Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ನಿಮ್ಮ ಪತ್ನಿ ಮೋಸ ಮಾಡೋತ್ತಿರೋದು ಖಾತ್ರಿಯಾದ್ರೆ ನಿಮ್ಮ ನಿರ್ಧಾರ ಹೀಗಿರಲಿ..
ಮದುವೆ ಅನ್ನೋದು ಒಂದು ಪವಿತ್ರವಾದ ಬಂಧ. ಏಳು ಹೆಜ್ಜೆಗಳನ್ನಿಟ್ಟು ಸಪ್ತಪದಿ ತುಳಿಯುವುದರ ಹಿಂದಿರುವ ಉದ್ದೇಶ ಏಳೇಳು ಜನ್ಮದಲ್ಲೂ ಜೊತೆಯಾಗಿರುತ್ತೇನೆ ಎಂದರ್ಥ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸಂಬಂಧಗಳು ಒಂದು ಜನ್ಮಕ್ಕೆ ಸಾಕು ಎನ್ನುವಂತಿದೆ. ಇನ್ನೂ ಕೆಲವರಂತೂ ಪತಿ ಇದ್ದರೂ ಕೂಡ ಪರ ಪುರುಷನ ಜೊತೆಗೆ ಅನೈತಿಕ ಸಂಬಂಧ ಬೆಳೆಸುತ್ತಾರೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತ್ನಿ ಪರರ ಪುರುಷನ ಸಂಘ ಮಾಡಿದಾಗ ಏನು ಮಾಡಬೇಕು? ಪತ್ನಿ ಇನ್ನೊಬ್ಬನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಖಾತರಿಯಾದ ಮೇಲೆ ಪತಿಯಾದವನು ಏನು ಮಾಡಬೇಕು ಅನ್ನೋದನ್ನ ಹೇಳ್ತೀವಿ.

1. ಕೋಪದ ಕೈಗೆ ಬುದ್ಧಿ ಕೊಡಬೇಡಿ
ಒಂದು ವೇಳೆ ನಿಮ್ಮ ಪತ್ನಿಗೆ ಪರ ಪುರುಷನ ಜೊತೆಗೆ ಅನೈತಿಕ ಸಂಬಂಧವಿರೋದು ಖಚಿತವಾದರೆ ನಿಮ್ಮ ಕೋಪ ನಿಯಂತ್ರಣದಲ್ಲಿರಲಿ. ಕೋಪದ ಕೈಗೆ ಬುದ್ಧಿ ಕೊಟ್ಟು ಆಕೆಗೆ ಹೊಡೆಯೋದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದನ್ನು ಮಾಡಬೇಡಿ. ಇಂತಹ ಪ್ರಕರಣಗಳಲ್ಲಿ ಕೊಲೆಯಾದ ಘಟನೆಗಳನ್ನು ನಾವು ನೋಡಿರ್ತಿವಿ. ಒಂದು ವೇಳೆ ನೀವು ಆಕೆಗೆ ಶಿಕ್ಷೆ ಕೊಡಲು ಹೋದರೆ ನೀವು ಜೀವನ ಪೂರ್ತಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ.

2. ಭಾವುಕರಾಗಬೇಡಿ
ನಿಮ್ಮ ಪತ್ನಿಯ ರಹಸ್ಯಗಳೆಲ್ಲಾ ತಿಳಿದಾಗ ಭಾವುಕರಾಗಬೇಡಿ. ಭಾವುಕತೆಯಿಂದ ತೆಗೆದುಕೊಂಡ ಯಾವ ನಿರ್ಧಾರಗಳು ನಮಗೆ ಶೋಭೆ ತರುವುದಿಲ್ಲ. ಒಂದು ವೇಳೆ ನೀವು ಭಾವುಕರಾದರೂ ಕೂಡ ನಂತರ ಕೂತು ಯೋಚಿಸಿ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಭವಿಷ್ಯ ಬೆಳಗುವಂತಹದ್ದಾಗಿರಬೇಕು.

3. ತಜ್ಞರ ಸಲಹೆ ಪಡೆಯಿರಿ
ಕೆಲವೊಂದು ಸಾರಿ ಪತ್ನಿಗೆ ಅನೈತಿಕ ಸಂಬಂಧವಿದೆ ಅಂತ ತಿಳಿದರೂ ಕೂಡ ಆಕೆಯ ಮೇಲಿನ ಅತೀವ ಪ್ರೀತಿಯಿಂದ ವಿಚ್ಛೇದನ ನೀಡೋದಕ್ಕೆ ಮನಸ್ಸು ಬರೋದಿಲ್ಲ. ಹೇಗಾದರೂ ಮಾಡಿ ಆ ಸಂಬಂಧವನ್ನು ಉಳಿಸಿಕೊಳ್ಳಲೇಬೇಕೆಂದು ಮನಸ್ಸು ಬಯಸುತ್ತದೆ. ಅಂತಹ ಸಂದರ್ಭದಲ್ಲಿ ನೇರವಾಗಿ ಹೋಗಿ ಆಕೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡುವ ಮೊದಲು ತಜ್ಞರ ಬಳಿ ಮಾತನಾಡಿ ಸಲಹೆ ಪಡೆದುಕೊಳ್ಳುವುದು ಉತ್ತಮ.

4. ಈ ವಿಚಾರದ ಬಗ್ಗೆ ಎಲ್ಲರ ಜೊತೆ ಮುಕ್ತ ಮಾತುಕತೆ ಬೇಡ
ಪತ್ನಿಗೆ ಅನೈತಿಕ ಸಂಬಂಧದ ಇರುವ ಹೊರತಾಗಿಯೂ ನೀವು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಬೇಕು ಅಂತಿದ್ದರೆ ಗಂಡ-ಹೆಂಡತಿ ವಿಚಾರ ಗುಪ್ತವಾಗಿರಲಿ. ಸಿಕ್ಕ ಸಿಕ್ಕವರ ಜೊತೆಗೆ ಈ ವಿಚಾರದ ಬಗ್ಗೆ ಮಾತನಾಡಬೇಡಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತ ಅನಿಸಿದ ಒಬ್ಬ ಪ್ರಮಾಣಿಕ ವ್ಯಕ್ತಿಯ ಜೊತೆಗೆ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳಿ. ಸಾಧ್ಯವಾದರೆ ಆತನ ಸಲಹೆ ಪಡೆಯಿರಿ.

5. ಇತರರ ಸಂಬಂಧದೊಂದಿಗೆ ಹೋಲಿಕೆ ಬೇಡ
ನಿಮ್ಮ ಪತ್ನಿಗೆ ಅನೈತಿಕ ಸಂಬಂಧವಿರಬಹುದು. ಅಥವಾ ನಿಮ್ಮ ಸಂಬಂಧದಲ್ಲಿ ಬೇರೆ ಏನೇ ಸಮಸ್ಯೆಗಳು ಇರಬಹುದು. ಹಾಗಂತ ಅದನ್ನು ಇತರರ ಸಂಬಂಧದೊಂದಿಕೆ ಹೋಲಿಕೆ ಮಾಡುವುದು ತಪ್ಪು. ನಿಮ್ಮದೇ ಬೇರೆ ಸಮಸ್ಯೆಗಳು ಅವರದ್ದೇ ಬೇರೆ ಸಮಸ್ಯೆಗಳು. ಹಾಗಂತ ಹೋಲಿಕೆ ಯಾವತ್ತಿಗೂ ಸರಿಯಲ್ಲ. ನಿಮ್ಮ ಸಂಸಾರಿಕ ಜೀವನವನ್ನು ಉಳಿಸಿಕೊಂಡು ಹೋಗುವ ಆಸೆ ನಿಮಗಿದ್ದರೆ ಖಂಡಿತ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ.

6. ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಬೇಡಿ
ಪತ್ನಿಯ ಅನೈತಿಕ ಸಂಬಂಧದ ವಿಚಾರಗಳು ಗೊತ್ತಾದ ಮೇಲೆ ನೀವು ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ. ಯಾವುದೇ ಕೆಲಸ ಮಾಡೋದಕ್ಕು ಮನಸ್ಸು ಕೇಳೋದಿಲ್ಲ. ಒತ್ತಡ, ಖಿನ್ನತೆ ನಿಮ್ಮನ್ನು ಆವರಿಸುತ್ತದೆ. ಇದರಿಂದಾಗಿ ದುಸ್ಚಟಗಳನ್ನು ಮೈಗೂಡಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಆದರೆ ಇದಕ್ಕೆಲ್ಲಾ ನೀವು ಅವಕಾಶ ಕೊಡಲೇಬಾರದು. ಪದೇ ಪದೇ ಅದೇ ವಿಚಾರದ ಬಗ್ಗೆ ಯೋಚಿಸೋದನ್ನು ಬಿಟ್ಟು ವ್ಯಾಯಾಮ, ಯೋಗ ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ.

7. ವಕೀಲರನ್ನು ಸಂಪರ್ಕಿಸಿ
ಪತ್ನಿಗೆ ಪರಪುರುಷನ ಜೊತೆಗೆ ಸಂಬಂಧವಿರುವುದು ಖಾತ್ರಿಯಾದ ಮೇಲೆ ನೀವು ಆಕೆಯ ಜೊತೆಗೆ ಬಾಳಲು ಇಚ್ಛಿಸಿದದಿದ್ದರೆ ಆಕೆಯಿಂದ ವಿಚ್ಚೇದನ ಪಡೆದುಕೊಳ್ಳಬಹುದು. ಆದರೆ ಕೆಲವು ಸಂದರ್ಭದಲ್ಲಿ ಪತ್ನಿಗೆ ವಿಚ್ಚೇದನ ನೀಡುವುದು ಇಷ್ಟವಿರುವುದಿಲ್ಲ. ಹಾಗೂ ಒಂದು ವೇಳೆ ವಿಚ್ಚೇದನ ನೀಡುವುದಾದರೂ ಆಕೆ ನಿಮ್ಮಿಂದ ದೊಡ್ಡ ಮೊತ್ತದ ಹಣ, ಆಸ್ತಿಯನ್ನು ಅಪೇಕ್ಷಿಸಿದ್ದರೆ ಅಂತಹ ಸಂದರ್ಭದಲ್ಲಿ ನೀವು ವಕೀಲರನ್ನು ಸಂಪರ್ಕಿಸುವುದು ಉತ್ತಮ. ಅವರಿಂದ ಸಲಹೆ ಪಡೆದುಕೊಂಡು ಮತ್ತೆ ನೀವು ಕಾನೂನಾತ್ಮಕವಾಗಿ ಮುಂದುವರಿಯಬಹುದು.

8. ಸಾಕ್ಷಿ ಕಲೆ ಹಾಕಿ
ಒಂದು ವೇಳೆ ನಿಮ್ಮ ಪತ್ನಿಗೆ ಅನೈತಿಕ ಸಂಬಂಧವಿದೆ ಅಂತ ಹೇಳಿದರೂ ಯಾರು ಅದನ್ನು ಒಪ್ಪೋದಕ್ಕೆ ಸಿದ್ಧರಿರುವುದಿಲ್ಲ. ಅದರಲ್ಲೂ ನೀವು ಆಕೆಯಿಂದ ಇದೇ ಕಾರಣಕ್ಕೆ ವಿಚ್ಚೇದನ ಪಡೆಯುವುದಾದರೂ ಕೋರ್ಟ್‌ನಲ್ಲಿ ಸಾಕ್ಷಿ ತುಂಬಾನೇ ಮುಖ್ಯ. ಹೀಗಾಗಿ ನಿಮ್ಮ ಪರವಾಗಿರುವಂತೆ ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿ.

9. ಸರಿಯಾದ ಆಯ್ಕೆ ಮಾಡಿ
ಒಂದು ವೇಳೆ ವಿಚ್ಚೇದನ ಪಡೆಯುವುದಾದರೂ ಅಥವಾ ಆಕೆಯೊಂದಿಗೆ ಹೊಂದಾಣಿಕೆಯಿಂದ ಬಾಳುವುದು ಎರಡು ಕೂಡ ಸಂಪೂರ್ಣ ನಿಮ್ಮ ಆಯ್ಕೆಗೆ ಸಂಬಂಧಿಸಿದೆ. ಆಕೆ ತನ್ನ ಅನೈತಿಕ ಸಂಬಂಧವನ್ನು ಬಿಟ್ಟು ನಿಮ್ಮ ಜೊತೆಗೆ ಖುಷಿ ಖುಷಿಯಿಂದ ಹೊಸ ಜೀವನ ಶುರು ಮಾಡಲು ಒಪ್ಪಿದರೆ ತೊಂದರೆಯಿಲ್ಲ. ಆದರೆ ಆಕೆ ಪರ ಪುರುಷನ ಜೊತೆಗೆ ಬಾಳಬೇಕು ಅಂತಾದರೆ ಅಂತಹ ಸಂಬಂಧಕ್ಕೆ ಎಳ್ಳುನೀರು ಬಿಡುವುದೇ ಒಳ್ಳೆಯದು.
ಪತ್ನಿಯಿಂದ ನಿಮಗೆ ಮೋಸ ಆಗಿರುವ ವಿಚಾರ ಗೊತ್ತಾದ ಮೇಲೆ ಏನು ಮಾಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಅದನ್ನು ಬಿಟ್ಟು ಕೋಪದ ಕೈಗೆ ಬುದ್ಧಿ ಕೊಡಲು ಹೋಗಬೇಡಿ. ನಿಮ್ಮ ಉಜ್ವಲ ಭವಿಷ್ಯ ನಿಮ್ಮ ಕೈಯಲ್ಲಿದೆ.



Click it and Unblock the Notifications











