Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಏನಿದು ಕಪಲ್ ಚಾಲೆಂಜ್? ಇದರ ಉದ್ದೇಶವೇನು?
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನೀವು ಗಮನಿಸಿರಬಹುದು ಅನೇಕ ಬಗೆಯ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದೆವು. ಒಂದೊಂದು ಬಗೆಯ ಚಾಲೆಂಜ್ ಪೋಸ್ಟ್ ಮಾಡುತ್ತಾರೆ, ಅವುಗಳಲ್ಲಿ ಕೆಲವೊಂದು ಚಾಲೆಂಜ್ ಅಂತು ಸಾಕಷ್ಟು ವೈರಲ್ ಆಗುತ್ತದೆ. ಈಗ ವೈರಲ್ ಆಗಿರುವ ಚಾಲೆಂಜ್ ಅಂದರೆ 'ಕಪಲ್ ಚಾಲೆಂಜ್'.
ಈಗ ನೀವು ಗಮನಿಸಿರಬಹುದು ಫೇಸ್ ಬುಕ್ ಓಪನ್ ಮಾಡಿದ ತಕ್ಷಣ ಜೋಡಿ ಫೋಟೋ ಅಪ್‌ಲೋಡ್ ಮಾಡಿ ಕಪಲ್‌ಚಾಲೆಂಜ್ ಅಂತ ಹ್ಯಾಶ್ ಟ್ಯಾಗ್ ಕೊಟ್ಟಿರುತ್ತಾರೆ. ಏನಿದು ಕಪಲ್ ಚಾಲೆಂಜ್, ಒದು ಶುರುವಾಗಿದ್ದು? ಕಪಲ್ ಚಾಲೆಂಜ್ ಉದ್ದೇಶವೇನು ಎಂಬುವುದರ ಕುರಿತ ಆಸಕ್ತಿಕರ ವಿಷಯಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಹಾಲಿವುಡ್‌ನ ಪ್ರಸಿದ್ಧ ಜೋಡಿ ಪ್ರಾರಂಭಿಸಿದ ಕಪಲ್ ಚಾಲೆಂಜ್
ಲಾಕ್‌ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದರು. ಆಗ ಮನೆಯವರೊಂದಿಗೆ ಕಳೆಯಲು ತುಂಬಾ ಸಮಯ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಹಾಲಿವುಡ್ ಪ್ರಸಿದ್ಧ ಜೋಡಿಯಾದ ಜೆನ್ನಿಫರ್ ಲೋಪೆಜ್ ಹಾಗೂ ಅಲೆಕ್ಸ್ ರೊಡ್ರಿಗಸ್ ಈ ಚಾಲೆಂಜ್ ಶುರು ಮಾಡಿದರು.

ಕಪಲ್ ಚಾಲೆಂಜ್ ಎಂದರೇನು?
ಈ ಚಾಲೆಂಜ್ ಗಂಡ ಹೆಂಡತಿ ನಡುವೆ ಕೆಮಿಸ್ಟ್ರಿ ಹೇಗಿದೆ ಎಂದು ತಿಳಿಸುವುದು ಅಲ್ಲದೆ ಸಾಕಷ್ಟು ಫನ್ ಕೂಡ ಇರುತ್ತದೆ. ಹೀಗೆ ಶುರುವಾದ ಚಾಲೆಂಜ್ ಟಿಕ್‌ಟಾಕ್ ಇದ್ದಾಗ ತುಂಬಾ ಸದ್ದು ಮಾಡಿತ್ತು. ಇದೀಗ ಫೇಸ್‌ಬುಕ್‌ನಲ್ಲಿ ಫೋಟೋಸ್ ಅಪ್‌ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಯಿಂದ ಹಿಡಿದು ಸಾಮಾನ್ಯ ಜನರು ಕೂಡ ಈ ಕಪಲ್ ಚಾಲೆಂಜ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಕಪಲ್ ಚಾಲೆಂಜ್ ಆಡುವುದು ಹೇಗೆ?
ಈ ಕಪಲ್ ಚಾಲೆಂಜ್ ತುಂಬಾ ಸರಳವಾಗಿದೆ. ಗಂಡ-ಹೆಂಡತಿ ಕಣ್ಣುಮುಚ್ಚಿ ಅಕ್ಕ-ಪಕ್ಕ ಕುಳಿತುಕೊಳ್ಳಬೇಕು. ಇವರ ವೀಡಿಯೋವನ್ನು ಸ್ನೇಹಿತರೋ ಅಥವಾ ಮನೆಯವರು ಮಾಡುತ್ತಾರೆ. ಅವರು ಪ್ರಶ್ನೆ ಕೇಳುತ್ತಾ ಹೋಗುತ್ತಾರೆ. ಅದಕ್ಕೆ ಇವರಿಬ್ಬರು ಉತ್ತರಿಸಬೇಕು. ಕೆಲವೊಮ್ಮೆ ದಂಪತಿ ಪ್ರಶ್ನೆ ಕೇಳುವಾಗ ತದ್ವಿರುದ್ಧ ಉತ್ತರ ನೀಡುತ್ತಾರೆ. ಇದು ನೋಡಲು ಮಜಾವಾಗಿರುತ್ತದೆ.

ಕಪಲ್ ಚಾಲೆಂಜ್‌ಗೆ ಕೇಳುವ ಪ್ರಶ್ನೆಗಳು
ಆ ದಂಪತಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುವುದು. ಸಾಮಾನ್ಯವಾಗಿ ಈ ಪ್ರಶ್ನೆಗಳನ್ನು ಕೇಳಲಾಗುವುದು
- ನಿಮ್ಮಲ್ಲಿ ಯಾರು ರೊಮ್ಯಾಂಟಿಕ್?
- ಯಾರು ಚೆನ್ನಾಗಿ ಅಡುಗೆ ಮಾಡುತ್ತಾರೆ?
- ಯಾರಿಗೆ ಬೇಗ ಕೋಪ ಬರುತ್ತದೆ?
- ಯಾರು ಗೊರಕೆ ಹೊಡೆಯುತ್ತಾರೆ?
- ಯಾರು ಮೊದಲು ಕ್ಷಮೆ ಕೇಳುತ್ತಾರೆ?
- ಯಾರು ಹೆಚ್ಚು ಜಾಲಿ ಪರ್ಸನ್?
- ಯಾರಿಗೆ ಫ್ಯಾಷನ್ ಟೇಸ್ಟ್ ಅಧಿಕ?
- ಯಾರು ಸೋಮಾರಿ?
- ಯಾರು ತುಂಬಾ ಕ್ರೇಝಿ?
- ಯಾರು ಹೊರಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ?
ಹೀಗೆ ಸರಳವಾದ ಪ್ರಶ್ನೆಗಳನ್ನು ಕೇಳಲಾಗುವುದು. ಅವರು ಉತ್ತರಿಸುವುದು ನೋಡಲು ಸಕತ್ ಫನ್ ಆಗಿರುತ್ತದೆ.



Click it and Unblock the Notifications
