Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೆಂಡತಿಯ ವರ್ತನೆ ಹೀಗಿದ್ದರೆ ಅವಳಿಗೆ ನೀವು ಬೇಡವಾಗಿದೆ ಎನ್ನುವ ಸೂಚನೆಯಾಗಿದೆ
ಇತ್ತೀಚೆಗೆ ಏಕೋ ನನ್ನ ಹೆಂಡತಿ ನಡವಳಿಕೆ ಭಿನ್ನವಾಗಿದೆ, ಅವಳ್ಯಾಕೆ ಹೀಗೆ ವರ್ತಿಸುತ್ತಿದ್ದಾಳೆ ಎಂದೇ ಅರ್ಥವಾಗುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. ಈಗ ನಾವು ಹೆಸರಿಗಷ್ಟೇ ಗಂಡ-ಹೆಂಡತಿ ಆದರೆ ನಮ್ಮಿಬ್ಬರ ನಡುವೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ, ಅವಳ ವರ್ತನೆ ಬದಲಾಗಲು ಕಾರಣವೇನು? ಎಂದು ಕೆಲವು ಗಂಡಂದಿರಿಗೆ ಅನಿಸಲಾರಂಭಿಸುತ್ತದೆ, ನಾನಾ ಕಾರಣಗಳಿಂದ ಹೆಂಡತಿಯ ವರ್ತನೆಯಲ್ಲಿ ಬದಲಾವಣೆಯಾಗಬಹುದು.

ಅವಳಿಗೆ ನಿಮ್ಮ ವರ್ತನೆಯಿಂದ ಬೇಸತ್ತು ನೀವು ಬೇಡ ಎಂದನಿಸಿದಾಗ ಅಥವಾ ಅವಳು ಈಗಾಗಲೇ ಬೇರೆ ವ್ಯಕ್ತಿಯತ್ತ ಆಕರ್ಷಿತಳಾಗಿದ್ದರೆ ಅವಳಲ್ಲಿ ಬದಲಾವಣೆಗಳು ಕಾಣುತ್ತದೆ. ಅವಳು ಈ ರೀತಿ ವರ್ತಿಸುತ್ತಿದ್ದರೆ ಅವಳಿಗೆ ನೀವು ಬೇಡ ಎನ್ನುವ ಸೂಚನೆಗಳಾಗಿವೆ:
ಮಾತುಕತೆ ಕಡಿಮೆಯಾದರೆ
ಅವಳು ಮೊದಲಿನಷ್ಟು ನಿಮ್ಮ ಜೊತೆ ಮಾತನಾಡುತ್ತಿಲ್ಲ ಎಂದಾದರೆ , ನೀವು ಕೇಳಿದ್ದಕ್ಕಷ್ಟೇ ಉತ್ತರ, ನೀವೇ ಮಾತನಾಡಲು ಹೋದರೂ ಅವಳಿಗೆ ಆಸಕ್ತಿ ಇಲ್ಲದಿರುವುದು, ನಿಮ್ಮ ಬಗ್ಗೆ ಏನಾದರೂ ಕೇಳಿ ತಿಳಿದುಕೊಳ್ಳಲು ಆಸಕ್ತಿ ತೋರಿಸದಿರುವುದು ಇವೆಲ್ಲಾ ಅವಳಿಗೆ ನೀವು ಬೇಡ ಎನ್ನುವ ಸ್ಪಷ್ಟ ಸೂಚನೆಯಾಗಿದೆ. ಯಾವುದೋ ಕಾರಣಕ್ಕೆ ಅವಳು ನಿಮ್ಮಿಂದ ದೂರಾಗಲು ಬಯಸುತ್ತಿರುತ್ತಾಳೆ, ಹಾಗಾಗಿ ಅವಳು ಈ ರೀತಿ ವರ್ತಿಸಲಾರಂಭಿಸುತ್ತಾಳೆ.
ನೀವೇ ಅವಳ ಬಳಿ ಮಾತನಾಡಲು ಹೋದರೆ ಅವಳು ನೀಡುವ ಉತ್ತರ ನೋಡುವಾಗ ನಿಮಗೆ ಮಾತು ಮುಂದುವರೆಸಬೇಕೆಂದು ಅನಿಸುವುದಿಲ್ಲ. ಮೊದಲಿನಂತೆ ಎಲ್ಲವೂ ಇಲ್ಲ ಎಂದು ನಿಮಗನಿಸಲಾರಂಭಿಸುವುದು.
ದೈಹಿಕ ಸಂಪರ್ಕವಿಲ್ಲದಿದ್ದರೆ
ದಾಂಪತ್ಯ ಜೀವನದಲ್ಲಿ ದೈಹಿಕ ಸಂಪರ್ಕ ಮುಖ್ಯವಾಗಿರುತ್ತದೆ, ಅವಳು ನಿಮ್ಮ ಜೊತೆ ದೇಹಿಕ ಸಂಪರ್ಕ ಬಯಸುತ್ತಿಲ್ಲ ಎಂದಾದರೆ ಅದು ಒಳ್ಳೆಯ ಸೂಚನೆಯಲ್ಲ. ಏನಾದರು ಆರೋಗ್ಯ ಸಮಸ್ಯೆಯಿದ್ದಾಗ ಅಥವಾಗ ಕೆಲಸ ಮಾಡಿ ತುಂಬಾ ಬಳಲಿದಾಗ ಅವಳು ನಿಮ್ಮಿಂದ ದೂರಸರಿಯಬಹುದು, ಆದರೆ ತುಂಬಾ ಸಮಯದಿಂದ ನಿಮ್ಮಿಬ್ಬರ ನಡುವೆ ಯಾವುದೇ ದೈಹಿಕ ಸಂಪರ್ಕವೇ ಇಲ್ಲ, ನೀವೇ ಬಯಸಿ ಹೋದರೂ ಅವಳು ದೂರ ಸರಿಯುತ್ತಾಳೆ ಎಂದಾದರೆ ಅವಳಿಗೆ ನೀವು ಬೇಕಾಗಿಲ್ಲ ಎನ್ನುವ ಸೂಚನೆಯಾಗಿದೆ.
ನೀವು ಬಂದಾಗ ಬದಲಾಗುವ ವರ್ತನೆ
ಅಷ್ಟು ಹೊತ್ತು ಚೆನ್ನಾಗಿರುತ್ತಾಳೆ, ನೀವು ಮನೆಗೆ ಬಂದ ತಕ್ಷಣ ಅವಳ ವರ್ತನೆ ಬದಲಾಗುತ್ತೆ, ತುಂಬಾ ಬ್ಯುಸಿ ಇರುವಂತೆ ನಟಿಸುತ್ತಾಳೆ, ಆ ಕೆಲಸ ಅಷ್ಟು ಅವಶ್ಯಕವಿಲ್ಲದಿದ್ದರೂ ಅದನ್ನು ಮಾಡುತ್ತಾ ನಿಮ್ಮತ್ತ ನಿರ್ಲಕ್ಷ್ಯ ಸೂಚಿಸುತ್ತಿದ್ದಾಳೆ ಎಂದಾರೆ ಅದು ನಿರ್ಲಜ್ಷ್ಯ ಮಾಡುವ ವಿಷಯಲ್ಲ, ಏಕೆಂದರೆ ನಿಮ್ಮ ಸಂಬಂಧದಲ್ಲಿ ಏನೋ ಮಿಸ್ ಹೊಡೆಯುತ್ತಿದೆ ಎಂದರ್ಥ. ಅವಳು ಯಾಕೆ ಹಾಗೆ ವರ್ತಿಸುತ್ತಿದ್ದಾಳೆ ಅಂತ ಅವಳ ಬಳಿ ಕೇಳಿ, ಬೇರೆ ಸಂಬಂಧವಿದ್ದು ಅವಳು ಆ ರೀತಿ ವರ್ತಿಸುತ್ತಿದ್ದರೆ ಅವಳು ಹೇಳುವುದಿಲ್ಲ, ದಿನಾ ಈ ರೀತಿ ನಡೆಯುತ್ತಿದ್ದರೆ ಮನಸ್ಸಿಗೆ ತುಂಬಾ ಬೇಸರವಾಗುವುದು. ಆದ್ದರಿಂದ ನೀವು ಏಕೆ ಹೀಗೆ ವರ್ತಿಸುತ್ತಿದ್ದೀಯ ಅಂತ ಕೇಳುವುದೇ ಬೆಸ್ಟ್.
ನಿಮ್ಮ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಾದರೆ
ನೀವು ತಿಂದ್ರಾ ಅಥವಾ ಇವತ್ತು ಏನು ಮಾಡಿದರೆ ಹೀಗೆ ನಿಮ್ಮ ಬಗ್ಗೆ ಯಾವುದೇ ವಿಷಯ ಅವಳಿಗೆ ಬೇಕಾಗಿಲ್ಲ, ಅವಳಿಗೆ ಅವಳಾಯ್ತು ಅವಳ ಪಾಡಾಯ್ತು, ನಿಮ್ಮತ್ತ ಗಮನ ಇಲ್ಲ ಎಂದಾದರೆ ಅವಳಿಗೆ ಬೇರೆ ಕಡೆ ಆಕರ್ಷಣೆಯಿದೆ ಎಂದರ್ಥ. ನಿಮ್ಮ ವರ್ತನೆಯಿಂದ ಬೇಸರವಾಗಿ ಮಾತನಾಡದೆ ಇದ್ದರೆ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಪ್ರೀತಿ ಇರುತ್ತದೆ. ನೀವು ಅವಳ ಆಸೆ ನಡೆದುಕೊಂಡಾಗ ಅವಳು ಸರಿಯಾಗುತ್ತಾಳೆ, ಆದರೆ ಅವಳಿಗೆ ನೀವೇನೇ ಮಾಡಿದರೂ ಕೇರ್ ಇಲ್ಲ ಎಂದಾದರೆ ಬೇರೆ ಕಡೆ ಸೆಳೆತದ ಕಾರಣ ಎಂದು ಹೇಳಬಹುದು.
ಅವಳು ಅವಳ ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದರೆ
ನಿಮ್ಮ ಬಗ್ಗೆ ಆಸಕ್ತಿಯಿಲ್ಲ, ಆದರೆ ತನ್ನ ಸೌಂದರ್ಯ, ಡ್ರೆಸ್ಸಿಂಗ್ ಕಡೆ ತುಂಬಾ ಗಮನ ಕೊಡುತ್ತಿದ್ದರೆ ಅವಳಿಗೆ ಬೇರೆ ಕಡೆ ಆಕರ್ಷಣೆಯಿದೆ ಎಂದರ್ಥ , ಅವಳು ಪದೇ-ಪದೇ ಯಾರನ್ನೂ ಭೇಟಿಯಾಗಲು ಹೋಗುತ್ತಾಲೆ, ಅವಳಿಗೆ ಸೀಕ್ರೆಟ್ ಕಾಲ್‌ಗಳು ಬರುತ್ತದೆ, ಅವಳ ಪಾಸ್‌ವರ್ಡ್ ಬದಲಾಯಿಸಿದ್ದಾಳೆ, ನಿಮ್ಮ ಎದುರಿಗೆ ಫೋನ್‌ನಲ್ಲಿ ಮಾತನಾಡಲ್ಲ ಈ ರೀತಿಯ ಬದಲಾವಣೆ ಅವಳಲ್ಲಿ ಕಂಡರೆ ಅವಳಿಗೆ ನೀವು ಬೇಕಾಗಿಲ್ಲ ಮತ್ಯಾರೋ ಪ್ರಾಮುಖ್ಯ ಅನಿಸಿದೆ ಎಂಬ ಸೂಚನೆಗಳಾಗಿವೆ.
ಈ ರೀತಿಯಾದಾಗ ಏನು ಮಾಡಬೇಕು?
ಕೆಲವೊಮ್ಮೆ ನಾನಾ ಕಾರಣಗಳಿಂದ ಬೇರೆ ವ್ಯಕ್ತಿಯತ್ತ ಆಕರ್ಷಿತರಾಗಿ ತಮ್ಮ ಸುಂದರ ಸಂಸಾರ ಹಾಳು ಮಾಡುತ್ತಾರೆ, ಮುಂದೆ ಇರುವ ನೆಮ್ಮದಿಯೂ ಇಲ್ಲದಂತಾಗಿ ಬದುಕಬೇಕಾಗುವುದು. ನಿಮ್ಮ ಸಂಗಾತಿ ಅಡ್ಡದಾರಿ ತುಳಿದಿದ್ದರೆ ನೀವು ತಿಳಿ ಹೇಳಿ ಅವರನ್ನು ಸರಿದಾರಿಗೆ ತನ್ನಿ. ನಮಗೆ ಮೋಸ ಮಾಡುತ್ತಿದ್ದಾರೆ ಎಂದು ತಳಿದಾಗ ಕೋಪ ಬರುವುದು ಸಹಜ, ಅದರೆ ನೀವು ಕೋಪ ನಿಯಂತ್ರಿಸಿ ಸಮಧಾನದಿಂದ ಮಾತನಾಡಿ, ಒಂದು ವೇಳೆ ನಿಮ್ಮ ಸಂಸಾರ ಸರಿಯಾದರೂ ಆಗಬಹುದು..



Click it and Unblock the Notifications
