Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಹೆಣ್ಣು ತನ್ನ ಸಂಕಲ್ಪದ ಇಂಥ ಪುರುಷನೆಡೆಗೆ ಬೇಗನೆ ಆಕರ್ಷಿತಳಾಗುತ್ತಾಳೆ
ಹುಡುಗ ನೋಡಲು ಸುಂದರವಾಗಿದ್ದರೆ, ಒಳ್ಳೆಯ ಸ್ಟೇಟಸ್‌ನಲ್ಲಿದ್ದರೆ ಹುಡುಗಿಯರು ಇಷ್ಟಪಡುತ್ತಾರೆ ಎಂದೇ ಎಲ್ಲರೂ ಭಾವಿಸುತ್ತಾರೆ. ಒಂದು ಲೆಕ್ಕದಲ್ಲಿ ಅದು ಸತ್ಯವೂ ಕೂಡ. ಮದುವೆ ಅಂತ ಬಂದಾಗ ಹುಡುಗ ಏನು ಕೆಲಸ ಮಾಡುತ್ತಿದ್ದಾನೆ, ಅವನ ಆರ್ಥಿಕ ಪರಿಸ್ಥಿತಿ ಇವೆಲ್ಲಾ ನೋಡಿ ಕೊಡಲಾಗುವುದು. ಇನ್ನು ಇಂಥ ಹುಡ್ಗರಿಗೆ ಗರ್ಲ್ ಫ್ರೆಂಡ್ಸ್ ಸಂಖ್ಯೆ ಹೆಚ್ಚಿರುವುದರಿಂದ ಇಂಥವರನ್ನೇ ಎಲ್ಲಾ ಹುಡ್ಗಿಯರು ಬಯಸುತ್ತಾರೆ ಎಂದು ಭಾವಿಸುತ್ತಾರೆ. ಈ ಹಣ ನೋಡಿ ಜೊತೆ ಸೇರಿದರೆ ಅವರು ಹಣ ಇರುವಷ್ಟೂ ಸಮಯ ಜೊತೆಗಿರುತ್ತಾರೆ.
ಆದರೆ ಒಳ್ಳೆಯ ಹೆಣ್ಣಿಗೆ ತನ್ನ ಪುರುಷ ಹೇಗಿರಬೇಕೆಂಬ ಸಂಕಲ್ಪ ಇರುತ್ತದೆ. ಆ ರೀತಿ ಇಲ್ಲದಿದ್ದರೆ ಅವಳಿಗೆ ಅವನ ಬಗ್ಗೆ ನಿರಾಸೆ ಉಂಟಾಗುವುದು. ಪ್ರತೀ ಹೆಣ್ಣಿನ ಸಂಕಲ್ಪದಲ್ಲಿರುವ ಪುರುಷನೆಂದರೆ:

ಆತ್ಮವಿಶ್ವಾಸ ಹೊಂದಿರಬೇಕು
ಆತ್ಮವಿಶ್ವಾಸ ಹೊದಿರುವ ವ್ಯಕ್ತಿ ಎಲ್ಲರನ್ನು ಆಕರ್ಷಿಸುತ್ತಾನೆ. ಕಷ್ಟಗಳಿಗೆ ಹೇಡಿಯಂತೆ ಆಡುವ ವ್ಯಕ್ತಿ ಇಷ್ಟವಾಗುವುದಿಲ್ಲ. ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿ ನೀ ನನ್ನೊಂದಿಗೆ ಆತ್ಮವಿಶ್ವಾಸದಿಂದ ಇರಬಲ್ಲೆ ಎಂಬ ಆತ್ಮವಿಶ್ವಾಸವನ್ನು ಆಕೆಗೆ ತುಂಬುತ್ತಾನೆ.

ನಿಯತ್ತು
ಹೆಣ್ಣು ತನ್ನ ಪುರುಷ ನನಗೆ ಯಾವುದೇ ಕಾರಣಕ್ಕೆ ಮೋಸ ಮಾಡಬಾರದೆಂದು ಬಯಸುತ್ತಾಳೆ. ಬೇರೆ ಹೆಣ್ಣಿನ ಕಡೆ ಆಕರ್ಷಿತನಾದರೆ ಅದು ಅವಳಿಗೆ ಸಹಿಸಲು ಸಾಧ್ಯವಿಲ್ಲ. ನನ್ನ ಗಂಡ ನನ್ನದು ಮಾತ್ರ ಎಂಬ ಪೊಸೆಸಿವ್ ಇರುತ್ತದೆ.

ಅತ್ಯುತ್ತಮ ನಡವಳಿಕೆ
ಹೆಣ್ಣು ಬಯಸುವುದು ಅತ್ಯುತ್ತಮ ನಡವಳಿಕೆ ಹೊಂದಿರುವ ವ್ಯಕ್ತಿ ನನ್ನ ಪುರುಷನಾಗಬೇಕೆಂದು. ಒಳ್ಳೆಯ ನಡವಳಿಕೆ ಹೊಂದಿರುವ ವ್ಯಕ್ತಿಯೊಂದಿಗೆ ಸಂಸಾರ ನಡೆಸುವುದು ಸುಲಭವಾಗುವುದು ಅಲ್ಲದೆ ಅಂಥ ವ್ಯಕ್ತಿ ಸಮಾಜದಲ್ಲಿ ಒಂದು ಒಳ್ಳೆಯ ಗೌರವ ಇರುತ್ತದೆ. ಎಲ್ಲರೂ ಆತನನ್ನು ಗೌರವಿಸುವುದೇ ಆಕೆಗೆ ಹೆಮ್ಮೆ.

ಅನುಕಂಪ
ಯಾರು ನಮ್ಮ ಕಡೆ ಅನುಕಂಪ ಹೊಂದಿರುತ್ತಾರೋ ಅವರೆಡೆಗೆ ಮಹಿಳೆ ಆಕರ್ಷಿಸುತ್ತಾಳೆ. ಅವಳು ತುಂಬಾ ದುಃಖದಲ್ಲಿದ್ದಾಗ ಸಂತೈಸುವ, ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿ ಅವಳಿಗೆ ತುಂಬಾನೇ ಇಷ್ಟವಾಗುತ್ತಾನೆ. ಯಾರು ನಮ್ಮ ಬಗ್ಗೆ ಕೇರ್ ತಗೊಳ್ಳುತ್ತಾರೋ ಅವರನ್ನು ಹುಡುಗಿಯರು ಇಷ್ಟಪಡುತ್ತಾರೆ.

ಮನಸ್ಸು ಬಿಚ್ಚಿ ಮಾತನಾಡುವವ
ಎಷ್ಟೋ ಪುರುಷರು ತಮ್ಮ ಎಲ್ಲಾ ಭಾವನೆಗಳನ್ನು ಬಾಟಲಿಯೊಳಗೆ ಹಾಕಿ ಮುಚ್ಚಳ ಹಾಕಿದಷ್ಟು ಬಿಗಿಯಾಗಿರುತ್ತಾರೆ. ಏನೂ ಹಂಚಿಕೊಳ್ಳುವುದಿಲ್ಲ, ಅಂಥ ಪುರುಷ ಹೆಂಡತಿಗೆ ನಿರಾಸೆ ಉಂಟು ಮಾಡುತ್ತಾನೆ. ಏನೇ ವಿಷಯವಾಗಿರಲಿ ಆತ ನನ್ನೊಂದಿಗೆ ಹಂಚಿಕೊಳ್ಳಬೇಕು ಎಂದು ಬಯಸುತ್ತಾಳೆ. ಅಂಥ ವ್ಯಕ್ತಿಯ ಜೊತೆಗೆ ಭಾವಾತ್ಮಕವಾದ ಸಂಬಂಧ ಗಟ್ಟಿಯಾಗಿರುವುದು.

ಗೌರವ ನೀಡುವವ
ಯಾರು ಮಹಿಳೆಯರನ್ನು ಗೌರವಿಸುತ್ತಾರೋ ಅಂಥ ಪುರುಷರನ್ನು ಮಹಿಳೆಯರೂ ಗೌರವಿಸುತ್ತಾರೆ, ಇಷ್ಟಪಡುತ್ತಾರೆ. ಎಷ್ಟೋ ಪುರುಷ ತಾನು ಅಹಂನಿಂದ ವರ್ತಿಸುವುದೇ ಪೌರುಷ ಅಂದ್ಕೊಂಡಿರುತ್ತಾರೆ, ಆದರೆ ಅಂಥ ಪುರುಷನನ್ನು ಅನಿವಾರ್ಯವಾಗಿ ಸಹಿಸಿಕೊಂಡಿರುತ್ತಾಳೇ ವಿನಃ ಅವನ ಮೇಲೆ ಪ್ರೀತಿ ಮೂಡಲ್ಲ, ಗೌರವ ಇರಲ್ಲ ಇಂಥ ಪುರುಷನನ್ನು ಮಹಿಳೆ ಇಷ್ಟಪಡಲ್ಲ, ಬದಲಿಗೆ ಮಹಿಳೆಯರನ್ನು ಗೌರವಿಸುವ ವ್ಯಕ್ತಿಯನ್ನು ಅವಳು ತುಂಬಾ ಇಷ್ಟಪಡುತ್ತಾಳೆ.

ಸ್ವಲ್ಪ ಹಾಸ್ಯ ಸ್ವಭಾವ
ಹಾಸ್ಯ ಸ್ವಭಾವ ಅಂದ್ರೆ ಕಾಮಿಡಿಯನ್ ಆಗಿರಬೇಕೆಂದು ಅಲ್ಲ, ಆದರೆ ಸ್ವಲ್ಪ ಸೆನ್ಸ್ ಆಫ್ ಹ್ಯೂಮರ್ ಇರಬೇಕು. ನಗಿಸುವ ವ್ಯಕ್ತಿಯೆಂದರೆ ಮಹಿಳೆಯರನ್ನು ಮಾತ್ರವಲ್ಲ ಎಲ್ಲರನ್ನು ಆಕರ್ಷಿಸುತ್ತಾರೆ. ಮುಖ ಗಂಟಕ್ಕಿ ಇರುವ ವ್ಯಕ್ತಿ ಯಾರಿಗೂ ಇಷ್ಟವಾಗುವುದಿಲ್ಲ.

ಪ್ರಭುದ್ಧ ಗುಣ
ಪುರುಷರೆಂದರೆ ಸ್ವಲ್ಪ ಪ್ರಬುದ್ಧದಿಂದ ವರ್ತಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಸಿಲ್ಲಿ-ಸಿಲ್ಲಿ ಆಡುವವರು ಯಾರಿಗೂ ಇಷ್ಟವಾಗುವುದಿಲ್ಲ. ಸ್ವಲ್ಪ ವಿವೇಚನೆಯಿಂದ ಮಾತನಾಡುವ, ವರ್ತಿಸುವ ಪುರುಷನ ವ್ಯಕ್ತಿತ್ವವನ್ನುಹೆಣ್ಣು ತುಂಬಾ ಇಷ್ಟಪಡುತ್ತಾಳೆ.



Click it and Unblock the Notifications