ಇಂಥ ಮಹಿಳೆಯರು ಪುರುಷರನ್ನು ಅಯಸ್ಕಾದಂತೆ ಸೆಳೆಯುತ್ತಾರೆ

ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆಯೇ? ಎಂದು ನೋಡಿದರೆ ಎಲ್ಲಾ ಪುರುಷರು ಬರೀ ಅಂಗ ಸೌಂದರ್ಯ ನೋಡಿ ಆಕರ್ಷಿತರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲ ಪುರುಷರು ಗುಂಡಾಗಿರುವ ಹುಡುಗಿಯನ್ನು ಇಷ್ಟಪಟ್ಟರೆ, ಇನ್ನು ಕೆಲವರು ಹುಡುಗಿ ತುಂಬಾ ಸ್ಲಿಮ್ ಆಗಿರಬೇಕೆಂದು ಬಯಸುತ್ತಾರೆ.

Things Women Do That Attract Men Like a Magnet

ಕೆಲವರಿಗೆ ಹುಡುಗಿ ಸ್ವಲ್ಪ ಎತ್ತರ ಇರಬೇಕೆಂದು ಬಯಸಿದರೆ, ಇನ್ನು ಕೆಲವರು ಹುಡುಗಿ ಕುಳ್ಳಗೆ ಇದ್ದರೂ ಪರ್ವಾಗಿಲ್ಲ ಉದ್ದ ಕೂದಲಿರಬೇಕೆಂದು ಬಯಸುತ್ತಾರೆ. ಹೀಗಾಗಿ ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೇ ಆಕರ್ಷಿತರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಆದರೆ ಪುರುಷರು ತನ್ನ ಹುಡುಗಿಯ ಕೆಲವೊಂದು ಸಂಗತಿಗಳನ್ನು ಬಯಸುತ್ತಾರಂತೆ, ಹಾಗಂತ ನಾವು ಹೇಳ್ತಾ ಇಲ್ಲ, ವಿಜ್ಞಾನಿಗಳು ಈ ಕುರಿತು ಅಧ್ಯಯನ ಮಾಡಿ ತಿಳಿಸಿದ ಅಂಶಗಳಿವು. ಬನ್ನಿ ಪುರುಷರನ್ನು ಅಯಸ್ಕಾದಂತೆ ಸೆಳೆಯಲು ಮಹಿಳೆಯರಲ್ಲಿ ಇರಬೇಕಾದ ಗುಣಗಳೇನು ಎಂದು ನೋಡೋಣ:

 ಧ್ವನಿ ಹಾಗೂ ಮಾತನಾಡುವ ಶೈಲಿ

ಧ್ವನಿ ಹಾಗೂ ಮಾತನಾಡುವ ಶೈಲಿ

ಹೆಣ್ಣಿನ ಮಧುರವಾದ ಧ್ವನಿಗೆ ಪುರುಷ ಮರಳಾಗುತ್ತಾನೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇಂಪಾದ ಧ್ವನಿ ಹಾಗೂ ಕೆಲವರ ಮಾತನಾಡುವ ಶೈಲಿ ಪುರುಷರನ್ನು ಆಕರ್ಷಿಸುತ್ತದೆ. ಅವರು ಮಾತನಾಡುವ ಶೈಲಿ, ಹಾವಭಾವ ಇವೆಲ್ಲಾ ಕೂಡ ಪುರುಷರನ್ನು ಆಕರ್ಷಿಸುತ್ತದೆ. ಇಲ್ಲಿ ಹೆಣ್ಣಿನ ಗುಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಕೆಲವರು ಹರಳು ಹುರಿದಂತೆ ಪಟಪಟ ಮಾತನಾಡಿದರೆ, ಇನ್ನು ಕೆಲವರು ಮುತ್ತು ಉದುರುದಂತೆ ಮಾತನಾಡುತ್ತಾರೆ. ಕೆಲವರಿಗೆ ಪಟಪಟ ಮಾತನಾಡುವ ಹುಡುಗಿ ಇಷ್ಟವಾದರೆ, ಇನ್ನು ಕೆಲವರಿಗೆ ಮೆಲು ಮಾತಿನ ಹುಡುಗಿ ತುಂಬಾ ಪ್ರಿಯವಾಗುತ್ತಾಳೆ.

 ಎತ್ತರ

ಎತ್ತರ

ಈ ವಿಷಯದಲ್ಲಿ ಶೇ.90ರಷ್ಟು ಪುರುಷರದ್ದು ಒಂದೇ ರೀತಿಯ ನಿಲುವು ಆಗಿರುತ್ತದೆ. ಪುರುಷರು ತನ್ನ ಸಂಗಾತಿಯ ಎತ್ತರ ತನಗಿಂತ ಕಡಿಮೆ ಇರಬೇಕೆಂದು ಬಯಸುತ್ತಾರೆ. ಇನ್ನು ತುಂಬಾ ಕುಳ್ಳಗೆ ಇರುವ ಪುರುಷರ ಹುಡುಗಿ ತನ್ನ ಎತ್ತರಕ್ಕೆ ಸಮವಾಗಿರಲಿ ಎಂದು ಬಯಸುತ್ತಾರೆ.

 ವಯಸ್ಸು

ವಯಸ್ಸು

20-30 ವರ್ಷದ ಒಳಗಿನ ಬಹುತೇಕ ಪುರುಷರು ತಮ್ಮ ಸಂಗಾತಿಯ ವಯಸ್ಸು ತಮಗಿಂತ ಚಿಕ್ಕದಿರಬೇಕು, ಅದರಲ್ಲೂ 24-25ರ ಒಳಗೆ ಇರಬೇಕೆಂದು ಬಯಸುತ್ತಾರೆ. ಇದಕ್ಕೆ ಒಂದು ಕಾರಣವೂ ಇದು. ಪುರುಷರು ತಮ್ಮ ವಂಶಾಭಿವೃದ್ಧಿ ಬಗ್ಗೆಯೂ ಯೋಚಿಸುತ್ತಾರೆ. ಆದ್ದರಿಂದ ಚಿಕ್ಕ ಪ್ರಾಯದಲ್ಲಾದರೆ ಅಂಡೋತ್ಪತ್ತಿ ಸರಿಯಾಗಿರುತ್ತದೆ. ಇದರಿಂದ ಮಕ್ಕಳನ್ನು ಪಡೆಯುವುದು ಕಷ್ಟಕರವಾಗುವುದಿಲ್ಲ ಎಂಬುವುದು ಅವರ ಲೆಕ್ಕಾಚಾರ ಆಗಿರುತ್ತದೆ ಎಂದು ಈ ಕುರಿತು ಸಂಶೋಧನೆ ನಡೆಸಿದ ವಿಜ್ಞಾನಿಗಳು ಹೇಳಿದ್ದಾರೆ.

ಇನ್ನು 30 ವರ್ಷದ ಮೇಲ್ಪಟ್ಟ ಪುರುಷರು ತಮಗಿಂತ ಹಿರಿಯ ವಯಸ್ಸಿನ ಸಂಗಾತಿಯನ್ನು ಇಷ್ಟಪಡುತ್ತಾರೆ ಎಂದು ಸಂಶೋಧನೆ ಹೇಳಿದೆ. ಇದಕ್ಕೆ ಕಾರಣವೇನೆಂದು ಯಾವಯದೇ ಥಿಯರಿ ಮೂಲಕ ಹೇಳಲು ಸಾಧ್ಯವಿಲ್ಲ. ಇದರ ಹಿಂದೆ ಸೈಕೋಲಾಜಿಕಲ್ ಕಾರಣವಿರಬಹುದು.

ಕಣ್ಣುಗಳ ಬಣ್ಣದ ಆಧಾರದ ಮೇಲೂ ಸಂಗಾತಿ ಹುಡುಕುತ್ತಾರೆ

ಕಣ್ಣುಗಳ ಬಣ್ಣದ ಆಧಾರದ ಮೇಲೂ ಸಂಗಾತಿ ಹುಡುಕುತ್ತಾರೆ

ಟೋರ್ಮೋ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು ನೀಲಿ ಕಣ್ಣಿನ ಪುರುಷರು ನೀಲಿ ಕಣ್ಣಿನ ಹುಡುಗಿಯನ್ನು ಸಂಗಾತಿಯಾಗಿ ಪಡೆಯಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಏಕೆಂದರೆ ಇಬ್ಬರದ್ದು ನೀಲಿ ಕಣ್ಣುಗಳಾದರೆ ಮುಂದೆ ಹುಟ್ಟುವ ಮಗುವಿಗೆ ಕೂಡ ನೀಲಿ ಕಣ್ಣುಗಳು ಸಿಗುತ್ತದೆ ಎಂಬ ಲೆಕ್ಕಾಚಾರವಂತೆ. ಇನ್ನು ಕಂದು ಕಣ್ಣಿನ ಪುರುಷರು ನೀಲಿ ಕಣ್ಣಿನ ಹುಡುಗಿಯನ್ನು ಸಂಗಾತಿಯಾಗಿ ಪಡೆಯಲು ಇಷ್ಟಪಡುವುದು ತುಂಬಾ ಕಡಿಮೆ ಅಂತೆ.

ಇನ್ನು ಗಂಡ-ಹೆಂಡತಿಗೆ ನೀಲಿ ಕಣ್ಣುಗಳಿದ್ದರೂ ಮಗು ಕಂದು ಕಣ್ಣುಗಳನ್ನು ಹೊಂದಿರುವುದೂ ಉಂಟು.

ತುಂಬಾ ಮೇಕಪ್ ಮಾಡುವ ಮಹಿಳೆಯರು ಪುರುಷರಿಗೆ ಇಷ್ಟವಾಗಲ್ಲ

ತುಂಬಾ ಮೇಕಪ್ ಮಾಡುವ ಮಹಿಳೆಯರು ಪುರುಷರಿಗೆ ಇಷ್ಟವಾಗಲ್ಲ

ಸಾಮಾನ್ಯ ಮಹಿಳೆಯರು ಮೇಕಪ್ ಮಾಡಿದರೆ ನಾನು ಮತ್ತಷ್ಟು ಆಕರ್ಷಕವಾಗಿ ಕಾಣುತ್ತೇನೆ, ಇದು ಪುರುಷರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ತುಂಬಾ ಮೇಕಪ್ ಮಾಡುವುದು ಪುರುಷರಿಗೆ ಇಷ್ಟವಾಗಲ್ಲ ಅಂತೆ. ಯಾರು ಕಡಿಮೆ ಮೇಕಪ್ ಮಾಡುತ್ತಾರೋ ಅಂತಹ ಮಹಿಳೆಯರು ಪುರುಷರನ್ನು ಹೆಚ್ಚಾಗಿ ಸೆಳೆಯುತ್ತಾರೆ ಎನ್ನುತ್ತದೆ ಅಧ್ಯಯನ.

ಆಕರ್ಷಕ ಸೊಂಟದ ಗಾತ್ರ ಹೊಂದಿರುವವರು

ಆಕರ್ಷಕ ಸೊಂಟದ ಗಾತ್ರ ಹೊಂದಿರುವವರು

ಬ್ಯೂಫೋರ್ಟ್‌ನ ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞರು ಈ ಕುರಿತು ಅಧ್ಯಯನ ನಡೆಸಿದ್ದರು. ಆಕರ್ಷಕ ಸೊಂಟದ ಗಾತ್ರ ಹೊಂದಿರುವ ಮಹಿಳೆಯರ ಕಡೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ, ಅದರಲ್ಲೂ ಸೊಂಟದ ಗಾತ್ರ ಸುಮಾರು 0.7 ಇರುವವರು ಹೆಚ್ಚು ಆಕರ್ಷಿಸುತ್ತಾರೆ ಎಂದು ಈ ಅಧ್ಯಯನ ಹೇಳಿದೆ.

ಈ ಅಳತೆ ಕಂಡು ಹಿಡಿಯುವುದು ಹೇಗೆ?

ಸೊಂಟದ ಅಳತೆ ತೆಗೆದುಕೊಳ್ಳಿ, ನಂತರ ಹಿಂಭಾಗದ ಅಳತೆ ತೆಗೆದುಕೊಳ್ಳಿ, ಸೊಂಟದ ಗಾತ್ರವನ್ನು ಹಿಂಭಶಗದ ಗಾತ್ರದಿಂದ ಭಾಗಿಸಿದರೆ ನಿಮ್ಮ ಸೊಂಟದ ಗಾತ್ರ ಎಷ್ಟಿದೆ ಎಂದು ತಿಳಿಯುತ್ತದೆ.

ಉದ್ದ ಕಾಲಿನ ಮಹಿಳೆಯರು

ಉದ್ದ ಕಾಲಿನ ಮಹಿಳೆಯರು

ಗಿಡ್ಡ ಕಾಲಿನ ಮಹಿಳೆಯರಿಗಿಂತ ಉದ್ದ ಕಾಲಿನ ಮಹಿಳೆಯರು ಪುರುಷರಿಗೆ ತುಂಬಾ ಸೆಕ್ಸಿಯಾಗಿ ಕಾಣಿಸುತ್ತಾರಂತೆ, ಹೀಗಂತ ಕ್ಲಿನಿಕಲ್ ಸೈಕೋಲಾಜಿಸ್ಟ್ ಲಿಯೋನ್ ಜೆಲ್ಟರ್ ಅಧ್ಯಯನ ನಡೆಸಿ ಹೇಳಿದ್ದಾರೆ.

ಅಂದ ಹಾಗೆ ಇಲ್ಲಿ ಹೇಳಿರುವ ಅಂಶಗಳಲ್ಲಿ ಯಾವುದೋ ಒಂದು ವಿಷಯ ನಿಮ್ಮ ಸಂಗಾತಿಯಲ್ಲಿದ್ದು, ಅವರ ಆ ಗುಣವೇ ನಿಮ್ಮನ್ನು ಆಕರ್ಷಿಸಿರಬಹುದು ಅಲ್ಲವೇ?

English summary

Things Women Do That Attract Men Like a Magnet

We at kannada boldsky decided to combine all the data that the scientists collected and tell you about the most important things women do that attract men.
X
Desktop Bottom Promotion