದು. ಮಗುವನ್ನು ಆಟವಾಡಿಸೋ ಕ್ಷಣದಲ್ಲಿ ನೀವಿಬ್ಬರೂ ಒಟ್ಟಾಗಿ ಸಮಯ ಕಳೆಯುತ್ತೀರಿ. ಹೀಗೆ ಮಗು ಬಂದ ಮೇಲೆ ಆದ ಸಣ್ಣ-ಪುಟ್ಟ ಬದಲಾವಣೆಗಳು ಜೀವನದಲ್ಲಿ ಖುಷಿ ಹೆಚ್ಚು ಮಾಡಬಹುದು.
ದಾಂಪತ್ಯ ಎಂದ ಮೇಲೆ ಸುಖ-ದುಃಖ ಎದುರಾಗೋದು ಸಹಜ. ಹಾಗೆಂದ ಮಾತ್ರಕ್ಕೆ ಕುಗ್ಗಬಾರದು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಪತಿ-ಪತ್ನಿ ಇಬ್ಬರಲ್ಲೂ ಇರಬೇಕು.



Click it and Unblock the Notifications



