Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಮಹಿಳೆಯರನ್ನು ಹೆಚ್ಚು ಆಕರ್ಷಿಸುವವ ಪುರುಷರ ಗುಣಗಳಿವು
ಪ್ರತಿಯೊಬ್ಬ ಹೆಣ್ಣು ಮಗಳಿಗೆ ತನ್ನ ಪುರುಷ ಹಾಗೆ ಇರಬೇಕು, ಹೀಗೆ ಇರಬೇಕು ಎಂಬ ನೋರೆಂಟು ಕನಸ್ಸುಗಳಿರುತ್ತದೆ. ಆದರೆ ತಾವು ಬಯಸಿದ ಗುಣಗಳಿರುವ ಹುಡುಗರನ್ನು ಪಡೆಯುವ ಅದೃಷ್ಟವಂತೆಯರು ಕೆಲವೇ ಕೆಲವರು.

ನಮ್ಮ ಹಣ, ಅಂತಸ್ತು, ರೂಪ ಇವೆಲ್ಲಾ ನೋಡಿ ಹುಡುಗಿ ನಮ್ಮನ್ನು ಇಷ್ಟಪಡುತ್ತಾಳೆ ಎಂಬ ಆಲೋಚನೆ ಕೆಲ ಪುರುಷರಲ್ಲಿ ಇರುತ್ತದೆ. ಆದರೆ ಒಬ್ಬ ಒಳ್ಳೆಯ ಹೆಣ್ಣು ತನ್ನ ಪುರುಷನಲ್ಲಿ ಅವುಗಳೆನ್ನೆಲ್ಲಾ ಬಯಸುವುದಿಲ್ಲ, ಬದಲಿಗೆ ಕೆಲವೊಂದು ಗುಣಗಳನ್ನು ಬಯಸುತ್ತಾಳೆ, ಅಂಥ ಪುರುಷ ಸಿಕ್ಕಾಗ ಅವಳು ಆತನನ್ನು ಇಷ್ಟಪಡಲು ಪ್ರಾರಂಭಿಸುತ್ತಾಳೆ. ಅಲ್ಲದೆ ಆ ಗುಣಗಳನ್ನು ಹೊಂದಿರುವ ಪುರುಷ ತನ್ನ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ ಕೂಡ. ಅವನಿಗೆ ಅವಳ ಭಾವನೆಗಳಿಗೆ ಸ್ಪಂದಿಸಲು ತಿಳಿದಿರುತ್ತದೆ ಹಾಗೂ ಅವಳನ್ನು ಗೌರವಿಸುತ್ತಾನೆ.
ಯಾವ ಗುಣಗಳಿರುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ ಎಂದು ನೋಡೋಣ:

ಹೆಣ್ಣನ್ನು ಗೌರವಿಸುವವ
ಪ್ರತಿಯೊಂದು ಹೆಣ್ಣನ್ನು ಗೌರವಿಸುವ ಗುಣವಿರುವ ಪುರುಷ ಒಳ್ಳೆಯ ಸಂಸ್ಕಾರದಿಂದ ಬೆಳೆದಿರುತ್ತಾನೆ, ಅವನ ಪೋಷಕರು ಅವನಲ್ಲಿ ಆ ಗುಣಗಳನ್ನು ತುಂಬಿರುತ್ತಾನೆ. ಈ ಗುಣಗಳಿಂದ ಆತ ತನ್ನ ಮನೆಯ ಹೆಣ್ಣು ಮಕ್ಕಳನ್ನು ಗೌರವಿಸುವುದರ ಜೊತೆಗೆ ಇತರ ಹೆಣ್ಣು ಮಕ್ಕಳನ್ನೂ ಗೌರವಿಸುತ್ತಾನೆ. ಹೆಣ್ಣಿಗೆ ಗೌರವ ಕೊಡದವ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಆತನ ಬಳಿಯಿದ್ದರೆ ನೆಮ್ಮದಿ, ಗೌರವ ಸಿಗುವುದಿಲ್ಲ.

ಕಷ್ಟಪಟ್ಟು ದುಡಿಯುವ ಪುರುಷ
ಉದ್ಯೋಗ ಪುರುಷ ಲಕ್ಷಣಂ ಎನ್ನುತ್ತಾರೆ. ದುಡಿಯದ ಪುರುಷನನ್ನು ಯಾವ ಹೆಣ್ಣು ಕೂಡ ಇಷ್ಟಪಡುವುದಿಲ್ಲ. ತಮ್ಮ ಪೋಷಕರು ಸಾಕಷ್ಟು ಹಣ ಮಾಡಿದ್ದಾರೆ ಎಂದು ಆ ಹಣದಲ್ಲಿ ಜೀವನ ಕಳೆಯುವ ಪುರುಷ ಮಹಿಳೆಗೆ ಇಷ್ಟವಾಗುವುದಿಲ್ಲ. ತನ್ನ ಪತಿ ದುಡಿಯಬೇಕು, ಆ ಹಣದಲ್ಲಿ ನನ್ನ ಸಾಕಬೇಕೆಂದು ಸ್ವಾಭಿಮಾನಿ ಹೆಣ್ಣು ಬಯಸಿಯೇ ಬಯಸುತ್ತಾಳೆ. ಕಷ್ಟಪಟ್ಟು ದುಡಿಯುವ ಸಂಗಾತಿಗೆ ಹೆಣ್ಣು ಸಾಥ್ ನೀಡಿಯೇ ನೀಡುತ್ತಾಳೆ.

ಪ್ರಾಮಾಣಿಕ ವ್ಯಕ್ತಿ
ಪ್ರತಿಯೊಬ್ಬ ಹೆಣ್ಣು ತನ್ನ ಪುರುಷನಲ್ಲಿ ಪ್ರಾಮಾಣಿಕತೆಯನ್ನು ಬಯಸುತ್ತಾಳೆ. ಆತ ತನಗೆ ಮೋಸ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ತನಗೆ ಮೋಸ ಮಾಡುವ ಪುರುಷನನ್ನು ಅವಳಿಗೆ ಮುಂದೆ ನಂಬಲು ಹಾಗೂ ತುಂಬಾ ಪ್ರೀತಿಸಲು ಅಸಾಧ್ಯವಾಗುತ್ತದೆ. ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಗೊತ್ತಿದ್ದರೂ ಕೆಲ ಹೆಣ್ಣು ಮಕ್ಕಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆತನ ಜೊತೆಗೆ ಇರಬಹುದು, ಆದರೆ ಆಕೆಯ ಮನಸ್ಸಿನಲ್ಲಿ ಆತನ ಬಗ್ಗೆ ಇರುವ ಗೌರವ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಇಲ್ಲವಾಗಿರುತ್ತದೆ.

ಕುಟುಂಬದವರನ್ನು ಗೌರವಿಸುವ ವ್ಯಕ್ತಿ
ಮದುವೆಯಾಗಿ ಗಂಡನ ಮನೆಗೆ ಬರುವಾಗ ಹೆಣ್ಣು ತನ್ನ ಕುಟುಂಬದವರಂತೆ ಗಂಡನ ಮನೆಯವರನ್ನೂ ಪ್ರೀತಿಸುತ್ತಾಳೆ, ಅವರ ಸೇವೆ ಮಾಡುತ್ತಾಳೆ, ತನ್ನ ಗಂಡ ತನ್ನ ಮನೆಯವರನ್ನು ಗೌರವದಿಂದ ಕಾಣಬೇಕು ಎಂದು ಬಯಸುತ್ತಾಳೆ. ಪುರುಷ ತನ್ನ ಮನೆಯವರನ್ನೂ ಪ್ರೀತಿಯಿಂದ ಕಂಡರೆ ಆಕೆಗೆ ತುಂಬಾ ಖುಷಿಯಾಗುವುದು.

ಪ್ರಬುದ್ಧತೆ
ತನ್ನ ಪುರುಷನಲ್ಲಿ ಪ್ರಬುದ್ಧತೆ ಇರಬೇಕೆಂದು ಬಯಸುತ್ತಾಳೆ. ಯಾವುದೇ ಸಂದರ್ಭದಲ್ಲಿ ಪ್ರಬುದ್ಧತೆಯಿಂದ ವರ್ತಿಸುವ ಪುರುಷನನ್ನು ಕಂಡರೆ ಮಹಿಳೆಗೆ ಇಷ್ಟವಾಗುವುದು. ನಾಯಕತ್ವದ ಗುಣ, ಸವಾಲುಗಳನ್ನು ಎದುರಿಸುವ ಗಟ್ಟಿತನ ಇವೆಲ್ಲಾ ಗುಣಗಳಿರುವ ಪುರುಷನನ್ನು ಕಂಡರೆ ಮಹಿಳೆ ಹೆಚ್ಚು ಆಕರ್ಷಿತಳಾಗುತ್ತಾಳೆ.



Click it and Unblock the Notifications











