Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಈ ರಾಶಿಯವರು ಸತಿ-ಪತಿಯಾದರೆ ಸಹಬಾಳ್ವೆ ಕಷ್ಟ-ಕಷ್ಟ
ಮದುವೆ ಅಂತ ಬಂದಾಗ ಹುಡುಗ-ಹುಡುಗಿಯ ಜಾತಕ-ರಾಶಿ ನೋಡಬೇಕೆಂದು ಹೆಚ್ಚಿನವರು ಬಯಸುತ್ತಾರೆ. ರಾಶಿಯಲ್ಲಿ ಹೊಂದಾಣಿಕೆಯಾದರೆ ಮಾತ್ರ ಅವರಿಬ್ಬರು ಚೆನ್ನಾಗಿರುತ್ತಾರೆ ಎಂಬ ನಂಬಿಕೆ ನಮ್ಮ ಭಾರತೀಯ ಸಮಾಜದಲ್ಲಿ ಬಲವಾಗಿದೆ. ಇದನ್ನು ಕೆಲವರು ನಂಬುತ್ತಾರೆ, ಇನ್ನು ಕೆಲವರು ನಂಬುವುದಿಲ್ಲ. ನಂಬುವುದು-ಬಿಡುವುದು ಅವರವರ ಇಷ್ಟ.
ಆದರೆ ಜ್ಯೋತಿಷ್ಯ ಶಾಸ್ತ್ರ ಮಾತ್ರ ಕೆಲವೊಂದು ರಾಶಿಯವರು ಯಾವುದೇ ಕಾರಣಕ್ಕೆ ಒಂದಾಗಬಾರದೆಂದು ಹೇಳುತ್ತಾರೆ, ಒಂದು ವೇಳೆ ಸೇರಬಾರದ ರಾಶಿಗಳು ಒಂದಾದರೆ ಆ ಸಂಸಾರದಲ್ಲಿ ನಿತ್ಯ ಜಗಳವಿರುತ್ತದೆ, ಖುಷಿ ಇರಲ್ಲ, ವಿಚ್ಛೇದನ ಕೂಡ ಆಗಬಹುದು ಎಂದು ಹೇಳುತ್ತದೆ.

ಜ್ಯೋತಿಷ್ಯ ಪ್ರಕಾರ ಯಾವೆಲ್ಲಾ ರಾಶಿಯವರು ಸತಿ-ಪತಿಗಳಾಗಬಾರದು ಎಂದು ನೋಡುವುದಾದರೆ:

ಕರ್ಕ-ಕುಂಭ
ಕರ್ಕ ರಾಶಿಯವರು ಭಾವನಾತ್ಮಕರು ಆದರೆ ಕುಂಭ ರಾಶಿಯವರು ತುಂಬಾ ಉತ್ಸಾಹಿಗಳು. ಕುಂಭ ರಾಶಿಯವರು ತಮ್ಮದೇ ಕಾರ್ಯದಲ್ಲಿ ಉತ್ಸಾಹದಿಂದ ಇರುವಾಗ ಕರ್ಕ ರಾಶಿಯವರಿಗೆ ಒಂಟಿತನ ಕಾಡುವುದು, ಇದೇ ಕಾರಣಕ್ಕೆ ಇಬ್ಬರಲ್ಲಿ ಜಗಳ ಉಂಟಾಗುವುದು.

ಮೇಷ-ವೃಷಭ
ಮೇಷ ರಾಶಿಯವರು ಹಾಗೂ ವೃಷಭ ರಾಶಿಯವರು ಹಠಮಾರಿಗಳು. ಇಬ್ಬರು ಒಂದೇ ಗುಣದವರಾದರೆ ಆ ಸಂಸಾರ ನಡೆಸುವುದು ಕಷ್ಟ. ನಂದೇ ಸರಿ-ನಂದೇ ಸರಿ ಎಂಬ ವಾಗ್ವಾದ ಯಾವಾಗಲೂ ಇರುತ್ತದೆ. ವೃಷಭ ರಾಶಿಯವರು ಮೇಷ ರಾಶಿಯವರನ್ನು ಕಡೆಗಣಿಸಬಹುದು.

ಸಿಂಹ ಹಾಗೂ ವೃಶ್ಚಿಕ
ಸಿಂಹ ರಾಶಿಯವರು ತುಂಬಾ ಆತ್ಮವಿಶ್ವಾಸ ಹೊಂದಿರುವವರು, ಅವರು ಮಾನಸಿಕವಾಗಿ ತುಂಬಾನೇ ಸ್ಟ್ರಾಂಗ್ ಅವರಿಗೆ ಅವರನ್ನು ಪ್ರಶ್ನಿಸುವುದು, ಅಥವಾ ತಪ್ಪಾಗಿ ಅರ್ಥಮಾಡಿಕೊಳ್ಳುವುದು ಇಷ್ಟವಾಗಲ್ಲ, ವೃಶ್ಚಿಕ ರಾಶಿಯವರು ಸಿಂಹ ರಾಶಿಯವರ ಜೊತೆಗಿದ್ದರೆ ಖುಷಿಯಾಗಿರಲ್ಲ.

ಕನ್ಯಾ ಮತ್ತು ಧನು ರಾಶಿ
ಕನ್ಯಾ ರಾಶಿಯವರು ತುಂಬಾನೇ ಮೃದು ಸ್ವಭಾವದವರು ಹಾಗೂ ಕೇರ್ ಮಾಡುತ್ತಾರೆ, ಅದೇ ಧನು ರಾಶಿಯವರು ಏನೂ ಕೇರ್ ಮಾಡುವುದಿಲ್ಲ, ಇವರು ಕನ್ಯಾ ರಾಶಿಯವರ ಜೊತೆಗಿದ್ದರೆ ಆಗಾಗ ಟೀಕಿಸುತ್ತಲೇ ಇರುತ್ತಾರೆ. ಇದರಿಂದಾಗಿ ಇಬ್ಬರು ಒಬ್ಬರನ್ನೊಬ್ಬರು ದ್ವೇಷಿಸಬಹುದು.

ವೃಷಭ ಮತ್ತು ಧನು ರಾಶಿ
ಧನು ರಾಶಿಯವರು ಹೊರಗಡೆ ಹೋಗಿ ಪಾರ್ಟಿ ಮಾಡುವುದನ್ನು ಇಷ್ಟಪಟ್ಟರೆ ವೃಷಭ ರಾಶಿಯವರು ಮನೆಯಲ್ಲಿ ಆರಾಮವಾಗಿ ಕೂರಬೇಕೆಂದು ಬಯಸುತ್ತಾರೆ. ಹೀಗಾಗಿ ಇಬ್ಬರ ಮೈಂಡ್‌ಸೆಟ್ ಮ್ಯಾಚ್ ಆಗದೆ ಸಂಸಾರದಲ್ಲಿ ಸಮಸ್ಯೆ ಬರಬಹುದು.

ಮಕರ ಮತ್ತು ಮಿಥುನ
ಮಕರ ರಾಶಿಯವರು ತುಂಬಾ ನಿಯತ್ತು ತೋರುತ್ತಾರೆ ಅದೇ ಮಿಥುನ ರಾಶಿಯವರು ಹಠದ ಸ್ವಭಾವದವರು, ಅವರನ್ನು ಬದಲಾಯಿಸುವುದು ತುಂಬಾನೇ ಕಷ್ಟ. ಮಕರ ರಾಶಿಯವರು ಎಲ್ಲಾ ವಸ್ತುಗಳನ್ನು ಒಪ್ಪವಾಗಿ ಇಡುವವರಾದರೆ ಮಿಥುನ ರಾಶಿಯವರು ಅದಕ್ಕೆ ಉಲ್ಟಾ.

ತುಲಾ-ಕನ್ಯಾ ರಾಶಿ
ತುಲಾ ರಾಶಿಯವರು ಸಾಮಾಜಿಕವಾಗಿ ಬೇಗನೆ ಬೆರೆಯುತ್ತಾರೆ. ಆದರೆ ಕನ್ಯಾ ರಾಶಿಯವರರು ತಮ್ಮದೇ ಲೋಕದಲ್ಲಿ ಇರಲು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರಿಗೆ ತುಲಾ ರಾಶಿಯವರ ವರ್ತನೆ ಇಷ್ಟವಾಗುವುದಿಲ್ಲ, ಹಾಗಾಗಿ ಈ ಜೋಡಿ ಮ್ಯಾಚ್ ಮಾಡಿದರೆ ಕಷ್ಟ.

ವೃಶ್ಚಿಕ ಮತ್ತು ಮೇಷ
ವೃಶ್ಚಿಕ ರಾಶಿಯವರು, ಸಿಂಪಲ್, ಎಮೋಷನಲ್ ಅದೇ ಮೇಷ ರಾಶಿಯವರಿಗೆ ಬೇಗನೆ ಸಿಟ್ಟು ಬರುತ್ತದೆ, ಒಬ್ಬರು ತಮ್ಮದೇ ದಾರಿಯಲ್ಲಿ ಸಾಗಲು ಇಷ್ಟಪಡುವವರು, ಇವರು ಸತಿಪತಿಗಳಾಗುವ ಬದಲು ಬ್ಯುಸ್‌ನೆಸ್ ಪಾರ್ಟನರ್ ಆಗಲು ಬೆಸ್ಟ್.



Click it and Unblock the Notifications











