ನಿಮ್ಮಿಬ್ಬರಲ್ಲಿ ಏಕೋ ಭಾವನಾತ್ಮಕ ಕೊರತೆ ಅನಿಸುತ್ತಿದೆಯೇ? ಈ ಪ್ರಯತ್ನ ಮಾಡಿ ನೋಡಿ

ನಿಮ್ಮ ಸಂಗಾತಿಯಿಂದ ನೀವು ಭಾವನಾತ್ಮಕವಾಗಿ ದೂರ ಸರಿಯುತ್ತಿದ್ದೀರಾ..? ಅಥವಾ ನಿಮ್ಮ ಸಂಗಾತಿ ನಿಮ್ಮಿಂದ ಭಾವನಾತ್ಮಕವಾಗಿ ದೂರ ಸರಿಯುತ್ತಿದ್ದಾರಾ..? ಈ ರೀತಿ ಆದಾಗ ಪ್ರೀತಿಗೆ ಅರ್ಥವಿಲ್ಲದಂತೆ ಆಗುತ್ತದೆ. ಈ ಪ್ರೇಮವು ವೈಫಲ್ಯಕ್ಕೂ ಕಾರಣವಾಗಬಹುದು. ಯಾಕೆಂದರೆ ಭಾವನಾತ್ಮಕವಾಗಿ ಕನೆಕ್ಟ್ ಇಲ್ಲದಿದ್ದರೆ ಅಲ್ಲಿ ಪ್ರೀತಿ ಇರುವುದಿಲ್ಲ. ನಿಮ್ಮ ನಡುವೆ ಅನುಮಾನಗಳು ಮೂಡಲು ಆರಂಭವಾಗುತ್ತದೆ. ಅವರಿಗೆ ಬೇರೆ ಸಂಬಂಧ ಇದೆಯೋ ಎನ್ನುವ ಭಯವು ನಿಮ್ಮನ್ನೂ ಕಾಡಬಹುದು. ಭಾವನಾತ್ಮಕತೆ ಇಲ್ಲದ ಸಂಬಂಧಗಳು ಇಂತಹ ಅನೇಕ ಕಾರಣಗಳಿಗೆ ಅಂತ್ಯವಾಗುವುದುಂಟು. ಹಾಗಾದರೆ ಭಾವನಾತ್ಮಕತೆ ಎಷ್ಟು ಮುಖ್ಯ? ನಿಮ್ಮ ಮತ್ತು ಸಂಗಾತಿ ನಡುವೆ ಭಾವನಾತ್ಮಕ ಸಂಬಂಧ ಇಲ್ಲ ಎನ್ನುವುದನ್ನು ತಿಳಿಯುವುದು ಹೇಗೆ..? ಈ ರೀತಿ ಆಗಿದ್ದರೆ ಅದನ್ನು ಸರಿ ಪಡಿಸುವುದು ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಲಭ್ಯರಾಗಿರಿ, ಆದರೆ ಅದು ನವೀನ ರೀತಿಯಲ್ಲಿರಲಿ!

ಲಭ್ಯರಾಗಿರಿ, ಆದರೆ ಅದು ನವೀನ ರೀತಿಯಲ್ಲಿರಲಿ!

ನಿಮ್ಮ ಸಂಗಾತಿ ನಿಮ್ಮೊಂದಿಗೆ ಭಾವನಾತ್ಮಕವಾಗಿ ದೂರವಾಗುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ ನೀವು ಮಾಡಬೇಕಾದ ಮೊದಲ ಕೆಲಸ ಅವರಿಗೆ ಸಮಯ ಕೊಡಬೇಕು ಅವರಿಗೆ ನೀವು ಲಭ್ಯವಾಗಿರಬೇಕು. ಭಾವನೆ ದೂರವಾಗಲು ಸಮಯ ನೀಡದೆ ಇರುವುದು ಮುಖ್ಯ ಕಾರಣವಾಗಿರುತ್ತದೆ. ಹೀಗಾಗಿ ನೀವು ಅವರಿಗೆ ಲಭ್ಯರಾಗಿ ಹಾಗೆಂದ ಮಾತ್ರಕ್ಕೆ ಸುಮ್ಮನೆ ಲಭ್ಯವಾಗುವುದಲ್ಲ. ನವೀನ ರೀತಿಯಲ್ಲಿ ಅವರಿಗೆ ಸಮಯ ಕೊಡಿ, ಅನೇಕ ಸಂಗಾತಿಗಳು ಸರ್ಪ್ರೈಸ್ ಇಷ್ಟಪಡುತ್ತಾರೆ. ಹೀಗಾಗಿ ನೀವು ನಿಮ್ಮ ಸಂಗಾತಿಯು ನಿಮ್ಮಿಂದ ಎಂದಿಗೂ ನಿರೀಕ್ಷಿಸದಂತಹ ಕೆಲಸಗಳನ್ನು ಮಾಡುವುದು ಅವರಿಗೆ ಆಶ್ಚರ್ಯವನ್ನು ಉಂಟುಮಾಡಿಸಬೇಕು. ಇದರಿಂದ ಅವರು ಖುಷಿಗೊಳ್ಳುತ್ತಾರೆ. ಅಲ್ಲದೇ ಇದು ಅವರಿಗೆ ವಿಶೇಷ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ತಕ್ಷಣವೇ ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆ ಜಾಸ್ತಿಯಾಗಿ ವೃದ್ದಿಯಾಗುತ್ತದೆ.

ಕುತೂಹಲ ಮುಖ್ಯ!

ಕುತೂಹಲ ಮುಖ್ಯ!

ಸಂಬಂಧದಲ್ಲಿ ಕುತೂಹಲ ಮುಖ್ಯ ಹೀಗಾಗಿದ್ದಾಗ ನೀವು ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತೀರಿ. ಹೌದು, ಈಗೀನ ಜೀವನ ಹೇಗೆ ಆಗಿದೆ ಅಂದರೆ ಅವರವರು ಅವರದೇ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಸಂಗಾತಿ ಬಗ್ಗೆ ಯೋಚಿಸುವುದಿಲ್ಲ. ಈ ರೀತಿ ಯಾವತ್ತೂ ಆಗಬಾರದು ಸಂಗಾತಿ ಮತ್ತು ಆಕೆಯ ವಿಚಾರಗಳ ಬಗ್ಗೆ ನೀವು ಕುತೂಹಲ ಹೊಂದಿರಬೇಕು. ಆಕೆಯ ಎಲ್ಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಭಾವನೆಗಳನ್ನು ಕುತೂಹಲದಿಂದ ಕೇಳಬೇಕು. ಪ್ರತಿ ದಿನವು ಆಕೆಯನ್ನು ಕುತೂಹಲದಿಂದಲೇ ಮಾತನಾಡಿಸಬೇಕು. ಹೀಗಿದ್ದಾಗ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ. ಪ್ರೀತಿಯೆಂದರೆ ಕಾಳಜಿಯು ಆಗಿದೆ.

ನಿಮ್ಮ ಬಗ್ಗೆ ನಿಮಗೆ ಯೋಚನೆ ಇರಲಿ!

ನಿಮ್ಮ ಬಗ್ಗೆ ನಿಮಗೆ ಯೋಚನೆ ಇರಲಿ!

ನೀವು ಮೊದಲು ನಿಮ್ಮ ಬಗ್ಗೆ ಯೋಚಿಸಬೇಕು ಹೀಗಿದ್ದಾಗ ಮಾತ್ರ ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಉತ್ತಮವಾಗಿ ಯೋಚಿಸಲು ಸಾಧ್ಯ. ಹೌದು, ನಿಮ್ಮ ಅಭಿವೃದ್ಧಿ ಮತ್ತು ಕ್ಷೇಮವು ನಿರ್ಣಾಯಕವಾಗಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ತೃಪ್ತರಾಗಿರುವಾಗ, ನಿಮ್ಮ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ಸಂಪೂರ್ಣವಾಗಿ, ಗಮನದಿಂದ ಮತ್ತು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಇದು ನಿಮಗೆ ಸುಲಭವಾಗುತ್ತದೆ. ಹೀಗಾಗಿ ನೀವು ಮೊದಲು ಸರಿಯಾದ ಜೀವನವನ್ನು ಹೊಂದಿ ನೆಮ್ಮದಿಯಿಂದ ಇರಿ. ಈ ವೇಳೆ ನಿಮ್ಮ ಸಂಗಾತಿಯ ಜೊತೆಗೆ ಉತ್ತಮವಾಗಿ ಬೆರೆಯಬಹುದು. ಅಲ್ಲದೇ ಅವರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಬಹುದು.

ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ

ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ

ಸಂಬಂಧ ಹಾಳಾಗಲು ಸಮಸ್ಯೆಗಳು ಕಾರಣ . ಆ ಸಮಸ್ಯೆಯನ್ನು ನೀವು ಸರಿಪಡಿಸಿದರೆ ಎಲ್ಲವೂ ಸರಿಯಾಗಿ ಇರುತ್ತದೆ. ಹೌದು, ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕು. ಪ್ರಮುಖ ವಿಷಯಗಳನ್ನು ಚರ್ಚಿಸುವುದನ್ನು ನಿರ್ಲಕ್ಷಿಸುವ ಮೂಲಕ ನಿಮ್ಮ ಸಂಬಂಧವನ್ನು ನೀವೆ ಹಾಳು ಮಾಡಬಹುದು. ಉದಾಹರಣೆಗೆ ಏನಾದರು ಒಂದು ಸಮಸ್ಯೆಯಾಗಿರುತ್ತದೆ ಅದನ್ನು ನೀವು ನಿರ್ಲಕ್ಷಿಸುತ್ತಿದ್ದರೆ ಅದು ಕೊಳಕು ವಾದಗಳಿಗೆ ಕಾರಣವಾಗಬಹುದು. ಅದು ಸಂಬಂಧ ಹಳಸಲು ಕಾರಣವಾಗಬಹುದು. ಹೀಗಾಗಿ ಯಾವುದೇ ಸಮಸ್ಯೆ ಇದ್ದರೆ ನಿಮ್ಮ ಸಂಗಾತಿ ಜೊತೆ ಹೇಳಿಕೊಳ್ಳಿ ಅಥವಾ ಏನಾದರು ತಪ್ಪು ನಡೆದಿದ್ದರೆ ಅವರ ಜೊತೆ ಹೇಳಿಕೊಳ್ಳಿ. ಆ ವೇಳೆ ಅವರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡುತ್ತದೆ ಜೊತೆಗೆ ನಿಮ್ಮ ನಡುವಿನ ಭಾವನಾತ್ಮಕ ಸಂಬಂಧವು ಗಟ್ಟಿ ಆಗುತ್ತದೆ.

ಕೃತಜ್ಞರಾಗಿರಿ!

ಕೃತಜ್ಞರಾಗಿರಿ!

ಸಂಬಂಧದಲ್ಲಿ ಮುಖ್ಯವಾಗಿ ಇರಬೇಕಾದ ಅಂಶ ಎಂದರೆ ಪರಸ್ಪರ ಹೆಚ್ಚು ಕೃತಜ್ಞರಾಗಿರುವುದು. ಹೌದು, ಅವರ ನ್ಯೂನತೆಗಳಿಗಾಗಿ ಸತತವಾಗಿ ಅವರನ್ನು ಚುಚ್ಚುವ ಬದಲು, ಅವರನ್ನು ಪ್ರಶಂಸಿಸಿ. ಅವರ ವಿಶೇಷತೆ ಏನು ಎಂದು ಅವರಿಗೆ ತಿಳಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ಗುಣಗಳನ್ನು ಪಟ್ಟಿ ಮಾಡಿ. ಇದು ನಿಮ್ಮ ಸಂಗಾತಿಯನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಇದಲ್ಲದೆ, ಇದು ಅವರ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಮತ್ತು ಅವರನ್ನು ನಿಮ್ಮತ್ತ ಸೆಳೆಯುತ್ತದೆ. ಇದು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧವನ್ನು ವೃದ್ದಿಸುತ್ತದೆ. ಈ ರೀತಿಯಲ್ಲಿ ನಿಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು.

ಭಾವನಾತ್ಮಕವಾಗಿ ನೀವು ಸಂಪರ್ಕ ಹೊಂದಿಲ್ಲದಿದ್ದರೆ ನೀವು ಪ್ರೀತಿ ಮಾಡಿಯು ವೇಸ್ಟ್. ಸಂಬಂಧ ಎಂದರೆ ಕೇವಲ ದೈಹಿಕವಾಗಿ ಅಲ್ಲ ಮುಖ್ಯವಾಗಿ ಭಾವನಾತ್ಮಕವಾಗಿದೆ. ಹೀಗಾಗಿ ಭಾವನಾತ್ಮಕವಾಗಿ ಕನೆಕ್ಟ್ ಆಗಲು ಪ್ರಯತ್ನಿಸಿ.

English summary

Ways To Bridge Emotional Distance Between You And Your Partner in kannada

Here are ways to bridge emotional distance between you and your partner in kannada, read on ...
X
Desktop Bottom Promotion