Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಜ್ಯೋತಿಷ್ಯ ಶಾಸ್ತ್ರ : ಈ ರಾಶಿಯವರು ಮದುವೆಯಾದರೆ ಬೇರೆ-ಬೇರೆ ಆಗಲ್ವಂತೆ!
ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುವಾಗ ಮುಂದೆ ನಾವಿಬ್ಬರು ಜೊತೆಯಾಗಿ ಬಾಳುತ್ತೇವೆ ಎಂಬ ಆಶಯದಿಂದಲೇ ಹೊಸ ಬದುಕು ಪ್ರಾರಂಭಿಸುತ್ತರೆ, ಆದರೆ ಎಲ್ಲರ ವೈವಾಹಿಕ ಜೀವನ ಕೊನೆಯವರೆಗೂ ಉಳಿಯುವುದು ಎಂದು ಹೇಳಲು ಸಾಧ್ಯವಿಲ್ಲ.

ಒಂದು ಸಂಬಂಧ ಬಾಳಲು ಅನೇಕ ವಿಷಯಗಳು ಮುಖ್ಯವಾಗಿರುತ್ತದೆ. ಇಬ್ಬರಲ್ಲಿ ಪ್ರೀತಿ ಇರಬೇಕು, ಅಷ್ಟೇ ಹೊಂದಾಣಿಕೆ ಇರಬೇಕು. ಜ್ಯೋತಿಷ್ಯವು ಅದರ ಜೊತೆಗೆ ಅವರಿಬ್ಬರ ರಾಶಿಗಳ ನಡುವೆ ಹೊಂದಾಣಿಕೆ ಇರಬೇಕು ಎಂದು ಹೇಳುತ್ತದೆ.
ಎರಡು ರಾಶಿಗಳ ನಡುವೆ ಹೊಂದಾಣಿಕೆಯಿಲ್ಲದಿದ್ದರೆ ಅಂಥ ರಾಶಿಯವರು ಮದುವೆಯಾದರೆ ಅವರ ವೈವಾಹಿಕ ಜೀವನ ತುಂಬಾ ಸಮಯ ಬಾಳುವುದಿಲ್ಲ ಎಂದು ಜ್ಯೋತಿಷ್ಯ ಹೇಳುತ್ತೆ, ಅದೇ ಇನ್ನು ಕೆಲ ರಾಶಿಗಳು ಒಂದಾದರೆ ಅವರಿಬ್ಬರ ಸಂಬಂಧ ಗಟ್ಟಿಯಾಗಿರುತ್ತದೆಯಂತೆ.
ಅದರಲ್ಲೂ ಈ ರಾಶಿಯವರು ಒಂದಾದರೆ ತುಂಬಾ ಚೆನ್ನಾಗಿ ಬಾಳ್ವೆ ಮಾಡ್ತಾರಂತೆ

1. ಮೇಷ ರಾಶಿ ಹಾಗೂ ಮೀನ ರಾಶಿ
ಮೇಷ ಹಾಗೂ ಮೀನ ರಾಶಿಯವರು ಒಂದಾದರೆ ಇಬ್ಬರಲ್ಲೂ ತುಂಬಾ ಹೊಂದಾಣಿಕೆ ಇರುತ್ತದೆಯಂತೆ. ಮೇಷದವರು ಸ್ವಲ್ಪ ಒರಡು ಅನಿಸಿದರೂ ಮೀನದವರು ತುಂಬಾ ಸೂಕ್ಷ್ಮ ಸ್ವಭಾವದರು. ಆದರೆ ಒಬ್ಬರು ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ಲುತ್ತಾರೆ. ಆದ್ದರಿಂದ ಈ ಎರಡು ರಾಶಿಯವರು ಒಂದಾದರೆ ಸಂಬಂಧ ಚೆನ್ನಾಗಿರುತ್ತದೆ.

2. ಸಿಂಹ ಮತ್ತು ತುಲಾ ರಾಶಿಯವರು
ತುಲಾ ರಾಶಿಯವರು ತುಂಬಾ ಫ್ರೆಂಡ್ಲೀ ಸ್ವಭಾವದರು, ಅದೇ ರೀತಿ ಸಿಂಹರಾಶಿಯವರು ಸೋಷಿಯಲ್ ಹಾಗೂ ಅವರು ಬೇರೆಯವರನ್ನು ಬೇಗನೆ ಆಕರ್ಷಿಸುತ್ತಾರೆ. ಇಬ್ಬರ ವ್ಯಕ್ತಿತ್ವ ಒಂದೇ ರೀತಿ ಇರುವುದು, ಈ ಎರಡು ರಾಶಿಯವರು ಒಂದಾದರೆ ಇಬ್ಬರಲ್ಲಿ ಒಳ್ಳೆಯ ಹೊಂದಾಣಿಕೆ ಇರುತ್ತದೆ.

3. ಧನು ರಾಶಿ ಹಾಗೂ ಮಿಥುನ ರಾಶಿ
ಇಬ್ಬರೂ ಸ್ವತಂತ್ರ ಬಯಸುವವರು ಹಾಗೂ ಸಾಹಸ ಪ್ರವೃತ್ತಿಯವರು. ಇವರಿಬ್ಬರೂ ತುಂಬಾ ವಿಷಯವನ್ನು ಹಂಚಿಕೊಳ್ಳುತ್ತಾರೆ, ಏನಾದರೂ ಹೊಸ ಸಾಹಸಕ್ಕೆ ಇಬ್ಬರೂ ಒಟ್ಟಾಗಿ ಕೈ ಹಾಕುತ್ತಾರೆ, ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ, ಜೀವನ ಬೋರ್ ಅನಿಸುವುದೇ ಇಲ್ಲ, ಇಬ್ಬರು ಖುಷಿಯಾಗಿ ಕಳೆಯುತ್ತಾರೆ.

4. ವೃಷಭ ಹಾಗೂ ಕನ್ಯಾ ರಾಶಿ
ಈ ಎರಡು ರಾಶಿಯವರ ನಡುವೆ ಒಳ್ಳೆಯ ಹೊಂದಾಣಿಕೆ ಇರುತ್ತದೆ. ವೃಷಭ ರಾಶಿಯವರು ತೆರೆದ ಮನಸ್ಸಿನವರು, ಕನ್ಯಾ ರಾಶಿಯವರು ಎಲ್ಲವೂ ನನ್ನ ನಿಯಂತ್ರಣದಲ್ಲಿ ಇರಬೇಕು ಎಂದು ಬಯಸುವವರು, ಈ ರಾಶಿಯ ಜೋಡಿ ಒಂದಾದರೆ ಜೀವನ ಚೆನ್ನಾಗಿರುತ್ತದೆ.



Click it and Unblock the Notifications
