ನಿಮ್ಮ ಸಂಗಾತಿಗೆ ಇನ್ನಷ್ಟು ಹತ್ತಿರವಾಗಲು ಇಲ್ಲಿವೆ ಸಿಂಪಲ್ ಟಿಪ್ಸ್

ಗಂಡ-ಹೆಂಡತಿ ಎಂದರೆ ಅದೊಂದು ಅತ್ಯಂತ ಪವಿತ್ರವಾದ ಸಂಬಂಧ. ಯಾವ ಗಂಡಿಗೆ ಯಾವ ಹೆಣ್ಣು ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗುವ ಮಾತಿದೆ. ನಾವಿಲ್ಲಿ ಕೇವಲ ನೆಪಮಾತ್ರ ಆಗಿರುತ್ತೇವೆ. ಈಗಾಗಲೇ ನಿರ್ಧಾರವಾಗಿರುವ ಈ ಜೀವನದಲ್ಲಿಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿ ಜೀವನ ಸಾಗಿಸಬೇಕಾಗುತ್ತದೆ. ಗಂಡನ ಜೊತೆ ಹೆಂಡತಿ ಹೇಗಿರಬೇಕು ಅಥವಾ ಹೆಂಡತಿಯ ಜೊತೆ ಗಂಡ ಹೇಗಿರಬೇಕು ಎಂಬುದನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಮೂಲಕ ತಾವೇ ಕಲಿತುಕೊಳ್ಳಬೇಕು. ಆದರೆ ಇದೆಲ್ಲಾ ಒಂದೆರಡು ದಿನಗಳಲ್ಲಿ ನಡೆಯುವುದಲ್ಲ. ಸ್ವಲ್ಪ ತಾಳ್ಮೆಯ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಾವು ನಿಮ್ಮ ಸಂಗಾತಿಗೆ ಹತ್ತಿರವಾಗಲು ಕೆಲವೊಂದು ಸಲಹೆಗಳನ್ನು ಹೇಳಿದ್ದೇವೆ.

ನಿಮ್ಮ ಸಂಗಾತಿಗೆ ಹತ್ತಿರವಾಗಲು ಸಲಹೆಗಳು ಇಲ್ಲಿವೆ:

ನೀವು ಧರಿಸುವ ಬಟ್ಟೆ ಮನಮೋಹಕವಾಗಿರಬೇಕು:

ನೀವು ಧರಿಸುವ ಬಟ್ಟೆ ಮನಮೋಹಕವಾಗಿರಬೇಕು:

ಇಂದಿನ ಕಾಲದಲ್ಲಿ ಒಬ್ಬ ವ್ಯಕ್ತಿ ಧರಿಸುವ ಬಟ್ಟೆ ಆತನ ಗೌರವವನ್ನು ಎತ್ತಿ ಹಿಡಿಯುತ್ತದೆ. ಬಟ್ಟೆಗೆ ಸಿಗುವ ಮರ್ಯಾದೆ ಮನುಷ್ಯನಿಗೆ ಸಿಗುವುದಿಲ್ಲ ಎಂದರೆ ತಪ್ಪಾಗಲಾರದು. ನಿಮ್ಮ ಸಂಗಾತಿಯ ಜೊತೆ ನೀವು ಹೊರಹೋಗುವ ಸಂದರ್ಭದಲ್ಲಿ ಅವರಿಗೆ ಇಷ್ಟವಾಗುವಂತಹ ಬಟ್ಟೆಗಳನ್ನು ಧರಿಸಿ. ಇದರಿಂದ ನೀವು ಅವರ ಮನಸ್ಸನ್ನು ಸೆಳೆಯಬಹುದು. ಪ್ರತಿ ಕ್ಷಣ ನಿಮ್ಮ ಸಂಗಾತಿ ನಿಮ್ಮ ಜೊತೆ ಕಾಲಕಳೆಯುವ ಸಂದರ್ಭದಲ್ಲಿ ನಿಮ್ಮ ಬಟ್ಟೆ ನಿಮ್ಮ ಸಂಗಾತಿಯನ್ನು ನಿಮ್ಮ ಕಡೆಗೆ ಆಕರ್ಷಣೆ ಮಾಡುತ್ತದೆ. ಸಂಜೆಯ ಸಮಯದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವ ಮನಸ್ಸು ನಿಮಗಿದ್ದರೆ ನಿಮ್ಮ ಸಂಗಾತಿಯನ್ನು ಹೆಚ್ಚಾಗಿ ಆಕರ್ಷಣೆ ಮಾಡಬಹುದು. ಇದರಿಂದ ನಿಮ್ಮಿಬ್ಬರ ಮಧ್ಯೆ ರೋಮ್ಯಾಂಟಿಕ್ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

ತಕ್ಷಣವೇ ಪ್ರತಿಕ್ರಿಯೆ ನೀಡಿ:

ತಕ್ಷಣವೇ ಪ್ರತಿಕ್ರಿಯೆ ನೀಡಿ:

ಇದು ನೀವು ನಿಮ್ಮ ಸಂಗಾತಿಗೆ ನೀಡುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ನಿಮ್ಮ ಸಂಗಾತಿ ನಿಮಗೆ ಮೆಸೇಜ್ ಕಳುಹಿಸಿದಾಗ ಅಥವಾ ಫೋನ್ ಮಾಡಿದಾಗ ತಕ್ಷಣವೇ ಪಿಕ್ ಮಾಡಿ ಅಥವಾ ರಿಪ್ಲೈ ಕಳಿಸಿ. ಒಂದು ವೇಳೆ ನೀವು ಯಾವುದಾದರೂ ಕೆಲಸದಲ್ಲಿ ತೊಡಗಿದ್ದರೆ ಆಮೇಲೆ ಸಿಗುತ್ತೇನೆ ಎಂದು ಹೇಳಿಬಿಡಿ. ಇದರಿಂದ ಆಕೆ ಕಾಯುವುದು ತಪ್ಪುತ್ತದೆ. ಆದರೆ ಬೇರೆ ಸಮಯದಲ್ಲಿ ನೀವು ಫ್ರೀ ಇರಬೇಕಾದರೆ ನಿಮ್ಮ ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಿ. ಮತ್ತೊಮ್ಮೆ ನಿಮ್ಮ ಸಂಗಾತಿ ನಿಮ್ಮನ್ನು ಪರೀಕ್ಷೆ ಮಾಡುವಂತೆ ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನೀವು ಅವರನ್ನು ಎಷ್ಟು ಇಷ್ಟಪಡುತ್ತೀರಿ ಎಂಬುದು ಅರಿವಾಗುತ್ತದೆ. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಇದರಿಂದ ಪ್ರೀತಿ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ನಿಮ್ಮ ಸಂಗಾತಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ:

ನಿಮ್ಮ ಸಂಗಾತಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ:

ಸಾಮಾನ್ಯವಾಗಿ ಮನೆಕೆಲಸ ಅಂದ್ರೆ ಅದು ಹೆಣ್ಣಿಗೆ ಸೀಮಿತ ಎಂಬ ಮಾತಿದೆ. ಆದರೆ ಇದನ್ನು ಗಂಡ-ಹೆಂಡತಿ ಇಬ್ಬರೂ ಸೇರಿಕೊಂಡು ಕೆಲಸ ನಿರ್ವಹಿಸಿದರೆ ಆಕೆಗೂ ಸಂತೋಷವಾಗುತ್ತದೆ. ಗಂಡ-ಹೆಂಡತಿ ಎಂದ ಮೇಲೆ ಕೆಲವು ಕೆಲಸಗಳನ್ನು ಗಂಡನೇ ಮಾಡಬೇಕು ಇನ್ನೂ ಕೆಲವು ಕೆಲಸಗಳನ್ನ ಹೆಂಡತಿಯೇ ಮಾಡಬೇಕು ಎನ್ನುವ ಹಾಗೇನಿಲ್ಲ. ಒಬ್ಬರ ಕೆಲಸಗಳನ್ನು ಒಬ್ಬರು ಹಂಚಿಕೊಂಡು ಒಬ್ಬರಿಗೊಬ್ಬರು ನೆರವಾಗಿ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಆದರೆ ನಿಮ್ಮ ಸಂಗಾತಿಯ ಜೊತೆ ನೀವು ಇರುವ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದು ಕೊಡುವಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಬಗ್ಗೆ ಮನಸ್ಸಿನಲ್ಲಿ ನಿಮ್ಮ ಸಂಗಾತಿಗೆ ಒಂದು ಗಟ್ಟಿಯಾದ ಸ್ಥಾನ ಇರುತ್ತದೆ. ನಿಮ್ಮ ಜೊತೆ ಕಳೆಯುವ ಪ್ರತಿಕ್ಷಣವನ್ನು ನಿಮ್ಮ ಸಂಗಾತಿ ಅತಿ ಹೆಚ್ಚು ಇಷ್ಟಪಟ್ಟು ಕಳೆಯಲು ಇಚ್ಚಿಸುತ್ತಾರೆ.

ನಿಮ್ಮ ಸಂಗಾತಿಯ ಕಡೆಯವರಿಗೆ ಗೌರವ ಕೊಡಿ:

ನಿಮ್ಮ ಸಂಗಾತಿಯ ಕಡೆಯವರಿಗೆ ಗೌರವ ಕೊಡಿ:

ಇದು ಅತ್ಯಂತ ಮುಖ್ಯ. ನೀವು ಇತರರಿಗೆ ನೀಡುವ ಗೌರವ ನಿಮ್ಮ ಗುಣವನ್ನು ಬಿಂಬಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿ ಇದನ್ನು ಆಸೆಪಡುತ್ತಾನೆ. ನನ್ನ ಸಂಗಾತಿಯಾಗಿ ನನ್ನ ಜೀವನದಲ್ಲಿ ಬರುವ ಯಾರಾದರೂ ನನ್ನ ಕುಟುಂಬದವರನ್ನು ಅಥವಾ ನನ್ನ ಸ್ನೇಹಿತರನ್ನು ಬಂಧು ಬಾಂಧವರನ್ನು ತನ್ನವರಂತೆ ನೋಡಬೇಕು ಎಂದು ಬಯಸುತ್ತಾನೆ. ತನ್ನ ಇಚ್ಛೆಗೆ ತಕ್ಕಂತೆ ತನ್ನ ಸಂಗಾತಿ ಇದ್ದರೆ ಅಂತಹ ಕುಟುಂಬ ಸ್ವರ್ಗವೇ ಸರಿ. ಹಾಗಾಗಿ ನೀವು ಒಂದು ವೇಳೆ ಮದುವೆಯಾದ ನಂತರದಲ್ಲಿ ಈ ವಿಚಾರದಲ್ಲಿ ಸ್ವಲ್ಪ ತೊಂದರೆ ತಂದುಕೊಳ್ಳುತ್ತಿದ್ದರೆ ಈಗಲೇ ಹುಷಾರಾಗಿ ನಿಮ್ಮ ಸಂಗಾತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವುದು ಉತ್ತಮ.

ಪರಿಮಳಭರಿತ ಸೆಂಟ್ ಹಾಕಿಕೊಳ್ಳಿ:

ಪರಿಮಳಭರಿತ ಸೆಂಟ್ ಹಾಕಿಕೊಳ್ಳಿ:

ಅರೇ ಇದೇನಪ್ಪ ಹೀಗೆ ಹೇಳ್ತಾ ಇದೀರಾ ಅನ್ಕೊಂಡ್ರಾ? ಹೌದು ಇದು ನಿಮ್ಮ ಸಂಗಾತಿ ಜೊತೆಯಿರಲು ಸಹಾಯ ಮಾಡುತ್ತದೆ ಎಂದು ಹಲವಾರು ಜನರು ಅಭಿಪ್ರಾಯ ಪಡುತ್ತಾರೆ. ನಿಮ್ಮ ಹತ್ತಿರ ನಿಮ್ಮ ಸಂಗಾತಿ ಬಂದಾಗ ಅವರಿಗೆ ರೋಮಾಂಚನ ಉಂಟಾಗುವ ಹಾಗೆ ನೀವು ಸುಗಂಧ ದ್ರವ್ಯವನ್ನು ಹಾಕಿಕೊಂಡಿದ್ದರೆ ನಿಮ್ಮನ್ನು ಬಿಟ್ಟು ಹೋಗಲು ನಿಮ್ಮ ಸಂಗಾತಿಗೆ ಖಂಡಿತವಾಗಿ ಮನಸ್ಸು ಆಗುವುದಿಲ್ಲ. ಇದಕ್ಕೂ ಮೊದಲು ನಿಮ್ಮ ಸಂಗಾತಿಗೆ ಯಾವ ಬಗೆಯ ಪರ್ಫ್ಯೂಮ್ ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ರಾತ್ರಿ ನಿಮ್ಮ ಸಂಗಾತಿಯ ಜೊತೆ ನೀವು ಕಾಲ ಕಳೆಯುವಾಗ ಅಥವಾ ಜೊತೆಯಲ್ಲಿ ಮನೆಯಿಂದ ಎಲ್ಲಾದರೂ ಹೊರಗಡೆ ಹೋಗುವಾಗ, ಪಾರ್ಟಿ ಅಥವಾ ಯಾವುದಾದರೂ ಶುಭ ಸಂದರ್ಭಗಳನ್ನು ಅಟೆಂಡ್ ಮಾಡುವಾಗ ಈ ರೀತಿಯ ಪರಿಮಳಭರಿತ ಸೆಂಟ್ ಧರಿಸುವುದರಿಂದ ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ನೀವು ಸ್ಥಾನ ಗಿಟ್ಟಿಸಿಕೊಳ್ಳಬಹುದು.

English summary

Ways To Be A More Loving Partner In kannada

here we told about Ways to Be a More Loving Partner in kannada, have a look
Story first published: Saturday, January 30, 2021, 14:24 [IST]
X
Desktop Bottom Promotion